ಆದಾಯ ಮೂಲಗಳು ಹಾಗೂ ಖರ್ಚುವೆಚ್ಚಗಳನ್ನು ಕುರಿತು ಯೋಜಿತ ರೀತಿಯಲ್ಲಿ ತಯಾರಿಸಲ್ಪಡುವ ಅಂದಾಜು ಪಟ್ಟಿಯನ್ನು ಆಯವ್ಯಯ (ಬಜೆಟ್) ಎಂದು ಕರೆಯಲಾಗುತ್ತದೆ.
ಆದಾಯ ಮೂಲಗಳು ಹಾಗೂ ಖರ್ಚುವೆಚ್ಚಗಳನ್ನು ಕುರಿತು ಯೋಜಿತ ರೀತಿಯಲ್ಲಿ ತಯಾರಿಸಲ್ಪಡುವ ಅಂದಾಜು ಪಟ್ಟಿಯನ್ನು ಆಯವ್ಯಯ (ಬಜೆಟ್) ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಕುಟುಂಬದ ಆದಾಯಕ್ಕನುಗುಣವಾಗಿ ಸಂಸಾರ ತೂಗಿಸಿಕೊಂಡು ಹೋಗಲು ಗಂಡ-ಹೆಂಡತಿ ಮಾಡುವ ಯೋಜನೆಯಂತೆಯೇ ಇದು ದೇಶ ಖರ್ಚುವೆಚ್ಚಗಳನ್ನು ಸರಿದೂಗಿಸಿಕೊಂಡು ಹೋಗಲು ಮಾಡುವ ಯೋಜನೆ. ಇದನ್ನೇ ಸಾಮಾನ್ಯವಾಗಿ ಕೇಂದ್ರ ಬಜೆಟ್ ಎನ್ನಲಾಗುತ್ತದೆ. ಕೇಂದ್ರ ಬಜೆಟ್ 2018: ತೆರಿಗೆದಾರರು ಈ ಪ್ರಯೋಜನಗಳನ್ನು ಪಡೆಯಬಹುದೆ?
ಬಜೆಟ್ ಮಂಡನೆ ಯಾವಾಗ?
ಕೇಂದ್ರ ಬಜೆಟ್ ಮಂಡನೆಯನ್ನು ಹಣಕಾಸು ಸಚಿವರು ಮಾಡುತ್ತಾರೆ. ಈ ವರ್ಷದ ಕೇಂದ್ರ ಬಜೆಟ್ ಮಂಡನೆ ಅರುಣ್ ಜೇಟ್ಲಿ ಮಾಡಲಿದ್ದಾರೆ. ಸಾಮಾನ್ಯವಾಗಿ ಪ್ರತಿವರ್ಷ ಫೆಬ್ರುವರಿಯಲ್ಲಿ ಬಜೆಟ್ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.
ಬಜೆಟ್ ಅನುಮೋದನೆ ಮತ್ತು ಜಾರಿ ಹೇಗೆ?
ಹಣಕಾಸು ಸಚಿವರು ಆಯವ್ಯಯವನ್ನು ಲೋಕಸಭೆಯಲ್ಲಿ ಮಂಡಿಸಿದ ನಂತರ ಅದರ ಮೇಲೆ ಮುಕ್ತವಾಗಿ ಚರ್ಚೆ ನಡೆಯುತ್ತದೆ. ಪ್ರತಿ ಸಚಿವಾಲಯವು ತನ್ನ ಅಗತ್ಯಕ್ಕೆ ಅನುಗುಣವಾಗಿ ಹಣ ಮಂಜೂರು ಮಾಡುವಂತೆ ಪ್ರಸ್ತಾವನೆ ಇಡುತ್ತದೆ. ಪ್ರತಿ ಕ್ಷೇತ್ರಕ್ಕೆ ನಿಗದಿಯಾಗುವ ಹಣಕ್ಕೆ ಸಮ್ಮತಿ ಪಡೆಯಲಾಗುತ್ತದೆ. ಎಲ್ಲಕ್ಕೂ ಸಮ್ಮತಿ ಸಿಕ್ಕ ನಂತರ ಬಜೆಟ್ ಮಾನ್ಯ ಮಾಡಲಾಗುತ್ತದೆ. ಈ ಒಟ್ಟು ಪ್ರಕ್ರಿಯೆಯನ್ನು ಬಜೆಟ್ ಅನುಮೋದನೆ ಎನ್ನುತ್ತಾರೆ.
ಪ್ರತಿ ವರ್ಷ ಏಪ್ರಿಲ್ ತಿಂಗಳಿನಿಂದ ಬಜೆಟ್ ಜಾರಿಯಾಗುತ್ತದೆ. ಇದು ಏಪ್ರಿಲ್ ನಿಂದ ಮಾರ್ಚ್ ತಿಂಗಳವರೆಗಿನ ಒಂದು ವರ್ಷದ ಅವಧಿ ಹೊಂದಿರುತ್ತದೆ.
ಬಜೆಟ್ ಮಂಡಿಸಿದ್ದು ಯಾರು?
1947, ನವೆಂಬರ್ 26ರಂದು ಆರ್.ಕೆ. ಷಣ್ಮುಖಂ ಚೆಟ್ಟಿ ಅವರು ದೇಶದ ಮೊದಲ ಬಜೆಟ್ ಮಂಡಿಸಿದರು. ಇಲ್ಲಿಯವರೆಗೆ ಮೊರಾರ್ಜಿ ದೇಸಾಯಿ ಅವರು ಅತಿ ಹೆಚ್ಚು ಬಜೆಟ್ ಮಂಡಿಸಿದ ಹೆಗ್ಗಳಿಕೆ ಹೊಂದಿದ್ದು, ಒಟ್ಟು ಎಂಟು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.


Click it and Unblock the Notifications