ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ಖಾತೆ ಇದೆಯೇ? ಇಲ್ಲಿ ನೋಡಿ...

ಭಾರತ ಸರ್ಕಾರ ಅಂಚೆ ಇಲಾಖೆಯನ್ನು ನಿರ್ವಹಿಸುತ್ತಿದ್ದು, ಭಾರತೀಯ ಅಂಚೆ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಹಿರಿಯ ನಾಗರಿಕರಿಗೂ ವಿವಿಧ ಯೋಜನೆಗಳನ್ನು ನೀಡುತ್ತಿದೆ.

ಭಾರತ ಸರ್ಕಾರ ಅಂಚೆ ಇಲಾಖೆಯನ್ನು ನಿರ್ವಹಿಸುತ್ತಿದ್ದು, ಭಾರತೀಯ ಅಂಚೆ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಹಿರಿಯ ನಾಗರಿಕರಿಗೂ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಪೋಸ್ಟ್ ಆಫೀಸ್ ಯೋಜನೆಗಳು ತೆರಿಗೆ ವಿನಾಯಿತಿಯನ್ನು ಸಹ ಕಲ್ಪಿಸಿಕೊಡುತ್ತಿವೆ. ಯಾವುದೇ ರಿಸ್ಕ್ ಇಲ್ಲದೇ ನಿಗದಿತ ಆದಾಯ ಪಡೆದುಕೊಳ್ಳಲು ಅಂಚೆ ಕಚೇರಿ ಯೋಜನೆಗಳು ನೆರವಾಗುತ್ತಿವೆ. ಪೋಸ್ಟ್ ಆಫೀಸ್ ಬೆಸ್ಟ್ ಉಳಿತಾಯ ಯೋಜನೆಗಳು

ಅಂಚೆ ಕಚೇರಿ ಯೋಜನೆಗಳ ಬಗ್ಗೆ ಈ ಕೆಳಗಿನ ಅಂಶಗಳನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಖಾತೆ ತೆರೆಯಲು ಯಾವ ಬ್ಯಾಂಕ್ ಉತ್ತಮ?

1. ಖಾತೆಯ ಬದಲಾವಣೆ ಮತ್ತು ಪ್ರಮಾಣ ಪತ್ರ

1. ಖಾತೆಯ ಬದಲಾವಣೆ ಮತ್ತು ಪ್ರಮಾಣ ಪತ್ರ

ಖಾತೆಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿಕೊಳ್ಳಬೇಕು ಎಂದು ಬಯಸುವ ವ್ಯಕ್ತಿ [SB10(b)] ಅಡಿ ಅಥವಾ ಮ್ಯಾನುವಲ್ ಆಗಿ ಅರ್ಜಿಯೊಂದನ್ನು ಸಲ್ಲಿಸಬೇಕಾಗುತ್ತದೆ. ಈ ಅರ್ಜಿಗಳು ಸಂಬಂಧಿಸಿದ ಕಚೇರಿಯಲ್ಲಿ ದೊರೆಯುತ್ತವೆ. ಟ್ರಾನ್ಸ ಫರ್ ಸರ್ಟಿಫಿಕೇಟ್ ಗೆ ಅರ್ಜಿಯನ್ನು ಫಾರ್ಮ್(NC32) ನಲ್ಲಿ ಸಲ್ಲಿಕೆ ಮಾಡಬೇಕಾಗುತ್ತದೆ.

2. ತಟಸ್ಥ ಖಾತೆ

2. ತಟಸ್ಥ ಖಾತೆ

ಸತತ ಮೂರು ಹಣಕಾಸು ವರ್ಷ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ಯಾವುದೇ ಹಣದ ಚಲಾವಣೆ ಅಥವಾ ವ್ಯವಹಾರ ಮಾಡದಿದ್ದರೆ ಖಾತೆಯನ್ನು ತಟಸ್ಥ ಖಾತೆ ಎಂದು ಪರಿಗಣನೆ ಮಾಡಲಾಗುತ್ತದೆ. ಒಂದು ವೇಳೆ ಈ ಖಾತೆಯನ್ನು ಪುನಃ ಚಾಲ್ತಿಗೆ ತರಬೇಕು ಎಂದಾದಲ್ಲಿ ಮೇಲೆ ಹೇಳಿದ ರೀತಿಯಲ್ಲೇ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಖಾತೆಯಲ್ಲಿ ರೂ. 20 ಗಿಂತ ಕಡಿಮೆ ಹಣವಿದ್ದರೆ ಸೇವಾ ಶುಲ್ಕವನ್ನು ಸಲ್ಲಿಕೆ ಮಾಡಬೇಕಾಗುತ್ತದೆ.

3. ಡುಪ್ಲಿಕೇಟ್ ಸರ್ಟಿಫಿಕೇಟ್

3. ಡುಪ್ಲಿಕೇಟ್ ಸರ್ಟಿಫಿಕೇಟ್

ಡುಪ್ಲಿಕೇಟ್ ಸರ್ಟಿಫಿಕೇಟ್ ಬೇಕಾದಲ್ಲಿ ಅಸಲಿಯದನ್ನು ಕಳೆದುಕೊಂಡ ಬಗ್ಗೆ ಅಥವಾ ಹಾನಿಯಾಗಿರುವ ಬಗ್ಗೆ ಸಮಗ್ರ ದಾಖಲೆಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ(NC 29). ನಾಶವಾದ ಮಾಹಿತಿ, ಕಾರಣ, ಎಷ್ಟು ವರ್ಷದ ಬಾಂಡ್ ಹೀಗೆ ಎಲ್ಲ ವಿವರಗಳನ್ನು ನೀಡಬೇಕಾಗುತ್ತದೆ.

4. ದೂರು ದಾಖಲು ಮಾಡುವ ಬಗೆ

4. ದೂರು ದಾಖಲು ಮಾಡುವ ಬಗೆ

ಖಾತೆದಾರ ಸಾವಿಗೀಡಾದರೆ ಅಥವಾ ಇನ್ನಿತರ ಸಂದರ್ಭದಲ್ಲಿ ಹಣ ಹಿಂದಕ್ಕೆ ಪಡೆಯಬೇಕಾದರೆ ನಾಮಿನಿ ಹಣಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಒಂದು ವೇಳೆ ಯಾವುದೇ ನಾಮಿನಿ ಇಲ್ಲ ಎಂದಾದರೆ ಕಾನೂನು ಪ್ರಕಾರ ಯಾರೂ ಹಕ್ಕಿಕೆ ಭಾಜ್ಯರಾಗುತ್ತಾರೋ ಅವರು ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. 1 ಲಕ್ಷದವರೆಗಿನ ಮೊತ್ತಕ್ಕೆ ವಿಶೇಷ ದಾಖಲೆಗಳನ್ನು ಸಲ್ಲಿಕೆ ಮಾಡುವ ಅಗತ್ಯವಿರುವುದಿಲ್ಲ.

5. ಮೈನರ್ ಖಾತೆ

5. ಮೈನರ್ ಖಾತೆ

ಮೈನರ್ ಹೆಸರಿನಲ್ಲಿಯೂ ಖಾತೆ ತೆರೆಯಬಹುದು. 10 ವರ್ಷ ತುಂಬಿದ ವ್ಯಕ್ತಿಯ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಸುಲಭವಾಗಿ ಖಾತೆ ತೆರೆಯಲು ಸಾಧ್ಯವಿದೆ.(Kannadagoodreturns.in)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+