Englishहिन्दी മലയാളം தமிழ் తెలుగు

ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಮುನ್ನ ಇಲ್ಲೊಮ್ಮೆ ನೋಡಿ...

Posted By: Siddu
Subscribe to GoodReturns Kannada

ಇನ್ನೇನು ಅಕ್ಷಯ ತೃತೀಯಕ್ಕೆ ಕ್ಷಣಗಣನೆ... ಅಕ್ಷಯ ತೃತೀಯ ಅಂದ್ರೆ ಏನೋ ಖುಷಿ, ಹೊಸತನದ ಪುಳಕ, ಖರೀದಿಯ ತವಕ...!

ಸಾವಿರಾರು ಜನ ಚಿನ್ನಾಭರಣ ಮಳಿಗೆಗಳಿಗೆ ಚಿನ್ನಾಭರಣ ಖರೀದಿಗೆ ಹೋಗಲು ತುದಿಗಾಲಲಿ ನಿಂತಿದ್ದಾರೆ.

ಖರೀದಿಗೆ ಹೋಗ್ಬೇಡಿ!

ಆದರೆ ಈ ಬಾರಿ ಚಿನ್ನಾಭರಣ ಖರೀದಿಗೆ ಹೋಗ್ಬೇಡಿ! ಯಾಕಂತಿರಾ..?? ಅಕ್ಷಯ ತೃತೀಯದಂದು ಚಿನ್ನಾಭರಣ ಖರೀದಿ ಮಾಡಿದರೆ ಕಷ್ಟ ಅನುಭವಿಸುತ್ತಿರಿ..!! ಈ ಸಲದ ಅಕ್ಷಯ ತೃತೀಯ ಗಂಡಾಂತರ ತಂದು ಅಕ್ಷಯ ಪಾಶ ಆಗುವ ಸಾಧ್ಯತೆ ಇದೆ.

ದರಿದ್ರ ಯೋಗ!

ಏಕೆಂದರೆ ಈ ಬಾರಿಯ ಚಿನ್ನಾಭರಣ ಅಕ್ಷಯ ತೃತೀಯದಂದು ದರಿದ್ರ ಯೋಗವಿದೆ.! ಚಿನ್ನಾಭರಣ ಖರೀದಿಸಿದರೆ ನಿಮ್ಮ ಮನೆಯನ್ನು ನಾಶ ಮಾಡುತ್ತದೆ. ದಾರಿದ್ರ್ಯತನ ಕಾಡಲಿದೆ. ಹಾಗಿದ್ದರೆ ಪ್ರಸಿದ್ದ ಜ್ಯೋತಿಷಿಗಳು ಏನಂತಾರೆ ನೋಡೋಣ.. ಜ್ಯೋತಿಷ್ಯಗಳ ಭವಿಷ್ಯ ನೀವು ಕೇಳಿದ್ರೆ ನೀವು ನಿಜಕ್ಕೂ ಭಯಬಿಳುತ್ತಿರಿ..!!!

ಜ್ಯೋತಿಷ್ಯ ಉವಾಚ

1. ಈ ಸಲದ ಅಕ್ಷಯ ತೃತೀಯ ಹೇವಿಳಂಬಿ ಸಂವತ್ಸರದಲ್ಲಿ ಬಂದಿದೆ. ಇದು 60 ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ಇದು ಅಶುಭಕಾರಕ ಹಾಗೂ ಮಾರಕ.
2. ಈ ಸಲ ಅಕ್ಷಯ ತೃತೀಯ ಶನಿವಾರ ಬಂದಿರುವುದರಿಂದ ಚಿನ್ನ ಖರೀದಿಸಿದರೆ ಅಶುಭವಾಗುತ್ತದೆ.
3. ಅಕ್ಷಯ ತೃತೀಯದಂದು ಖರೀದಿಸಿದ ಚಿನ್ನ ಗಿರವಿ ಅಂಗಡಿ ಸೇರುವ ಸಂಭವವೇ ಜಾಸ್ತಿ. ಅಲ್ಲದೇ ನೀವು ಜೈಲು ಪಾಲಾಗುವ ಗಂಡಾಂತರವೂ ಎದುರಾಗುತ್ತದೆ.
4. ಜತೆಗೆ ಅನಾವಶ್ಯಕ ಆಪತ್ತುಗಳಿಗೆ ತುತ್ತಾಗಿ ಮನಸ್ಸು ಸದಾ ಭಯಗ್ರಸ್ಥವಾಗುತ್ತದೆ.
5. ಶನಿವಾರ ಚೋರಕಾರಕವಾಗಿರುವುದರಿಂದ ಖರೀದಿಸಿದ ಚಿನ್ನ ಕಳ್ಳತನವಾಗುವ ಸಾಧ್ಯತೆಯೇ ಹೆಚ್ಚು.
6. ಇನ್ನು ಏಪ್ರಿಲ್ 29ರಂದು ಬೆಳಿಗ್ಗೆ 10.53ಕ್ಕೆ ತೃತೀಯ ಸಂಧಿ ಸೇರುವುದರಿಂದ ಅದಕ್ಕೂ ಮುನ್ನಾ ಅಂದರೆ, ಏಪ್ರಿಲ್ 28ರಂದು ಬೆಳಿಗ್ಗೆ ಚಿನ್ನ ಖರೀದಿಸಿದರೂ ಅದು ದ್ವಿತೀಯವಾಗುತ್ತದೆ.. ಆದರೆ ಎಚ್ಚರ.!
7. ಆದರೆ ಚಿನ್ನಾಭರಣ ವರ್ತಕರು ವೈಯಕ್ತಿಕ ಹಿತಾಸಕ್ತಿಗಾಗಿ ಈ ಬಾರಿ ಶುಕ್ರವಾರ ಅಕ್ಷಯ ತೃತೀಯ ಬಂದಿದೆ ಎಂದು ಸುಳ್ಳು ಹೇಳುತ್ತಿದ್ದಾರೆ.
8. ಈ ಬಾರಿ ಅಕ್ಷಯ ತೃತೀಯ ಏಪ್ರಿಲ್ 28ರ ಮಧ್ಯಾಹ್ನ 1 ಗಂಟೆ 19 ನಿಮಿಷಕ್ಕೆ ಆರಂಭವಾಗಿ ಏಪ್ರಿಲ್ 29ರ ಬೆಳಿಗ್ಗೆ 10.53ಕ್ಕೆ ಅಂತ್ಯವಾಗುತ್ತದೆ. (ಸಂಗ್ರಹ)

English summary

Do not buy gold On Akshaya Third !?

Akshaya Tritiya, falling on the third day of the bright half of the lunar month of Vaisakha of the traditional Hindu calendar, is one of the four most auspicious days of the year for Hindu.
Story first published: Tuesday, April 25, 2017, 13:21 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC