ಇಪಿಎಫ್ ನಾಮಿನೇಷನ್ ಆನ್ಲೈನ್ ಮೂಲಕ ಸಲ್ಲಿಸುವುದು ಹೇಗೆ?

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‍ಒ) ತನ್ನ ಚಂದಾದಾರರಿಗೆ ಆನ್‍ಲೈನ್‍ ಮೂಲಕ ನಾಮಿನೇಷನ್ ವಿವರ ಸಲ್ಲಿಸುವ ಅವಕಾಶ ಕಲ್ಪಿಸಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‍ಒ) ತನ್ನ ಚಂದಾದಾರರಿಗೆ ಆನ್‍ಲೈನ್‍ ಮೂಲಕ ನಾಮಿನೇಷನ್ ವಿವರ ಸಲ್ಲಿಸುವ ಅವಕಾಶ ಕಲ್ಪಿಸಿದೆ.
ಖಾತೆದಾರರು ಆಕಸ್ಮಿಕವಾಗಿ ಸಾವಿಗೀಡಾದಾಗ ನಾಮನಿರ್ದೇಶನ ಇದ್ದರೆ ಮಾತ್ರ ಅಂಥ ವ್ಯಕ್ತಿಗೆ ಹಣ ಪಡೆಯಲು ಅವಕಾಶವಿರುತ್ತದೆ. ಆದ್ದರಿಂದ ಇಪಿಎಫ್ ಚಂದಾದಾರರು ನಾಮನಿರ್ದೇಶನ ಮಾಡಬೆಕಾಗುತ್ತದೆ. ಮೊಬೈಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಇಪಿಎಫ್ ಆನ್ಲೈನ್ ನಾಮನಿರ್ದೇಶನ

ಇಪಿಎಫ್ ಆನ್ಲೈನ್ ನಾಮನಿರ್ದೇಶನ

ಮೊದಲು ಇಪಿಎಫ್ಒ ವೆಬ್ಸೈಟ್ (https://unifiedportal-mem.epfindia.gov.in/memberinterface/) ಗೆ ನಿಮ್ಮ ಯುಎಎನ್ ನಂಬರ್ ಹಾಗು ಪಾಸ್ವರ್ಡ್ ನ್ನು ಟೈಪ್ ಮಾಡಿ ಮೂಲಕ ಲಾಗಿನ್ ಆಗಬೇಕು.
- ನಂತರ ಮ್ಯಾನೇಜ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಬಳಿಕ ಇ-ನಾಮಿನೇಷನ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
- ಅಲ್ಲಿ ಖಾತೆದಾರನ ಯುಎಎನ್, ಹೆಸರು, ಜನ್ಮದಿನಾಂಕ, ಲಿಂಗ ಇತ್ಯಾದಿ ವಿವರಗಳು ಕಾಣಿಸುತ್ತವೆ.
- ಅಲ್ಲಿ ಪ್ರಸ್ತುತ ಮತ್ತು ಶಾಶ್ವತ ವಿಳಾಸ ನಮೂದಿಸಬೇಕು. ನಂತರ ಎಸ್ ಕ್ಲಿಕ್ ಮಾಡಿ ಫ್ಯಾಮಿಲಿ ಡಿಕ್ಲೇರೇಷನ್ ಮಾಡಬೇಕು.

ನಾಮಿನಿ ಆಯ್ಕೆ

ನಾಮಿನಿ ಆಯ್ಕೆ

Add Family Meember ಆಪ್ಷನ್ ಮೇಲೆ ಕ್ಲಿಕ್ ಮಾಡಿ ಯಾರನ್ನು ನಾಮ ನಿರ್ದೇಶಿತರನ್ನಾಗಿಸಬೇಕೋ ಅವರ ಹೆಸರನ್ನು ನಮೂದಿಸಬೇಕು. ಅವರ ಹೆಸರು, ಜನ್ಮ ದಿನಾಂಕ ಇತ್ಯಾದಿ ವಿವರಗಳನ್ನು ಅಲ್ಲಿ ದಾಖಲಿಸಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ಹೆಸರನ್ನು ನಾಮಿನೇಷನ್ ಮಾಡಬೇಕಾದಲ್ಲಿ "ಆ್ಯಡಿಂಗ್ ದಿ ರೋ" ಎಂಬಲ್ಲಿಗೆ ಹೋಗಿ ಹೆಚ್ಚಿನ ಹೆಸರನ್ನು ನಮೂದಿಸಬೇಕು. ನಂತರ ನಾಮಿನೇಷನ್ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಿ ಯಾವ ನಾಮಿನಿಗೆ ಎಷ್ಟು ಪಾಲನ್ನು ನೀಡಬೇಕು ಎಂಬುದನ್ನು ನಮೂದಿಸಬೇಕು.

ಕೊನೆ ಹಂತ

ಕೊನೆ ಹಂತ

Save EPF nomination ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ಒಟಿಪಿ ಜನರೇಟ್ ಮಾಡಿದ ನಂತರ ಅದು ನಿಮ್ಮ ನೋಂದಾಯಿತ ಮೊಬೈಲ್ ಗೆ ಬರುತ್ತದೆ. ಒಟಿಪಿ ಸಂಖ್ಯೆಯನ್ನು ನಮೂದಿಸಿ. ಹೀಗೆ ಈ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿದ ನಂತರ ಎಪಿಎಫ್ಒ ಗೆ ಇ-ನಾಮನಿರ್ದೇಶರನ್ನು ನೋಂದಾಯಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+