ಸಾಲ ಮತ್ತು ಓವರ್ ಡ್ರಾಫ್ಟ್ ನಡುವಿನ ವ್ಯತ್ಯಾಸ ತಿಳಿಯೋಣ ಬನ್ನಿ..

ಬ್ಯಾಂಕುಗಳಿಂದ ಸಾಲ ಪಡೆಯಲು ಬಯಸುವ ವ್ಯಕ್ತಿಗಳು ಸಾಲ ಮತ್ತು ಓವರ್ ಡ್ರಾಫ್ಟ್ ನಡುವಿನ ವ್ಯತ್ಯಾಸ ಅರ್ಥಮಾಡಿಕೊಳ್ಳಲು ಬಯಸುತ್ತಾರೆ. ನಮ್ಮಲ್ಲಿ ಹೆಚ್ಚಿನ ಜನರಿಗೆ ಸಾಲದ ಬಗ್ಗೆ ಗೊತ್ತಿರುತ್ತದೆ. ಆದರೆ ಓವರ್ ಡ್ರಾಪ್ಟ್ (ಓಡಿ) ಬಗ್ಗೆ ಹೆಚ್ಚಿನ ಜನ

ಬ್ಯಾಂಕುಗಳಿಂದ ಸಾಲ ಪಡೆಯಲು ಬಯಸುವ ವ್ಯಕ್ತಿಗಳು ಸಾಲ ಮತ್ತು ಓವರ್ ಡ್ರಾಫ್ಟ್ ನಡುವಿನ ವ್ಯತ್ಯಾಸ ಅರ್ಥಮಾಡಿಕೊಳ್ಳಲು ಬಯಸುತ್ತಾರೆ. ನಮ್ಮಲ್ಲಿ ಹೆಚ್ಚಿನ ಜನರಿಗೆ ಸಾಲದ ಬಗ್ಗೆ ಗೊತ್ತಿರುತ್ತದೆ. ಆದರೆ ಓವರ್ ಡ್ರಾಪ್ಟ್ (ಓಡಿ) ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಗ್ರಾಹಕರು ಬ್ಯಾಂಕಿನಿಂದ ಹಣ ಪಡೆದುಕೊಳ್ಳುವುದಕ್ಕಿಂತ ಮೊದಲು ಸಾಲ ಮತ್ತು ಓವರ್ ಡ್ರಾಫ್ಟ್ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ.

ಸಾಲ ಮತ್ತು ಓವರ್ ಡ್ರಾಫ್ಟ್ ನಡುವಿನ ವ್ಯತ್ಯಾಸ ತಿಳಿಯೋಣ ಬನ್ನಿ..

ಅನೇಕ ವಾಣಿಜ್ಯೋದ್ಯಮಿಗಳು ಅಥವಾ ಚಾಲ್ತಿ ಖಾತೆ ಹೊಂದಿರುವವರು ಬ್ಯಾಂಕುಗಳಿಂದ ಓಡಿ ಮತ್ತು ಸಾಲ ಸೌಲಭ್ಯಕ್ಕಾಗಿ ನೋಡುತ್ತಿರುತ್ತಾರೆ. ಹಾಗಿದ್ದರೆ ಇದರ ನಡುವಿನ ವ್ಯತ್ಯಾಸಗಳೇನು ನೋಡೋಣ ಬನ್ನಿ..


1.
ಓವರ್ ಡ್ರಾಫ್ಟ್ ಎಂದರೆ ಚಾಲ್ತಿ ಖಾತೆ ಮೇಲೆ ವ್ಯಕ್ತಿಗೆ ಅಥವಾ ಕಂಪನಿಗೆ ನೀಡಲ್ಪಡುವ ಕ್ರೆಡಿಟ್ ಮೊತ್ತ. ಲೋನ್ ಅಥವಾ ಸಾಲ ಅಂದರೆ ಬ್ಯಾಂಕ್ ನೇರವಾಗಿ ನೀಡುವ ಹಣದ ಮೊತ್ತ. ನೀವು ಹಿಂತೆಗೆದುಕೊಳ್ಳುವ ಮೊತ್ತವು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಪ್ರತಿ ದಿನ ಬದಲಾಗಬಹುದು. ಇದು ಕ್ರೆಡಿಟ್ ಕಾರ್ಡ್ ಖರ್ಚುಗಳಂತೆಯೇ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕ್ರೆಡಿಟ್ ಲಿಮಿಟ್ ಗೆ ಅನುಗುಣವಾಗಿ ನೀವು ಸಾಲ ಪಡೆಯಬಹುದು. ಲೋನ್ ಅಥವಾ ಸಾಲ ಅಂದರೆ ಬ್ಯಾಂಕ್ ನೇರವಾಗಿ ನೀಡುವ ಹಣದ ಮೊತ್ತ.

2. ನಿಮ್ಮ ಖಾತೆಯಲ್ಲಿರುವ ಹಣದ ಮೊತ್ತಕ್ಕೆ ಲೆಕ್ಕಹಾಕಿ ಓವರ್ ಡ್ರಾಪ್ಟ್ ನೀಡಲಾಗುವುದು. ಇಲ್ಲಿ ನೀವು ಹೆಚ್ಚುವರಿ ಮೊತ್ತಕ್ಕೆ ಮಾತ್ರ ಬಡ್ಡಿ ನೀಡಿದರೆ ಸಾಕಾಗುತ್ತದೆ. ಸಾಲ ಪಡೆದುಕೊಂಡರೆ ತೆಗೆದುಕೊಂಡ ಅಷ್ಟೂ ಹಣಕ್ಕೆ ಬಡ್ಡಿ ಕಟ್ಟಬೇಕಾಗುತ್ತದೆ. ಅಲ್ಲದೇ ಸಾಲ ಪಡೆಯಲು ಕೆಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

3. ಸಾಮಾನ್ಯವಾಗಿ ಓವರ್ ಡ್ರಾಫ್ಟ್ ನ್ನು ಕಡಿಮೆ ಅವಧಿಗೆ ತೆಗೆದುಕೊಳ್ಳಲಾಗುತ್ತದೆ. ಗ್ರಾಹಕ ಮತ್ತು ಸಂಬಂಧಿಸಿದ ಬ್ಯಾಂಕ್ ನ ನಡುವೆ ಮೌಖಿಕ ಒಪ್ಪಂದ ಇರುತ್ತದೆ. ಸಾಲ ದೀರ್ಘಾವಧಿಗೆ ಸಂಬಂಧಿಸಿದ್ದಾಗಿದ್ದು 3 ರಿಂದ 25 ವರ್ಷ ಅವಧಿಗೂ ಇರಬಹುದು.

4. ಓವರ್ ಡ್ರಾಫ್ಟ್ ಪಡೆದುಕೊಳ್ಳುವುದು ಸುಲಭ. ಇದಕ್ಕೆ ಕಡಿಮೆ ದಾಖಲೆ ಪತ್ರಗಳು ಸಾಕಾಗುತ್ತವೆ. ಆದರೆ ಸಾಲ ಪಡೆದುಕೊಳ್ಳುವುದಕ್ಕೆ ಸಾಕಷ್ಟು ದಾಖಲೆಗಳನ್ನು ಒದಗಿಸಬೇಕು. ಅಲ್ಲದೇ ಜಾಮೀನನನ್ನು ಕೇಳಲಾಗುತ್ತದೆ.

5. ಓವರ್ ಡ್ರಾಫ್ಟ್ ಮರುಪಾವತಿ ಮೊತ್ತ ದೊಡ್ಡದಾಗಿರುತ್ತದೆ. ಅಲ್ಲದೇ ಯಾವುದೇ ಸಂದರ್ಭದಲ್ಲಿ ಅಷ್ಟೂ ಹಣ ನೀಡಿ ಕ್ಲೋಸ್ ಮಾಡಬಹುದು. ಆದರೆ ಸಾಲ ಪಡೆದುಕೊಂಡಿದ್ದರೆ ಕಂತಿನ ಆಧಾರದಲ್ಲಿ ಸಾಲ ಮರುಪಾವತಿ ಮಾಡಲಾಗುವುದು. ನಿಗದಿತ ವೇಳೆಗೆ ನಿರ್ದಿಷ್ಟ ಮೊತ್ತ ತುಂಬಬೇಕಾಗುತ್ತದೆ. ಕ್ರೆಡಿಟ್ ಸ್ಕೋರ್ ಮತ್ತು ಇತರ ಹಣಕಾಸಿನ ಸಮಸ್ಯೆಗಳನ್ನು ತಪ್ಪಿಸಲು ನಿಗದಿತ ಸಮಯದೊಳಗೆ ಸಾಲ ಪಾವತಿಸಬೇಕಾಗುತ್ತದೆ.
ತುರ್ತು ಸಂದರ್ಭದಲ್ಲಿ ಓಡಿ ಪಡೆದುಕೊಳ್ಳಬಹುದು. ಕಡಿಮೆ ಮೊತ್ತದ ಹಣವನ್ನು ಈ ಆಧಾರದಲ್ಲಿ ಪಡೆದುಕೊಳ್ಳಲು ಅಡ್ಡಿಯಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+