For Quick Alerts
ALLOW NOTIFICATIONS  
For Daily Alerts

ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ?

ಆಧಾರ್ ಬಯೊಮೆಟ್ರಿಕ್ ಮಾಹಿತಿ ಎಷ್ಟೊಂದು ಮಹತ್ವಪೂರ್ಣ ಎಂಬುದು ನಿಮಗೆ ತಿಳಿದಿದೆ. ಆಧಾರ್ ಮಾಹಿತಿಗಳಲ್ಲಿ ಸಲ್ಪಮಟ್ಟಿಗೆ ರಾಜಿ ಸಾಧ್ಯತೆ ದುರುಪಯೋಗ ಅಥವಾ ವಂಚನೆಗೆ ಎಡೆ ಮಾಡಿಕೊಡುತ್ತದೆ.

By Siddu
|

ಆಧಾರ್ ಬಯೊಮೆಟ್ರಿಕ್ ಮಾಹಿತಿ ಎಷ್ಟೊಂದು ಮಹತ್ವಪೂರ್ಣ ಎಂಬುದು ನಿಮಗೆ ತಿಳಿದಿದೆ. ಆಧಾರ್ ಮಾಹಿತಿಗಳಲ್ಲಿ ಸಲ್ಪಮಟ್ಟಿಗೆ ರಾಜಿ ಸಾಧ್ಯತೆ ದುರುಪಯೋಗ ಅಥವಾ ವಂಚನೆಗೆ ಎಡೆ ಮಾಡಿಕೊಡುತ್ತದೆ. ಆನ್ಲೈನ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಲಾಕ್ ಮಾಡುವ ಮೂಲಕ ಬಯೋಮೆಟ್ರಿಕ್ ಮಾಹಿತಿಯ ದುರುಪಯೋಗ ಆಗುವುದನ್ನು ತಪ್ಪಿಸಬಹುದು.

ಒಂದು ಬಾರಿ ನಿಮ್ಮ ಬಯೋಮೆಟ್ರಿಕ್ಸ್ ಲಾಕ್ ಮಾಡಿದ ನಂತರ, ನಿಮ್ಮ ಬಯೊಮಿಟ್ರಿಕ್ಸ್ ದೃಢೀಕರಣಗಳಿಗಾಗಿ ಬಳಸಲು ಸಾಧ್ಯವಾಗುವುದಿಲ್ಲ. ಇದು ಸಂಭಾವ್ಯ ದುರುಪಯೋಗಗಳನ್ನು ತಡೆಯುತ್ತದೆ. ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

ಆಧಾರ್ ಕಾರ್ಡ್ ನ್ನು ಆನ್ಲೈನ್ ಮೂಲಕ ಲಾಕ್ ಮಾಡುವ ಪ್ರಕ್ರಿಯೆ ನೋಡೋಣ ಬನ್ನಿ.

ಒಟಿಪಿ

ಒಟಿಪಿ

ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಲಾಕ್ ಮಾಡಬಹುದಾಗಿದೆ. ಆಧಾರ್ ಲಾಕ್ ಮಾಡುವ ಮುನ್ನ ನೋಂದಣಿ ಮಾಡಿರುವ ಮೊಬೈಲ್ ನಂಬರ್ ನಿಮ್ಮೊಂದಿಗೆ ಇಟ್ಟುಕೊಳ್ಳಿ. ಯುಐಡಿಎಐ ನಿಮ್ಮ ನೋಂದಣಿಯಾದ ಮೊಬೈಲ್ ನಂಬರ್ ಗೆ ಒನ್ ಟೈಮ್ ಪಾಸ್ವರ್ಡ್ (OTP) ಕಳಿಸುತ್ತದೆ.

ಆಧಾರ್ ಕಾರ್ಡ್ ಲಾಕ್ ಮಾಡೋದು ಹೇಗೆ?

ಆಧಾರ್ ಕಾರ್ಡ್ ಲಾಕ್ ಮಾಡೋದು ಹೇಗೆ?

ಹಂತ 1
* UIDAI ಆಧಾರ್ ಬಯೊಮೆಟ್ರಿಕ್ ಲಾಕಿಂಗ್ ಲಿಂಕ್ ಪ್ರವೇಶಿಸಿ
* 12 ಅಂಕಿಗಳ ಆಧಾರ್ ನಂಬರ್ ನಮೂದಿಸಿ, ನಂತರ ಕೋಡ್ ಸಿಗುವುದು.
* OTP ಮೇಲೆ ಕ್ಲಿಕ್ ಮಾಡಿ
* ನೋಂದಣಿಯಾದ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಅದನ್ನು ನಿಗದಿತ ಸ್ಥಳದಲ್ಲಿ ನಮೂದಿಸಿ, ಲಾಗಿನ್ ಮೇಲೆ ಕ್ಲಿಕ್ ಮಾಡಿ. ( ಸೂಚನೆ: ಒಟಿಪಿ ಕೇವಲ 30 ನಿಮಿಷಗಳವರೆಗೆ ಮಾತ್ರ ವ್ಯಾಲಿಡ್ ಆಗಿರುತ್ತದೆ.)

ಹಂತ 2

ಹಂತ 2

* ಆಧಾರ್ ಬಯೊಮೆಟ್ರಿಕ್ ಲಾಕ್ ಮಾಡಲು "Enable" ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
* ನಿಮಗೆ ಆಧಾರ್ ಬಯೊಮೆಟ್ರಿಕ್ ಲಾಕ್ ಆಗಿರುವ ಕುರಿತು ಸಂದೇಶ ಬರುವುದು.

ಅನ್ ಲಾಕಿಂಗ್ ಅವಧಿ

ಅನ್ ಲಾಕಿಂಗ್ ಅವಧಿ

ಒಂದು ಬಾರಿ ಲಾಕ್ ಆದ ನಂತರ, ಹತ್ತು ನಿಮಿಷದ ಅವಧಿಯೊಳಗೆ ಅನ್ ಲಾಕ್ ಮಾಡಬಹುದು. ತಾತ್ಕಾಲಿಕ ಅವಧಿಯ 10 ನಿಮಿಷಗಳ ನಂತರ ಯುಐಡಿಎಐ ಸ್ವಯಂಚಾಲಿತವಾಗಿ ನಿಮ್ಮ ಆಧಾರ್ ನ್ನು ಲಾಕ್ ಮಾಡುತ್ತದೆ.

English summary

How to lock aadhar card online?

We all know the importance of your biometric information of Aadhaar. Any slight compromise in Aadhaar Information may lead to possible misuse or fraud. You can avoid any misuse of your biometric information by locking your Aadhaar card online.
Story first published: Wednesday, August 30, 2017, 14:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X