For Quick Alerts
ALLOW NOTIFICATIONS  
For Daily Alerts

ಹಣ ಹೂಡಲು ಯಾವುದು ಸುರಕ್ಷಿತ ವಿಧಾನ? ಈ ಲೇಖನ ಓದಿ, ನಿರ್ಧರಿಸಿ

By ಕೆ.ಜಿ.ಕೃಪಾಲ್
|

ಈಗಿನ ಹಣಕಾಸು ಮಾರುಕಟ್ಟೆ ಸ್ಥಿತಿಯಲ್ಲಿ ಯಾವುದರಲ್ಲಿ ಹೂಡಿಕೆ ಮಾಡಬೇಕು? ಆ ಹೂಡಿಕೆ ಬಗ್ಗೆ ಅದೆಷ್ಟು ಎಚ್ಚರಿಕೆಯಿಂದ ಇರಬೇಕು? ಯಾವುದು ಹೂಡಿಕೆಗೆ ಸೂಕ್ತ ಕಾಲ? ಇಂಥ ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ ಎಂಬಂತಾಗಿದೆ.

ಬ್ಯಾಂಕ್ ಬಡ್ಡಿದರ ಫ್ಲೋಟ್, ಪೆಟ್ರೋಲ್ ದರ ಫ್ಲೋಟ್, ಬಸ್ ಪ್ರಯಾಣದ ದರ ಫ್ಲೋಟ್, ಗ್ರಾಹಕ ನಿರ್ಧಾರವು ಫ್ಲೋಟು, ಹೀಗೆ ಫ್ಲೋಟುಗಳಲ್ಲಿ ಮುಳುಗಿರುವ ಈಗಿನ ಸಮಾಜದಲ್ಲಿ ಸ್ಥಿರತೆಯನ್ನು ಹುಡುಕುವುದು, ಅದರಲ್ಲೂ ಸುರಕ್ಷಿತವಾದ ಸ್ಥಿರತೆಯನ್ನು ಹುಡುಕುವುದು ಫಲಕಾರಿಯಾಗುವುದು ಕಠಿಣ.

ಬಜೆಟ್ 2019 ನಂತರ ತೆರಿಗೆ ಲೆಕ್ಕಾಚಾರ, 7.75 ಲಕ್ಷ ತನಕ 'ನೋ ಟ್ಯಾಕ್ಸ್'ಬಜೆಟ್ 2019 ನಂತರ ತೆರಿಗೆ ಲೆಕ್ಕಾಚಾರ, 7.75 ಲಕ್ಷ ತನಕ 'ನೋ ಟ್ಯಾಕ್ಸ್'

ಸುರಕ್ಷಿತ ಎಂಬ ಪರಿಸ್ಥಿತಿ, ವಿಶೇಷವಾಗಿ ಈಗಿನ ಷೇರುಪೇಟೆಯಲ್ಲಿ ಅತಿ ವಿರಳವಾಗಿದೆ. ಈಗಿನ ಪೇಟೆಗಳ ಅಸ್ಥಿರತೆಯು ಅನುಭವಸ್ಥ ಹೂಡಿಕೆದಾರರನ್ನು ಸಹ ಕಂಗಾಲಾಗುವಂತೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಕಂಡುಬಂದ ಅಗ್ರಮಾನ್ಯ ಷೇರುಗಳಲ್ಲಿನ ಭಾರಿ ಕುಸಿತವು ಮತ್ತು ಅದರ ಹಿಂದೆ ಬರುತ್ತಿರುವ ಕಾರಣಗಳು ವಿಸ್ಮಯಕಾರಿಯಾಗಿ ಕಂಡುಬರುತ್ತಿವೆ.

