ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನ ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ತರಲಾಗುತ್ತಿದೆ. ಟ್ರಾಯ್ ಈ ಮೊದಲು ಫೆಬ್ರವರಿ 1ಕ್ಕೆ ಗಡುವು ನೀಡಿತ್ತು. ನಂತರ ಟ್ರಾಯ್ ಗಡುವು ವಿಸ್ತರಿಸಿದ್ದು, ಇದೀಗ ಮಾರ್ಚ್ 31ರವರೆಗೆ ಅವಕಾಶ.
ಗ್ರಾಹಕರು ತಮ್ಮ ನೆಚ್ಚಿನ ಚಾನೆಲ್ ಗಳನ್ನು ನಿರ್ಧರಿಸಲು ಇನ್ನು ಕೆಲವೇ ದಿನಗಳ ಬಾಕಿ ಉಳಿದಿವೆ! ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನ ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ತರಲಾಗುತ್ತಿದೆ. ಟ್ರಾಯ್ ಈ ಮೊದಲು ಫೆಬ್ರವರಿ 1ಕ್ಕೆ ಗಡುವು ನೀಡಿತ್ತು. ನಂತರ ಟ್ರಾಯ್ ಗಡುವು ವಿಸ್ತರಿಸಿದ್ದು, ಇದೀಗ ಮಾರ್ಚ್ 31ರವರೆಗೆ ಅವಕಾಶ ಕಲ್ಪಿಸಿದೆ.
ಟ್ರಾಯ್ ಹೊಸ ನಿಯಮದಲ್ಲಿ ಏನಿದೆ?
ಟ್ರಾಯ್ ಹೊಸ ನಿಯಮ ಕೇಬಲ್ ಹಾಗೂ ಡಿಟಿಹೆಚ್ ಮೇಲೆ ಪ್ರಭಾವ ಬೀರಲಿದೆ. ಕೇಬಲ್ ಟಿವಿ ಮತ್ತು ಡಿಟಿಎಚ್ ಅಪರೇಟರ್ ಗಳಿಗೆ ಅನ್ವಯವಾಗುವಂತೆ ಮನಸ್ಸಿಗೆ ಬಂದಂತೆ ಶುಲ್ಕ ವಸೂಲಿ ಮಾಡುವಂತಿಲ್ಲ. ಬದಲಾಗಿ ಗ್ರಾಹಕರಿಗೆ ಟಿವಿ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿದೆ. ಗ್ರಾಹಕರು ತಾವು ಇಷ್ಟಪಡುವ ಚಾನೆಲ್ ಗಳನ್ನು ನೋಡಬಹುದು ಹಾಗು ಅವುಗಳಿಗೆ ಮಾತ್ರ ಶುಲ್ಕ ಕಟ್ಟಬಹುದು. ಇದಕ್ಕಾಗಿ ಎಲ್ಲಾ ಪ್ರಸಾರಕರು ತಮ್ಮ ಚಾನೆಲ್ ಗಳನ್ನು ಲಭ್ಯವಾಗುವಂತೆ ಮಾಡಬೇಕಾಗುತ್ತದೆ.
ಗ್ರಾಹಕರ ಇಚ್ಛೆಯೇ ಅಂತಿಮ
ಗ್ರಾಹಕರು ತಮಗಿಷ್ಟವಾಗುವ ಚಾನೆಲ್ ಆಯ್ಕೆಗೆ ಅವಕಾಶ ಹಾಗು ಚಾನೆಲ್ ಗೆ ತಕ್ಕಂತೆ ಹಣ ಪಾವತಿ ಮಾಡಬಹುದಾಗಿದೆ. ಕೇಬಲ್ ಆಪರೇಟರ್ಸ್ ಮನಸ್ಸಿಗೆ ಬಂದಂತೆ ಶುಲ್ಕ ವಸೂಲಿ ಮಾಡುವಂತಿಲ್ಲ. ಟಿವಿ ಸ್ಕ್ರೀನ್ ಮೇಲೆಯೇ ಚಾನೆಲ್ ದರ ಇರಲಿದೆ.
ಟ್ರಾಯ್ ವೆಬ್ ಅಪ್ಲಿಕೇಷನ್
ಗ್ರಾಹಕರಿಗೆ ಅನುಕೂಲದ ದೃಷ್ಟಿಯಿಂದ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ವೆಬ್ ಅಪ್ಲಿಕೇಷನ್ ಶುರು ಮಾಡಿದೆ. ಇಲ್ಲಿ ನಿಮ್ಮ ಇಷ್ಟದ ಯೋಜನೆಯನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಅದಕ್ಕೆ ಮಾತ್ರ ಹಣ ಪಾವತಿ ಮಾಡಬೇಕು. ಗ್ರಾಹಕರು https://channel.trai.gov.in/ ಲಿಂಕ್ ಗೆ ಹೋಗಬೇಕು. ಅಲ್ಲಿ Get Started ಕ್ಲಿಕ್ ಮಾಡಿ. ಅಲ್ಲಿ ಕೆಲ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದಕ್ಕೆ ಉತ್ತರಿಸಿ, ನೆಚ್ಚಿನ ಚಾನೆಲ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಬೇಕು.
ಬೇಸಿಕ್ ಪ್ಯಾಕ್ ನಲ್ಲಿ 100 ಚಾನೆಲ್ ಉಚಿತ
ಟ್ರಾಯ್ ಹೊಸ ನಿಯಮದ ಅಬ್ವಯ ಮಾರ್ಚ್ ೩೧ರ ಒಳಗೆ ಗ್ರಾಹಕರು ತಮ್ಮ ಇಷ್ಟದ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗ್ರಾಹಕರಿಗೆ 100 ಏರ್ ಚಾನೆಲ್ ಗಳಿಗೆ ಉಚಿತವಾಗಿ ಆಯ್ಕೆ ಮಾಡಲು ಸ್ವಾತಂತ್ರ್ಯ ನೀಡಲಾಗುತ್ತದೆ. 100 ರ ನಂತರ, ಗ್ರಾಹಕರು ಆಯ್ಕೆ ಮಾಡುವ ಚಾನಲ್ ಆಧರಿಸಿ ಪಾವತಿಸಬೇಕಾಗುತ್ತದೆ. ಈ ಹಿಂದೆ ಉಚಿತ ಚಾನೆಲ್ ಗಳ ಹೆಸರಿನ ನಂತರ ಸೇವಾ ಪೂರೈಕೆದಾರರು ಗ್ರಾಹಕರಿಗೆ ಹಣ ಚಾರ್ಜ್ ಮಾಡುತ್ತಿದ್ದರು.
ಶೇ. 18ರಷ್ಟು ಜಿಎಸ್ಟಿ ದರ
ಟ್ರಾಯ್ ಹೊಸ ನಿಯಮ ಜಾರಿಗೊಳಿಸಿದ ನಂತರ, ಕೇಬಲ್ ಮತ್ತು DTH ಗ್ರಾಹಕರು ನೋಡಬೇಕಾದ ಚಾನಲ್ ಗಳಿಗೆ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಬೇಸಿಕ್ ಪ್ಯಾಕೇಜ್ (Base pack) ನಲ್ಲಿ ಮಾಸಿಕ ರೂ. 130 ಶುಲ್ಕ ಪಾವತಿಸಿ 100 ಟಿವಿ ಚಾನೆಲ್ ಗಳನ್ನು ವೀಕ್ಷಿಸಬಹುದು. ಇದಕ್ಕೆ ಶೇ.18ರಷ್ಟು ಜಿಎಸ್ಟಿ ಸೇರಿ ರೂ. 153 ಪಾವತಿಸಬೇಕಿದೆ. ಎಲ್ಲಾ 25 ದೂರದರ್ಶನ ಚಾನೆಲ್ ಗಳು ಬೇಸ್ ಪ್ಯಾಕ್ ನಲ್ಲಿ ಲಭ್ಯವಿರುತ್ತವೆ. ಉಳಿದ 75 ತಮ್ಮ ಇಷ್ಟದ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಲಬಹುದು.
ಕನ್ನಡದ ಚಾನೆಲ್ ದರ
ಹೊಸ ಕೇಬಲ್ ಮತ್ತು ಡಿಟಿಹೆಚ್ ನಿಯಮಗಳ ಪ್ರಕಾರ, ಕನ್ನಡದ ಪೇಯ್ಡ್ ಚಾನೆಲ್ ಗಳ ದರ ಇಂತಿದೆ.
ಉದಯ ಕಾಮಿಡಿ ರೂ. 6
ಉದಯ ಮೂವೀಸ್ ರೂ. 16
ಉದಯ ಮ್ಯೂಸಿಕ್ ರೂ. 6
ಉದಯ ಟಿವಿ ರೂ. 17
ಕಲರ್ಸ್ ಕನ್ನಡ ರೂ. 19
ಸ್ಟಾರ್ ಸುವರ್ಣ ರೂ. 19
ನ್ಯೂಸ್ 18 ಕನ್ನಡ 25 ಪೈಸೆ
ಚಿಂಟು ಟಿವಿ ಕನ್ನಡ ರೂ. 6
ಜೀ ಕನ್ನಡ ರೂ. 19
ಸುವರ್ಣ ಪ್ಲಸ್ ಚಾನಲ್ ರೂ. 5
ಡಿಸ್ಕವರಿ ಚಾನೆಲ್ ಗೆ ರೂ. 4
ಡಿಸ್ಕವರಿ ಕಿಡ್ಸ್ ಚಾನೆಲ್ 3 ರೂ.
ಅನಿಮಲ್ ಪ್ಲಾನೆಟ್ ರೂ. 24
ಸ್ಟಾರ್ ಸ್ಪೋರ್ಟ್ಸ್ ಕನ್ನಡ ರೂ. 19
ಸೋನಿ ಇ.ಎಸ್.ಪಿ.ಎನ್. ಹೆಚ್ಡಿ ರೂ. 7
ಸೋನಿ ಇ.ಎಸ್.ಪಿ.ಎನ್ ರೂ. 5
ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ರೂ. 4
ಚಾನೆಲ್ ಸೆಲೆಕ್ಟರ್ ಆಪ್ (Channel Selector app)
ಟ್ರಾಯ್ ಚಾನೆಲ್ ಸೆಲೆಕ್ಟರ್ ಆಪ್ ಅನ್ನು ಪರಿಚಯಿಸಿದ್ದು, ಬಳಕೆದಾರರು ತಮ್ಮ ಕೇಬಲ್ ಟಿವಿ ಅಥವಾ ಡಿಟಿಎಚ್ ಅಡಿಯಲ್ಲಿನ 100 ಅಥವಾ ಅದಕ್ಕಿಂತ ಹೆಚ್ಚು ಚಾನೆಲ್ ಗಳ ಲೆಕ್ಕಾಚಾರ ಮಾಡಲು ಸಹಾಯವಾಗುವಂತೆ 'ಚಾನೆಲ್ ಸೆಲೆಕ್ಟರ್ ಅಪ್ಲಿಕೇಶನ್' ಅನ್ನು ಟ್ರಾಯ್ ಬಿಡುಗಡೆ ಮಾಡಿದೆ. ಈ ಆಪ್ ಮೂಲಕ ಕೇಬಲ್ ಟಿವಿ ಬಿಲ್ ಮತ್ತು ನಿಯಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಲಿದೆ.
ಕೇಬಲ್ ಟಿವಿ, ಡಿಟಿಎಚ್‌ಗಳಿಗೆ ಗಂಡಾಂತರ!
ಡಿಜಿಟಲೀಕರಣದ ವ್ಯಾಪ್ತಿ ದೊಡ್ಡದಾಗುತ್ತಿರುವ ಇಂದಿನ ದಿನಗಳಲ್ಲಿ,, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್‌ಸ್ಟಾರ್, ವೂಟ್ ಸೇರಿದಂತೆ ಒಟಿಟಿ (ಓವರ್-ದ-ಟಾಪ್) ಸೇವೆಗಳು ಜನಪ್ರಿಯವಾಗುತ್ತಿವೆ. ವಿಶ್ಲೇಷಕರ ಪ್ರಕಾರ, ಮುಂದಿನ ದಿನಗಳಲ್ಲಿ ಕೇಬಲ್, ಡಿಟಿಎಚ್‌ಗಳಿಗೆ ಸಂಚಕಾರ ತಪ್ಪಿದ್ದಲ್ಲ. ಜನರಿಗೆ ಆಪ್ತವಾಗಿದ್ದ ದುರದರ್ಶನ ಮತ್ತು ಅದಕ್ಕೆ ಜೀವ ತುಂಬುತ್ತಿದ್ದ ಕೇಬಲ್, ಡಿಟಿಎಚ್ ಗಳು ಅಡಕತ್ತರಿಯಲ್ಲಿವೆ.
ಒಟಿಟಿ ಮೂಲಕ ವೀಕ್ಷಣೆಗೆ ಅವಕಾಶ
ಟಿ.ವಿಗಳಲ್ಲಿ ಬರುವ ಕಾರ್ಯಕ್ರಮಕ್ಕೆ ಕೆಲಸಗಳನ್ನು ಬಿಟ್ಟು ಕಾಯುತ್ತಾ ಕೂರಬೇಕಾಗಿಲ್ಲ. ಸಮಯ ಹೊಂದಾಣಿಕೆಯಾಗದೇ ನೆಚ್ಚಿನ ಕಾರ್ಯಕ್ರಮ ಮಿಸ್ ಆಯಿತು ಎನ್ನಬೇಕಿಲ್ಲ. ಎಲ್ಲವನ್ನೂ ಹೊಂದಿಕೆಯಾಗುವ ಸಮಯದಲ್ಲಿ ಒಟಿಟಿ ಮೂಲಕ ವೀಕ್ಷಿಸಲು ಅವಕಾಶವಿದೆ. ಅಲ್ಲದೇ ಹೊಸ ಹೊಸ ಸಿನಿಮಾಗಳನ್ನು ನೆಟ್‌ಫ್ಲೆಕ್ಸ್‌ನಂಥ ಆಪ್ ಮೂಲಕ ಲಭ್ಯವಿರುತ್ತವೆ.
ಕೇಬಲ್, ಟಿಟಿಎಚ್ ಭವಿಷ್ಯ ಅಡಕತ್ತರಿಯಲ್ಲಿ!
ನಮ್ಮ ದೇಶದಲ್ಲಿ ಒಟಿಟಿ ಕಂಪನಿಗಳು ಇತ್ತೀಚೆಗೆ ಜನಪ್ರಿಯತೆ ಪಡೆಯುತ್ತಿರುವುದರಿಂದ ಅವುಗಳ ಬಳಕೆ ತ್ವರಿತಗತಿಯಲ್ಲಿ ವಿಸ್ತಾರವಾಗುತ್ತಿದೆ. ಆದರೆ ಜನರು ಟಿವಿ ಸೇವೆಗಳನ್ನು ನಿರಾಕರಿಸುವ ಮಟ್ಟಕ್ಕೆ ಇನ್ನೂ ಬಂದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕೇಬಲ್ ಮತ್ತು ಟಿಟಿಎಚ್ ಸೇವೆಗಳು ಅಪ್ರಸ್ತುತವಾಗುವ ಸಾಧ್ಯತೆಯನ್ನು ತಜ್ಞರು ಅಲ್ಲಗಳೆಯುವುದಿಲ್ಲ.


Click it and Unblock the Notifications