ಉದ್ಯೋಗದಾತ ಸಂಸ್ಥೆಗಳು ತನ್ನ ನೌಕರರಿಗೆ ಅವರ ಸೇವಾವಧಿಯನ್ನು ಮಾನದಂಡವಾಗಿ ಇಟ್ಟುಕೊಂಡು ಕೊಡುವ ಗೌರವ ಧನವೇ ಗ್ರಾಚ್ಯುಟಿ. ಉದ್ಯೋಗದಾತ ಕಂಪನಿಗಳಿದ ಉದ್ಯೋಗಿಗಳಿಗೆ ಸಿಗುವ ಕೊಡುಗೆಗಳಲ್ಲಿ ಇದು ಒಂದಾಗಿದೆ.
ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಹಿರಿಯ ನೌಕರರ ಗ್ರಾಚ್ಯುಟಿ ಮೊತ್ತವನ್ನು ರೂ. 10 ರಿಂದ 30 ಲಕ್ಷಕ್ಕೆ ಏರಿಕೆ ಮಾಡಿದ್ದಾರೆ. ಹಾಗಿದ್ದರೆ ಏನಿದು ಗ್ರಾಚ್ಯುಟಿ? ಇದರ ಲೆಕ್ಕಾಚಾರ ಹೇಗೆ? ಎಂಬುದನ್ನು ತಿಳಿಯುವ ಕುತೂಹಲವೇ ಬನ್ನಿ ನೋಡೋಣ..
ಏನಿದು ಗ್ರಾಚ್ಯುಟಿ?
ಉದ್ಯೋಗದಾತ ಸಂಸ್ಥೆಗಳು ತನ್ನ ನೌಕರರಿಗೆ ಅವರ ಸೇವಾವಧಿಯನ್ನು ಮಾನದಂಡವಾಗಿ ಇಟ್ಟುಕೊಂಡು ಕೊಡುವ ಗೌರವ ಧನವೇ ಗ್ರಾಚ್ಯುಟಿ. ಉದ್ಯೋಗದಾತ ಕಂಪನಿಗಳಿದ ಉದ್ಯೋಗಿಗಳಿಗೆ ಸಿಗುವ ಕೊಡುಗೆಗಳಲ್ಲಿ ಇದು ಒಂದಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷ ಒಂದು ಕಂಪನಿಯಲ್ಲಿ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಈ ಗೌರವ ಧನ ನೀಡಲಾಗುತ್ತದೆ. ಗ್ರಾಚ್ಯುಟಿ ಅಧಿನಿಯಮದ ಪ್ರಕಾರ ಉದ್ಯೋಗಿಯು ಸೇವೆಯಿಂದ ನಿವೃತ್ತನಾದಾಗ ಅಥವಾ ರಾಜೀನಾಮೆ ನೀಡಿದಾಗ ಪಾವತಿಸಲಾಗುವ ಮೊತ್ತ. ಉದ್ಯೋಗಿ ತನ್ನ ವೃತ್ತಿಜೀವನದಲ್ಲಿ ಹಲವು ಬಾರಿ ಸಂಸ್ಥೆಗಳನ್ನು ಬದಲಾಯಿಸುತ್ತಾನೆ. ಅಂತಹ ಸಂದರ್ಭಗಳಲ್ಲಿ ಗ್ರಾಚ್ಯುಟಿ ಪಡೆದು ಉದ್ಯೋಗ ಬಿಡಬಹುದಾಗಿದೆ.
ಗ್ರಾಚ್ಯುಟಿ ಲೆಕ್ಕಾಚಾರ?
1972ರ ಗ್ರಾಚ್ಯುಟಿ ಅಧಿನಿಯಮದ ಅನ್ವಯ, ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ ಹಲವಾರು ವಿಧಾನಗಳಲ್ಲಿ ಗ್ರಾಚ್ಯುಟಿ ಮೊತ್ತ ಲೆಕ್ಕ ಹಾಕಲಾಗುತ್ತದೆ. ಒಬ್ಬ ಉದ್ಯೋಗಿ 1972ರ ಗ್ರಾಚುಟಿ ಪಾವತಿ ಕಾಯಿದೆಗೆ ಒಳಪಟ್ಟಿದ್ದರೆ, 15 ದಿನಗಳ ಸಂಬಳದ ಗ್ರಾಚ್ಯುಟಿ ಮೊತ್ತವನ್ನು ಉದ್ಯೋಗಿಯ ಅನುಭವದ ವರ್ಷಗಳ ಜೊತೆ ಗುಣಿಸಿ ಲೆಕ್ಕ ಹಾಕಲಾಗುತ್ತದೆ. ಸಂಬಳದ ಲೆಕ್ಕದಲ್ಲಿ ಮೂಲ ಸಂಬಳ, ಕೊನೆ ಬಾರಿ ಪಡೆದ ತುಟ್ಟಿಭತ್ಯೆ (DA) ಎಲ್ಲವೂ ಸೇರಿಸಲಾಗುತ್ತದೆ. ತದನಂತರ ಮೊತ್ತವನ್ನು 26ರಿಂದ ಭಾಗಿಸಬೇಕಾಗುತ್ತದೆ.
ಉದಾಹರಣೆಗೆ
ಉದ್ಯೋಗಿ ಮೂಲ ಸಂಬಳ (basic pay) ಪ್ರತಿ ತಿಂಗಳು ರೂ. 10,000 ಸಂಬಳ ಬರುತ್ತಿದೆ ಎಂದಿಟ್ಟುಕೊಳ್ಳೋಣ. ಇದರ ಜೊತೆಗೆ ತುಟ್ಟಿಭತ್ಯೆ (dearness allowance) ಸೇರಿಸಬೇಕು. ಜೊತೆಗೆ 10 ವರ್ಷದ ಅನುಭವ ಸೇರಿಸಿಕೊಳ್ಳಿ. ಗ್ರಾಚ್ಯುಟಿ = ಕೊನೆ ಬಾರಿ ಪಡೆದ ಸಂಬಳ + 15/26 x ಔದ್ಯೋಗಿಕ ಅನುಭವ ವರ್ಷಗಳು
ಈ ಉದಾಹರಣೆಯಂತೆ = 10000x15/26x10 = Rs 57,692
ಒಂದು ವೇಳೆ ಉದ್ಯೋಗಿಯ ಅನುಭವ 4.5 ಅಥವಾ ನಾಲ್ಕು ಮುಕ್ಕಾಲು ವರ್ಷ ಇದ್ದರೆ ಅದನ್ನು ಹತ್ತಿರದ ಸಂಖ್ಯೆಗೆ ರೌಂಡ್ ಆಫ್ ಮಾಡಲಾಗುತ್ತದೆ.
ಉದ್ಯೋಗಿಯ ನಡತೆ
ಗ್ರಾಚ್ಯುಟಿ ಲೆಕ್ಕಾಚಾರದಲ್ಲಿ ಕಂಪನಿಯಲ್ಲಿ ಉದ್ಯೋಗಿ ನಡೆದುಕೊಂಡ ರೀತಿ, ಉದ್ಯೋಗಿ ಪ್ರಗತಿ ವರದಿ ಕೂಡ ಗ್ರಾಚ್ಯುಟಿ ಲೆಕ್ಕಾಚಾರದ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಲಲಾಗುತ್ತದೆ. ಒಂದು ವೇಳೆ ಉದ್ಯೋಗಿ ಸಂಸ್ಥೆಗೆ ಹಾನಿ ಮಾಡಿದ್ದರೆ ಗ್ರಾಚುಟಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.
ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು
ಒಬ್ಬ ಉದ್ಯೋಗಿ ಗ್ರಾಚ್ಯುಟಿ ಮೊತ್ತವನ್ನು ಪಡೆಯಲು ಒಂದೇ ಸಂಸ್ಥೆಯಲ್ಲಿ ಕನಿಷ್ಠ 5 ವರ್ಷಗಳ ಔದ್ಯೋಗಿಕ ಅನುಭವ ಹೊಂದಿರಬೇಕಾಗುತ್ತದೆ. ಆದರೆ, ಕರ್ತವ್ಯ ನಿರತ ಉದ್ಯೋಗಿ ಮೃತಪಟ್ಟ ಸಂದರ್ಭದಲ್ಲಿ ಒಂದು ವರ್ಷ ನಿಯಮ ಸಡಿಲಿಕೆಗೆ ಅವಕಾಶವಿದೆ. ನಿವೃತ್ತಿ ಹೊಂದುವ ತನಕ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡುವ ಉತ್ತಮವಾದ ಸೌಲಭ್ಯವಾಗಿ ಗ್ರಾಚ್ಯುಟಿ ಬಳಕೆಯಲ್ಲಿದೆ. ಉದ್ಯೋಗಿಗಳು ಗ್ರಾಚ್ಯುಟಿ ಮೊತ್ತವನ್ನು ಸಂಸ್ಥೆಯಲ್ಲಿ ಸೇವೆಯಲ್ಲಿದ್ದಾಗಲೇ ಪಡೆಯಲಾಗುವುದಿಲ್ಲ.
ಗ್ರಾಚ್ಯುಟಿ ನೀಡುವ ನಿಯಮ
ಒಂದು ಕಂಪನಿಯಲ್ಲಿ 10ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರೆ ಆ ಕಂಪನಿ ಕಡ್ಡಾಯವಾಗಿ ಗ್ರಾಚ್ಯುಟಿ ನೀಡಬೇಕೆಂಬ ನಿಯಮವಿದೆ. ಉದ್ಯೋಗಿ ದಿನಗೂಲಿ ನೌಕರನಾಗಿದ್ದಲ್ಲಿ ಆತ ಸೇವೆಯಿಂದ ಮುಕ್ತನಾಗುವ ಮುನ್ನ ಪಡೆದಿದ್ದ ಮೂರು ತಿಂಗಳ ಕೂಲಿಯನ್ನು ಒಂದು ದಿನದ ವೇತನವೆಂದು ಪರಿಗಣಿಸುವ ನಿಯಮವಿದೆ. ಗ್ರಾಚ್ಯುಟಿ ಮೊತ್ತ ಪಡೆಯಲು ಉದ್ಯೋಗಿ ಒಂದು ಕಂಪನಿಯಲ್ಲಿ ಕನಿಷ್ಠ ಐದು ವರ್ಷಗಳನ್ನಾದರೂ ಸತತವಾಗಿ ಸೇವೆ ಸಲ್ಲಿಸಿರಬೇಕು.
ಯಾವಾಗ ಗ್ರಾಚ್ಯುಟಿ ನಿಯಮ ಅನ್ವಯವಾಗುವುದಿಲ್ಲ?
ಗ್ರಾಚ್ಯುಟಿ ನೀಡುವಾಗ ಕೆಲ ಸಂದರ್ಭಗಳಲ್ಲಿ ಸಂಸ್ಥೆಯಲ್ಲಿ ಕನಿಷ್ಠ 5 ವರ್ಷಗಳ ಸೇವೆ ನಿಯಮ ಅನ್ವಯವಾಗುವುದಿಲ್ಲ. ಅಂದರೆ ಉದ್ಯೋಗಿಯು ಕಂಪನಿಯ ಸೇವೆಯಲ್ಲಿದ್ದಾಗ ಮರಣ ಹೊಂದಿದಲ್ಲಿ ಅಥವಾ ಅಂಗವಿಕಲನಾದ ಸಂದರ್ಭದಲ್ಲಿ ಈ ಐದು ವರ್ಷಗಳ ನಿಯಮ ಅನ್ವಯವಾಗುವುದಿಲ್ಲ. ಉದ್ಯೋಗಿಯು ಮರಣ ಹೊಂದಿದ್ದರೆ ಇಲ್ಲವೇ ಅಂಗವಿಕಲನಾದರೆ ಗ್ರಾಚ್ಯುಟಿ ಮೊತ್ತವನ್ನು ಕಾನೂನಾತ್ಮಕವಾಗಿ ಉದ್ಯೋಗಿಯ ನಾಮಿನಿಗೆ ನೀಡಲಾಗುವುದು. ಇದಕ್ಕೆ ಯಾವುದೇ ರೀತಿಯ ತೆರಿಗೆ ಅನ್ವಯವಾಗುವುದಿಲ್ಲ. ಆದರೆ, ಗ್ರಾಚ್ಯುಟಿಗಾಗಿ ನೀಡುವ ಮೊತ್ತ ಹೆಚ್ಚಿಸಿದಲ್ಲಿ ಆ ಹೆಚ್ಚಳ ಮೊತ್ತಕ್ಕೆ ತೆರಿಗೆ ಇರುತ್ತದೆ. ನೌಕರರಿಂದ ಸಂಸ್ಥೆಗೆ ಆರ್ಥಿಕ ನಷ್ಟವಾದರೆ ಆ ನಷ್ಟದ ಹಣವನ್ನು ಸಂಬಂಧಪಟ್ಟ ಉದ್ಯೋಗಿಯ ಗ್ರಾಚ್ಯುಟಿ ಮೊತ್ತದಲ್ಲಿ ಮುಟ್ಟುಗೋಲು ಹಾಕಿಕೊಳ್ಳು ಅಧಿಕಾರ ಕಂಪನಿಗೆ ಇರುತ್ತದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications