For Quick Alerts
ALLOW NOTIFICATIONS  
For Daily Alerts

ಷೇರು ಪೇಟೆ ರಿಂಗ್ ಮಾಸ್ಟರ್, ಕಂಪೆನಿ ರೇಟಿಂಗ್ ಎಂಬ ನೀರಿನ ಮೇಲಣ ಗುಳ್ಳೆ

By ಕೆ.ಜಿ.ಕೃಪಾಲ್
|

ರೇಟಿಂಗ್ ಎಂಬ ಪದದ ಪರಿಚಯ ನಿಮಗೆ ಇರಬಹುದು. ಕ್ರೆಡಿಟ್ ರೇಟಿಂಗ್ ಇತ್ಯಾದಿ ಪದಗಳ ಬಳಕೆ ಎಲ್ಲಿ ಹಾಗೂ ಏಕೆ ಆಗುತ್ತದೆ ಎಂಬುದರ ಬಗ್ಗೆಯೂ ನಿಮ್ಮಲ್ಲಿ ಕೆಲವರಿಗೆ ಗೊತ್ತಿರಬಹುದು. ಷೇರು ಮಾರುಕಟ್ಟೆ ವಿಚಾರಕ್ಕೆ ಬಂದರೆ, ರೇಟಿಂಗ್ ಎಂಬುದು ಒಂದು ಕಂಪೆನಿಯ ಅರ್ಹತಾ ಮಟ್ಟವನ್ನು ತಿಳಿಸುವುದಾಗಿದೆ. ಆ ಕಂಪೆನಿ ಎಂತಹ ಸಾಧನೆ ಮಾಡುತ್ತಿವೆ, ಆರ್ಥಿಕ ಮಟ್ಟ ಹೇಗಿದೆ ಎಂಬುದನ್ನು ರೇಟಿಂಗ್ ಬಿಂಬಿಸುತ್ತದೆ.

ಇತ್ತೀಚಿಗೆ ಕೇವಲ ರೇಟಿಂಗ್ ಕಂಪೆನಿಗಳಲ್ಲದೆ, ಬ್ರೋಕಿಂಗ್ ಹೌಸಸ್ ಸಹ ಒಂದು ಕಂಪೆನಿಯು ಹೂಡಿಕೆಗೆ ಯೋಗ್ಯವೇ ಎಂಬುದನ್ನು, ಆ ಷೇರಿನ ಬೆಲೆ ಎಲ್ಲಿಯವರೆಗೂ ಏರಿಕೆ ಕಾಣಬಹುದು ಎಂಬ ಗುರಿಯನ್ನು ನೀಡುವ ಮೂಲಕ ರೇಟಿಂಗ್ ನೀಡುವುದು ಸಾಮಾನ್ಯವಾಗಿದೆ.

300ಕ್ಕೂ ಹೆಚ್ಚು ಅಂಶ ಸೆನ್ಸೆಕ್ಸ್, 100ಕ್ಕೂ ಹೆಚ್ಚು ಅಂಶ ಕುಸಿದ ನಿಫ್ಟಿ: ಇದೇನು ತಲ್ಲಣ?

 

ರೇಟಿಂಗ್ ಎಂಬುದು ಈಗ ಸಾಂಕೇತಿಕವಾಗಿದ್ದು, ಅದಕ್ಕೆ ಯಾವುದೇ ಕಾಲ ಮಿತಿ ಇಲ್ಲ. ಅಂದರೆ ಇಂದು ನೀಡಿದ ರೇಟಿಂಗ್ ಇಂದಿಗೆ ಮಾತ್ರ. ಮುಂದಿನ ಮೂರು, ಆರು ತಿಂಗಳಿಗೆ ಅದು ಅನ್ವಯವಾಗುತ್ತದೆ ಎಂಬುದಿಲ್ಲ. ಮಾರ್ಕೆಟ್ ಫೋರ್ಸಸ್ (ಮಾರುಕಟ್ಟೆ ಶಕ್ತಿಗಳು) ಅದನ್ನು ನಿರ್ಧರಿಸುತ್ತವೆ.

