Englishहिन्दी മലയാളം தமிழ் తెలుగు

ಭಾರತದಲ್ಲಿ ಲಭ್ಯವಿರುವ ಅನೇಕ ವಿಧದ ಸಾಲಗಳು ಯಾವುವು?

Written By: Siddu
Subscribe to GoodReturns Kannada

ಕಷ್ಟಕಾಲದಲ್ಲಿ ಇಲ್ಲವೇ ಹಣಕಾಸಿನ ತುರ್ತು ಅವಶ್ಯಕತೆ ಇರುವ ಸಂದರ್ಭಗಳಲ್ಲಿ ಸಾಲಗಳು ನೆರವಿಗೆ ಬರುತ್ತವೆ. ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಅನೇಕ ವ್ಯಕ್ತಿಗಳಿಗೆ ತಿಳಿದಿಲ್ಲ. ವಿಚಾರ ಮಾಡದೆ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಬೀಡುತ್ತಾರೆ. ಇದಕ್ಕೆ ಕಾರಣ ದೇಶದಲ್ಲಿ ಲಭ್ಯವಿರುವ ಹಲವು ವಿಧದ ಸಾಲಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಇಲ್ಲದಿರುವುದು. ಸಿಬಿಲ್ ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ?

ಹಾಗಿದ್ದರೆ ಭಾರತದಲ್ಲಿ ಲಭ್ಯವಿರುವ ಹಲವು ವಿಧದ ವಿವಿಧ ಸಾಲಗಳು ಯಾವುವು ಎಂಬುದನ್ನು ನೋಡೋಣ...

1. ಗೃಹ ಸಾಲ

ಸಾಮಾನ್ಯವಾಗಿ ವ್ಯಕ್ತಿಯ ಶೇ.40ರಷ್ಟು ಆದಾಯವನ್ನು ದಿನಿತ್ಯದ ಜೀವನೋಪಾಯ ಖರ್ಚುಗಳ ಭಾಗವಾಗಿ ಬ್ಯಾಂಕುಗಳು ಪರಿಗಣಿಸುತ್ತವೆ. ಒಬ್ಬ ವ್ಯಕ್ತಿ ಮಾಸಿಕ ರೂ. 60 ಸಾವಿರ ಆದಾಯ ಗಳಿಸುತ್ತಿದ್ದರೆ ದಿನಿತ್ಯದ ಖರ್ಚಿಗಾಗಿ ರೂ. 25 ಸಾವಿರ ಮತ್ತು ಕಾರು ಸಾಲ ಇತ್ಯಾದಿಗಾಗಿ EMI ರೂ. 20 ಸಾವಿರ ಖರ್ಚು ಮಾಡಿದರೆ, ಉಳಿದ ರೂ. 15 ಸಾವಿರ ನಿಮ್ಮ ಸಾಮರ್ಥ್ಯವೆಂದು ನಿರ್ಧರಿಸಲಾಗುತ್ತದೆ. (ಗೃಹ ಸಾಲ)

2. ವೈಯಕ್ತಿಕ ಸಾಲ

ಹೆಚ್ಚಿನ ಜನರು ವೈಯಕ್ತಿಕ ಸಾಲಗಳಿಗೆ ಮೊರೆ ಹೋಗುತ್ತಾರೆ ಎನ್ನಬಹುದು. ಬ್ಯಾಂಕುಗಳು ವೈಯಕ್ತಿಕ ಸಾಲಗಳು ಹೆಚ್ಚು ಲಾಭದಾಯಕವೆಂದು ಪರಿಗಣಿಸುತ್ತವೆ. ವೈಯಕ್ತಿಕ ಸಾಲಗಳ ಬಡ್ಡಿದರ ನನಿಮ್ಮ ವಿಶ್ವಾಸಾರ್ಹತೆ ಮತ್ತು ಬ್ಯಾಂಕ್ ಅವಲಂಬಿಸಿ 11-37ರ ನಡುವೆ ಇರುತ್ತದೆ. (ವೈಯಕ್ತಿಕ ಸಾಲ)

3. ಚಿನ್ನದ ಮೇಲೆ ಸಾಲ

ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಚಿನ್ನದ ಮೇಲಿನ ಸಾಲಗಳಿಗೆ ಬಡ್ಡಿದರ ಕಡಿಮೆ ಇರುತ್ತದೆ. ಚಿನ್ನದ ಸಾಲಗಳ ಮೇಲೆ ಸಂಸ್ಕರಣಾ ಶುಲ್ಕ ವಿಧಿಸಲಾಗುವುದಿಲ್ಲ. ಅದಾಗ್ಯೂ, ಚಿನ್ನದ ಮೌಲ್ಯಮಾಪನಕ್ಕಾಗಿ ಶುಲ್ಕ ವಿಧಿಸಲಾಗುತ್ತದೆ. ಬ್ಯಾಂಕುಗಳು/ಕಂಪನಿಗಳು ಚಿನ್ನದ ಮೌಲ್ಯಮಾಪನ ಅಥವಾ ಶೇಖರಣೆ ಮಾಡುವ ಸಂದರ್ಭದಲ್ಲಿ ಯಾವುದೇ ಹಾನಿಯಾಗದಂತೆ ಅತ್ಯಂತ ಎಚ್ಚರಿಕೆ ವಹಿಸಿಕೊಳ್ಳುತ್ತವೆ. (ಚಿನ್ನದ ಮೇಲೆ ಸಾಲ)

4 ಓವರ್ ಡ್ರಾಪ್ಟ್ ಸಾಲ

ಓವರ್ ಡ್ರಾಪ್ಟ್ ಸಾಲ ಕೂಡ ಪಡೆಯಬಹುದಾಗಿದ್ದು, ಸ್ಥಿರ ಠೇವಣಿಗಳ ಮೇಲೆ ಶೇ. 9-12ರವರೆಗೆ ಬಡ್ಡಿದರ ಇರುತ್ತದೆ. ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಇದು ಉತ್ತಮ. ಅಲ್ಪಾವಧಿ ಹಣದ ಅಗತ್ಯವಿದ್ದಾಗ ಇದನ್ನು ಆಯ್ಕೆ ಮಾಡಿಉವುದು ಉತ್ತಮ. (ಓವರ್ ಡ್ರಾಪ್ಟ್)

 

5. ಇನ್ಸೂರೆನ್ಸ್ ಸಾಲ

ಎಲ್ಐಸಿಯಂತಹ ವಿಮೆ ಪಾಲಿಸಿಗಳ ಮೇಲೆ ಸಾಲ ಪಡೆಯಬಹುದು. ಈ ಸಾಲ ಪಡೆಯಲು 3 ವರ್ಷಗಳ ಪ್ರೀಮಿಯಂ ಮೊತ್ತ ಪಾವತಿ ನಂತರ ಶರಣಾಗತಿ ಮೌಲ್ಯ(surrender value) ಅರ್ಹತೆ ಹೊಂದಿರಬೇಕು. ತದನಂತರ ಶರಣಾಗತಿ ಮೌಲ್ಯ(surrender value) ಶೇ. 90ರಷ್ಟು ಸಾಲವನ್ನು ಪಡೆಯಬಹುದು. (ವಿಮೆ ಸಾಲ)

 

6. ಆಸ್ತಿ ಸಾಲ(Property loan)

ಆಸ್ತಿ ಸಾಲ(Property loan) ಹೆಚ್ಚುಕಡಿಮೆ ವೈಯಕ್ತಿಕ ಸಾಲವನ್ನು ಹೋಲುತ್ತದೆ. ಇಲ್ಲಿನ ಏಕೈಕ ವ್ಯತ್ಯಾಸವೆಂದರೆ ಸಾಲಕ್ಕಾಗಿ ನಿಮ್ಮ ಆಸ್ತಿಯನ್ನು ಆಧಾರವನ್ನಾಗಿ ಇಡುತ್ತಿರಿ. ನೀವು ಸಾಲ ತೀರಿಸಲು ವಿಫಲವಾದಲ್ಲಿ ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು. (ಆಸ್ತಿ ಸಾಲ)

7. ಪಿಎಫ್ ಮೇಲೆ ಸಾಲ

ಪಿಪಿಎಫ್ ಖಾತೆ ಹೊಂದಿದವರಿಗೆ ಈ ಸಾಲಸೌಲಭ್ಯ ಲಭ್ಯವಿರುತ್ತದೆ. ಪಿಪಿಎಫ್ ಖಾತೆ ತೆರೆದು ಮೂರು ವರ್ಷಗಳಾದ ನಂತರ ಸಾಲ ಪಡೆಯಬಹುದು. (ಪಿಎಫ್)

8. ಶೈಕ್ಷಣಿಕ ಸಾಲ

ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ವ್ಯಕ್ತಿಗಳು ಶೈಕ್ಷಣಿಕ ಸಾಲ ಪಡೆಯುತ್ತಿದ್ದಾರೆ. ಭಾರತದಲ್ಲಿ ಅಥವಾ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಈ ಸಾಲ ಪಡೆಯಬಹುದು. ಬಡ್ಡಿಮರುಪಾವತಿಯ ಭಾಗ ಮಾತ್ರ ಕಡಿತಗೊಳಿಸಲು ಮಾತ್ರ ಮೊತ್ತ ಅನ್ವಯವಾಗುತ್ತದೆ. ಶೈಕ್ಷಣಿಕ ಸಾಲ

9. ಬಿಸಿನೆಸ್ ಸಾಲ

ವ್ಯಾಪಾರದ ವಿವರ ಹೊಂದಿರುವ ಬಿಸಿನೆಸ್ ಪ್ರಪೋಸಲ್ ತಯಾರಿಸಿ ಬ್ಯಾಂಕುಗಳಿಗೆ ಸಲ್ಲಿಸಿಬೇಕು. ಬಿಸಿನೆಸ್ ಪ್ರಪೋಸಲ್ ಪರಿಶೀಲನೆ ಮಾಡಿದ ನಂತರ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳು ತಮ್ಮ ಮಾನದಂಡಗಳನ್ನು ಆಧರಿಸಿ ಸಾಲ ಒದಗಿಸುತ್ತವೆ. (ವ್ಯವಹಾರ ಸಾಲ)

10. ಕಾರು ಸಾಲ

ಹೊಸ ಕಾರು ಖರೀದಿ ಮಾಡುವುದಕ್ಕಾಗಿ ಹಲವಾರು ಹಣಕಾಸು ಸಂಸ್ಥೆಗಳು ಸಾಲವನ್ನು ನೀಡುತ್ತವೆ. ವಿಭಿನ್ನ ಕಾರುಗಳ ಮೇಲೆ ವಿಭಿನ್ನ ಬಡ್ಡಿದರದಲ್ಲಿ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ಸಾಲ ಒದಗಿಸುತ್ತವೆ. ಎಸ್ಬಿಐ ಕಾರು ಸಾಲ ಬಡ್ಡಿದರ ಶೇ. 9.25ರಷ್ಟಿದೆ. ವಾಹನ ಸಾಲ

11. ಷೇರು/ಮ್ಯೂಚುವಲ್ ಫಂಡ್ ಗಳ ಮೇಲೆ ಸಾಲ

ದೇಶದಾದ್ಯಂತ ನಿಮ್ಮ ಷೇರುಗಳ ಮೇಲೆ ಇಲ್ಲವೆ ಮ್ಯೂಚುವಲ್ ಫಂಡ್ ಗಳ ಮೇಲೆ ಕೂಡ ಸಾಲ ಪಡೆಯಬಹುದಾಗಿದೆ. ಇದಕ್ಕೆ ಸಂಬಂಧಿಸಿದ ಮಾನದಂಡಗಳನ್ನು ಆಯಾ ಸಂಸ್ಥೆಗಳಿಂದ ಪಡೆಯುವುದು ಉತ್ತಮ. ಮ್ಯೂಚುವಲ್ ಫಂಡ್ ಸಾಲ

English summary

What Are The Different Types Of Loans In India?

Loans tend to provide some respite in times of financial need. Many individuals fail to apply for the right kind of loan and blindly apply for only personal loan. This is because of restricted knowledge on different types of loan available in India.
Story first published: Thursday, April 20, 2017, 15:13 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns