Englishहिन्दी മലയാളം தமிழ் తెలుగు

ಏನಿದು ಎಲ್ಐಸಿ ಆಧಾರ ಸ್ತಂಭ್ ವಿಮೆ? ಇದರ ಪ್ರಯೋಜನಗಳೇನು?

Written By: Siddu
Subscribe to GoodReturns Kannada

ಭಾರತೀಯ ಪ್ರಮುಖ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಆಧಾರ್ ಸ್ತಂಭ್ ಹಾಗೂ ಆಧಾರ್ ಶಿಲಾ ಎಂಬ ಎರಡು ಹೊಸ ವಿಮೆಗಳನ್ನು ಪ್ರಸ್ತುತ ಪಡಿಸಿದೆ. ಇವು 24ನೇ ಏಪ್ರಿಲ್ 2017ರಿಂದ ಚಲಾವಣೆಗೆ ಬಂದಿದ್ದು ಇವೆರಡನ್ನೂ ವಿಶೇಷವಾಗಿ ಆಧಾರ್ ಕಾರ್ಡ್ ಹೊಂದಿರುವ ಪುರುಷರಿಗೆಂದೇ ಪ್ರಸ್ತುತ ಪಡಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಅತಿಹೆಚ್ಚು ಚರ್ಚಿತ ವಿಷಯವಾಗಿದ್ದು, ಪ್ರತಿಯೊಂದಕ್ಕೂ ಆಧಾರ್ ಬೇಕು ಎಂಬ ಅಗತ್ಯತೆ ಈ ಕಾರ್ಡು ಹೊಂದುವುದನ್ನು ಕಡ್ಡಾಯವಾಗಿಸಿದೆ. ಈಗ ಭಾರತದ ಪ್ರತಿ ವ್ಯಕ್ತಿಯೂ ಆಧಾರ್ ಕಾರ್ಡ್ ಪ್ರಾಮುಖ್ಯತೆ ಬಗ್ಗೆ ಅರಿತಿದ್ದಾನೆ. ಈ ಜನಪ್ರಿಯತೆಯನ್ನು ಗಮನಿಸಿಯೇ ಎಲ್ಐಸಿ ಸಂಸ್ಥೆ ಆಧಾರ್ ಹೆಸರಿನ ಹೊಸ ಯೋಜನೆಗಳನ್ನು ಪ್ರಸ್ತುತ ಪಡಿಸಿದೆ ಎನ್ನಬಹುದು. ಜನ ಧನ ಖಾತೆದಾರರು ಈ ಪ್ರಯೋಜನಗಳನ್ನು ಪಡೆಯಬಹುದು

ಎಲ್ಐಸಿ ಆಧಾರ್ ಸ್ತಂಭ್ ಅಂದರೆ ಹೆಸರೇ ಸೂಚಿಸುವಂತೆ ನಿಯಮಿತವಾದ ಆದಾಯವನ್ನು ನೀಡುವ ಒಂದು ಲಾಭಕರ ಎಂಡೋಮೆಂಟ್ (Endowment) ಯೋಜನೆಯಾಗಿದೆ. 

ಬನ್ನಿ, ಈ ಹೊಸ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸೋಣ..

ಆಧಾರ್ ಸ್ತಂಭ್ ಯೋಜನೆಯ ಮುಖ್ಯಾಂಶಗಳು

ಕನಿಷ್ಟ ವಿಮಾ ಮೊಬಲಗು: ರೂ. 75,000
ಗರಿಷ್ಟ ವಿಮಾ ಮೊಬಲಗು: ರೂ. 3,00,000
ಕನಿಷ್ಟ ವಿಮಾ ಅವಧಿ: 10 ವರ್ಷಗಳು
ಗರಿಷ್ಟ ವಿಮಾ ಅವಧಿ: 20 ವರ್ಷಗಳು
ಅನ್ವಯಿಕೆ : ಪುರುಷರಿಗೆ ಮಾತ್ರ
ಮೆಚುರಿಟಿಯ ಗರಿಷ್ಟ ವಯಸ್ಸು: 70 ವರ್ಷಗಳು
ಯೋಜನೆಯ ವಿಧ: ಎಂಡೋಮೆಂಟ್ (Endowment)
ಹೆಚ್ಚುವರಿ (ಐಚ್ಛಿಕ): ಅಪಘಾತ ವಿಮಾ ಪ್ರಯೋಜನ ಲಭ್ಯ  ಎಲ್ಐಸಿ ಪಾಲಿಸಿ: 10 ಉತ್ತಮ ಜೀವನ ಪಾಲಿಸಿ ಮತ್ತು ಪ್ರಯೋಜನಗಳು