ಷೇರು ಪೇಟೆ ರಿಂಗ್ ಮಾಸ್ಟರ್, ಕಂಪೆನಿ ರೇಟಿಂಗ್ ಎಂಬ ನೀರಿನ ಮೇಲಣ ಗುಳ್ಳ

ಕಳೆದ ಸೆಪ್ಟೆಂಬರ್ ನಲ್ಲಿ ಐಎಲ್ ಎಫ್ ಎಸ್ ಗೆ ಉತ್ಕೃಷ್ಟವಾದ ಗುಣಮಟ್ಟದ ರೇಟಿಂಗ್ ನೀಡಲಾಗಿತ್ತು. ಆ ನಂತರ ಆ ಕಂಪೆನಿಯ ಹಗರಣ ಹೊರಬಂದ ನಂತರ ಅದಕ್ಕೆ 'ಜಂಕ್' ಎಂಬ ರೇಟಿಂಗ್ ನೀಡಲಾಯಿತು.

ಏಪ್ರಿಲ್ ಆರಂಭದಲ್ಲಿ ಸ್ಟರ್ಲೈಟ್ ಟೆಕ್ನಾಲಜಿಸ್ ಷೇರಿನ ಬೆಲೆ ರು.225ರ ಸುಮಾರಿನಿಂದ ರು.194ರ ಸಮೀಪಕ್ಕೆ ಕುಸಿಯಿತು. ಇದಕ್ಕೆ ಮೂಡೀಸ್ ನೀಡಿದ್ದ ರೇಟಿಂಗ್ ಹಿಂಪಡೆದದ್ದೇ ಕಾರಣ. ಆದರೆ ಮೂರನೇ ವಾರದಲ್ಲಿ ಐಸಿಐಸಿಐ ಡೈರೆಕ್ಟ್ ಈ ಕಂಪೆನಿ ಉತ್ತಮ ಸಾಧನೆ ಮತ್ತು ಅಂಕಿ ಅಂಶಗಳು ಆಕರ್ಷಕವಾಗಿರುತ್ತದೆ ಎಂದು ತಿಳಿಸಿದ ಕಾರಣಕ್ಕೆ ಷೇರಿನ ಬೆಲೆಯಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ.

ಸುದ್ದಿ ಕುದುರೆ ಮೇಲೆ ಷೇರುಪೇಟೆ ಸವಾರಿ, ನಿಮ್ಮ ಹೂಡಿಕೆ ಹೇಗಿದೆ ನೋಡ್ರೀ?

ರಿಲಯನ್ಸ್ ಕ್ಯಾಪಿಟಲ್ ಬಗ್ಗೆ ಬ್ರಿಕ್ ವರ್ಕ್, ಕೇರ್ ರೇಟಿಂಗ್ಸ್ ಗಳು ಕೆಳಹಂತದ ರೇಟಿಂಗ್ ನೀಡಿದ ಕಾರಣ ಮೂರೇ ದಿನಗಳಲ್ಲಿ ಷೇರಿನ ಬೆಲೆ ರು.190ರ ಸಮೀಪದಿಂದ ರು.126ರ ವರೆಗೂ ಕುಸಿಯಿತಾದರೂ ಅಲ್ಲಿಂದ ದಿಢೀರ್ ಚೇತರಿಕೆ ಕಂಡು ರು.150 ತಲುಪಿತು.

ಏಪ್ರಿಲ್ ಮೊದಲ ವಾರದಲ್ಲಿ ಖಾಸಗಿ ಸಂಸ್ಥೆಯೊಂದು ಈ ವರ್ಷ ಮುಂಗಾರು ಉತ್ತಮವಾಗಿರದೆ ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆಂದು ಮುನ್ಸೂಚನೆ ನೀಡಿದ ಕಾರಣ ಆಗ ವಾರ್ಷಿಕ ಗರಿಷ್ಠದಲ್ಲಿದ್ದ ಸೆನ್ಸೆಕ್ಸ್ ಸುಮಾರು 180 ಪಾಯಿಂಟುಗಳ ಕುಸಿಯಿತು. ಆದರೆ ಹಿಂದಿನ ವಾರ ಹವಾಮಾನ ಇಲಾಖೆಯು ಈ ವರ್ಷ ಮಳೆ ಸಹಜವಾಗಿರುತ್ತದೆ ಎಂದು ಮುನ್ಸೂಚನೆ ನೀಡಿದ ಕಾರಣ ಪೇಟೆ ಚೇತರಿಕೆ ಕಂಡಿತು.

ಜೆಟ್ ಏರ್ ವೇಸ್ ತನ್ನ ಚಟುವಟಿಕೆ ಸ್ಥಗಿತಗೊಳಿಸುವ ಸಮಾಚಾರದಿಂದ ಷೇರಿನ ಬೆಲೆ ಸೋಮವಾರದಂದು ರು.130ರ ವರೆಗೂ ಕುಸಿದು, ನಂತರ ದಿನದ ಅಂತ್ಯದಲ್ಲಿ ರು.154ರ ಸಮೀಪಕ್ಕೆ ಜಿಗಿಯಿತು. ಈ ಬೆಳವಣಿಗೆಯು ವಲಯದ ಮತ್ತೊಂದು ಕಂಪೆನಿ ಸ್ಪೈಸ್ ಜೆಟ್ ಷೇರಿನ ಬೆಲೆ ರು.91ರ ಸಮೀಪದಿಂದ ರು.152 ರವರೆಗೂ ಕಳೆದ ಒಂದು ತಿಂಗಳಲ್ಲಿ ಏರಿಕೆ ಕಂಡಿದ್ದು, ಒಂದೇ ವಾರದಲ್ಲಿ ರೂ.120ರ ಸಮೀಪದಿಂದ ರೂ.152 ಕ್ಕೆ ಜಿಗಿದಿತ್ತು.

ಇದು ಮ್ಯೂಚ್ಯುಯಲ್ ಫಂಡ್ ಗಳ ಜಗತ್ತು, ಮೈ ಮರೆತಿರೋ ಆಪತ್ತು!

 

ಆದರೂ ಸ್ಥಿರತೆ ಕಾಣಲು ಅವಕಾಶ ಸಿಗದೇ ಅದು ರು.127 ರ ಸಮೀಪ ಮಂಗಳವಾರ ಅಂತ್ಯ ಕಂಡಿದೆ. ಹೀಗೆ ವಿಭಿನ್ನ ರೀತಿಯ ವಿಶ್ಲೇಷಣೆಗಳು ಬಂದಾಗ ಅದಕ್ಕೆ ಅನುಗುಣವಾಗಿ ಪೇಟೆ ದಿಶೆ ಬದಲಿಸುತ್ತಿರುತ್ತದೆ. ಅವಕಾಶಗಳು ತಾತ್ಕಾಲಿಕವಾಗಿರುತ್ತವೆ. ಅದರಲ್ಲಿ ಕೈಗೆಟುಕಿಸಿಕೊಂಡರೆ ಮಾತ್ರ ಲಾಭ.

ಈ ಸಂದರ್ಭದಲ್ಲಿ ಹೂಡಿಕೆದಾರರು ಗಮನದಲ್ಲಿರಿಸಬೇಕಾದ ಅಂಶವೆಂದರೆ ಸೆನ್ಸೆಕ್ಸ್ ನಲ್ಲಿರುವ 30 ಕಂಪೆನಿಗಳಲ್ಲಿ 9 ಕಂಪೆನಿಗಳು ವಿತ್ತೀಯ ಚಟುವಟಿಕೆ ವಲಯದಲ್ಲಿ ಇರುವವಾಗಿವೆ. ಹಾಗಾಗಿ ವಿತ್ತೀಯ ಸುದ್ದಿ ಹೆಚ್ಚು ಪ್ರಭಾವಿ ಆಗಿರುತ್ತದೆ. ಅವುಗಳಿಂದಾಗಿಯೇ ಏಪ್ರಿಲ್ 22ರಂದು ಸೆನ್ಸೆಕ್ಸ್ ಕುಸಿತವು 495 ಪಾಯಿಂಟುಗಳಷ್ಟಿದ್ದು, ವಿತ್ತೀಯ ವಲಯದ ಕಂಪೆನಿಗಳು ಈ ಕುಸಿತಕ್ಕೆ ತಮ್ಮ ಕೊಡುಗೆ ನೀಡಿದ್ದು ಹೀಗೆ.

ಎಚ್ ಡಿಎಫ್ ಸಿ 82.66 ಪಾಯಿಂಟು

ಐಸಿಐಸಿಐ ಬ್ಯಾಂಕ್ 65.09 ಪಾಯಿಂಟು

ಎಚ್ ಡಿಎಫ್ ಸಿ ಬ್ಯಾಂಕ್ 46.31ಪಾಯಿಂಟು

ಇಂಡಸ್ ಇಂಡ್ ಬ್ಯಾಂಕ್ 35.94 ಪಾಯಿಂಟು

ಯೆಸ್ ಬ್ಯಾಂಕ್ 30.90 ಪಾಯಿಂಟು

ಆಕ್ಸಿಸ್ ಬ್ಯಾಂಕ್ 27.54 ಪಾಯಿಂಟು

ಕೊಟಕ್ ಬ್ಯಾಂಕ್ 19.01 ಪಾಯಿಂಟು

ಬಜಾಜ್ ಫೈನಾನ್ಸ್ 5.21 ಪಾಯಿಂಟು

ಎಸ್ ಬಿಐ 3.33 ಪಾಯಿಂಟು

ಆದರೆ, ಏಪ್ರಿಲ್ 23ರಂದು ಬಜಾಜ್ ಫೈನಾನ್ಸ್ ಮತ್ತು ಐಸಿಐಸಿಐ ಬ್ಯಾಂಕ್ ಅಲ್ಪ ಚೇತರಿಕೆ ಕಂಡರೂ ಮಾರುತಿ ಸುಜುಕಿ ಸುಮಾರು ರು.262 ರಷ್ಟು ಕುಸಿತ ಕಂಡು, ವಾತಾವರಣವನ್ನು ನೀರಸವನ್ನಾಗಿಸಿತು. ಒಟ್ಟಾರೆ ಪೇಟೆ ಹೆಚ್ಚು ಅಸ್ಥಿರತೆಯಿಂದ ಕೂಡಿದ್ದು, ಚುನಾವಣಾ ಸಮಯ, ಕಚ್ಚಾ ತೈಲ ಬೆಲೆ ನಿರಂತರ ಏರಿಕೆಗಳು ಆತಂಕ ವಾತಾವರಣವನ್ನು ನಿರ್ಮಿಸಿದೆ.

ಮುಂದಿನ ದಿನಗಳಲ್ಲಿ ಕಂಪೆನಿಗಳು ಸಹ ತಮ್ಮ ಸಾಧನೆಯ (ತ್ರೈ ಮಾಸಿಕ ಲೆಕ್ಕಪತ್ರ) ಅಂಕಿ-ಅಂಶಗಳನ್ನು ಪ್ರಕಟಿಸುವ ಕಾರಣ ಅವುಗಳ ಪ್ರಭಾವವು ಹೆಚ್ಚಾಗಿರುತ್ತದೆ. ಸಂದರ್ಭಕ್ಕೆ ತಕ್ಕಂತೆ ಅವಕಾಶಗಳನ್ನು ತಮ್ಮದಾಗಿಸಿಕೊಂಡಲ್ಲಿ ಮಾತ್ರ ಉತ್ತಮ ಫಲ ಪಡೆಯಲು ಸಾಧ್ಯ.

English summary

Must know facts about rating of companies

There are some rating companies which decides worth of companies which are trading in share market. Here is the some useful details about rating companies by Oneindia columnist K.G.Krupal.
Story first published: Wednesday, April 24, 2019, 12:37 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more