For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಆಧಾರ್ ಕಾರ್ಡ್ ಪಡೆಯಲು ಆಧಾರ್ ಕೇಂದ್ರ ಅಥವಾ ಬ್ಯಾಂಕುಗಳು / ಅಂಚೆ ಕಚೇರಿಗಳನ್ನು ಭೇಟಿ ಮಾಡಿ ನೋಂದಣಿ ಮಾಡಬಹುದು. ಯುಐಡಿಎಐ ಒದಗಿಸುವ ದಾಖಲಾತಿ ID, ವರ್ಚುವಲ್ ಐಡಿ,ಆಧಾರ್ ಸಂಖ್ಯೆ ಬಳಸಿಕೊಂಡು ಆಧಾರ್ ಡೌನ್ಲೋಡ್ ಮಾಡಿ ಮುದ್ರಿಸಬಹುದು.

|

ದೇಶದ ಪ್ರತಿಯೊಬ್ಬ ಪ್ರಜೆ ಕೂಡ ಆಧಾರ್ ಕಾರ್ಡ್ ಹೊಂದಿರಬೇಕಾಗಿದ್ದು, ದೇಶದಾದ್ಯಂತ ಗುರುತಿನ ಚೀಟಿಯಾಗಿ ಬಳಸಬಹುದಾಗಿದೆ. ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯವಾಗಿರುತ್ತದೆ. ೧೨ ಅಂಕೆಗಳಿರುವ ಆಧಾರ್ ನಂಬರ್ ನ್ನು ಯುಐಎಡಿಐ ಒದಗಿಸುತ್ತದೆ.

 

ಆಧಾರ್ ಕಾರ್ಡ್ ಪಡೆಯಲು ಆಧಾರ್ ಕೇಂದ್ರ ಅಥವಾ ಬ್ಯಾಂಕುಗಳು / ಅಂಚೆ ಕಚೇರಿಗಳನ್ನು ಭೇಟಿ ಮಾಡಿ ನೋಂದಣಿ ಮಾಡಬಹುದು. ಯುಐಡಿಎಐ ಒದಗಿಸುವ ದಾಖಲಾತಿ ID, ವರ್ಚುವಲ್ ಐಡಿ ಅಥವಾ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಅವನು / ಅವಳು ಆಧಾರ್ ಕಾರ್ಡ್ ನ್ನು ಡೌನ್ಲೋಡ್ ಮಾಡಿ ಮುದ್ರಿಸಬಹುದು.

ಆಧಾರ್ ಕಾರ್ಡ್ ಮನೆಗೆ ತಲುಪಿಲ್ಲ ಎಂದು ಚಿಂತಿಸಬೇಕಾಗಿಲ್ಲ. ಆನ್ಲೈನ್ ಮೂಲಕ ಆಧಾರ್ ನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಅದರ ವಿಧಾನಗಳನ್ನು ಇಲ್ಲಿ ನೀಡಲಾಗಿದೆ.

ಆಧಾರ್ ಡೌನ್ಲೋಡ್ ಮಾಡಲು ಏನು ಬೇಕು?

ಆಧಾರ್ ಡೌನ್ಲೋಡ್ ಮಾಡಲು ಏನು ಬೇಕು?

ಆಧಾರ್ ಕಂದ್ರಗಳಲ್ಲಿ ನೋಂದಣಿ ಮಾಡಿಸಿದ್ದ ವೇಳೆ ನೀಡಿದ್ದ ಸಂಖ್ಯೆ(ಆಧಾರ್ ನಂಬರ್) ನಿಮ್ಮ ಸಂಪೂರ್ಣ ಹೆಸರು (ಸ್ವೀಕೃತಿ ಪತ್ರದಲ್ಲಿ ಇರುವಂತೆ) ಪಿನ್ ಕೋಡ್ ಮೊಬೈಲ್ ಸಂಖ್ಯೆ ನಿಮ್ಮ ಆಧಾರ್ ಕಾರ್ಡ್ ನೋಂದಣಿ ಸಂಖ್ಯೆ ಬಹಳ ಪ್ರಮುಖವಾಗುತ್ತದೆ. ನೀವು ಆಧಾರ್ ಗೆ ನೋಂದಣಿ ಮಾಡಿದ ದಿನಾಂಕ ಮತ್ತು ಸಮಯವನ್ನು ನೆನಪಿಟ್ಟುಕೊಳ್ಳುವುದು ಉತ್ತಮ.

ಇ-ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಇ-ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಹಂತ 1
ಆಧಾರ್ ಕಾರ್ಡ್ ವಿವರ ಪಡೆಯಲು ಸರ್ಕಾರದ ವೆಬ್ಸೈಟ್ https://uidai.gov.in/ ಗೆ ಭೇಟಿ ನೀಡಿ. ಡ್ಔನ್ಲೋಡ್ ಆಧಾರ್ ಮೇಲೆ ಕ್ಲಿಕ್ ಮಾಡಿ ಅಥವಾ https://eaadhaar.uidai.gov.in/ ಮೂಲಕ ಮುಂದುವರೆಯಿರಿ. ಅಲ್ಲಿ ತಿಳಿಸಿರುವ ಸೂಚನೆಗಳನ್ನು ಸರಿಯಾಗಿ ಓದಿಕೊಳ್ಳಿ. ಆಧಾರ್ e-KYC ಸೇವೆ ಯಾಕೆ ಬೇಕು? ಇಲ್ಲಿವೆ 9 ಕಾರಣ

ಹಂತ 2
 

ಹಂತ 2

ಆಧಾರ್ ಆಪ್ಷನ್ ಆಯ್ಕೆಮಾಡಿ ನಿಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ತುಂಬಿ.
Regular Aadhaar ಆಯ್ಕೆ ಮಾಡಿ ನಿಮ್ಮ ಆಧಾರ್ ನಂಬರ್, ಹೆಸರು, ಪಿನ್ ಕೋಡ್, ವಿಳಾಸ ಇತ್ಯಾದಿ ವಿವರ ತುಂಬಿ.
Request OTP ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಗೆ ಒಟಿಪಿ ಅಂಕೆಯನ್ನು ಕಳುಹಿಸಿಕೊಡಲಾಗುತ್ತದೆ.
I Agree ಮೇಲೆ ಕ್ಲಿಕ್ ಮಾಡಿ ನಿಮ್ಮ ವೈಯಕ್ತಿಕ ದೃಢೀಕರಣ ವಿವರ ನಿಡಿ.
ನಿಮ್ಮ ಮೊಬೈಲ್ ನಂಬರ್ ಗೆ ಬಮದಿರುವ ಒಟಿಪಿ ಸಂಖ್ಯೆಯನ್ನು ನಮೂದಿಸಬೇಕು. ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಲ್ಲವೆ..?

ಹಂತ 3

ಹಂತ 3

ಒಟಿಪಿಯ ನೋಂದಣಿ ನಂತರ ನೀವು Download Aadhaar ಮೇಲೆ ಕ್ಲಿಕ್ ಮಾಡಿ ಆಧಾರ್ ಕಾರ್ಡ್ ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಪಿಡಿಎಫ್ ಅಥವಾ ಇತರೆ ಫಾರ್ಮೆಟ್ ಗಳ ರೀತಿಯಲ್ಲಿ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ. ಇದನ್ನು ಒರಿಜಿನಲ್ ಆಧಾರ್ ಕಾರ್ಡ್ ರೀತಿಯಲ್ಲಿಯೇ ಬಳಸಬಹುದು. Read More: Aadhar

English summary

How to Download your Aadhaar Card through Online?

Once an individual enrols for the Aadhaar card by visiting Aadhaar Centres or Banks/Post-offices, he/she can download and print UIDAI Aadhaar by using the enrolment ID
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X