ಎಲ್ಐಸಿ ಆಧಾರ್ ಸ್ತಂಭ್ ಯೋಜನೆಯ ಲಾಭಗಳು

* ಈ ಯೋಜನೆಯಲ್ಲಿ ಒಳಗೊಂಡ ವ್ಯಕ್ತಿ ಮೃತನಾದರೆ ಸಂಬಂಧಿಕರಿಗೆ ವಿಮಾ ಮೊತ್ತ ನೀಡಲಾಗುತ್ತದೆ. ಯೋಜನೆಯಲ್ಲಿ ತೊಡಗಿಸಿಕೊಂಡ ಐದು ವರ್ಷಗಳ ಒಳಗೆ ವಿಧಿವಶರಾದರೆ ಮೂಲ ವಿಮಾ ಮೊಬಲಗು ಮೊತ್ತವನ್ನು ಸಂಬಂಧಿಕರಿಗೆ ನೀಡಲಾಗುತ್ತದೆ.
* ಐದು ವರ್ಷಗಳ ಬಳಿಕ ಹಾಗೂ ಹತ್ತು ವರ್ಷಗಳ ಒಳಗೆ ವಿಧಿವಶರಾದರೆ ಮೂಲ ಮೊತ್ತದ 105% ಶೇಕಡಾ ಹಾಗೂ Loyalty Addition (LA) ಅಥವಾ ಈ ಮೊತ್ತಕ್ಕೆ ಕಳೆದ ಐದು ವರ್ಷಗಳಲ್ಲಿ ಬಂದಿರುವ ಬಡ್ಡಿ ನೀಡಲಾಗುತ್ತದೆ. (ಅಂದರೆ ಈ ಮೊತ್ತ ಪಡೆಯಲು ವಿಮೆ ಐದು ವರ್ಷಕ್ಕೂ ಹಳೆಯದಾಗಿರುವುದು ಕಡ್ಡಾಯ)

ಎಲ್ಐಸಿ ಆಧಾರ್ ಸ್ತಂಭ್ ಯೋಜನೆ ಮೆಚುರಿಟಿ ಲಾಭಗಳು

ಯಾವುದೇ ವಿಮಾ ಯೋಜನೆಯ ನಿಗದಿತ ಸಮಯ ಕಳೆದ ಬಳಿಕ ಒಟ್ಟು ಮೊಬಲಗು ನೀಡಲು ಸಂಸ್ಥೆ ಬದ್ದವಾಗಿರುತ್ತದೆ. "Sum Assured on Maturity" ಅಥವಾ ಪರಿಪಕ್ವತೆಯ ಕಾಲದಲ್ಲಿ ಸಂದಾಯವಾಗುವ ಮೊತ್ತ ಹಾಗೂ ಕಳೆದ ವರ್ಷಗಳ ಎಲ್.ಎ. ಅನ್ನೂ ಒಟ್ಟುಗೂಡಿಸಿ ಮೊತ್ತವನ್ನು ವಿಮಾದಾರರಿಗೆ ನೀಡಲಾಗುತ್ತದೆ.

ಆಟೋ ಕವರ್ ಬೆನಿಫಿಟ್(Auto Cover Benefit)

ಅನಿಯಮಿತವಾದ ಪ್ರೀಮಿಯಂ ಪಾವತಿ ರಕ್ಷಣೆ ಉಳಿದ ವಿಮಾ ಯೋಜನೆಗಳಲ್ಲಿ ಒಂದು ವೇಳೆ ವಿಮೆಯ ಕಂತುಗಳನ್ನು ಕಟ್ಟಲು ವಿಮೆದಾರ ವಿಫಲನಾದರೆ ಸಂಸ್ಥೆ ಇದುವರೆಗೆ ಕಟ್ಟಿರುವ ಹಣವನ್ನೇ ಅಂತಿಮ ಎಂದು ತೀರ್ಮಾನಿಸಿ ‘Paid-up Policy ಅಥವಾ ಈ ವಿಮೆಗೆ ಇಷ್ಟು ಹಣ ಸಂದಾಯವಾಗಿದೆ ಎಂದು ಪರಿಗಣಿಸುತ್ತದೆ. ಆದರೆ ಎಲ್ಐಸಿ ಆಧಾರ್ ಸ್ತಂಭ್ ಯೋಜನೆಯಲ್ಲಿ ವಿಮೆಯ ಕಂತುಗಳನ್ನು ಕಟ್ಟಲು ವಿಮೆದಾರ ನಡು ನಡುವೆ ವಿಫಲನಾದರೂ ವಿಮಾ ಪಾಲಿಸಿಯನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ ಹಾಗೂ ಈ ಮೊತ್ತವನ್ನು ನೀಡಲು ಸಮಯಾವಕಾಶ ನೀಡಲಾಗುತ್ತದೆ. ಉದಾಹರಣೆಗೆ ಐದು ವರ್ಷಗಳ ಅವಧಿಯ ಯೋಜನೆಯಲ್ಲಿ ವಿಮೆದಾರ ಮೂರು ವರ್ಷಗಳ ಕಂತುಗಳನ್ನು ಕಟ್ಟಿ ಉಳಿದವನ್ನು ಕಟ್ಟಲು ಅಸಮರ್ಥನಾಗಿದ್ದರೆ ವಿಮೆಯನ್ನು ಮೊದಲಿನ ಕರಾರುಗಳಿಗೆ ಅನ್ವಯವಾಗಿಯೇ ಮುಂದಿನ ಕೆಲವು ಸಮಯದವರೆಗೆ ಅಂದರೆ ಆರು ತಿಂಗಳವರೆಗೆ ಮುಂದುವರೆಸಲಾಗುತ್ತದೆ. ಇದಕ್ಕೆ ‘Auto Cover Period' ಎಂದು ಕರೆಯುತ್ತಾರೆ. ಆಗ ವಿಮೆದಾರ ಆರು ತಿಂಗಳ ಬಳಿಕವೂ ಈ ಆರು ತಿಂಗಳಿನಿಂದ ಕಟ್ಟದೇ ಇದ್ದ ಕಂತನ್ನು ( first unpaid premium (FUP) ಈಗ ಮೊದಲ ಕಂತಾಗಿ ಕಟ್ಟಬಹುದು.
ಒಂದು ವೇಳೆ ಐದು ವರ್ಷಗಳ ಕಂತನ್ನು ಸರಿಯಾಗಿ ಕಟ್ಟಿ ನಂತರದ ವರ್ಷಗಳ ಕಂತುಗಳನ್ನು ಸರಿಯಾಗಿ ಕಟ್ಟದೇ ಇದ್ದರೆ "Auto Cover period" ಅವಧಿ ಮುಂದಿನ ಎರಡು ವರ್ಷಗಳಿಗೆ ಮುಂದುವರೆಯುತ್ತದೆ ಹಾಗೂ ಎರಡು ವರ್ಷದ ಬಳಿಕ (FUP) ಕಟ್ಟಬಹುದು.

ವಿಮೆಯ ಗರಿಷ್ಟ ಮೊತ್ತ

ಈ ಯೋಜನೆಯಲ್ಲಿ ಗರಿಷ್ಟ ಮೊತ್ತ ಮೂರು ಲಕ್ಷ ರೂಪಾಯಿಗಳೆಂದು ಮೊದಲೇ ತಿಳಿಸಲಾಗಿದೆ. ಇಂದಿನ ದಿನಗಳಲ್ಲಿ ಮೂರು ಲಕ್ಷ ರೂಪಾಯಿಯಿಂದ ಅಂತಹ ದೊಡ್ಡ ಮೊತ್ತ ಅಲ್ಲ. ಹಾಗಾಗಿ ವಿಮೆದಾರ ತನ್ನ ಜೀವಕ್ಕೆ ಕೇವಲ ಮೂರು ಲಕ್ಷ ಬೆಲೆ ಕಟ್ಟುವುದನ್ನು ಇಚ್ಛಿಸುವುದಿಲ್ಲ. ಇದರ ಬದಲಿಗೆ ಉತ್ತಮ ಜೀವವಿಮೆ ಇರುವ ಅವಧಿ ವಿಮಾ ಯೋಜನೆ (Term insurance plan) ಪರಿಗಣಿಸಬಹುದು. ಮುಂದಿನ ಹತ್ತು ಅಥವಾ ಇಪ್ಪತ್ತು ವರ್ಷಗಳ ನಂತರ ಮೂರು ಲಕ್ಷ ರೂಪಾಯಿ ಬೆಲೆ ಏನೂ ಅಲ್ಲ.

ಹೂಡಿಕೆಯ ಲಾಭ

ಒಂದು ವೇಳೆ ಜೀವ ವಿಮೆಯ ಲಾಭವಿಲ್ಲವೆಂದಾದರೆ ಇದುವರೆಗೆ ಕಟ್ಟಿದ ಹಣವಾದರೂ ಲಾಭ ಸಹಿತ ಹಿಂದೆ ಬರಬೇಕಲ್ಲವೇ? ಇದು ಹೆಚ್ಚಿನವರು ಕೇಳುವ ಪ್ರಶ್ನೆಯಾಗಿದೆ. ಆದರೆ ಇವು ಸಾಂಪ್ರಾದಾಯಿಕ ವಿಮಾ ಯೋಜನೆಗಳಾಗಿದ್ದು, ಅತಿ ಹೆಚ್ಚೆಂದರೆ ಶೇ. 5-6 ಮಾತ್ರವೇ ಲಾಭ ನೀಡುತ್ತವೆ. ಒಂದು ವೇಳೆ ಲಾಭವೇ ನಿಮ್ಮ ಯೋಜನೆಯ ಉದ್ದೇಶವಾಗಿದ್ದರೆ ಈ ವಿಮೆಯನ್ನು ಪರಿಗಣಿಸುವುದು ಸೂಕ್ತವಲ್ಲ. ಏಕೆಂದರೆ ಇಂದು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭವನ್ನು ಕಡಿಮೆ ಸಮಯದಲ್ಲಿ ತಂದು ಕೊಡಲು ಮಾರುಕಟ್ಟೆಯಲ್ಲಿ ನೂರಾರು ಆಯ್ಕೆಗಳಿವೆ.

ಅಂತಿಮ ಮೊತ್ತದ ಬೋನಸ್ ಸುಲಭವಾಗಿ ದಕ್ಕುವುದಿಲ್ಲ

ವಿಮಾ ಯೋಜನೆ ಪೂರ್ಣಗೊಂಡ ಬಳಿಕ ಅಥವಾ ಈ ಅವಧಿಯೊಳಗೇ ವಿಮೆದಾರ ವಿಧಿವಶನಾದರೆ ಪಡೆಯಲಾಗುವ ಮೊತ್ತ ಹಾಗೂ ಐದು ವರ್ಷಗಳ ಬಳಿಕ ಮಾತ್ರವೇ ಸಿಗುವ ಎಲ್ ಎ ಮಾತ್ರವೇ ಸಿಗುತ್ತದೆ. ಆದರೆ ಉಳಿದ ಯೋಜನೆಗಳಲ್ಲಿ ಸಿಗುವಂತೆ ಬೋನಸ್ ಸಿಗುವುದಿಲ್ಲ.

ಆಧಾರ್ ಸ್ತಂಭ್ ಹಾಗು PMJJBY ಯೋಜನೆ

ಭಾರತ ಸರ್ಕಾರದ PMJJBY ಅಥವಾ 'ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ' ಎಂಬ ಹೆಸರಿನ ಯೋಜನೆಯಲ್ಲಿ ಮಾಸಿಕ ಕಂತು ಈ ಯೋಜನೆಗಿಂತಲೂ ಕಡಿಮೆಯಾಗಿದೆ. ಉದಾಹರಣೆಗೆ ಸುಮಾರು ಮೂವತ್ತು ವರ್ಷದ ಪುರುಷನಿಗೆ ಆಧಾರ್ ಸ್ತಂಭ್ ಯೋಜನೆಯಲ್ಲಿ ಎರಡು ಲಕ್ಷ ರೂಪಾಯಿ ಪಡೆಯಲು ವಾರ್ಷಿಕ ರೂ. 6,900 ಕಂತು ಪಾವತಿಸಬೇಕಾಗುತ್ತದೆ. ಆದರೆ ಇದೇ ಮೊತ್ತವನ್ನು PMJJBY ಯೋಜನೆಯಲ್ಲಿ ಪಡೆಯಲು ವಾರ್ಷಿಕ ಕೇವಲ ರೂ. 330 ಕಟ್ಟಿದರೆ ಸಾಕು.

English summary

LIC Aadhaar Stambh: What are the Features, Benefits?

LIC Aadhaar Stambh plan is a typical with profit, non-linked regular premium paying Endowment assurance plan.
Story first published: Monday, November 27, 2017, 16:01 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns