Englishहिन्दी മലയാളം தமிழ் తెలుగు

ಸಿಹಿಸುದ್ದಿ! ಜನ ಧನ ಖಾತೆದಾರರು ಈ ಪ್ರಯೋಜನಗಳನ್ನು ಪಡೆಯಬಹುದು

Written By: Siddu
Subscribe to GoodReturns Kannada

ಜನ ಧನ ಖಾತೆದಾರರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಇದೀಗ ಜನ ಧನ ಖಾತೆದಾರರು ತಮ್ಮ ಬ್ಯಾಂಕುಗಳಿಂದಲೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇತ್ತೀಚೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸೇರಿದಂತೆ ಬ್ಯಾಂಕುಗಳು ​​ತಮ್ಮ ನಿಯಮಗಳಲ್ಲಿ ಒಂದು ಪ್ರಮುಖ ಬದಲಾವಣೆಗಳನ್ನು ಮಾಡಿವೆ. 'ಪ್ರಧಾನ ಮಂತ್ರಿ ಜನ ಧನ ಖಾತೆ' ಯಾಕೆ ತೆರೆಯಬೇಕು?

ಹೊಸ ನಿಯಮ

ಸರ್ಕಾರದ ಹೊಸ ನಿಯಮದ ಪ್ರಕಾರ, ಖಾತೆದಾರರು ತಮ್ಮ ಬ್ಯಾಂಕು ಖಾತೆಗಳಲ್ಲಿ ಕನಿಷ್ಠ ಬಾಕಿ ಮೊತ್ತ ಹೊಂದಿರುವುದು ಕಡ್ಡಾಯವಾಗಿದೆ. ಆದಾಗ್ಯೂ, ಜನ ಧನ್ ಯೋಜನೆ ಅಡಿಯಲ್ಲಿ ತೆರೆಯಲಾದ ಖಾತೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಪ್ರಧಾನ ಮಂತ್ರಿ ಜನ ಧನ ಯೋಜನೆ ಎಂದರೇನು?

ಜನ ಧನ ಖಾತೆದಾರರಿಗೆ ಹೆಚ್ಚು ಪ್ರಯೋಜನ

ಎಸ್ಬಿಐ ಸೇರಿದಂತೆ ಇತರೆ ಬ್ಯಾಂಕ್ ಗಳಲ್ಲಿನ ಜನ್ ಧನ್ ಖಾತೆದಾರರಿಗೆ ಇದು ಸಿಹಿಸುದ್ದಿ ಎಂದೇ ಹೇಳಬಹುದು. ಬೇರೆ ಖಾತೆದಾರರಿಗಿಂತ ಜನ್ ಧನ್ ಖಾತೆದಾರರಿಗೆ ಬ್ಯಾಂಕ್ ಗಳಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ. ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಟ್ಟುಕೊಂಡಿರಬೇಕು ಎಂಬ ತಲೆನೋವು ಇಲ್ಲ. ನೀವು ಹೊಂದಿರುವಷ್ಟು ಮೊತ್ತ ಹಿಂದಕ್ಕೆ ಪಡೆಯಬಹುದು.

ಬೇರೆ ಯಾರಿಗೆ ಪ್ರಯೋಜನ

ಬ್ಯಾಂಕ್ ಅಧಿಕಾರಿಗಳ ಪ್ರಕಾರ, ಜನ ಧನ ಯೋಜನೆಯಡಿಯಲ್ಲಿ ತೆರೆಯಲಾದ ಖಾತೆಗಳ ಹೊರತಾಗಿ ಮೂಲ ಉಳಿತಾಯ ಖಾತೆಗಳಿಗೆ (basic savings accounts)ಸಹ ಅನ್ವಯಿಸುತ್ತದೆ. ಇದಲ್ಲದೆ, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ವೇತನ ಖಾತೆಗಳಿಗೂ ಕನಿಷ್ಠ ಬಾಕಿ ನಿಯಮ ಅನ್ವಯಿಸುವುದಿಲ್ಲ.

ಸಾಮಾನ್ಯ ಖಾತೆದಾರರಿಗೆ ದಂಡ

ಆದಾಗ್ಯೂ, ಎಸ್ಬಿಐನಲ್ಲಿ ಕನಿಷ್ಠ ಬ್ಯಾಲೆನ್ಸ್ ಉಳಿಸದ ಸಾಮಾನ್ಯ ಖಾತೆದಾರರಿಗೆ ದಂಡ ವಿಧಿಸಲಾಗುತ್ತದೆ. ಈಗಾಗಲೇ ಏಪ್ರಿಲ್ ನಿಂದ ಕನಿಷ್ಠ ಬ್ಯಾಲೆನ್ಸ್ ನಿಯಮ ಕಡ್ಡಾಯವಾಗಿದೆ. ಮೆಟ್ರೋ ನಗರಗಳಲ್ಲಿ ರೂ. 3000 ಕನಿಷ್ಠ ಬ್ಯಾಲೆನ್ಸ್ ಇರಬೇಕು.
ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಕ್ರಮವಾಗಿ ರೂ. 3000, ರೂ. 2000, ರೂ. 1000 ಕನಿಷ್ಠ ಮೊತ್ತ ನಿಗದಿಪಡಿಸಲಾಗಿದೆ.

ಪಿಂಚಣಿದಾರರಿಗೆ ಅನ್ವಯಿಸಲ್ಲ

ಉಳಿತಾಯ ಖಾತೆಗಳನ್ನು ಹೊಂದಿರುವ ಪಿಂಚಣಿದಾರರು ಹಾಗು ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಮಿನಿಮಮ್ ಬ್ಯಾಲೆನ್ಸ್ ನಿಯಮ ಅನ್ವಯವಾಗುವುದಿಲ್ಲ.

English summary

Jan Dhan Account Holders Can Enjoy This Benefit

Jan Dhan account holders, as now they can reap benefits from their banks too. Recently, banks including the State Bank of India (SBI) made major changes in one of their rules.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns