ನಿಮ್ಮ ದ್ವಿಚಕ್ರ ವಾಹನಗಳ ಇನ್ಸೂರೆನ್ಸ್ ಪ್ರೀಮಿಯಂ ಕಡಿಮೆ ಮಾಡೋದು ಹೇಗೆ?

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

    ಭಾರತದಲ್ಲಿ ದ್ವಿಚಕ್ರ ವಾಹನಗಳು ಪ್ರತಿದಿನದ ಓಡಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಎಲ್ಲರ ನೆಚ್ಚಿನ ಆಯ್ಕೆಯಾಗಿದೆ. ಕಾನೂನಿನ ಪ್ರಕಾರ ನೀವು ಒಂದು ಬೈಕ್ ಖರೀದಿಸಿದರೆ, ಅದಕ್ಕೆ ಇನ್ಸುರೆನ್ಸ್ ಅಥವಾ ವಿಮೆ ಮಾಡಿಸಬೇಕು.

    ಖರೀದಿದಾರರು ಸಾಮಾನ್ಯ ವಿಮೆಯನ್ನೂ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಸ್ವಲ್ಪ ದುಬಾರಿಯಾಗಿರುವ ಮತ್ತು ಹೆಚ್ಚು ಲಾಭದಾಯಕವಾಗಿರುವ, ಅವರ ಬೈಕಿಗೆ ಸರಿ ಹೊಂದುವಂತಹ ವಿಭಿನ್ನ ವಿಮೆಯನ್ನು ಮಾಡಿಸುವುದಕ್ಕೂ ಕೂಡ ಅವಕಾಶವಿರುತ್ತದೆ. ಇಲ್ಲಿ ಕೆಲವು ಸರಳ ಸಲಹೆಗಳನ್ನು ನೀಡುತ್ತಿದ್ದು, ಇದು ನಿಮ್ಮ ದ್ವಿಚಕ್ರ ವಾಹನದ ವಿಮೆಯ ಪ್ರೀಮಿಯಂ ಮೊತ್ತವನ್ನು ಅಲ್ಪಮಟ್ಟಿಗೆ ಕಡಿತಗೊಳಿಸಿಕೊಳ್ಳಲು ಸಹಾಯವಾಗಲಿದೆ. ವಿಮೆ ಎಂದರೇನು? ಭಾರತದಲ್ಲಿ ಲಭ್ಯವಿರುವ ವಿವಿಧ ವಿಮಾ ಯೋಜನೆಗಳು ಯಾವುವು?

    ನಿಮ್ಮ ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಿ

    ವಿಮೆಯ ಪ್ರೀಮಿಯಂನ್ನು ನಿರ್ಧರಿಸುವುದಕ್ಕೆ ಮುನ್ನ ಪ್ರಮುಖವಾಗಿರುವ ಅಂಶವೆಂದರೆ ನಿಮ್ಮ ಬೈಕಿನ ಆಯ್ಕೆ. ಹೌದು ಒಂದು ವೇಳೆ ನೀವು ದುಬಾರಿ ಬೈಕ್ ಗಳನ್ನು ಖರೀದಿಸುವುದಾದರೆ, ನೀವು ಹೆಚ್ಚು ದುಬಾರಿಯಾಗಿರುವ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಒಂದು ಸಾಮಾನ್ಯ ದರದ ಬೈಕ್ ಗಳನ್ನು ಖರೀದಿಸಿದ್ದೇ ಆದಲ್ಲಿ ಅಥವಾ ಸ್ವಲ್ಪ ಹಳೆಯ ಬೈಕ್ ಗಳನ್ನು ಖರೀದಿಸಿದಾಗ ಇನ್ಸುರೆನ್ಸ್ ಕೂಡ ಹಲವು ಸ್ಪರ್ಧಾತ್ಮಕ ಆಯ್ಕೆಗಳಿರುತ್ತದೆ. ಅದಕ್ಕಾಗಿ ಅವರು ರಿಪೇರಿ, ನಿರ್ವಹಣೆ ಮತ್ತು ಬದಲಿ ವೆಚ್ಚಗಳು ಇವುಗಳೆಲ್ಲವನ್ನೂ ಆಧರಿಸಿ ನಿಮ್ಮ ವಿಮೆಯ ಮೊತ್ತವನ್ನು ನಿರ್ಧಾರ ಮಾಡಲಾಗುತ್ತದೆ.

    ಇನ್ಸುರೆನ್ಸ್ ಪ್ಲಾನ್ ಗಳನ್ನು ಹೋಲಿಕೆ ಮಾಡಿ

    ಯಾವುದೇ ವಿಮಾ ಯೋಜನೆಯನ್ನು ಖರೀದಿಸುವ ಮೊದಲು, ದೇಶದಲ್ಲಿ ಪ್ರಮುಖ ವಿಮೆಗಾರರು ನೀಡುವ ವಿವಿಧ ವಿಮೆಯ ಯೋಜನೆಗಳನ್ನು ನೀವು ಹೋಲಿಸಿ ನೋಡಬೇಕು. ಈ ಹೋಲಿಕೆಯನ್ನು ನೀವು ತೃತೀಯ ವಿಮೆ ಹೋಲಿಕೆ ಪೋರ್ಟಲ್ ಗಳನ್ನು ಬಳಸಿ ಮಾಡಲೂಬಹುದು ಅಥವಾ ವಿಮೆದಾರರ ನಿಗಧಿತ ವೆಬ್ಸೈಟ್ ಗೆ ತೆರಳಿ ಕೂಡ ಹೋಲಿಕೆ ಮಾಡಲು ಅವಕಾಶವಿರುತ್ತದೆ.
    ಲಾಭಗಳು, ವೈಶಿಷ್ಟ್ಯತೆಗಳು, ಕ್ಲೈಮ್ ವಿಧಾನಗಳು, ಪ್ರೀಮಿಯಂ ಪಾವತಿ ಚಾನಲ್ ಮತ್ತು ಕಂಪೆನಿಯ ಕ್ಲೈಮ್ ಅನುಪಾತಗಳ ಬಗ್ಗೆ ಸರಿಯಾಗಿ ಓದಿಕೊಳ್ಳಿ. ಪ್ರೀಮಿಯಂ ಉಲ್ಲೇಖಗಳಿಗೆ ವಿನಂತಿಸಿ ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ಸಾಕಷ್ಟು ಅವಕಾಶಗಳನ್ನು ಒದಗಿಸುವ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ.

    ದೀರ್ಘ ಅವಧಿಯ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳಿ

    ಕಾರಿನ ಇನ್ಸುರೆನ್ಸ್ ಗಳನ್ನು ವಾರ್ಷಿಕವಾಗಿ ನವೀಕರಿಸಬೇಕಾಗುತ್ತದೆ. ಆದರೆ ಬೈಕಿನ ಇನ್ಸುರೆನ್ಸ್ ಯೋಜನೆಗಳನ್ನು ದೀರ್ಘಾವಧಿಗೆ ಆಯ್ಕೆ ಮಾಡಲು ಅವಕಾಶವಿರುತ್ತದೆ ಮತ್ತು ಅದಕ್ಕಾಗಿ ಸ್ಪರ್ಧಾತ್ಮಕ ಬೆಲೆಯೂ ಲಭ್ಯವಿರುತ್ತದೆ. ಹಾಗಾಗಿ, ಬೈಕ್ ಇನ್ಸುರೆನ್ಸ್ ಗಳಲ್ಲಿ 3 ವರ್ಷಗಳ ಅವಧಿಯ ಇನ್ಸುರೆನ್ಸ್ ಪ್ಲಾನ್ ಗಳನ್ನು ಆಯ್ಕೆ ಮಾಡಲು ಅವಕಾಶವಿದೆ. ದೀರ್ಘಕಾಲೀನ ವಿಮಾ ಪಾಲಿಸಿಯನ್ನು ಆಯ್ಕೆ ಮಾಡುವುದರಿಂದ ವಿಮಾ ಪ್ರೀಮಿಯಂ ಅನ್ನು ಉಳಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಏಕೆಂದರೆ ಇದು ಪಾಲಿಸಿ ಅವಧಿಯನ್ನು ಲಾಕ್ ಮಾಡಿರುತ್ತದೆ.

    ರಿಯಾಯಿತಿ ಬಗ್ಗೆ ಕೇಳಿ

    ಯಾವುದೇ ದ್ವಿಚಕ್ರ ವಾಹನ ಇನ್ಸುರೆನ್ಸ್ ನ್ನು ಆಯ್ಕೆ ಮಾಡಿಕೊಳ್ಳುವಾಗ ಸಂಬಂಧಪಟ್ಟ ಪ್ರತಿನಿಧಿ ಅಥವಾ ವಿಮಾ ಏಜೆಂಟ್ ಬಳಿಯಲ್ಲಿ ರಿಯಾಯಿತಿಯನ್ನು ಕೇಳಿ. ವಯಸ್ಸಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ರಿಯಾಯಿತಿಯನ್ನು ಕೆಲವು ವಿಮಾ ಕಂಪೆನಿಗಳು ನೀಡುತ್ತದೆ. ಲಿಂಗ ಸಂಬಂಧಿ ರಿಯಾಯಿತಿಯನ್ನು ನೀಡುವ ಕೆಲವು ವಿಮಾ ಕಂಪೆನಿಗಳೂ ಕೂಡ ಇದ್ದು ಅವುಗಳು ದೀರ್ಘಾವಧಿ ವಿಮೆಯನ್ನು ಒದಗಿಸುತ್ತದೆ.ಕಡಿಮೆ ಪ್ರೀಮಿಯಂ ಮೊತ್ತವಿರುವ ಅತ್ಯುತ್ತಮ ವಿಮೆಯನ್ನು ಆಯ್ಕೆ ಮಾಡಿಕೊಳ್ಳಲು ಪ್ರಯತ್ನಿಸಿ.

    ಸಣ್ಣ ಕ್ಲೈಮ್ ಗಳನ್ನು ಮಾಡಬೇಡಿ

    ನಿರ್ಧಿಷ್ಟ ಅವಧಿಯಲ್ಲಿ ಯಾವುದೇ ಕ್ಲೈಮ್ ಮಾಡಿರದ ಡ್ರೈವರ್ ಗಳಿಗೆ ನೋ-ಕ್ಲೈಮ್ ಬೋನಸ್ ಗಳನ್ನು ನೀಡಲಾಗುತ್ತದೆ. ಒಂದು ವೇಳೆ ಪಾಲಿಸಿದಾರನು ಸಣ್ಣ ಹಾನಿಗಳಿಗೆ ವಿರುದ್ಧವಾಗಿ ಹಕ್ಕುಸ್ವಾಮ್ಯವನ್ನು ಮಾಡಿದರೆ, ಆ ನಿರ್ದಿಷ್ಟ ವರ್ಷದಲ್ಲಿ ಯಾವುದೇ-ಹಕ್ಕು ರಿಯಾಯಿತಿಗಳನ್ನು ಅವನು ಪಡೆಯಲು ಸಾಧ್ಯವಾಗುವುದಿಲ್ಲ.

    ಬೈಕಿನ ಭದ್ರತೆಯನ್ನು ಹೆಚ್ಚಿಸಿ

    ಸಾಂದರ್ಭಿಕ ಹಾನಿ, ಕಳ್ಳತನ, ನಾಶ ಇತ್ಯಾದಿ ಹಲವು ಕಾರಣಗಳಿಗಾಗಿ ದ್ವಿಚಕ್ರ ವಾಹನವನ್ನು ಸುರಕ್ಷಿತವಾಗಿಡುವುದು ಅಥವಾ ವಾಹನಕ್ಕೆ ಭದ್ರತೆ ಒದಗಿಸಲು ಕಡಿಮೆ ಪ್ರೀಮಿಯಂ ದರವನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾದದ್ದು. ನೀವು ನಿಮ್ಮ ದ್ವಿಚಕ್ರವಾಹನಕ್ಕೆ ಹೆಚ್ಚು ಭದ್ರತಾ ಕ್ರಮಗಳು ಮತ್ತು ಸುರಕ್ಷತಾ ಸಾಧನಗಳನ್ನು ಅಳವಡಿಸಿಕೊಂಡು ಅಪಾಯವನ್ನು ಕಡಿಮೆಗೊಳಿಸುವುದರಿಂದಾಗಿ, ವಿಮೆದಾರರು ಕಡಿಮೆ ಪ್ರೀಮಿಯಂ ಅಥವಾ ರಿಯಾಯಿತಿಗಳನ್ನು ನೀಡುವ ಸಾಧ್ಯತೆಯಿದೆ.

    Read more about: insurance money finance news savings
    English summary

    How to reduce your two-wheeler insurance premium

    The buyer can opt for a basic policy or can choose a more comprehensive insurance policy by paying a high premium.
    Story first published: Wednesday, September 19, 2018, 10:52 [IST]
    Company Search
    Enter the first few characters of the company's name or the NSE symbol or BSE code and click 'Go'

    Find IFSC

    Get Latest News alerts from Kannada Goodreturns

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more