ಕೇಂದ್ರ ಸರ್ಕಾರ ನಗದು ರಹಿತ, ಡಿಜಿಟಲ್ ವ್ಯವಹಾರಕ್ಕಾಗಿ ಉತ್ತೇಜನ ನೀಡುತ್ತಿದ್ದು, ಇದಕ್ಕೆ ಪೂರಕವಾದ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ ಆಧಾರ್ ಲಿಂಕ್ ಹಲವಾರು ಸಂದರ್ಭದಲ್ಲಿ ಕಡ್ಡಾಯವನ್ನಾಗಿ ಮಾಡಿದೆ.
ಕೇಂದ್ರ ಸರ್ಕಾರ ನಗದು ರಹಿತ, ಡಿಜಿಟಲ್ ವ್ಯವಹಾರಕ್ಕಾಗಿ ಉತ್ತೇಜನ ನೀಡುತ್ತಿದ್ದು, ಇದಕ್ಕೆ ಪೂರಕವಾದ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ ಆಧಾರ್ ಲಿಂಕ್ ಹಲವಾರು ಸಂದರ್ಭದಲ್ಲಿ ಕಡ್ಡಾಯವನ್ನಾಗಿ ಮಾಡಿದೆ.
ಹಾಗಾದರೆ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.
ಎಸ್ ಬಿಐ ಖಾತೆಯೊಂದಿಗೆ ಆಧಾರ್ ಲಿಂಕ್ ಹೇಗೆ?
1. ಎಸ್ಬಿಐ ಆಧಾರ್ ಲಿಂಕ್ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ
2. ನೀಡಿರುವ ಎಲ್ಲ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ
3. ನಿಮ್ಮ ಆಧಾರ್ ಕಾರ್ಡ್ ಪ್ರತಿ, ಪಾನ್ ಕಾರ್ಡ್, ಪಾಸ್ ಬುಕ್ ಫೋಟೋ ಕಾಪಿ ತೆಗೆದುಕೊಳ್ಳಿ
4. ಎಲ್ಲ ದಾಖಲೆಗಳನ್ನು ಬ್ಯಾಂಕ್ ಗೆ ನೀಡಿ
ಎಟಿಎಂ ಮೂಲಕ ಆಧಾರ್ ಲಿಂಕ್
1. ಎಟಿಎಂ ಕಾರ್ಡ್ ಸ್ವೈಪ್ ಮಾಡಿ
2. ಪಿನ್ ನಂಬರ್ ನಮೂದಿಸಿ
3. ಸರ್ವಿಸ್ ರಜಿಸ್ಟ್ರೆಷನ್ ಆಯ್ಕೆ ಮಾಡಿ
4. ಆಧಾರ್ ನೋಂದಣಿ ಆಯ್ಕೆ ಮಾಡಿ
5. ನಿಮ್ಮ ಖಾತೆಯ ವಿಧವನ್ನು ಆಯ್ಕೆ ಮಾಡಿ(Savings/Checking)
6. ಆಧಾರ್ ನಂಬರ್ ನಮೂದಿಸಿ
7. ಇನ್ನೊಮ್ಮೆ ಅದೇ ಆಧಾರ್ ನಂಬರ್ ನಮೂದಿಸಿ
SMS ಮೂಲಕ ಆಧಾರ್ ಲಿಂಕ್
ಎಸ್ಎಂಎಸ್ ಸೇವೆ ಪಡೆಯಲು ಬ್ಯಾಂಕಿನೊಂದಿಗೆ ಮೊಬೈಲ್ ನಂಬರ್ ನೋಂದಣಿ ಆಗಿರಬೇಕು.
1. ಎಸ್ಎಂಎಸ್ 567676 ನಂಬರ್ ಗೆ ಕಳುಹಿಸಿ. (ವಿಧಾನ: UID(space)Aadhaar number(space)Account number)
2. ಮೊಬೈಲ್ ನಂಬರ್ ನೋಂದಣಿ ಆಗದಿದ್ದರೆ ಅಥವಾ ಆಧಾರ್ ಈಗಾಗಲೇ ಖಾತೆಯೊಂದಿಗೆ ಲಿಂಕ್ ಆಗಿದ್ದರೆ ನಿಮಗೆ ಸಂದೇಶ ಬರುತ್ತದೆ.
3. ಒಂದು ವೇಳೆ ಬ್ಯಾಂಕಿನೊಂದಿಗೆ ಮೊಬೈಲ್ ನಂಬರ್ ನೋಂದಣಿ ಆಗಿದ್ದರೆ, ವಿನಂತಿ ಕಳುಹಿಸಿದರೆ ದೃಢೀಕರಣ ಸಂದೇಶ ಪಡೆಯುವಿರಿ
UIDAI ಪರಿಶೀಲನೆ
ಆಧಾರ್ ನಂಬರ್ UIDAI ಬ್ಯಾಂಕಿನೊಂದಿಗೆ ಪರಿಶೀಲನೆ ಮಾಡುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿರುವಂತೆ ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಾರ್ಡ್ ಇದ್ದರೆ ಸಾಕು. ಎಲ್ಪಿಜಿ ಸಬ್ಸಿಡಿ ಪಡೆಯಲು ಕೂಡ ಆಧಾರ್ ನಂಬರ್ ಹೊಂದಿರಬೇಕಾಗುತ್ತದೆ. ಅವರು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ಪಡೆದುಕೊಳ್ಳುತ್ತಾರೆ.
ಬ್ಯಾಂಕ್ ಖಾತೆಯೊಂದಿಗೆ ಲಿಂಕ್
ಆಧಾರ್ ಕಾರ್ಡ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವುದರಿಂದ ಅನೇಕ ಸೌಲಭ್ಯಗಳನ್ನು ಪಡೆಯಬಹುದು. ಬ್ಯಾಂಕುಗಳಲ್ಲಿ ಇದನ್ನು ಕೆವೈಸಿ ಯನ್ನಾಗಿಯೂ ಬಳಸಿಕೊಳ್ಳಬಹುದು. ಅಲ್ಲದೇ ಇದೊಂದು ಬಹು ವಿಧದ ಗುರುತಿನ ಚೀಟಿಯಾಗಿ ಬಳಕೆಯಾಗುತ್ತದೆ.
ಸಬ್ಸಿಡಿ ಮತ್ತಿತರ ಸೌಲಭ್ಯ
ಕೇವಲ ಆಧಾರ್ ಕಾರ್ಡ್ ಹೊಂದಿದ್ದರೆ ಮಾತ್ರ ಸಾಲದು, ಅದನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿದಾಗ ಮಾತ್ರ ಸರ್ಕಾರ ನೀಡುವ ಸಬ್ಸಿಡಿ ಮತ್ತಿತರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಎಲ್ಪಿಜಿ ಸಬ್ಸಿಡಿ ಮತ್ತು ನಿವೃತ್ತಿ ವೇತನ ಮುಂತಾದವುಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಬರುವಂತೆ ಮಾಡಿಕೊಳ್ಳಬಹುದು.


Click it and Unblock the Notifications