ಝೀ ಎಂಟರ್ ಟೇನ್ ಮೆಂಟ್, ಡಿಎಚ್ ಎಫ್ ಎಲ್, ವೇದಾಂತ, ಸ್ಟರ್ ಲೈಟ್ ಟೆಕ್ನಾಲಜಿಸ್, ಯೆಸ್ ಬ್ಯಾಂಕ್, ಗೃಹ ಫೈನಾನ್ಸ್ ಗಳಲ್ಲದೆ, ಕಾರ್ಬನ್ ಕಂಪನಿಗಳಾದ ಫಿಲಿಪ್ಸ್ ಕಾರ್ಬನ್, ಗೋವಾ ಕಾರ್ಬನ್, ಗ್ರಾಫೈಟ್ ಕಂಪನಿಗಳಾದ ಎಚ್ ಈಜಿ ಮತ್ತು ಗ್ರಾಫೈಟ್ ಇಂಡಿಯಾ ಅತಿ ಅಲ್ಪ ಸಮಯದಲ್ಲಿಯೇ ಅತಿ ಹೆಚ್ಚಿನ ರಭಸದ ಏರಿಳಿತಗಳ ಪ್ರಭಾವ ಕಂಡಿದೆ.

ಬಜೆಟ್ ಎಫೆಕ್ಟ್: ಷೇರುಪೇಟೆಯಲ್ಲಿ ಧನಾತ್ಮಕ ಸಂಚಲನ..ಬಜೆಟ್ ಎಫೆಕ್ಟ್: ಷೇರುಪೇಟೆಯಲ್ಲಿ ಧನಾತ್ಮಕ ಸಂಚಲನ..

ಇನ್ನು ಎಸಿಸಿ, ಲಾರ್ಸನ್ ಅಂಡ್ ಟೋಬ್ರೋ, ಮಾರುತಿ ಸುಜುಕಿ, ಅಶೋಕ ಲೇಲ್ಯಾಂಡ್, ರಿಲಯನ್ಸ್ ಇಂಡಸ್ಟ್ರೀಸ್ ಮುಂತಾದವು ಪ್ರದರ್ಶಿಸಿದ ಹೆಚ್ಚಿನ ಅಸ್ಥಿರತೆ ಮತ್ತು ಟ್ರೆಂಡ್ ಎಂಬುದನ್ನು ಗುರುತಿಸಿಕೊಳ್ಳಲಾಗದ ರೀತಿಯ ಚಲನೆಯು ಹೂಡಿಕೆದಾರರನ್ನು, ವಹಿವಾಟುದಾರರನ್ನು ನಿರಾಸೆಗೊಳಿಸಿದೆ. ತಿರುಮಲೈ ಕೆಮಿಕಲ್ಸ್, ಕೆಸೊರಂ ಇಂಡಸ್ಟ್ರೀಸ್, ಇಂಫೀಬೀಮ್, ವಕ್ರಾಂಗಿ, ಬಾಂಬೆ ರೇಯಾನ್ ಕಾರ್ಪೊರೇಷನ್, ರಿಲಯನ್ಸ್ ಇನ್ಫ್ರಾ ಭಾರಿ ಕುಸಿತದಿಂದ ಚೇತರಿಸಿಕೊಳ್ಳುವ ಸಾಧ್ಯತೆ ಅತಿ ವಿರಳ ಎನ್ನುವಂತಿದೆ. ಈ ಎಲ್ಲಾ ಬೆಳವಣಿಗೆಗಳು ಹೂಡಿಕೆದಾರರನ್ನು ಕಂಗಾಲಾಗಿಸಿದೆ.

ನಿಶ್ಚಿತ ಆದಾಯ ಯೋಜನೆಗಳತ್ತ ಹೊರಳಿದ್ದಾರೆ

ನಿಶ್ಚಿತ ಆದಾಯ ಯೋಜನೆಗಳತ್ತ ಹೊರಳಿದ್ದಾರೆ

ಈ ಪರಿಸ್ಥಿತಿಯ ಕಾರಣಕ್ಕೆ ಹೂಡಿಕೆದಾರರು ನಿಶ್ಚಿತ ಆದಾಯದ ಯೋಜನೆಗಳತ್ತ ಹೊರಳಿದ್ದಾರೆ. ಈ ನಿಶ್ಚಿತ ಆದಾಯದ ಯೋಜನೆಯ ಬೇಟೆಯಲ್ಲಿ ಹೆಚ್ಚಿನ ಎಚ್ಚರ ಅಗತ್ಯವಿದೆ. ಹಿಂದೆ 80ರ ದಶಕದಲ್ಲಿ ನಿವೃತ್ತಿ ಹೊಂದಿದವರು ಮೊದಲು ಹೂಡಿಕೆ ಮಾಡುತ್ತಿದ್ದುದು ಠೇವಣಿಯಾಗಿ, ಪ್ರಮುಖವಾಗಿ ಮದ್ರಾಸ್ ಮೋಟಾರ್ ಫೈನಾನ್ಸ್ ಗ್ಯಾರಂಟಿ (MMFG ) ಮತ್ತು ಸುಂದರಂ ಫೈನಾನ್ಸ್ ಗಳಲ್ಲಿ. ಅದರಲ್ಲಿ ಇಂದಿಗೂ ಸುಂದರಂ ಫೈನಾನ್ಸ್ ಯಶಸ್ವಿಯಾಗಿ ನಡೆಯುತ್ತಿದೆ. ಆ ಸಂದರ್ಭದಲ್ಲಿ ಕರ್ನಾಟಕ ಬಾಲ್ ಬೇರಿಂಗ್ಸ್, ಡೈನಾ ಫೋರ್ಜ್, ದೀಪಕ್ ಫರ್ಟಿಲೈಜರ್ಸ್ ಅವರ ಮಹಾಧನ್ ಎಂಬ ಡಿಬೆಂಚರುಗಳು ಸಹ ವಿತರಣೆಯಾದವು. ಅವುಗಳಲ್ಲಿ ಸದ್ಯ ದೀಪಕ್ ಫರ್ಟಿಲೈಜರ್ಸ್ ಕಂಪನಿ ಮಾತ್ರ ಕಾರ್ಯನಿರ್ವಹಿಸುತ್ತಿದೆ.

ಡಿಬೆಂಚರುಗಳ ಮೂಲಕ ಸಂಪನ್ಮೂಲ ಸಂಗ್ರಹ

ಡಿಬೆಂಚರುಗಳ ಮೂಲಕ ಸಂಪನ್ಮೂಲ ಸಂಗ್ರಹ

ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ಡಿಪಾಜಿಟ್ಟುಗಳು ತಮ್ಮ ಗುರುತನ್ನು ಕಳೆದುಕೊಳ್ಳುತ್ತಿದ್ದರೂ ಅನೇಕ ಕಂಪನಿಗಳು ಡಿಬೆಂಚರುಗಳ ಮೂಲಕ ತಮ್ಮ ಸಂಪನ್ಮೂಲ ಸಂಗ್ರಹಣೆಯನ್ನು ಮಾಡುತ್ತಿವೆ. ಕೆಲವು ಖಾಸಗಿ ಕಂಪನಿಗಳು ನಿರಂತರವಾಗಿ ಹೊಸ ಹೊಸ ಯೋಜನೆಗಳ ಮೂಲಕ ಪ್ರಯತ್ನಿಸುತ್ತಿವೆ. ಈ ಮಧ್ಯೆ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಕಂಪನಿಗಳು, ಸಹ ತಮ್ಮ ಬಂಡವಾಳದ ಅಗತ್ಯಕ್ಕಾಗಿ ವಿವಿಧ ನಮೂನೆಯ ಅಂದರೆ ಪರ್ಪೆಚುಯಲ್ ಬಾಂಡ್, ನಾನ್ ಕನ್ವರ್ಟಬಲ್ ಡಿಬೆಂಚರುಗಳು ಮುಂತಾದ ಸಾಲಪತ್ರಗಳ ಮೂಲಕ ಸಂಪನ್ಮೂಲ ಸಂಗ್ರಹಣೆಗೆ ಮುಂದಾಗಿವೆ.

ಈ 12 ಆದಾಯಗಳಿಗೆ ತೆರಿಗೆ ಕಟ್ಟಬೇಕಾಗಿಲ್ಲಈ 12 ಆದಾಯಗಳಿಗೆ ತೆರಿಗೆ ಕಟ್ಟಬೇಕಾಗಿಲ್ಲ

ಷೇರು ವಹಿವಾಟು ಕೇಂದ್ರದಲ್ಲಿ ವಹಿವಾಟು

ಷೇರು ವಹಿವಾಟು ಕೇಂದ್ರದಲ್ಲಿ ವಹಿವಾಟು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶೇ 9.56 ಮತ್ತು 9.37, ವಿಜಯಾ ಬ್ಯಾಂಕ್ ಶೇ 10.49, ಕರ್ನಾಟಕ ಬ್ಯಾಂಕ್ ಶೇ 12, ಇಂಡಿಯನ್ ಓವರ್ಸಿಸ್ ಬ್ಯಾಂಕ್ ಶೇ 11.7ರ ಬಡ್ಡಿದರದ ಸಾಲಪತ್ರಗಳು ಮುಖಬೆಲೆ ಅಥವಾ ಸ್ವಲ್ಪ ಪ್ರೀಮಿಯಂ ನಲ್ಲಿ ದೊರೆತರೆ, ಎಚ್ ಡಿಎಫ್ ಸಿ ಬ್ಯಾಂಕ್ ಶೇ 8.85, ಯೆಸ್ ಬ್ಯಾಂಕ್ ಶೇ 9.50, ಬ್ಯಾಂಕ್ ಆಫ್ ಬರೋಡ ಶೇ 8.65 ಬಡ್ಡಿ ನೀಡುವ ಸಾಲಪತ್ರಗಳು ಪ್ರಮುಖವಾಗಿವೆ. ಖಾಸಗಿ ಕಂಪನಿಗಳಾದ ದಿವಾನ್ ಹೌಸಿಂಗ್ ಫೈನಾನ್ಸ್, ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್, ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್, ಈಸಿಎಲ್ ಫೈನಾನ್ಸ್, ಮನ್ನಾಪುರಮ್ ಫೈನಾನ್ಸ್, ಶ್ರೇಯ್ ಇನ್ಫ್ರಾ ಕಂಪನಿಗಳ ಸಾಲಪತ್ರಗಳು ಸಹ ತಮ್ಮ ಎನ್ ಸಿಡಿ ಯೋಜನೆಗಳನ್ನು ಜಾರಿಗೊಳಿಸಿವೆ ಮತ್ತು ಈ ಡಿಬೆಂಚರುಗಳಲ್ಲಿ ಕೆಲವು ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತವೆ.

ತ್ವರಿತ ಗತಿಯಲ್ಲಿ ಹಣ ಮಾಡಲು ಯತ್ನಿಸಿ ನಷ್ಟ

ತ್ವರಿತ ಗತಿಯಲ್ಲಿ ಹಣ ಮಾಡಲು ಯತ್ನಿಸಿ ನಷ್ಟ

ಬಡ್ಡಿ ದರ, ಕಂಪನಿಗಳ ಘನತೆ, ಆರ್ಥಿಕ ಸದೃಢತೆ ಮುಂತಾದ ಅಂಶಗಳ ಮೇಲೆ ಕೆಲವು ಮುಖಬೆಲೆಗಿಂತ ಕಡಿಮೆ ಬೆಲೆಗೆ, ಕೆಲವು ಹೆಚ್ಚಿನ ಬೆಲೆಗೆ ವಹಿವಾಟಾಗುತ್ತಿರುತ್ತವೆ. ಹೆಚ್ಚಿನವರು ಸಿನಿಮೀಯ ಶೈಲಿಯಲ್ಲಿ, ತ್ವರಿತವಾಗಿ ಹಣ ಮಾಡಲು ಪ್ರಯತ್ನಿಸಿ ಹಣ ಕಳೆದುಕೊಳ್ಳುವರು. ಹಣ ಕರಗುವ ವೇಗ ಕಲ್ಪನಾತೀತವಾಗಿದೆ. ಡಿಬೆಂಚರುಗಳಲ್ಲಿಯೂ ಸಹ ಅಪಾಯವಿಲ್ಲ ಎಂಬುದಿಲ್ಲ. ಮೂಲವಾಗಿ ಕಂಪನಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಲ್ಲಿ, ಕಾರ್ಪೊರೇಟ್ ನೀತಿ ಪಾಲನೆಯಲ್ಲಿ ಲೋಪವಿಲ್ಲದೆ, ತನ್ನ ಘನತೆಗೆ ಕುಂದು ಬಾರದ ರೀತಿಯಲ್ಲಿದ್ದಲ್ಲಿ ಪೇಟೆಯು ಬೆಂಬಲವಾಗಿರುತ್ತದೆ.

ಐಎಲ್ ಅಂಡ್ ಎಫ್ ಎಸ್ ನಲ್ಲಿ ತೊಡಗಿಸಿರುವ ಕಾರ್ಪೊರೇಟ್ ಗಳಿಗೆ ಅಪಾಯ

ಐಎಲ್ ಅಂಡ್ ಎಫ್ ಎಸ್ ನಲ್ಲಿ ತೊಡಗಿಸಿರುವ ಕಾರ್ಪೊರೇಟ್ ಗಳಿಗೆ ಅಪಾಯ

ಒಂದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿಯು ತನ್ನಲ್ಲಿರುವ ಮೀಸಲು / ಹೆಚ್ಚುವರಿ ಹಣವನ್ನು ಬೇರೊಂದು ಕಂಪನಿಯಲ್ಲಿ ತೊಡಗಿಸಿದ್ದು, ಆ ಕಂಪನಿ ಅಪಾಯದಲ್ಲಿ ಸಿಲುಕಿದರು ಸಹ ಕಂಪನಿಯ ಸ್ವಾಸ್ಥ್ಯವನ್ನು ಹಾಳುಗೆಡುವುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ಈಗ ಗೊಂದಲಮಯ ವಾತಾವರಣದಲ್ಲಿರುವ, ರೂ. 91 ಸಾವಿರ ಕೋಟಿಯಷ್ಟು ಹಗರಣದಲ್ಲಿದೆ ಎಂದು ಅಂದಾಜಿಸಲಾಗಿರುವ ಐಎಲ್ ಅಂಡ್ ಎಫ್ ಎಸ್ ನಲ್ಲಿ ತೊಡಗಿಸಿರುವ ಇತರೆ ಕಾರ್ಪೊರೇಟ್ ಗಳು ಅಪಾಯವನ್ನೆದುರಿಸುತ್ತಿವೆ. ಅದೇ ಸ್ವಲ್ಪ ಅನುಮಾನಾಸ್ಪದವಾದ ಬೆಳವಣಿಗೆ ಅಥವಾ ಸುದ್ದಿಯು ಆ ಕಂಪನಿಯ ಡಿಬೆಂಚರುಗಳನ್ನು ಹಾಟ್ ಪೊಟಾಟೋ ತರಹ ಕಂಡು ಬಂದು, ಬಂಡವಾಳವನ್ನು ಕರಗಿಸಿಬಿಡುವುದು.

ಡಿಎಚ್ ಎಫ್ ಎಲ್ ಉದಾಹರಣೆ ನಮ್ಮೆದುರು ಇದೆ

ಡಿಎಚ್ ಎಫ್ ಎಲ್ ಉದಾಹರಣೆ ನಮ್ಮೆದುರು ಇದೆ

ಇದಕ್ಕೆ ಸೂಕ್ತವಾದ ಉದಾಹರಣೆ ಎಂದರೆ ಈ ವಾರ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಡಿಬೆಂಚರುಗಳು ಜನವರಿ ತಿಂಗಳ ಅಂತ್ಯದಲ್ಲಿ ಭಾರಿ ಕುಸಿತಕ್ಕೊಳಗಾದವು. ರೂ. 1,000 ಮುಖಬೆಲೆಯ ವಿವಿಧ ಕೂಪನ್ ದರ ಅಂದರೆ ಶೇ 8.56, 8.90 , 9 ಮುಂತಾದವುಗಳು ಷೇರಿನ ಬೆಲೆ ಕುಸಿಯುತ್ತಿದ್ದಂತೆ ಭಾರಿ ಮಾರಾಟದ ಒತ್ತಡಕ್ಕೊಳಗಾದವು. ರೂ.900 ರ ಸಮೀಪವಿದ್ದ ಡಿಬೆಂಚರುಗಳು ಈ ಒತ್ತಡದಿಂದ ರೂ.600ರವರೆಗೂ ಕುಸಿದಿರುವುದು ಈ ವಿಧದ ಹೂಡಿಕೆಯಲ್ಲಿ ಅಡಕವಾಗಿರುವ ಅಪಾಯದ ಮಟ್ಟವನ್ನು ತಿಳಿಸುತ್ತದೆ.

English summary

Which is the safest investment in money market?

Which is the safest investment whether Debenture, NCD, Bonds, Shares, Fixed deposits? Here is an analysis by market expert K.G.Krupal.
Story first published: Monday, February 4, 2019, 20:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X