For Quick Alerts
ALLOW NOTIFICATIONS  
For Daily Alerts

ಕೇಂದ್ರ ಬಜೆಟ್ 2018: ತೆರಿಗೆದಾರರು ಈ ಪ್ರಯೋಜನಗಳನ್ನು ಪಡೆಯಬಹುದು!

ವಿಶೇಷವಾಗಿ ಆದಾಯ ತೆರಿಗೆಯ ವಿಧಿಗಳಲ್ಲಿ ಕೆಲವು ಸವಲತ್ತುಗಳು ಹಳೆಯದಾಗಿದ್ದು, ಇವನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ. ಕೆಲವು ಒಂದೆರಡು ವರ್ಷಗಳ ಹಿಂದೆ ಪ್ರಾರಂಭಿಸಿದ್ದವಾದರೆ ಕೆಲವು ಅನ್ವಯಗೊಂಡು ದಶಕಗಳೇ ಕಳೆದಿವೆ.

By Siddu
|

ಪ್ರತಿವರ್ಷ ಫೆಬ್ರವರಿ 1ರಂದು ಕೇಂದ್ರ ಸರ್ಕಾರ ತನ್ನ ಬಜೆಟ್ ಮಂಡಿಸುತ್ತದೆ. ಇದರ ಪೂರ್ವಾಭಾವಿ ಅಧಿವೇಶನ ಜನವರಿ 29, 2018 ರಂದು ಪ್ರಾರಂಭವಾಗಲಿದೆ. ಹಣಕಾಸು ಸಚಿವರಾಗಿರುವ ಶ್ರೀ ಅರುಣ್ ಜೈಟ್ಲಿಯವರು ಈ ವರ್ಷದ, ಎನ್. ಡಿ. ಎ ಸರ್ಕಾರದ ಪೂರ್ಣಾವಧಿ ಬಜೆಟ್ ಮಂಡಿಸಲಿದ್ದಾರೆ. ಮುಂದಿನ ವರ್ಷದ ನಡುವೆ ಚುನಾವಣೆ ಬರುವ ಕಾರಣ ಮುಂದಿನ ಬಜೆಟ್ ಅರೆಕಾಲಿಕ ಬಜೆಟ್ ಆಗಿರಲಿದೆ. ಈ ವರ್ಷದ ಪೂರ್ಣಾವಧಿ ಬಜೆಟ್ ತೆರಿಗೆದಾರರಿಗೆ ಹೆಚ್ಚು ಅನುಕೂಲಕರವಾಗಲಿದ್ದು, ತಮ್ಮ ತೆರಿಗೆ ಹಣ ಸದ್ವಿನಿಯೋಗವಾಗುತ್ತಿದೆ ಎಂಬ ಧನಾತ್ಮಕ ಭಾವನೆಯನ್ನು ಮೂಡಿಸುವ ಭರವಸೆ ನೀಡಿದೆ.

ವಿಶೇಷವಾಗಿ ಆದಾಯ ತೆರಿಗೆಯ ವಿಧಿಗಳಲ್ಲಿ ಕೆಲವು ಸವಲತ್ತುಗಳು ಹಳೆಯದಾಗಿದ್ದು, ಇವನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ. ಕೆಲವು ಒಂದೆರಡು ವರ್ಷಗಳ ಹಿಂದೆ ಪ್ರಾರಂಭಿಸಿದ್ದವಾದರೆ ಕೆಲವು ಅನ್ವಯಗೊಂಡು ದಶಕಗಳೇ ಕಳೆದಿವೆ. ಆದ್ದರಿಂದ ಈ ಹಳೆಯ ಸವಕಲು ವಿಧಿಗಳನ್ನು ಇಂದಿನ ದಿನಕ್ಕೆ ಸೂಕ್ತವಾಗುವಂತೆ ಮೇಲ್ದರ್ಜೆಗೇರಿಸುವ ಅಗತ್ಯವಿದೆ.

ವೈಯಕ್ತಿಕ ತೆರಿಗೆಯ ಕುರಿತಾಗಿ Central Board of Direct Taxes (ಕೇಂದ್ರಿಯ ನೇರ ತೆರಿಗೆ ಸಮಿತಿ- CBDT) ನೀಡಿರುವ ಕೆಲವು ಸಲಹೆಗಳ ಪಟ್ಟಿಯನ್ನು ಈಗ ನೋಡೋಣ..

ಉದ್ಯೋಗಿಗಳಿಗೆ ನೀಡುವ ರಜಾ ಭತ್ಯೆ ಹೆಚ್ಚು ಪ್ರಯೋಜನಕರವಾಗಲಿದೆ

ಉದ್ಯೋಗಿಗಳಿಗೆ ನೀಡುವ ರಜಾ ಭತ್ಯೆ ಹೆಚ್ಚು ಪ್ರಯೋಜನಕರವಾಗಲಿದೆ

ಪ್ರಸ್ತುತ ಭಾರತದ ಉದ್ಯೋಗಿಗಳಿಗೆ ಅವರ ಉದ್ಯೋಗದಾರರು ನೀಡುವ ರಜಾ ಭತ್ಯೆಯನ್ನು (leave travel allowance (LTA) ಉದ್ಯೋಗಿಗಳು ಭಾರತದೊಳಗಿನ ಪ್ರವಾಸಕ್ಕೆ ಮಾತ್ರವೇ ಬಳಸಿಕೊಳ್ಳಬಹುದಾಗಿತ್ತು. ಇದರ ಪ್ರಮುಖ ಉದ್ದೇಶವೆಂದರೆ ಭಾರತದೊಳಗಿನ ಪ್ರವಾಸಿ ಉದ್ಯಮಕ್ಕೆ ಬೆಂಬಲ ನೀಡುವುದೇ ಆಗಿದೆ. ಆದರೆ ಇದು ಹಳೆಯ ಕಾಲಕ್ಕೆ ಸಲ್ಲುವಂತಹ ನಿಯಮವಾಗಿದೆ. ಏಕೆಂದರೆ ಇಂದು ಭಾರತದ ಹೊರಗಿನ ಕೆಲವು ತಾಣಗಳಿಗೆ ಹೋಗಿ ಬರುವ ಪ್ರವಾಸದ ಖರ್ಚು ಭಾರತದೊಳಗೇ ಇರುವ ತಾಣಕ್ಕೆ ಹೋಗಿ ಬರುವುದಕ್ಕಿಂತ ಅಗ್ಗವಾಗಿ ಆಗುತ್ತಿದೆ. ಹಾಗಾಗಿ ಉದ್ಯೋಗಿಗಳು ತಮ್ಮ ಇಚ್ಛೆಯ ಯಾವುದೇ ತಾಣವನ್ನು, ಅದು ಭಾರತದೊಳಗೇ ಇರಲಿ ಅಥವಾ ವಿದೇಶವೇ ಇರಲಿ, ಆಯ್ಕೆ ಮಾಡಿಕೊಳ್ಳುವ ಸೌಲಭ್ಯ ಪಡೆಯಲಿದ್ದಾರೆ.

ವೈದ್ಯಕೀಯ ವೆಚ್ಚದ ಮರುಪಾವತಿಯಲ್ಲಿ ಹೆಚ್ಚಳ

ವೈದ್ಯಕೀಯ ವೆಚ್ಚದ ಮರುಪಾವತಿಯಲ್ಲಿ ಹೆಚ್ಚಳ

ಸುಮಾರು ಎರಡು ದಶಕಗಳ ಹಿಂದೆ, ಅಂದರೆ 1999 ರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಆಗುವ ಮೊತ್ತದಲ್ಲಿ ಪ್ರತಿ ವರ್ಷ ರೂ. 15,000ದ ವಿಶೇಷ ಕಡಿತವನ್ನು ಪ್ರಾರಂಭಗೊಳಿಸಿತ್ತು. ಒಂದು ವೇಳೆ ವೈದ್ಯಕೀಯ ವೆಚ್ಚದ ಮರುಪಾವತಿ ಒಂದು ವರ್ಷದಲ್ಲಿ ರೂ. 15,000ಕ್ಕೂ ಮೀರಿದರೆ ಈ ಮೊತ್ತ ಆದಾಯ ತೆರಿಗೆಗೆ ಒಳಗಾಗುತ್ತದೆ. ಈ ವಿಧಿ ಸುಮಾರು ಹದಿನೆಂಟು ವರ್ಷಗಳಿಂದಲೂ ಅಬಾಧಿತವಾಗಿದೆ. ಆದರೆ ವೈದ್ಯಕೀಯ ವೆಚ್ಚ ಒಂದು ವರ್ಷದಲ್ಲಿ ಹದಿನೈದು ಸಾವಿರಕ್ಕೂ ಎಷ್ಟೋ ಹೆಚ್ಚಾಗಿದೆ. ಆದ್ದರಿಂದ ಹಣದುಬ್ಬರ, ಏರಿದ ವೈದ್ಯಕೀಯ ವೆಚ್ಚ ಮೊದಲಾದವುಗಳನ್ನು ಪರಿಗಣಿಸಿ ಈ ಮೊತ್ತವನು ಕನಿಷ್ಟ ರೂ. 50,000 ಕ್ಕೆ ಏರಿಸಲು CBDT ಸಲಹೆ ಮಾಡಲಿದೆ.

ವೇತನದಾರ ಉದ್ಯೋಗಿಗಳ ಹಿಂದಿನ ಮಿತಿಗಳು ಸಹಾ ಪರಿಷ್ಕರಣೆಗೊಳ್ಳಲಿವೆ

ವೇತನದಾರ ಉದ್ಯೋಗಿಗಳ ಹಿಂದಿನ ಮಿತಿಗಳು ಸಹಾ ಪರಿಷ್ಕರಣೆಗೊಳ್ಳಲಿವೆ

ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಹಲವಾರು ಸೌಲಭ್ಯಗಳಿವೆ. ಈ ಸೌಲಭ್ಯಗಳು ಒಂದು ಮಿತಿಯವರೆಗೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿವೆ. ಈ ಮಿತಿಗಳು ಸಹಾ ಹಳೆಯದಾಗಿದ್ದು ಪ್ರಸ್ತುತ ದಿನಗಳಿಗೆ ತೀರಾ ಕಡಿಮೆಯಾಗಿವೆ. ಮಕ್ಕಳ ಶಿಕ್ಷಣದ ಖರ್ಚಿನ ವಿನಾಯಿತಿ ತಿಂಗಳಿಗೆ ನೂರು ರೂಪಾಯಿ, ವಿದ್ಯಾರ್ಥಿನಿಲಯ ಖರ್ಚಿನ ವಿನಾಯಿತಿ ತಿಂಗಳಿಗೆ ಮೂನ್ನೂರು ಇತ್ಯಾದಿ. ಈ ಖರ್ಚುಗಳೆಲ್ಲಾ ಗಗನಕ್ಕೇರಿದ್ದು ಇಂದಿನ ದಿನಗಳಿಗೆ ಪರಿಹಾಸ್ಯ ಎನಿಸುವಂತಿದೆ. ಈ ಖರ್ಚುಗಳೆಲ್ಲಾ ಗಗನಕ್ಕೇರಿದ್ದು ಈ ವಿನಾಯಿತಿಗಳನ್ನೂ ಇಂದಿನ ಖರ್ಚಿಗನುಗುಣವಾಗಿ ಏರಿಸುವಂತೆ CBDT ಸಲಹೆ ಮಾಡಲಿದೆ.

ಮನೆ ಬಾಡಿಗೆ ಭತ್ಯೆ- ಮಹಾನಗರಗಳ ವಲಯದಲ್ಲಿ ಇನ್ನೂ ಹೆಚ್ಚಿನ ನಗರಗಳನ್ನು ಸೇರಿಸುವ ಸಾಧ್ಯತೆ

ಮನೆ ಬಾಡಿಗೆ ಭತ್ಯೆ- ಮಹಾನಗರಗಳ ವಲಯದಲ್ಲಿ ಇನ್ನೂ ಹೆಚ್ಚಿನ ನಗರಗಳನ್ನು ಸೇರಿಸುವ ಸಾಧ್ಯತೆ

ತನ್ನ ಉದ್ಯೋಗದಾರನಿಂದ ಉದ್ಯೋಗಿ ತಾನು ವಾಸಿಸುವ ಮನೆಯ ಬಾಡಿಗೆ ನೀಡಲು ಪಡೆಯುವ ಭತ್ಯೆ (house rent allowance)ಯ ಬಗ್ಗೆ ಪ್ರಸ್ತುತ ಇರುವ ವಿಧಿಯಲ್ಲಿ ಇದು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿದೆ. ಒಂದು ವೇಳೆ ಉದ್ಯೋಗಿ ಭಾರತದ ನಾಲ್ಕು ಪ್ರಮುಖ ಮಹಾನಗರಗಳಾದ ಮುಂಬೈ, ದೆಹಲಿ, ಕೋಲ್ಕಾತಾ ಹಾಗು ಚೆನ್ನೈ ನಗರಗಳಲ್ಲಿ ವಾಸದ ಮನೆ ಬಾಡಿಗೆಗೆ ಪಡೆದಿದ್ದರೆ ಮನೆ ಬಾಡಿಗೆಯ ಭತ್ಯೆಯನ್ನು ಇನ್ನೂ ಹೆಚ್ಚಿಸಬಹುದಾದ ಸೌಲಭ್ಯ ಪಡೆದಿರುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಬೆಂಗಳೂರು, ಪೂನಾ ಹೈದಾರಾಬಾದ್ ನಂತಹ ಇತರ ನಗರಗಳ ಮನೆ ಬಾಡಿಗೆಗಳೂ ಈ ನಾಲ್ಕು ಮಹಾನಗರದ ಬಾಡಿಗೆಗೆಗಳಿಗೆ ಸರಿಸಮನಾಗಿ ಅಥವಾ ಇದಕ್ಕಿಂತ ಹೆಚ್ಚೇ ಇದೆ. ಕೆಲವು ನಗರಗಳಲ್ಲಂತೂ ಒಂದೆರಡು ದಶಕಗಳಲ್ಲಿಯೇ ಬಾಡಿಗೆಗಳು ದುಪ್ಪಟ್ಟು, ನಾಲ್ಕುಪಟ್ಟು ಏರಿವೆ. ಆದ್ದರಿಂದ ಮನೆ ಬಾಡಿಗೆಯ ಮಿತಿಯನ್ನು ಏರಿಸುವ ಸೌಲಭ್ಯವನ್ನು ಈ ನಾಲ್ಕು ಮಹಾನಗರಗಳ ಹೊರತಾಗಿ ಬೆಂಗಳೂರು, ಹೈದರಾಬಾದ್ ಪೂನಾ, ಅಹ್ಮದಾಬಾದ್, ಜೈಪುರ, ನೋಯ್ಡಾ, ಗುರಗಾಂವ್ ಮೊದಲಾದ ನಗರಗಳ ಮನೆ ಬಾಡಿಗೆಗೂ ವಿಸ್ತರಿಸುವಂತೆ CBDT ಸಲಹೆ ಮಾಡಲಿದೆ.

ಹೊಸ ಮನೆಯ ನಿರ್ಮಾಣದ ಸಮಯಾವಧಿಯ ವಿಧಿಗಳಾದ 54 ಅಥವಾ 54F ವಿಧಿಗಳ ವಿನಾಯಿತಿಯಲ್ಲಿ ಏರಿಕೆಯಾಗುವ ಸಾಧ್ಯತೆ

ಹೊಸ ಮನೆಯ ನಿರ್ಮಾಣದ ಸಮಯಾವಧಿಯ ವಿಧಿಗಳಾದ 54 ಅಥವಾ 54F ವಿಧಿಗಳ ವಿನಾಯಿತಿಯಲ್ಲಿ ಏರಿಕೆಯಾಗುವ ಸಾಧ್ಯತೆ

ಒಂದು ವೇಳೆ ಓರ್ವ ವ್ಯಕ್ತಿ ತನ್ನ ಗಳಿಕೆಯ ಒಂದು ಪಾಲನ್ನು ದೀರ್ಘಾವಧಿಯ ಹೂಡಿಕೆಯಲ್ಲಿ ಹೂಡುತ್ತಿದ್ದು, ತನ್ನ ಸ್ವಂತದ ಮನೆಯ ನಿರ್ಮಾಣ ಅಥವಾ ಮನೆಯನ್ನು ಕೊಳ್ಳುವುದಕ್ಕಾಗಿ ಈ ಹೂಡಿಕೆಯನ್ನು ಮರು ಹೂಡಿಕೆ ಮಾಡಲು ಇಚ್ಛಿಸಿದರೆ ಈ ವಿಧಿಯ ಮೂಲಕ ಕೆಲವು ವಿನಾಯಿತಿಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ವಿಧಿ 54 ಹಾಗೂ 54F ಗಳನ್ನು ಪ್ರಸ್ತುತ ಪಡಿಸಲಾಗಿದೆ.
ಸೆಕ್ಷನ್ 54: ಒಂದು ಮನೆಯ ಮಾರಾಟದಿಂದ ದೀರ್ಘ‌ಕಾಲಿಕ ಕಾಪಿಟಲ್ ಗಳಿಕೆ ಉಂಟಾದರೆ ಅಂತಹ ಗಳಿಕೆಯನ್ನು ಇನ್ನೊಂದು ಹೊಸ ಮನೆ ಹೊಂದುವ ಸಲುವಾಗಿ ಮಾರಾಟದ 1 ವರ್ಷ ಮೊದಲು ಖರೀದಿಗಾಗಿ, 2 ವರ್ಷಗಳ ಒಳಗೆ ಖರೀದಿಗಾಗಿ ಅಥವಾ 3 ವರ್ಷಗಳ ಒಳಗೆ ನಿರ್ಮಾಣಕ್ಕಾಗಿ ಖರ್ಚು ಮಾಡಿದಲ್ಲಿ ಕಾಪಿಟಲ್ ಗಳಿಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಸಿಗುತ್ತದೆ.
ಸೆಕ್ಷನ್ 54F: ಒಂದಕ್ಕಿಂತ ಜಾಸ್ತಿ ಮನೆ ಇಲ್ಲದವರು, ಮನೆಯಲ್ಲದ, ಬೇರಾವುದೇ ಕ್ಯಾಪಿಟಲ್‌ ಆಸ್ತಿಯನ್ನು ಮಾರಾಟ ಮಾಡಿ ಕಾಪಿಟಲ್ ಗೈನ್ಸ್ ಪಡೆದರೆ ಅಂತಹ ಇಡೀ ಮಾರಾಟದ ಮೊತ್ತವನ್ನು (ಬರೇ ಗೈನ್ಸ್ ಮಾತ್ರವಲ್ಲ) ಮೇಲೆ ಹೇಳಿದ ಕಾಲಘಟ್ಟಾನುಸಾರ ಒಂದು ಮನೆಗಾಗಿ ಖರ್ಚು ಮಾಡಿದರೆ ಅಂತಹ ಗಳಿಕೆಯೂ ಸಂಪೂರ್ಣ ಕರಮುಕ್ತ. ಅಂತಹ ಹೊಸ ಮನೆಯನ್ನು 3 ವರ್ಷಗಳ ಕಾಲಕ್ಕೆ ಮಾರಬಾರದು. ಈ ಪ್ರಕ್ರಿಯೆಗಳನ್ನು ನಿಯಂತ್ರಿಸಲು Real Estate Regulatory Authority (RERA) ಎಂಬ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಆದರೆ ನಿರ್ಮಾಣ ಪೂರ್ಣಗೊಳಿಸಲು ಯಾವುದೇ ಗರಿಷ್ಟ ಸಮಯ ಮಿತಿ ಇಲ್ಲ. ಆದರೆ ಕಟ್ಟಡ ನಿರ್ಮಾಣ ಸಂಸ್ಥೆಗಳು ಸಮಯದ ಮಿತಿಯೊಳಗೆ ಉಭಯ ವ್ಯಕ್ತಿಗಳ ನಡುವಣ ಕರಾರಿನ ಪ್ರಕಾರ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಲು ರೇರಾ ಬದ್ದವಾಗಿರುತ್ತದೆ.

54/54F ವಿನಾಯಿತಿ ಯಾವಾಗ ಸಿಗಲ್ಲ

54/54F ವಿನಾಯಿತಿ ಯಾವಾಗ ಸಿಗಲ್ಲ

ಸಾಮಾನ್ಯವಾಗಿ ಒಂದು ಬಡಾವಣೆ ಅಥವಾ ದೊಡ್ಡ ಯೋಜನೆಯನ್ನು ಪ್ರಾರಂಭಿಸಿ ಈ ಕಟ್ಟಡಗಳನ್ನು ಕೊಂಡ ಗ್ರಾಹಕರಿಗೆ ವಿತರಿಸಲು ಸುಮಾರು ಐದು ವರ್ಷ ಸಮಯಾವಕಾಶವನ್ನು ಕಟ್ಟಡ ನಿರ್ಮಾಣ ಸಂಸ್ಥೆಗಳು ತೆಗೆದುಕೊಳ್ಳುತ್ತವೆ. ಒಂದು ವೇಳೆ ಗ್ರಾಹಕ ಹೊಸ ಮನೆಯನ್ನು ಮೂರು ವರ್ಷಗಳ ಬಳಿಕ ಸುಪರ್ದಿಗೆ ಪಡೆದುಕೊಂಡರೆ ಈಗ ಈತ 54/54F ವಿನಾಯಿತಿ ಪಡೆಯಲಾರ. ಆದ್ದರಿಂದ ಈ ವಿಧಿಯಲ್ಲಿ ಸೂಕ್ತ ಬದಲಾವಣೆಗಳಾಗಬೇಕಿದ್ದು, ಪ್ರಾಮಾಣಿಕ ಗ್ರಾಹಕ ರೇರಾದಿಂದ ಧೃಢೀಕರಣ ಪಡೆದಿರುವ ಕಟ್ಟಣ ನಿರ್ಮಾಣ ಸಂಸ್ಥೆಯ ಯೋಜನೆಗಳಲ್ಲಿ ಹಣ ಹೂಡುವ ಪ್ರಾಮಾಣಿಕ ಗ್ರಾಹಕನಿಗೂ ವಿನಾಯಿತಿ ಪಡೆಯಲು ನೆರವಾಗುವಂತೆ ಈ ವಿಧಿಗಳನ್ನು ಬದಲಿಸುವಂತೆ CBDT ಸಲಹೆ ಮಾಡಲಿದೆ.

ವಿಧಿ 80Cಯ ಪ್ರಕಾರ ಗರಿಷ್ಟ ಕಡಿತದಲ್ಲಿ ಏರಿಕೆಯ ಸಾಧ್ಯತೆ

ವಿಧಿ 80Cಯ ಪ್ರಕಾರ ಗರಿಷ್ಟ ಕಡಿತದಲ್ಲಿ ಏರಿಕೆಯ ಸಾಧ್ಯತೆ

ಓರ್ವ ವ್ಯಕ್ತಿ ಜೀವವಿಮೆ, ಗೃಹಸಾಲದ ಮರುಪಾವತಿ, ಪಿಪಿಎಫ್ ಖಾತೆ, ಮಕ್ಕಳ ಶಿಕ್ಷಣ ವೆಚ್ಚ ಮೊದಲಾದವುಗಳಿಗಾಗಿ ಗರಿಷ್ಟ ರೂ. 1,50,000ದಷ್ಟು ಮೊತ್ತದ ಕಡಿತವನ್ನು ತನ್ನ ಹೂಡಿಕೆಯಿಂದ ಪಡೆಯಬಹುದು. ಆದರೆ ಈ ಮೊತ್ತ ಹೆಚ್ಚು ಆಕರ್ಷಕವಾಗಿಲ್ಲದಿರುವ ಕಾರಣ ಹೆಚ್ಚಿನವರು ಇತರ ಹೂಡಿಕೆಗಳ ಸಾಧ್ಯತೆಯತ್ತ ಮನಸ್ಸು ಮಾಡುತ್ತಿಲ್ಲ. ಆದ್ದರಿಂದ ಸರ್ಕಾರ ಈ ಮಿತಿಯನ್ನು ರೂ. 2,50,000 ರಷ್ಟು ಏರಿಸಬೇಕಾಗಿದೆ. ಇದರಿಂದ ಇತರ ಹೂಡಿಕೆಗಳಿಗೂ ಅವಕಾಶಗಳು ಒದಗಿ ಬಂದು ಆರ್ಥಿಕ ಅಭಿವೃದ್ದಿಯ ಪುನರುಜ್ಜೀವನಕ್ಕೆ ನೆರವಾಗುತ್ತದೆ.

ವೇತನದಾರರಿಗೆ ನಿಗದಿತ ಕಡಿತದ ಸಾಧ್ಯತೆ
2006-07 ರ ಅವಧಿಯವರೆಗೂ ವೇತನದಾರರಿಂದ ಪ್ರತಿ ತಿಂಗಳೂ ಒಂದು ನಿಗದಿತ ಮೊತ್ತವನ್ನು ಕಡಿತಗೊಳಿಸಲಾಗುತ್ತಿತ್ತು. ವೇತನದಾರನಿಗೆ ಕೆಲವು ಅನಿವಾರ್ಯ ಖರ್ಚುಗಳು ಎದುರಾದಾಗ ಈ ಕಡಿತದಿಂದ ಆ ಖರ್ಚನ್ನು ನಿಭಾಯಿಸಬಹುದಾಗಿತ್ತು. ಆದರೆ ಈ ಕಡಿತವನ್ನು ನಿಲ್ಲಿಸಿದ ಕಾರಣ ಇಂತಹ ಖರ್ಚುಗಳು ಉದ್ಯೋಗಿಗೆ ಭಾರವಾಗುತ್ತವೆ.

ಕೊನೆ ಮಾತು

ಕೊನೆ ಮಾತು

ಆದರೆ ಓರ್ವ ವ್ಯಕ್ತಿ ತನ್ನ ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ಇಂತಹ ಖರ್ಚುಗಳಿಗೆ ಕಡಿತವನ್ನು ಪಡೆಯುವ ಹಕ್ಕು ಹೊಂದಿರುತ್ತಾರೆ. ಉದಾಹರಣೆಗೆ ಓರ್ವ ವೇತನದಾರ ತನ್ನ ಮನೆಯಿಂದ ಉದ್ಯೋಗದ ಸ್ಥಳಕ್ಕೆ ತೆರಳಲು ಮತ್ತು ಮರಳಲು ತನ್ನ ಸ್ವಂತ ಕಾರನ್ನು ಬಳಸಿದರೆ ಇದರ ಪ್ರಯಾಣದ ವೆಚ್ಚ ಹಾಗೂ ನಿರ್ವಹಣೆಯ ಖರ್ಚನ್ನು ಸ್ವತಃ ಭರಿಸಬೇಕಾಗುತ್ತದೆ. ರಿಟರ್ನ್ಸ್ ಫೈಲಿಂಗ್ ಅಂಕಿ ಅಂಶಗಳ ಪ್ರಕಾರ ವೇತನದಾರರು ಹಾಗೂ ಪಿಂಚಣಿದಾರರು Form ITR 1 ನಲ್ಲಿ ವಿವರಿಸಿರುವಂತೆ ಗರಿಷ್ಟ ಸಂಖ್ಯೆಯ ರಿಟರ್ನ್ಸ್ ಗಳನ್ನು ದಾಖಲಿಸಬಹುದು. ಭಾರತದ ತೆರಿಗೆ ಪಾವತಿಯಲ್ಲಿ ವೇತನ ಪಡೆಯುವ ವ್ಯಕ್ತಿಗಳ ಪಾಲು ಪ್ರಮುಖವಾಗಿದ್ದು, ಇವರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕಾಗಿದೆ. ಹಿಂದಿನಂತೆಯೇ ನಿಗದಿತ ಕಡಿತದ ಸೌಲಭ್ಯವನ್ನು ಮತ್ತೊಮ್ಮೆ ಪ್ರಾರಂಭಿಸುವಂತೆ CBDT ಸಲಹೆ ಮಾಡಲಿದೆ.

English summary

Union Budget 2018: Taxpayers wishlist

The budget session 2018-19 is set to commence on January 29, 2018, and the Union budget shall be presented on February 1, 2018.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X