ಯಾವ ಕಂಪೆನಿ ಷೇರು ಖರೀದಿಸಿದರೆ ಉತ್ತಮ ಎಂಬ ಪ್ರಶ್ನೆ ಹೂಡಿಕೆದಾರರಲ್ಲಿ ಸಾಮಾನ್ಯವಾಗಿ ಮೂಡುವ ಪ್ರಶ್ನೆ.ಚ್ಷೇರುಪೇಟೆಯ ಹೂಡಿಕೆಯಲ್ಲಿರುವವರು ಹೊಸಬರಾಗಲಿ ಅಥವಾ ಹಳಬರಾಗಲಿ ಎಚ್ ಡಿಎಫ್ ಸಿ, ಲಾರ್ಸನ್ ಅಂಡ್ ಟೊಬ್ರೋ , ಐಟಿಸಿ, ಐಸಿಐಸಿಐ ಬ್ಯಾಂಕ್ ಗಳು ಹೂಡಿಕೆಗೆ ಯೋಗ್ಯವೇ ಎಂದು ವಿಚಾರಿಸಿದಲ್ಲಿ ಸಕಾರಾತ್ಮಕ ಸ್ಪಂದನವಿರುತ್ತದೆ.
ಇದಕ್ಕೆ ಮುಖ್ಯ ಕಾರಣ ಈ ಕಂಪೆನಿಗಳು ಹೂಡಿಕೆದಾರರ ಹಿತವನ್ನು ರಕ್ಷಿಸುವತ್ತ ತಮ್ಮ ಚಟುವಟಿಕೆಯ ಜಾಲವನ್ನು ಹೆಣೆಯುವ ಜಾಣ್ಮೆ ಮತ್ತು ವೃತ್ತಿಪರತೆಯಿಂದ ಮೆರೆದಿವೆ. ಅಲ್ಲದೆ ಈ ಕಂಪೆನಿಗಳು ಷೇರುದಾರರಿಗೆ ಆಕರ್ಷಣೀಯವಾದ ಕಾರ್ಪೊರೇಟ್ ಫಲಗಳನ್ನು ನೀಡಿ, ಅವರ ಹೂಡಿಕೆಯು ನ್ಯಾಯಸಮ್ಮತವಾಗಿದೆ ಎಂಬುದನ್ನು ನಿರೂಪಿಸಿವೆ.
ನಿಮಗೆ ಈ ದಿನ ಒಂದು ನಿರ್ದಿಷ್ಟ ಕಂಪೆನಿಯ ಸಾಧನೆಯ ಪಯಣವನ್ನು ತಿಳಿಸುತ್ತೇನೆ. ಇದು ನಿಮಗೆ ಉದಾಹರಣೆಯೇ ವಿನಾ ಖರೀದಿಸಲು ಶಿಫಾರಸು ಅಲ್ಲ. ಯಾವ ಷೇರನ್ನು ಖರೀದಿಸಬೇಕು ಎಂಬುದು ನಿಮ್ಮ ವೈಯಕ್ತಿಕ ನಿರ್ಧಾರ. ಎಚ್ ಡಿಎಫ್ ಸಿ ಕಂಪೆನಿಯು ಭಾರತದಲ್ಲಿ ಗೃಹನಿರ್ಮಾಣದ ಜಾಗೃತಿ ಮೂಡಿಸುವ ಕಾರ್ಯವನ್ನು ಆರಂಭಿಸಿದ ಮೊದಲ ಕಂಪೆನಿಯಾಗಿದ್ದು, ಹೆಚ್ಚಿನ ಶಿಸ್ತುಬದ್ಧವಾದ ಕಂಪೆನಿ.
ಹೂಡಿಕೆ ಮಾಡುವಾಗ ಈ ಅಂಶಗಳನ್ನು ಗಮನಿಸಿ
ಕಾರ್ಪೊರೇಟ್ ಗವರ್ನನ್ಸ್ ಎಂಬುದು ಇತ್ತೀಚಿಗೆ ಶಾಸನಬದ್ಧ ನಿಯಮವಾಗಿದ್ದರೆ, ಈ ಕಂಪೆನಿ ಆರಂಭದಿಂದಲೂ ಅಳವಡಿಸಿಕೊಂಡು ಬಂದಿದೆ. ಮೂಲಭೂತ ಅಂಶಗಳಿಂದ ಕೂಡಿದ ಹೂಡಿಕೆಯು ದೀರ್ಘಕಾಲೀನವಾಗಿ ಉತ್ತಮ ಫಲ ನೀಡುವುದೆಂಬುದಕ್ಕೆ ಈ ಕಂಪೆನಿಯು ಒಂದು ಉತ್ತಮ ಉದಾಹರಣೆಯಾಗಿದೆ. ಹೂಡಿಕೆಯನ್ನು ಮಾಡುವ ಮೊದಲು ಕಂಪೆನಿಯ ಗುಣಮಟ್ಟ, ಕಂಪೆನಿಯ ಚಟುವಟಿಕೆಯ ವಲಯ, ಆ ಚಟುವಟಿಕೆಗೆ ಇರುವ ವ್ಯಾವಹಾರಿಕ ಬೆಂಬಲ, ಕಂಪೆನಿಯ ಆಡಳಿತ ಮಂಡಳಿಯ ಮನೋಧರ್ಮ ವಿಶೇಷವಾಗಿ ಷೇರುದಾರರ ಬಗ್ಗೆ ಅವರಿಗಿರುವ ಕಾಳಜಿ (ಇದನ್ನು ಕಂಪೆನಿ ಪ್ರಕಟಿಸುವ ಕಾರ್ಪೊರೇಟ್ ಫಲಗಳಾದ ಲಾಭಾಂಶ, ಬೋನಸ್ ಷೇರು ಮುಂತಾದವುಗಳಿಂದ ಮಾಪನ ಮಾಡಬಹುದು) ಮುಂತಾದವುಗಳನ್ನು ಪರಿಶೀಲಿಸಿ ನಿರ್ಧರಿಸಿದಲ್ಲಿ ಹೂಡಿಕೆ ಸ್ವಲ್ಪಮಟ್ಟಿನ ಸುರಕ್ಷತೆ ಕಾಣಲು ಸಾಧ್ಯ.
ಷೇರು ಪೇಟೆಯಲ್ಲಿ ಹಣ ಬೆಳೆಯುವುದಕ್ಕೆ ಉದಾಹರಣೆ
ಇವೆಲ್ಲವನ್ನೂ ಮೈಗೂಡಿಸಿಕೊಂಡಿರುವ ಎಚ್ ಡಿಎಫ್ ಸಿ ಆರಂಭವಾದುದು 1977ರಲ್ಲಿ. ಈ ಕಂಪೆನಿ 1981-82ರಲ್ಲಿ ರು.100ರ ಮುಖಬೆಲೆ ಷೇರಿಗೆ ಶೇ.5 ರಷ್ಟು ಆರಂಭಿಕ ಲಾಭಾಂಶ ನೀಡಿ, ತದನಂತರ ಶೇ.7.5, ಶೇ.10 ಹೀಗೆ ವರ್ಷದಿಂದ ವರ್ಷಕ್ಕೆ ಲಾಭಾಂಶ ಹೆಚ್ಚಿಸಿಕೊಂಡು ಹೋಯಿತು. ರು.100ರ ಮುಖಬೆಲೆಯ ಷೇರು ಸುಮಾರು 2000ನೇ ಇಸವಿಯವರೆಗೂ ಪೇಟೆಯಲ್ಲಿ ನೂರರ ಒಳಗಿತ್ತು. ಉತ್ತಮ ಲಾಭಾಂಶದ ಕಾರಣ ಒಂದು ರೀತಿಯ ಫಿಕ್ಸೆಡ್ ಡೆಪಾಸಿಟ್ ತರಹ ಈ ಷೇರು ಕೊಂಡವರು ಮುಂದೆ ಉತ್ತಮ ಲಾಭವನ್ನು ಪಡೆದುಕೊಂಡರು. ಷೇರುಪೇಟೆಯಲ್ಲಿ ಹಣ ಹೇಗೆ ಬೆಳೆಯುತ್ತದೆ ಎಂಬುದಕ್ಕೆ ಸಾಮಾನ್ಯವಾಗಿ ವಿಶ್ಲೇಷಕರು ಇನ್ಫೋಸಿಸ್ ನ ಉದಾಹರಣೆ ನೀಡುವರು. ಆದರೆ ವಸತಿ ವಲಯದ ಎಚ್ ಡಿಎಫ್ ಸಿ ಕಂಪೆನಿ 1986 ರಲ್ಲಿ 1:2ರ ಅನುಪಾತದ ಹಕ್ಕಿನ ಷೇರನ್ನು ಮುಖಬೆಲೆಯಲ್ಲೇ ವಿತರಿಸಿತು. ಮತ್ತೊಮ್ಮೆ 1:2ರ ಅನುಪಾತದ ಹಕ್ಕಿನ ಷೇರು ವಿತರಿಸಿತು. 1992ರಲ್ಲಿ ರು.400ರ ಮುಖಬೆಲೆಯ ಪೂರ್ಣವಾಗಿ ಇಕ್ವಿಟಿಯಾಗಿ ಪರಿವರ್ತನೆಯಾಗುವ ಡಿಬೆಂಚರ್ ವಿತರಿಸಿತು. 1:1ರ ಅನುಪಾತದ ಬೋನಸ್ ಷೇರನ್ನು ಸಹ ವಿತರಿಸಿದೆ.
ಕೋಟ್ಯಂತರ ರುಪಾಯಿಗಳಾಗುತ್ತದೆ
2002ರಲ್ಲಿ ಷೇರಿನ ಮುಖಬೆಲೆಯನ್ನು ರು.100ರಿಂದ ರು.10 ಕ್ಕೆ ಸೀಳಿದ್ದು, 2010ರಲ್ಲಿ ರು.10 ರಿಂದ ರು.2 ಕ್ಕೆ ಸೀಳಿದೆ. ಅಲ್ಲದೆ ರು.2ರ ಮುಖಬೆಲೆಯ ಷೇರಿನ ಬೆಲೆ ರು.2,000ದ ಹತ್ತಿರವಿದೆ. ಅಂದರೆ ರು.100 ರ ಮುಖಬೆಲೆ ಷೇರು ಈಗ ರು.1,00,000 ಇದ್ದಂತೆ ಆಗಿದೆ. ಬೋನಸ್ ಷೇರು, ಹಕ್ಕಿನ ಷೇರುಗಳನ್ನು ಪರಿಗಣಿಸಿದರೆ ಕೋಟ್ಯಂತರ ರುಪಾಯಿಗಳಾಗುವುದು. ಈ ಷೇರು ಸೆನ್ಸೆಕ್ಸ್ ನ ಅಂಗವಾಗಿದ್ದು, ರು.43ರಷ್ಟು ಏರಿಕೆ ಕಂಡರೆ ಸೆನ್ಸೆಕ್ಸ್ 73ಪಾಯಿಂಟುಗಳಷ್ಟು ಏರಿಕೆ ಕಾಣುತ್ತದೆ. ರು.100ರ ಮುಖಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿದ್ದ ಷೇರು ಈಗ ರು.2ರ ಮುಖಬೆಲೆ ಎರಡು ಸಾವಿರ ರುಪಾಯಿಗಳ ಸಮೀಪಕ್ಕೆ ತಲುಪಿರುವುದು ಬೃಹತ್ ಸಾಧನೆಯಾಗಿದೆ. ಅಲ್ಲದೆ ಈ ಕಂಪೆನಿ ಬೆಳವಣಿಗೆಯಲ್ಲಿ ಯಾವುದೇ ಕಾರ್ಪೊರೇಟ್ ಗವರ್ನನ್ಸ್ ಲೋಪವಿಲ್ಲದಿರುವುದು ಗಮನಾರ್ಹ. ಬದಲಾಗಿ ಹೂಡಿಕೆದಾರರ ಆತ್ಮೀಯತೆಯನ್ನು, ಮೆಚ್ಚುಗೆಯನ್ನು ಪಡೆದುಕೊಂಡಿದೆ.
ಲಕ್ಷಕ್ಕೂ ಹೆಚ್ಚು ಷೇರು ಹೊಂದಿರುವ ಸಾವಿರಕ್ಕೂ ಹೆಚ್ಚು ಮಂದಿ
ಈ ಕಂಪೆನಿಯನ್ನು ಸಂಪೂರ್ಣವಾಗಿ ವೃತ್ತಿಪರರು ನಿರ್ವಹಿಸುತ್ತಿದ್ದು, ಈ ಕಂಪನಿಗೆ ಯಾವುದೇ ಪ್ರವರ್ತಕರ ಭಾಗಿತ್ವವು ಇಲ್ಲದೆ ಶೇ.100ರಷ್ಟು ಸಾರ್ವಜನಿಕರಲ್ಲಿರುವುದು ವಿಶೇಷ. ಮತ್ತೊಂದು ವಿಶೇಷವೆಂದರೆ 2018ರ ಮಾರ್ಚ್ ಅಂತ್ಯದಲ್ಲಿ ಈ ಕಂಪೆನಿಯ ಒಂದು ಲಕ್ಷಕ್ಕೂ ಹೆಚ್ಚಿನ ಷೇರುಗಳನ್ನು ಹೊಂದಿರುವವರು 1,096 ಷೇರುದಾರರಿದ್ದು, ಇದು ಶೇ.90.89 ರಷ್ಟಾಗಿದೆ. ಇದರಲ್ಲಿ ಹೆಚ್ಚು ವಿತ್ತೀಯ ಸಂಸ್ಥೆಗಳಾಗಿರುವುದರಿಂದ ಚಲಾವಣೆಗೆ ಬಾರದೆ, ನಿಶ್ಚೇಷ್ಟಿತವಾಗಿವೆ. ಈ ಕಾರಣದಿಂದಾಗಿ ಹರಿದಾಡುವ ಷೇರುಗಳು ಕಡಿಮೆಯಾಗುವುದರಿಂದ ವಹಿವಾಟಿನ ಗಾತ್ರವು ಸಹ ಮಿತವಾಗಿದೆ. ಹೂಡಿಕೆ ಮಾಡುವಾಗ ಕಂಪೆನಿಗಳು ತಮ್ಮ ಸಾಧನೆಗಿಂತ ಕಡಿಮೆ ದರದಲ್ಲಿ ಷೇರುಗಳು ಲಭ್ಯವಾದರೆ, ಷೇರಿನ ದರವು ಏರಿಕೆ ತಂದು ಲಾಭ ಗಳಿಕೆ ಮಾಡಿಕೊಡುವುದಲ್ಲದೆ ಕಾರ್ಪೊರೇಟ್ ಲಾಭಗಳನ್ನು ಗಳಿಸಿ ಕೊಡಲು ಸಾಧ್ಯ. ಆದರೆ ನೆನಪಿರಲಿ: ಷೇರಿನ ದರ ಗರಿಷ್ಠದಲ್ಲಿದ್ದಲ್ಲಿ ಅದು ಅಲ್ಪಕಾಲೀನ ಹೂಡಿಕೆಗೆ ಮಾತ್ರ ಸೀಮಿತವಾಗಿರಬೇಕು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications