For Quick Alerts
ALLOW NOTIFICATIONS  
For Daily Alerts

ಸುದ್ದಿ ಕುದುರೆ ಮೇಲೆ ಷೇರುಪೇಟೆ ಸವಾರಿ, ನಿಮ್ಮ ಹೂಡಿಕೆ ಹೇಗಿದೆ ನೋಡ್ರೀ?

By ಕೆ.ಜಿ.ಕೃಪಾಲ್
|

ಷೇರು ಮಾರುಕಟ್ಟೆ ಏರುತ್ತಲೇ ಇದೆ. ಅದಕ್ಕೆ ಈ ಸುದ್ದಿ ಕಾರಣ. ಅಲ್ಲಲ್ಲ ಆ ಸುದ್ದಿ ಕಾರಣ. ಮತ್ತೆ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ, ಅದಕ್ಕೆ ಮೇಲೇರುತ್ತಿದೆ. ಇಂಥ ಹಲವಾರು ಮಾತು ನಿಮ್ಮ ಕಿವಿಗೆ ಬಿದ್ದಿರುತ್ತದೆ. ಆದರೆ ನಾನು ನೀಡುವ ಸಲಹೆ ಏನು ಗೊತ್ತಾ?: ನೀವು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದ ಹಣಕ್ಕೆ ಉತ್ತಮ ಲಾಭ ಬಂದರೆ, ಯಾವ ಸೆಂಟಿಮೆಂಟ್ ಇಲ್ಲದೆ ವಾಪಸ್ ತೆಗೆದುಕೊಳ್ಳಿ.

 

ಈಗಿನ ಮಾರುಕಟ್ಟೆಯಲ್ಲಿ ತರ್ಕವೆಲ್ಲ ಕೆಲಸಕ್ಕೆ ಬರಲ್ಲ. ನಿಮಗೆ ಹಲವಾರು ಬಾರಿ ಉದಾಹರಣೆ ಸಹಿತ ವಿವರಿಸಿದ್ದೇನೆ. ಇಂದು ಸಹ ಹೇಳುತ್ತಿದ್ದೇನೆ. ಕಳೆದ ವರ್ಷದ ಆಗಸ್ಟ್ ಅಂತ್ಯದಲ್ಲಿ 38,989.65 ಪಾಯಿಂಟುಗಳ ದಾಖಲೆಯ ಮಟ್ಟಕ್ಕೆ ಜಿಗಿತ ಕಂಡು ಮೆರೆದ ಸೆನ್ಸೆಕ್ಸ್ ಸಂವೇದಿ ಸೂಚ್ಯಂಕವು ಸುಮಾರು 6 ಸಾವಿರ ಪಾಯಿಂಟುಗಳಿಗೂ ಹೆಚ್ಚಿನ ಇಳಿಕೆಯನ್ನು ಅಕ್ಟೊಬರ್ ನಲ್ಲಿ ಕಂಡು, ಹೊಸ ಆರ್ಥಿಕ ವರ್ಷದ ಮೊದಲ ವಾರ ಅಂದರೆ ಏಪ್ರಿಲ್ 3ರಂದು 39,270.14 ತಲುಪಿ, ಹೊಸ ಸರ್ವಕಾಲೀನ ದಾಖಲೆ ಸ್ಥಾಪಿಸಿತು.

ಆ ನಂತರ ಅಲ್ಪ ಸಮಯದಲ್ಲೇ ಮತ್ತೊಮ್ಮೆ ಅಂದರೆ ಏಪ್ರಿಲ್ 16ರಂದು 39,364.34 ಪಾಯಿಂಟ್ ಗಳನ್ನು ತಲುಪಿ, ನೂತನ ದಾಖಲೆ ನಿರ್ಮಿಸಿದೆ. ಈ ಸಂದರ್ಭದಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಆಗಸ್ಟ್ ಅಂತ್ಯದಲ್ಲಿ ದಾಖಲೆ ನಿರ್ಮಿಸಿದಾಗ ಪೇಟೆಯ ಮಾರ್ಕೆಟ್ ಕ್ಯಾಪಿಟಲೈಸೇಶನ್ (ಬಂಡವಾಳ ಮೌಲ್ಯ) ರು.195.34 ಲಕ್ಷ ಕೋಟಿಗೆ ತಲುಪಿತ್ತು. ಆದರೆ ಏಪ್ರಿಲ್ 3ರಂದು ಸೆನ್ಸೆಕ್ಸ್ ಹೊಸ ದಾಖಲೆ ತಲುಪಿದರೂ ಮಾರ್ಕೆಟ್ ಕ್ಯಾಪಿಟಲೈಸೇಶನ್ ಮಾತ್ರ ರು.151.62 ಲಕ್ಷ ಕೋಟಿಯಲ್ಲಿತ್ತು.

ಏಪ್ರಿಲ್ 16ರಂದು ತಲುಪಿದ ನೂತನ ದಾಖಲೆಯ ದಿನ ಮಾರ್ಕೆಟ್ ಕ್ಯಾಪಿಟಲೈಸೇಶನ್ ರೂ.154.23 ಲಕ್ಷ ಕೋಟಿಯಾಗಿದೆ. ಅಂದರೆ ಕೇವಲ ಸೆನ್ಸೆಕ್ಸ್ ಮಾತ್ರ ಏರಿಕೆ ಕಾಣುತ್ತಿದ್ದು, ಅದರಲ್ಲೂ ಸೆನ್ಸೆಕ್ಸ್ ನಲ್ಲಿ ಹೆಚ್ಚಿನ ತೂಕವಿರುವ ಕಂಪೆನಿಗಳಲ್ಲಿ ಚಟುವಟಿಕೆ ಕೇಂದ್ರೀಕೃತವಾಗಿದೆ.

ಒಂದು ಸಾವಿರ ರುಪಾಯಿ ಏರಿಕೆ ಕಂಡ ಮಾರುತಿ ಷೇರು

ಒಂದು ಸಾವಿರ ರುಪಾಯಿ ಏರಿಕೆ ಕಂಡ ಮಾರುತಿ ಷೇರು

ಮಾರುತಿ ಸುಜುಕಿ ಕಂಪೆನಿ ಜನವರಿ ಅಂತ್ಯದಲ್ಲಿ ಒಂದು ಷೇರಿಗೆ ರು.6,324 ರ ಸಮೀಪವಿತ್ತು. ಮಾರ್ಚ್ ಅಂತ್ಯದಲ್ಲಿ ರು.6,484 ರಲ್ಲಿದ್ದಂತಹ ಷೇರು ಕೇವಲ ಎರಡು ವಾರದೊಳಗೆ ರು.7,479ರ ವರೆಗೂ ಜಿಗಿದಿದೆ. ಅದರಲ್ಲೂ ಹಲವಾರು ನಕಾರಾತ್ಮಕವಾದ ಸುದ್ದಿಯಾದ ಇನ್ವೆಂಟರಿ ಹೆಚ್ಚಿದ್ದು ಮತ್ತು ನಿರಂತರವಾಗಿ ಇಳಿಕೆ ಕಾಣುತ್ತಿರುವ ಮಾರಾಟದ ಅಂಕಿ ಅಂಶಗಳ ನಡುವೆಯೂ ಈ ರೀತಿ ಏರಿಕೆಗೆ ಕೇವಲ ಅಲಂಕಾರಿಕ ಕಾರಣಗಳಾಗಿವೆ. ಬ್ಯಾಂಕಿಂಗ್ ವಿಭಾಗದ ಪ್ರಮುಖ ಖಾಸಗಿ ಕಂಪೆನಿ ಐಸಿಐಸಿಐ ಬ್ಯಾಂಕ್ ಷೇರು ಕಳೆದ ಕೆಲವು ದಿನಗಳಿಂದ ಚುರುಕಾಗಿ ಏರಿಕೆ ಕಾಣುತ್ತಿದ್ದು, ಗೋಲ್ಡ್ ಮನ್ ಸ್ಯಾಕ್ಸ್ ಸಂಸ್ಥೆಯು ಈ ಷೇರಿಗೆ ಹೆಚ್ಚಿನ ಟಾರ್ಗೆಟ್ ನಿಗದಿಪಡಿಸಿದ ಕಾರಣ ಷೇರಿನ ಬೆಲೆ ಶೇ 3 ಕ್ಕೂ ಹೆಚ್ಚಿನ ಏರಿಕೆ ಕಂಡು, ಸೆನ್ಸೆಕ್ಸ್ ನ ಏರಿಕೆಗೆ ತನ್ನ ಕೊಡುಗೆ ನೀಡಿದೆ. ವಾರ್ಷಿಕ ಮತ್ತು ತ್ರೈಮಾಸಿಕ ಫಲಿತಾಂಶ ಪ್ರೋತ್ಸಾಹದಾಯಕವಾಗಿತ್ತು ಎಂಬ ಕಾರಣಕ್ಕಾಗಿ ಟಾಟಾ ಕನ್ಸಲ್ ಟೆನ್ಸಿ ಸರ್ವೀಸಸ್ ಕಂಪನಿ ಮಂಗಳವಾರದಂದು ಮತ್ತೊಮ್ಮೆ ತನ್ನ ಏರಿಕೆಯಿಂದ ಮಾರ್ಕೆಟ್ ಕ್ಯಾಪಿಟಲೈಸೇಶನ್ ಅನ್ನು ರು.8 ಲಕ್ಷ ಕೋಟಿಯನ್ನು ತಲುಪಿದೆ. ಈ ಕಂಪೆನಿ ಪ್ರತಿ ಷೇರಿಗೆ ರು.18 ರ ಅಂತಿಮ ಲಾಭಾಂಶವನ್ನು ಸಹ ಘೋಷಿಸಿದೆ. ಈ ಕಂಪೆನಿಯ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ಸುಮಾರು ರು.200ರಷ್ಟು ಏರಿಕೆ ಕಂಡುಕೊಂಡಿರುವುದು ಆಂತರಿಕ ಸಾಧನೆಯಿಂದ.

ವ್ಯಾಲ್ಯೂ ಪಿಕ್ ಚಟುವಟಿಕೆ ವ್ಯಾಪಕ
 

ವ್ಯಾಲ್ಯೂ ಪಿಕ್ ಚಟುವಟಿಕೆ ವ್ಯಾಪಕ

ಇನ್ನು ಸಾರ್ವಜನಿಕ ವಲಯದ ನವರತ್ನ ಕಂಪೆನಿ ಕೋಲ್ ಇಂಡಿಯಾ ಷೇರಿನ ಬೆಲೆ ಫೆಬ್ರವರಿಯಲ್ಲಿ ರು.212 ರ ಸಮೀಪಕ್ಕೆ ಕುಸಿದು, ಎರಡೇ ತಿಂಗಳಲ್ಲಿ ಶೇ 20 ರಷ್ಟು ಏರಿಕೆ ಕಂಡಿದೆ. ಯಾಕೆ ಉತ್ತಮ ಕಂಪೆನಿ ಷೇರುಗಳನ್ನೇ ಖರೀದಿಸಬೇಕು ಎಂಬುದಕ್ಕೆ ಉದಾಹರಣೆಯಾಗಿ ಹಾಗೂ ವ್ಯಾಲ್ಯೂ ಪಿಕ್ ಗಳಿಸಿಕೊಡಬಹುದಾದ ಲಾಭದ ಪ್ರಮಾಣವನ್ನು ಇದು ತೋರಿಸುತ್ತದೆ. ವಿನಾ ಕಾರಣ ಸತತವಾದ ಇಳಿಕೆಯಾಗಿದ್ದ ಷೇರು ದಿಢೀರ್ ಮೌಲ್ಯ ಕಂಡುಕೊಂಡು ಪುಟಿದೆದ್ದ ರೀತಿ ನಿಜಕ್ಕೂ ವಿಸ್ಮಯಕಾರಿ. ಹಿಂದೊಮ್ಮೆ ಷೇರಿನ ಬೆಲೆ ರು.500 ಕ್ಕೂ ಹೆಚ್ಚಿದ್ದ ಟಾಟಾ ಮೋಟಾರ್ಸ್ ನಿರಂತರವಾಗಿ ಜಾರುತ್ತಾ ಕುಸಿದು, ಫೆಬ್ರವರಿಯಲ್ಲಿ ರು.142 ರವರೆಗೂ ತಲುಪಿದ್ದು, ಕಳೆದ ಒಂದು ತಿಂಗಳಲ್ಲಿ ಶೇ.40 ರಷ್ಟು ಏರಿಕೆ ಪ್ರದರ್ಶಿಸಿದೆ. ಹೊಸ ಹೊಸ ಕಾರಿನ ಯೋಜನೆಗಳ ನೆಪದಲ್ಲಿ ವ್ಯಾಲ್ಯೂ ಪಿಕ್ ಚಟುವಟಿಕೆಯು ವ್ಯಾಪಕವಾಗಿದೆ.

ಇಳಿಕೆ, ಏರಿಕೆ ಆದಾಗಲೇ ಹೂಡಿಕೆದಾರರಿಗೆ ಆಸಕ್ತಿ

ಇಳಿಕೆ, ಏರಿಕೆ ಆದಾಗಲೇ ಹೂಡಿಕೆದಾರರಿಗೆ ಆಸಕ್ತಿ

ಮಾರ್ಕೆಟ್ ಕ್ಯಾಪಿಟಲೈಸೇಶನ್ ರು.8.5 ಲಕ್ಷ ಕೋಟಿಯನ್ನು ಮೀರಿರುವ ಪೆಟ್ರೋಕೆಮಿಕಲ್ ವಿಭಾಗದ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಸಹ ಕಳೆದ ಒಂದು ತಿಂಗಳಲ್ಲಿ ರು.90 ರಷ್ಟು ಏರಿಕೆ ಪ್ರದರ್ಶಿಸಿದ್ದು, ವಾರ್ಷಿಕ ಗರಿಷ್ಠದ ದಾಖಲೆಯನ್ನು ಈ ಆರ್ಥಿಕ ವರ್ಷದ ಮೊದಲನೇ ತಾರೀಕಿನಂದು ನಿರ್ಮಿಸಿ ವಿಜೃಂಭಿಸಿದೆ. ಸೆನ್ಸೆಕ್ಸ್ ನ ಅಂಗವಾದ ಕಂಪೆನಿಗಳಲ್ಲಿ ಇಂಡಸ್ ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ ಡಿಎಫ್ ಸಿ, ಎಚ್ ಡಿಎಫ್ ಸಿ ಬ್ಯಾಂಕ್, ಎಸ್ ಬಿಐ, ಯೆಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಸಹ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಏರಿಕೆ ಕಂಡುಕೊಂಡು ಸೆನ್ಸೆಕ್ಸ್ ನ ದಾಖಲೆಯ ಮಟ್ಟಕ್ಕೆ ಏರಿಕೆ ಕಾಣಲು ಕಾರಣವಾಗಿವೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಗಮನದಲ್ಲಿರಿಸಬೇಕಾದ ಅಂಶವೆಂದರೆ, ಸೆನ್ಸೆಕ್ಸ್ ನಲ್ಲಿರುವ 30 ಕಂಪೆನಿಗಳಲ್ಲಿ 9 ಕಂಪೆನಿಗಳು ವಿತ್ತೀಯ ಚಟುವಟಿಕೆ ವಲಯದಲ್ಲಿ ಇರುವವು. ಹಾಗಾಗಿ ವಿತ್ತೀಯ ಸುದ್ದಿ ಹೆಚ್ಚು ಪ್ರಭಾವಿಯಾಗಿರುತ್ತದೆ. ಷೇರುಪೇಟೆಯಲ್ಲಿ ಚಟುವಟಿಕೆಯು ನಿರಂತರವಾಗಿ ಸಾಗುತ್ತಿರಬೇಕಾದರೆ ಕೆಲವು ಷೇರುಗಳ ಬೆಲೆ ಇಳಿಕೆಯಾಗಬೇಕು, ಕೆಲವು ಏರಿಕೆಯಾಗಬೇಕು ಆಗಲೇ ವಹಿವಾಟುದಾರರಿಗೆ ರುಚಿಸುವುದು.

ಸುದ್ದಿ ಅಧಾರಿತವಾದ ಚಟುವಟಿಕೆ

ಸುದ್ದಿ ಅಧಾರಿತವಾದ ಚಟುವಟಿಕೆ

ಈ ಕಾರಣಕ್ಕಾಗಿ ಕೆಲವು ದಿನಗಳ ಹಿಂದೆಯಷ್ಟೇ ರು.145ರ ಸಮೀಪದಲ್ಲಿದ್ದ ಮದರ್ ಸನ್ ಸುಮಿ ಸಿಸ್ಟಮ್ಸ್ ಮಂಗಳವಾರ ರು.160ರ ಸಮೀಪಕ್ಕೆ ಪುಟಿದೆದ್ದಿತು. ಅದರಂತೆಯೇ ಸೆನ್ಸೆಕ್ಸ್ ನ ಭಾಗವಾದ ಐಟಿಸಿ ಕಂಪನಿ ಷೇರಿನ ಬೆಲೆಯೂ ರು.17ರಷ್ಟು ಈ ವಾರ ಏರಿಕೆ ಕಂಡಿದೆ. ಇದುವರೆಗೂ ನಿರ್ಲಕ್ಷಕ್ಕೊಳಗಾಗಿದ್ದ ಹೀರೊ ಮೋಟೊಕಾರ್ಪ್, ಟಿವಿಎಸ್ ಮೋಟಾರ್ಸ್, ಬಜಾಜ್ ಆಟೋ, ಅಶೋಕ್ ಲೇಲ್ಯಾಂಡ್ ನಂತಹ ವಲಯಾಧಾರಿತ ಕಂಪೆನಿಗಳು ಈ ವಾರ ಚುರುಕಾದ ಚಟುವಟಿಕೆಯಿಂದ ಏರಿಕೆ ಪ್ರದರ್ಶಿಸಿವೆ. ಇದುವರೆಗೂ ಹೆಚ್ಚಿನ ಚುರುಕು ಚಟುವಟಿಕೆ ಪ್ರದರ್ಶಿಸಿದ್ದ ಆರ್ ಈಸಿ, ಐಓಸಿ, ಬಿಪಿಸಿಎಲ್, ಎಚ್ ಪಿಸಿಎಲ್ ದಣಿವಾರಿಸಿಕೊಳ್ಳುತ್ತಿರುವಂತೆ ಕಂಡುಬಂದು, ಪರ್ಯಾಯವಾಗಿ ಬಿಎಚ್ ಇಎಲ್, ಮಿಂದಾ ಇಂಡಸ್ಟ್ರೀಸ್, ದೀಪಕ್ ಫರ್ಟಿಲೈಸರ್ಸ್ ಗಳು ಚುರುಕಾಗಿವೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಗಮನದಲ್ಲಿರಿಸಬೇಕಾದ ಅಂಶವೆಂದರೆ, ಪೇಟೆಯು ಹೆಚ್ಚಾಗಿ ಸುದ್ದಿ ಆಧಾರಿತ ಚಟುವಟಿಕೆಯಲ್ಲಿದ್ದು, ಸಾಧನೆ ಆಧಾರಿತವಾಗಿಲ್ಲ. ಮುಂದಿನ ದಿನಗಳಲ್ಲಿ ಚುನಾವಣಾ ಬೆಳವಣಿಗೆಗಳು, ಕಂಪೆನಿಗಳು ಪ್ರಕಟಿಸಬಹುದಾದ ಫಲಿತಾಂಶ ಮತ್ತು ಕಾರ್ಪೊರೇಟ್ ಲಾಭಗಳು, ಪೇಟೆಯ ಒಳಗೆ ಹರಿದುಬರುತ್ತಿರುವ ವಿದೇಶಿ ವಿತ್ತೀಯ ಸಂಸ್ಥೆಗಳ ಹಣವು, ಅಂತರ ರಾಷ್ಟ್ರೀಯ ಪೇಟೆಗಳ ಚಲನೆಗಳು ಪೇಟೆಯ ದಿಶೆಯನ್ನು ನಿಯಂತ್ರಿಸುತ್ತವೆ. "ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್" ಮಂತ್ರ ಮರೆಯಬೇಡಿ.

English summary

How news driven share market reacting very quickly?

Indian share market become news driven. Here is an example with explanation by financial expert and columnist KG Krupal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X