ಆರ್ಬಿಐ ಆಯ್ದ ಕಚೇರಿ ಹಾಗೂ ಬ್ಯಾಂಕುಗಳಲ್ಲಿ ಶುಕ್ರವಾರದಿಂದ ಹೊಸ ನೋಟುಗಳು ಚಲಾವಣೆಗೆ ಬರಲಿವೆ. ಈಗಾಗಲೇ ನೋಟು ಚಲಾವಣೆಗೆ ಪ್ರಧಾನಿ ಕಚೇರಿ ಮೂಲಗಳು ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವಾಲಯ ದೃಢೀಪಡಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೂ. 200 ಮುಖಬೆಲೆಯ ಹೊಸ ನೋಟುಗಳನ್ನು ಈಗಾಗಲೇ ಚಲಾವಣೆಗೆ ತಂದಿದೆ.
ನೋಟು ಚಲಾವಣೆಗೆ ಪ್ರಧಾನಿ ಕಚೇರಿ ಮೂಲಗಳು ಅನುಮೋದನೆ ನೀಡಿದ್ದು, ಆರ್ಬಿಐ ಆಯ್ದ ಕಚೇರಿ ಹಾಗೂ ಬ್ಯಾಂಕುಗಳಲ್ಲಿ ನೋಟುಗಳು ಲಭ್ಯವಿವೆ. ರೂ. 200 ಮುಖಬೆಲೆಯ ನೋಟುಗಳ ವೈಶಿಷ್ಟ್ತೆಗಳೇನು ಎಂಬುದರ ಬಗ್ಗೆ ಕುತೂಹಲಗಳಿರಬಹುದು. ಅದರ ಮಾಹಿತಿ ಇಲ್ಲಿ ನೋಡಿ..
ಬಣ್ಣ, ಗಾತ್ರ
200 ಮುಖಬೆಲೆಯ ಹೊಸ ನೋಟುಗಳ ಗಾಢ ಹಳದಿ ಬಣ್ಣ ಹೊಂದಿದ್ದು, 66mm x 146 mm ಅಳತೆಯನ್ನು ಹೊಂದಿವೆ.
ಲಾಂಛನ-ಚಿತ್ರ ವೈಶಿಷ್ಟ್ಯ
ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧಿ ಚಿತ್ರವಿದ್ದರೆ, ಹಿಂಭಾಗದಲ್ಲಿ ಸಾಂಚಿಯ ಸ್ತೂಪ ಸ್ಮಾರಕದ ಚಿತ್ರವಿದೆ. ಜತೆಗೆ ಅಶೋಕ ಲಾಂಛನವಿದ್ದು, ಇವು ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ.
ಅಂಧರು ಗುರುತಿಸಬಹುದು
200 ಮುಖಬೆಲೆಯ ನೋಟುಗಳನ್ನು ಅಂಧರು ಗುರುತಿಸುವಂತೆ ನೋಟಿನಲ್ಲಿರುವ ಅಶೋಕ ಪಿಲ್ಲರ್ ಚಿತ್ರದ ಮೇಲ್ಭಾಗದಲ್ಲಿ H ಆಕಾರದ ಚಿಹ್ನೆ ಮುದ್ರಿಸಲಾಗಿದೆ. H ಆಕಾರದೊಳಗೆ ₹ 200 ಎಂದು ಸಣ್ಣ ಅಕ್ಷರಗಳಲ್ಲಿ ಮುದ್ರಿಸಲಾಗಿದೆ.
ಭದ್ರತಾ ಗೆರೆ
'ಭಾರತ್ ಮತ್ತು ಆರ್ಬಿಐ' ಎಂಬ ಬರಹದ ಜತೆ ಭದ್ರತೆಯ ಎಳೆಯಿದೆ. ಭದ್ರತೆಯ ಗೆರೆ ಹಸಿರು ಬಣ್ಣದಿಂದ ನೀಲಿಗೆ ತಿರುಗುತ್ತದೆ. ನೋಟಿನ ಮುಂಭಾಗ ಎಡ ಮತ್ತು ಬಲ ಭಾಗದಲ್ಲಿ ಎರಡೆರಡು ಗೆರೆಗಳ ಮಧ್ಯೆ ಎರಡು ಸಣ್ಣ ಸೊನ್ನೆಗಳನ್ನು ಮುದ್ರಿಸಲ್ಪಟ್ಟಿವೆ.
ಬೇರೆ ಏನಿದೆ?
ಈ ಹೊಸ ನೋಟುಗಳಲ್ಲಿ ಸ್ವಚ್ಛ ಭಾರತ ಅಥವಾ ಪ್ರಧಾನಿ ನರೇಂದ್ರ ಮೋದಿಯವರ ಕ್ಲೀನ್ ಇಂಡಿಯಾ ಅಭಿಯಾನದ ಲಾಂಛನ ಹೊಂದಿವೆ.
ಚರಿತ್ರೆಯಲ್ಲಿ ಮೊದಲ ಬಾರಿ
ರೂ. 200 ಮುಖಬೆಲೆಯ ನೋಟುಗಳನ್ನು ಚರಿತ್ರೆಯಲ್ಲಿ ಮೊದಲ ಬಾರಿ ಪರಿಚಯಿಸಲಾಗಿದ್ದು, ಕಡಿಮೆ ಮುಖಬೆಲೆ ಕರೆನ್ಸಿ ಕೊರತೆಯನ್ನು ಕಡಿಮೆ ಮಾಡಲಿವೆ. ಈ ಹಿಂದೆ ರೂ. 500, 2000 ಮುಖಬೆಲೆಯ ನೋಟುಗಳನ್ನು ಕೇಂದ್ರ ಬಿಡುಗಡೆಗೊಳಿಸಿದೆ.
ನಗದು ಸಮಸ್ಯೆ ಪರಿಹಾರ
ದೇಶದಾದ್ಯಂತ ಜನರು ಎದುರಿಸುತ್ತಿರುವ ನಗದು ಸಮಸ್ಯೆಗಳನ್ನು ರೂ. 200 ಹಾಗು 500 ಮುಖಬೆಲೆಯ ನೋಟುಗಳು ನೀಗಿಸಲಿವೆ. ರೂ. 2000 ಮುಖಬೆಲೆಯ ಕರೆನ್ಸಿಯಿಂದಾಗಿ ಜನಸಾಮಾನ್ಯರಿಗೆ ತುಂಬಾ ಸಮಸ್ಯೆಯುಂಟಾಗಿತ್ತು.


Click it and Unblock the Notifications