Englishहिन्दी മലയാളം தமிழ் తెలుగు

ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

Written By: Siddu
Subscribe to GoodReturns Kannada

ಜುಲೈ 1ರಿಂದ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವಾಗ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದ್ದು, ನಿಮ್ಮ ಆಧಾರ್ ಸಂಖ್ಯೆಯನ್ನು ಪ್ಯಾನ್ ನೊಂದಿಗೆ ಲಿಂಕ್ ಮಾಡಬೇಕಾಗಿದೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

ಆಧಾರ್ ನಂಬರ್ ಪ್ಯಾನ್ ಗೆ ಲಿಂಕ್ ಮಾಡುವುದು ಹೇಗೆ ಎಂಬ ವಿವರ ಇಲ್ಲಿ ನೀಡಲಾಗಿದೆ...

ಹಂತ 1

* ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಲಾಗಿನ್ ಆಗಿ
* ನಂತರ, ಆಧಾರ್ ನಂಬರ್ ಲಿಂಕ್ ಮಾಡಲು ಪಾಪ್ ಅಪ್ ಸ್ಕ್ರೀನ್ ತೆರೆದುಕೊಳ್ಳುತ್ತದೆ.
* ಇಲ್ಲದಿದ್ದರೆ ಮುಖ್ಯ ಮೇನುವಿನಿಂದ ಪ್ರೊಫೈಲ್ ಸೆಟ್ಟಿಂಗ್ಸ್ ಹೋಗಿ
* ಆಧಾರ್ ಲಿಂಕ್ಡ್ ಟು ಪ್ಯಾನ್ ಮೇಲೆ ಕ್ಲಿಕ್ ಮಾಡಿ (ಪ್ಯಾನ್ ಕಾರ್ಡ್ ಪಡೆಯುವ ಮುನ್ನ ಈ ಅಂಶಗಳನ್ನು ನೆನಪಿನಲ್ಲಿಡಿ)

ಹಂತ 2

* ಆಧಾರ್ ನಂಬರ್ ನಮೂದಿಸುವ ಮುನ್ನ ಹೆಸರು, ಜನ್ಮ ದಿನಾಂಕ, ಲಿಂಗ ವಿವರಗಳನ್ನು ಪರಿಶೀಲಿಸಿ
* ಆದಾಯ ತೆರಿಗೆ ಇಲಾಖೆ ನಿಮ್ಮ ಎಲ್ಲಾ ವಿವರಗಳನ್ನು ಮೌಲ್ಯೀಕರಿಸುತ್ತದೆ.
* ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ನಿಮ್ಮ ನಂಬರ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ
* ಲಿಂಕ್ (link now) ಮೇಲೆ ಕ್ಲಿಕ್ ಮಾಡಿ

ಹಂತ 3

ಮೌಲ್ಯೀಕರಣದ ನಂತರ ನಿಮ್ಮ ಆಧಾರ್ ನಂಬರ್ ಪ್ಯಾನ್ ನೊಂದಿಗೆ ಸಂಪರ್ಕಿಸಲಾಗುತ್ತದೆ.
* ನೆನಪಿರಲಿ- ನೀವು ನಮೂದಿಸಿದ ಎಲ್ಲ ವಿವರಗಳು ಹೊಂದಾಣಿಕೆಯಾಗಿದ್ದಲ್ಲಿ ಮಾತ್ರ ಆಧಾರ್ ನಂಬರ್ ಲಿಂಕ್ ಯಶಸ್ವಿಯಾಗುತ್ತದೆ.

ಐಟಿಆರ್ ವಿ(ITR V) ಸ್ವೀಕೃತಿ

ತೆರಿಗೆದಾರರು ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿದ್ದಲ್ಲಿ ಐಟಿಆರ್ ವಿ(ITR V) ಸ್ವೀಕೃತಿಯನ್ನು ಸಿಪಿಸಿ(CPC) ಬೆಂಗಳೂರು ಇವರಿಗೆ ಸಲ್ಲಿಕೆ ಮಾಡಬೇಕಿಲ್ಲ.

ಇ-ಪರಿಶೀಲನೆ(e-verify)

ಹೆಸರು, ಜನ್ಮದಿನಾಂಕ, ಲಿಂಗ ಇತ್ಯಾದಿ ವಿವರಗಳನ್ನು ನೀಡುವುದರ ಮೂಲಕ ಆಧಾರ್ ಕಾರ್ಡ್ ನ್ನು ಪ್ಯಾನ್ ನೊಂದಿಗೆ ಲಿಂಕ್ ಮಾಡಬಹುದು. ಮೊಬೈಲ್ ನಂಬರ್ ನೋಂದಣಿ ಆಗಿದ್ದಲ್ಲಿ ಆಧಾರ್ ಲಿಂಕ್ ಮಾಡಿದ ನಂತರ ತೆರಿಗೆ ರಿಟರ್ನ್ಸ್ ಸಂಬಂಧಿತ ಇ-ಪರಿಶೀಲನೆ(e-verify) ಮಾಡಬಹುದು. ಕೇಂದ್ರದಿಂದ ಆಧಾರ್ ಕಡ್ಡಾಯ, ಹೊಸ ನಿಯಮದಲ್ಲಿ ಮತ್ತೇನಿದೆ..?

English summary

How To Link Aadhaar Number to Your PAN

Now tax payers need not send ITR V acknowledgement form to CPC Bangalore if tax payers aadhaar number is linked to Permanent Account Number (PAN).
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns