ದೇಶದಲ್ಲಿ ಪ್ರಸ್ತುತ ನಗದು ರಹಿತ ವ್ಯವಹಾರಗಳು ಹೆಚ್ಚು ಪ್ರಾಧಾನ್ಯತೆ ಪಡೆಯುತ್ತಿದ್ದು, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಿದ್ದಾರೆ.
ದೇಶದಲ್ಲಿ ಪ್ರಸ್ತುತ ನಗದು ರಹಿತ ವ್ಯವಹಾರಗಳು ಹೆಚ್ಚು ಪ್ರಾಧಾನ್ಯತೆ ಪಡೆಯುತ್ತಿದ್ದು, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಿದ್ದಾರೆ. ಶಾಪಿಂಗ್ ಮತ್ತು ಹಣ ಡ್ರಾ ಮಾಡಲು ಈ ಕಾರ್ಡ್ ಗಳನ್ನು ನೆಚ್ಚಿಕೊಂಡು ಅನೇಕ ವರ್ಷಗಳೇ ಕಳೆದಿವೆ. ಹಾಗಿದ್ದರೆ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಡುವಿನ ಮೂಲಭೂತ ವ್ಯತ್ಯಾಸಗಳೇನು, ಯಾವುದು ಉತ್ತಮ, ಯಾವುದು ಸುರಕ್ಷಿತ ಇತ್ಯಾದಿ ಸಂಗತಿಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಡೆಬಿಟ್/ಕ್ರೆಡಿಟ್ ಕಾರ್ಡ್ ಕಳೆದುಕೊಂಡರೆ ಬ್ಲಾಕ್ ಮಾಡುವುದು ಹೇಗೆ?
ಡೆಬಿಟ್ ಕಾರ್ಡ್
ನಮ್ಮ ಖಾತೆಯಲ್ಲಿರುವ ಹಣದ ಬಳಕೆಗೆ ಅವಕಾಶ ನೀಡುವ ಕಾರ್ಡ್ ನ್ನು ಡೆಬಿಟ್ ಕಾರ್ಡ್ ಎಂದು ಹೇಳಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿರುವುದಕ್ಕಿಂತ ಹೆಚ್ಚಿನ ಹಣ ಬಳಕೆಗೆ ಇಲ್ಲಿ ಅವಕಾಶ ಇರುವುದಿಲ್ಲ. ಖಾತೆಯಲ್ಲಿರುವ ಹಣವನ್ನು ಮಾತ್ರ ಡೆಬಿಟ್ ಕಾರ್ಡಿನ ಮೂಲಕ ಬಳಸಬಹುದು.
ಈ ಹಣ ಬಳಕೆಗೆ ಯಾವುದೇ ಬಡ್ಡಿ ತಗಲುವುದಿಲ್ಲ. ಪ್ರತಿ ತಿಂಗಳು ನಿಮ್ಮ ಡೆಬಿಟ್ ಕಾರ್ಡ್ ಹಣದ ರವಾನೆ ವಿವರವನ್ನು ಬ್ಯಾಂಕ್ ನಿಂದ ಪಡೆದುಕೊಳ್ಳುತ್ತೀರಿ. ಎಟಿಎಂ ಬಳಕೆಯ ಮಿತಿ ಮೀರಿದರೆ ನಿಗದಿತ ಶುಲ್ಕವನ್ನು ಭರಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್
ಇದೊಂದು ರೀತಿಯ ಸಾಲವೆಂದೇ ಹೇಳಬಹುದು. ನಿರ್ದಿಷ್ಟ ಪ್ರಮಾಣದ ಹಣವನ್ನು ನಿಮ್ಮ ಕ್ರೆಡಿಟ್ ಕಾರ್ಡ್ ಗೆ ನೀಡಲಾಗಿರುತ್ತದೆ. ನಿಮ್ಮ ಬಳಿ ಹಣವಿಲ್ಲದಿದ್ದರೂ ಇದನ್ನು ಬಳಸಿ ಅಗತ್ಯ ವಸ್ತು ಖರೀದಿ ಮಾಡಬಹುದು. ಆದರೆ ನಿಗದಿತ ಅವಧಿಯೊಳಗೆ ಸಂಬಂಧಿಸಿದ ಬ್ಯಾಂಕ್ ಗೆ ಮರುಪಾವತಿ ಮಾಡಬೇಕಾಗುತ್ತದೆ.
ವರ್ಷಕ್ಕೊಮ್ಮೆ ಇದಕ್ಕೆ ಸಂಬಂಧಿಸಿದ ಶುಲ್ಕವನ್ನು ಬ್ಯಾಂಕ್ ನವರು ನಿಮ್ಮ ಖಾತೆಯಿಂದಲೇ ಮುರಿದುಕೊಳ್ಳುತ್ತಾರೆ. ಬೇಜವಾಬ್ದಾರಿಯಿಂದ ಹಣ ಮರುಪಾವತಿ ವಿಳಂಬ ಮಾಡಿದರೆ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ.
ಪ್ರತಿ ತಿಂಗಳು ನಿಮ್ಮ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ವ್ಯವಹಾರಗಳ ಮಾಹಿತಿ ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಕಿಸೆಯಲ್ಲಿ ದುಡ್ಡಿಲ್ಲದಿದ್ದರೂ ಗ್ರಾಹಕರಿಗೆ ಖರೀದಿ ಮಾಡುವ ಅವಕಾಶವನ್ನು ಈ ಕಾರ್ಡ್ ಒದಗಿಸುತ್ತದೆ.
ಕಾರ್ಡ್ ಯಾವಾಗ ಬಳಕೆ ಮಾಡುವುದು ಉತ್ತಮ?
ಸಾಧ್ಯವಾದಷ್ಟು ಡೆಬಿಟ್ ಕಾರ್ಡ್ ಬಳಕೆ ಮಾಡುವುದು ಉತ್ತಮ . ಯಾಕೆಂದರೆ ಇದು ನಿಮ್ಮ ಹಣಕಾಸು ಸ್ಥಿತಿಗತಿಯನ್ನು ತಿಳಿಸುತ್ತದೆ. ಖಾತೆಯಲ್ಲಿ ಎಷ್ಟು ಹಣವಿದೆ? ಎಷ್ಟು ಖರ್ಚು ಮಾಡಬಹುದು ಎಂಬದನ್ನು ಮನವರಿಕೆ ಮಾಡಿ ನಿಮ್ಮನ್ನು ಜಾಗೃತರನ್ನಾಗಿರಿಸುತ್ತದೆ. ಆದರೆ ಕ್ರೆಡಿಟ್ ಕಾರ್ಡ್ ಗೆ ನೀಡುವ ಆಫರ್ ಗಳನ್ನು ಬಳಸಿಕೊಂಡು ಕಡಿಮೆ ಬೆಲೆಯಲ್ಲಿ ನಿಮಗಿಷ್ಟವಾದ ವಸ್ತು ಖರೀದಿ ಮಾಡಬಹುದು. ಡಿಸ್ಕೌಂಟ್ ಯೋಜನೆಗಳನ್ನು, ಹಬ್ಬದ ವಿಶೆಷ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಒಟ್ಟಿನಲ್ಲಿ ನೀವು ಯಾವುದೇ ಕಾರ್ಡ್ ಹೊಂದಿದ್ದರೂ ಅವುಗಳನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಹಣಕಾಸು ಸಮತೋಲನನ ಕಾಯ್ದುಕೊಂಡು ಹೋಗಬಹುದು. (kannada.goodreturns.in)
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications