For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಖಾತೆ, ಮೊಬೈಲ್ ಫೋನ್ ನಿಂದ ಆಧಾರ್ ಡಿಲಿಂಕ್ ಮಾಡೋದು ಹೇಗೆ?

ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್ ಕನೆಕ್ಷನ್ ಮತ್ತು ಶಾಲಾ ಪ್ರವೇಶಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಹೇಳಿದೆ. ಇದಲ್ಲದೆ, ಐಟಿ ರಿಟರ್ನ್ಸ್, ಸರ್ಕಾರಿ ಯೋಜನೆಗಳಿಗೆ ಮತ್ತು ಪ್ಯಾನ್ ಕಾರ್ಡ್ ಗಾಗಿ ಆಧಾರ್ ಕಡ್ಡಾಯ ಎಂದು ನ್ಯಾಯಾಲಯ ತಿಳಿಸಿದೆ.

|

ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರದ ಆಧಾರ್ ಯೋಜನೆಗೆ ಸಾಂವಿಧಾನಿಕ ಮಾನ್ಯತೆಯನ್ನು ನೀಡಿದೆ. ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್ ಕನೆಕ್ಷನ್ ಮತ್ತು ಶಾಲಾ ಪ್ರವೇಶಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಹೇಳಿದೆ. ಇದಲ್ಲದೆ, ಐಟಿ ರಿಟರ್ನ್ಸ್, ಸರ್ಕಾರಿ ಯೋಜನೆಗಳಿಗೆ ಮತ್ತು ಪ್ಯಾನ್ ಕಾರ್ಡ್ ಗಾಗಿ ಆಧಾರ್ ಕಡ್ಡಾಯ ಎಂದು ನ್ಯಾಯಾಲಯ ತಿಳಿಸಿದೆ.

ಸುಪ್ರೀಂ ಕೋರ್ಟ್ ಪ್ರಮುಖ ತೀರ್ಪಿನೊಂದಿಗೆ, ಜನರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್ ಸಂಪರ್ಕಗಳಿಂದ ಡಿಲಿಂಕ್ ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ.
ಆದ್ದರಿಂದ ನಿಮ್ಮ ಆಧಾರ್ ನ್ನು ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್ ಸಂಪರ್ಕಗಳಿಂದ ಆಧಾರ್ ಅನ್ನು ಡಿಲಿಂಕ್ (Delink) ಮಾಡಲು ಬಯಸಿದರೆ ಈ ಹಂತಗಳನ್ನು ಅನುಸರಿಸಿ.

ಬ್ಯಾಂಕ್ ಖಾತೆಯಿಂದ ಆಧಾರ್ ಡಿಲಿಂಕ್ ಹೇಗೆ?

ಬ್ಯಾಂಕ್ ಖಾತೆಯಿಂದ ಆಧಾರ್ ಡಿಲಿಂಕ್ ಹೇಗೆ?

ಹಂತ 1: ನಿಮ್ಮ ಖಾತೆಯನ್ನು ಹೊಂದಿರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ಹಂತ 2: ಗ್ರಾಹಕರ ಸೇವಾ ಕೌಂಟರ್ ನಿಂದ, ಆಧಾರ್ ಅನ್ನು ಡಿಲಿಂಕ್ ಮಾಡಲು ಅರ್ಜಿಯನ್ನು ಕೇಳಿ.
ಹಂತ 3: ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಿ. 48 ಗಂಟೆಗಳೊಳಗೆ ನಿಮ್ಮ ಆಧಾರ್ ನ್ನು ಬ್ಯಾಂಕ್ ಖಾತೆಯಿಂದ ಡಿಲಿಂಕ್ ಮಾಡಲಾಗುತ್ತದೆ.
ಹಂತ 4: ನಿಮ್ಮ ಬ್ಯಾಂಕ್ ಖಾತೆಯನ್ನು ಡಿಲಿಂಕ್ ಮಾಡಲಾಗಿದೆಯೆ ಎಂದು ಪರಿಶೀಲಿಸಲು, ನೀವು ಬ್ಯಾಂಕ್ ಗೆ ಕರೆ ಮಾಡಬಹುದು.

ಮೊಬೈಲ್ ಫೋನ್ ನಂಬರ್ ಡಿಲಿಂಕ್ ಹೇಗೆ?

ಮೊಬೈಲ್ ಫೋನ್ ನಂಬರ್ ಡಿಲಿಂಕ್ ಹೇಗೆ?

ಹಂತ 1: ಮೊಬೈಲ್ ಕಂಪೆನಿ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ.
ಹಂತ 2: ಆಧಾರ್ ಸಂಪರ್ಕ ಡಿಲಿಂಕ್ ಮಾಡುವಂತೆ ಮನವಿ ಸಲ್ಲಿಸಿ. ಅದಕ್ಕೆ ಸಂಬಂಧಿಸಿದ ಇ-ಮೇಲ್ ರವಾನಿಸುವಂತೆ ಕೇಳಿ.
ಹಂತ 3: ಮೊಬೈಲ್ ಕಂಪೆನಿಯಿಂದ ಆಧಾರ್ ಕಾರ್ಡ್‌ನ ಫೋಟೊ ಕಳಿಸುವಂತೆ ಕೋರಿಕೆಯ ಮೇಲ್ ನಿಮಗೆ ತಲುಪುತ್ತದೆ. ಅವರ ಸೂಚಿಸಿದ ಕ್ರಮಗಳನ್ನು ಅನುಸರಿಸಿ.
ಹಂತ 4: 48 ಗಂಟೆಗಳಲ್ಲಿ ಆಧಾರ್ ಜೋಡಣೆಯನ್ನು ರದ್ದುಗೊಳಿಸಿದ್ದನ್ನು ದೃಢಪಡಿಸುವ ಮೇಲ್ ನಿಮಗೆ ಸಿಗುತ್ತದೆ.
ಹಂತ 5: ನಿಮ್ಮ ಮೊಬೈಲ್ ಫೋನ್ ನಂಬರ್ನ್ನು ಡಿಲಿಂಕ್ ಮಾಡಲಾಗಿದೆಯೆ ಎಂದು ಪರಿಶೀಲಿಸಲು, ನೀವು ಮೊಬೈಲ್ ಕಂಪೆನಿ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಬಹುದು.

ಖಾಸಗಿ ವಾಲೆಟ್ ಸೇವೆಗಳಿಂದ ಆಧಾರ್ ಅನ್ನು ಡಿಲಿಂಕ್ ಮಾಡೋದು ಹೇಗೆ?

ಖಾಸಗಿ ವಾಲೆಟ್ ಸೇವೆಗಳಿಂದ ಆಧಾರ್ ಅನ್ನು ಡಿಲಿಂಕ್ ಮಾಡೋದು ಹೇಗೆ?

Paytm, Ola, Uber, Google Pay, MobiKwik ನಂತಹ ಖಾಸಗಿ ವ್ಯಾಲೆಟ್ ಸಂಸ್ಥೆಗಳ ಗ್ರಾಹಕ ಸಂಖ್ಯೆಗಳಿಗೆ ನೀವು ಕರೆ ಮಾಡಬೇಕು.

- ಆಧಾರ್ ಜೋಡಣೆಯನ್ನು ಡಿಲಿಂಕ್ ಮಾಡಲು ನಿಮ್ಮ ಇ-ಮೇಲ್ ವಿಳಾಸಕ್ಕೆ ಕಳುಹಿಸುವಂತೆ ತಿಳಿಸಿ.
- ನೀವು ಸೇವೆ ಪಡೆಯುತ್ತಿರುವ ಸಂಬಂಧಿತ ಕಂಪನಿಯಿಂದ ಬರುವ ಮೇಲ್‌ನಲ್ಲಿ ಈ ಮನವಿಯನ್ನು ಕಾರ್ಯಗತಗೊಳಿಸಲು ನಿಮ್ಮ ಆಧಾರ್ ಕಾರ್ಡ್‌ನ ಸ್ಪಷ್ಟ ಚಿತ್ರವನ್ನು ಕಳುಹಿಸುವಂತೆ ಕೋರಲಾಗುತ್ತದೆ. ಅದರಂತೆ ಆ ಸೂಚನೆಯನ್ನು ಪಾಲಿಸಿ.
- ಸಂಸ್ಥೆಯು ನಿಮ್ಮ ಆಧಾರ್ 72 ಗಂಟೆಗಳೊಳಗೆ ಡಿಲಿಂಕ್ ಮಾಡಲಾಗುವುದು ಎಂದು ಇ-ಮೇಲ್ ಮೂಲಕ ದೃಢೀಕರಿಸುತ್ತದೆ.
- ಆಧಾರ್ ಡೀಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಈ ಪ್ರಕ್ರಿಯೆಯನ್ನು ಸಂಬಂಧಿತ ಡಿಜಿಟಲ್ ವ್ಯಾಲೆಟ್ ಸಂಸ್ಥೆಗಳಳೊಂದಿಗೆ ಅನುಸರಿಸಿ. ಪೇಟಿಎಂ ಗ್ರಾಹಕ ಸೇವೆ ಸಂಖ್ಯೆ 01204456456 ಕರೆ ಮಾಡಿ.

ಆಧಾರ್ ಡಿಲಿಂಕ್ ಪರಿಶೀಲನೆ ಸುಲಭವೆ?

ಆಧಾರ್ ಡಿಲಿಂಕ್ ಪರಿಶೀಲನೆ ಸುಲಭವೆ?

ಆಧಾರ್ ಜೋಡಣೆ ಮಾಡಿರುವ ಸಂಸ್ಥೆಗಳಿಗೆ ಆಧಾರ್ ಡಿಲಿಂಕ್ ಪ್ರಕ್ರಿಯೆ ತಲೆ ನೋವು ಆಗಲಿದೆ.
ಆಧಾರ್ ಡಿಲಿಂಕ್ ಮಾಡಿದರೂ ಜನರ ಖಾಸಗಿತನದ ಗೋಪ್ಯತೆಯನ್ನು ಕಾಯ್ದುಕೊಳ್ಳುತ್ತವೆಯೇ ಎಂಬುದನ್ನು ಹೇಳುವುದು ಸುಲಭವಲ್ಲ.
ಕಾರಣ ಆಧಾರ್‌ಗೆ ಸಂಬಂಧಿಸಿದಂತೆ ಅವರು ಪಡೆದುಕೊಂಡ ಸಂಪೂರ್ಣ ಡೇಟಾವನ್ನು ಎಲ್ಲಾ ದಾಖಲೆಗಳಿಂದಲೂ ಅಳಿಸಿ ಹಾಕಬೇಕು. ಈ ಪ್ರಕ್ರಿಯೆ ನಡೆದಿದೆ ಎನ್ನುವುದನ್ನು ಪರಿಶೀಲಿಸುವುದು ಕೂಡ ಸುಲಭವಲ್ಲ.
ಜಿಯೋನಂತಹ ಟೆಲಿಕಾಂ ಕಂಪೆನಿಗಳು ಆರಂಭದಿಂದಲೂ ಆಧಾರ್ ಸಂಖ್ಯೆಗೆ ಮಾತ್ರವೇ ತನ್ನ ಸಿಮ್‌ಗಳನ್ನು ವಿತರಿಸಿವೆ.

ಆಧಾರ್  ಹೆಚ್ಚಿನ ಮಾಹಿತಿ

ಆಧಾರ್ ಹೆಚ್ಚಿನ ಮಾಹಿತಿ

ಆಧಾರ್ ಸಂಬಂಧಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸುಪ್ರೀಕೋರ್ಟ್ ತೀರ್ಪು: ಆಧಾರ್ ಯಾವುದಕ್ಕೆ ಕಡ್ಡಾಯ, ಯಾವುದಕ್ಕೆ ಕಡ್ಡಾಯವಲ್ಲ ಸುಪ್ರೀಕೋರ್ಟ್ ತೀರ್ಪು: ಆಧಾರ್ ಯಾವುದಕ್ಕೆ ಕಡ್ಡಾಯ, ಯಾವುದಕ್ಕೆ ಕಡ್ಡಾಯವಲ್ಲ

ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ? ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಲಿಂಕ್ ಮಾಡೋದು ಹೇಗೆ?

ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ? ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ?

ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ?

English summary

How to Delink Aadhaar from Bank account and Mobile Phone Connection?

Supreme Court on Wednesday ruled that Aadhar card number and card details are not required when it comes to mobile connections or opening a bank account.
Story first published: Friday, September 28, 2018, 10:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X