For Quick Alerts
ALLOW NOTIFICATIONS  
For Daily Alerts

ಷೇರು ಪೇಟೆಯಲ್ಲಿ 'ಲಾಭ ಬಂದಾಗ ಮಾರು' ಎಂಬುದು ಸಾರ್ವಕಾಲಿಕ ಮಂತ್ರ

By ಕೆ.ಜಿ.ಕೃಪಾಲ್
|

"ಆ ಕಂಪೆನಿ ಷೇರು ಎಂಥ ಚೆನ್ನಾಗಿದೆ ಅಂದರೆ, ದುಡ್ಡು ಹಾಕಿ ನೀವು ಮರೆತು ಬಿಡಿ. ನಿಮ್ಮ ಮಗಳ ಮದುವೆಗೋ/ಮಗನ ಓದಿಗೋ ಅಥವಾ ಮನೆ ಕಟ್ಟುವುದಕ್ಕೋ, ಸೈಟು ಖರೀದಿಗೋ ಆ ಹಣ ನಿಮಗೆ ಉಪಯೋಗಕ್ಕೆ ಬರುತ್ತದೆ" ಎಂದು ಯಾರಾದರೂ ಷೇರು ದಲ್ಲಾಳಿಯೋ ಅಥವಾ ನಿಮ್ಮ ಸ್ನೇಹಿತರೇ ಹೇಳಿದರೂ ಎಚ್ಚರಿಕೆಯಿಂದ ಇರಬೇಕಾದ ಕಾಲ ಸ್ವಾಮಿ ಇದು.

ಹಾಕಿದ ದುಡ್ಡಿಗೆ ನಷ್ಟ ಒಡ್ಡುವ ಎಷ್ಟೋ ಕಂಪೆನಿಗಳು ಮೊಸಳೆಗಳ ರೀತಿ ಇರುತ್ತವೆ. ಹುಚ್ಚು ಸಾಹಸಕ್ಕೋ, ದುರದೃಷ್ಟಕ್ಕೋ, ತಪ್ಪಾಗಿಯೋ ಸಿಲುಕಿಕೊಂಡರೆ ಬಚಾವಾಗುವ ಅವಕಾಶವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಷೇರುಪೇಟೆಯ ಏರಿಳಿತಗಳನ್ನು ದಾಖಲಿಸುತ್ತಿರುವ ರೀತಿ ಗಮನಿಸಿದರೆ ಪೇಟೆಯು ದೀರ್ಘಕಾಲೀನ ಹೂಡಿಕೆಗೆ ಬೆಂಬಲಿಸುತ್ತಿಲ್ಲ.

ಷೇರು ಪೇಟೆ ರಿಂಗ್ ಮಾಸ್ಟರ್, ಕಂಪೆನಿ ರೇಟಿಂಗ್ ಎಂಬ ನೀರಿನ ಮೇಲಣ ಗುಳ್ಳೆಷೇರು ಪೇಟೆ ರಿಂಗ್ ಮಾಸ್ಟರ್, ಕಂಪೆನಿ ರೇಟಿಂಗ್ ಎಂಬ ನೀರಿನ ಮೇಲಣ ಗುಳ್ಳೆ

ಅಗ್ರಮಾನ್ಯ ಕಂಪೆನಿಗಳಾದ ಮಾರುತಿ ಸುಜುಕಿ, ಎಚ್ ಡಿಎಫ್ ಸಿ, ಎಚ್ ಡಿಎಫ್ ಸಿ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಇನ್ಫೋಸಿಸ್, ಬಜಾಜ್ ಫೈನಾನ್ಸ್ , ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಗೇಲ್, ಐಒಸಿ, ಎಚ್ ಪಿಸಿಎಲ್, ಬಿಪಿಸಿಎಲ್, ಆರ್ ಇಸಿ , ಪಿಎಫ್ ಸಿ, ಸಿಪ್ಲಾ, ಕೋಲ್ ಇಂಡಿಯಾಗಳೆಲ್ಲವೂ ಅಸ್ಥಿರತೆಯಿಂದ ಕೂಡಿವೆ.

ಪಿಸಿ ಜ್ಯೂವೆಲ್ಲರ್ಸ್ , ಸೈಯೆಂಟ್, ಸ್ಟರ್ಲೈಟ್ ಟೆಕ್ನಾಲಜಿಸ್ ಮುಂತಾದವುಗಳು ಸಹ ಹೆಚ್ಚಿನ ಅಸ್ಥಿರತೆಯಿಂದ ಕೂಡಿದ್ದು, ಹೂಡಿಕೆಗೆ ಯಾವ ಬೆಲೆ ಯೋಗ್ಯ ಎಂದು ನಿರ್ಧರಿಸುವ ಮೊದಲೇ ಬದಲಾವಣೆಗಳನ್ನು ಪ್ರದರ್ಶಿಸುತ್ತಿವೆ.

ಭಾರೀ ಏರಿಳಿತ ಪ್ರದರ್ಶಿಸಿದ ಮಾರುತಿ ಸುಜುಕಿ

ಭಾರೀ ಏರಿಳಿತ ಪ್ರದರ್ಶಿಸಿದ ಮಾರುತಿ ಸುಜುಕಿ

ಉದಾಹರಣೆಗಳನ್ನೇ ನೋಡಿ: ಮಾರುತಿ ಸುಜುಕಿ ಷೇರಿನ ಬೆಲೆಯೂ ಕಳೆದ ಒಂದು ತಿಂಗಳಲ್ಲಿ ರು.6,483ರ ಸಮೀಪದಿಂದ ರು.7,542 ರವರೆಗೂ ಏರಿಳಿತಗಳನ್ನು ಹಲವು ಬಾರಿ ಕಂಡು, ದಿಶೆ ಬದಲಿಸುತ್ತಿದೆ. ಟಾಟಾ ಸ್ಟೀಲ್ ಷೇರಿನ ಬೆಲೆ ಗುರುವಾರದಂದು ರು.510 ರ ಸಮೀಪವಿದ್ದು ಶುಕ್ರವಾರ ರು.548ರ ಗರಿಷ್ಠಕ್ಕೆ ಚಿಮ್ಮಿತು. ಗೇಲ್ (ಇಂಡಿಯಾ) ಷೇರಿನ ಬೆಲೆ ಕಳೆದ ಒಂದು ತಿಂಗಳಿನಲ್ಲಿ ರು.364 ರ ಸಮೀಪದಿಂದ ರು.332ರ ಸಮೀಪಕ್ಕೆ ಕುಸಿದು, ಆ ನಂತರ ರು.355 ರ ಸಮೀಪಕ್ಕೆ ಪುಟಿದೆದ್ದಿದೆ. ಈ ವಾರ ಷೇರಿನ ಬೆಲೆ ರು.332 ರ ಸಮೀಪದಿಂದ ರು.355ಕ್ಕೆ ಚೇತರಿಕೆ ಕಂಡಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಷೇರಿನ ಬೆಲೆ ರು.333 ರಿಂದ ರು.372 ಕ್ಕೆ ಈ ವಾರ ಜಿಗಿದಿದೆ. ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಷೇರಿನ ಬೆಲೆ ಇದೇ ವಾರದಲ್ಲಿ ರು.246 ರ ಸಮೀಪದಿಂದ ರು.284 ರವರೆಗೂ ಚೇತರಿಕೆ ಕಂಡಿದೆ. ವಿಸ್ಮಯಕಾರಿ ಎಂದರೆ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದರೂ ಸಾರ್ವಜನಿಕ ತೈಲ ಮಾರಾಟ ಕಂಪೆನಿಗಳ ಷೇರಿನ ಬೆಲೆ ಮಾತ್ರ ಏರಿಕೆ ಕಾಣುತ್ತಿದೆ.

22.65 ಲಕ್ಷ ಷೇರುಗಳ ವಹಿವಾಟು

22.65 ಲಕ್ಷ ಷೇರುಗಳ ವಹಿವಾಟು

ಈ ಮಧ್ಯೆ ಆಕರ್ಷಕ ಫಲಿತಾಂಶದೊಂದಿಗೆ ಪ್ರತಿ ಷೇರಿಗೆ ರು.9ರಂತೆ ಲಾಭಾಂಶ ವಿತರಣೆ ಪ್ರಕಟಿಸಿರುವ ಸೈಯೆಂಟ್ ಲಿಮಿಟೆಡ್ ಕಂಪೆನಿಯು ಶುಕ್ರವಾರದಂದು ರು.598 ರ ಸಮೀಪದಿಂದ ಏರಿಕೆ ಪಡೆದುಕೊಂಡು ರು.637 ರವರೆಗೂ ಏರಿಕೆ ಕಂಡಿತು. ಆದರೆ ಈ ಭಾರೀ ಏರಿಕೆಯು ಅಲ್ಪಾಯುವಾಗಿತ್ತು. ಈ ಹಂತದಿಂದ ಷೇರಿನ ಬೆಲೆ ಇಳಿಕೆ ಕಂಡು ರು.580ರ ವರೆಗೂ ತಲುಪಿ, ಕೊನೆಗೆ ರು.582 ರ ಸಮೀಪ ಕೊನೆಗೊಂಡಿತು. ಸ್ಟರ್ಲೈಟ್ ಟೆಕ್ನಾಲಜಿಸ್ ಕಂಪೆನಿಯ ಷೇರಿನ ಬೆಲೆ ಗುರುವಾರದಂದು ರು.191 ರ ಸಮೀಪದಲ್ಲಿ ಅಂತ್ಯವಾಗಿತ್ತು. ಆದರೆ ಶುಕ್ರವಾರದಂದು ದಿನದ ವಹಿವಾಟು ಆರಂಭವಾದಾಗಿನಿಂದಲೂ ಇಳಿಕೆಯಲ್ಲಿದ್ದು, ರು.180 ರವರೆಗೂ ಕುಸಿಯಿತು. ನಂತರ ಮಧ್ಯಾಹ್ನದ ಸಮಯದಲ್ಲಿ ಸುಮಾರು 22.65 ಲಕ್ಷ ಷೇರುಗಳ ವಹಿವಾಟು ದಾಖಲಿಸುತ್ತಿದಂತೆಯೇ ಷೇರಿನ ಬೆಲೆ ಏರುತ್ತಾ ಹೋಗಿ ರು.199ರ ಗಡಿ ದಾಟಿತು. ರು.197ರ ಸಮೀಪ ದಿನದ ಅಂತ್ಯ ಕಂಡಿತು.

ಸುದ್ದಿ ಕುದುರೆ ಮೇಲೆ ಷೇರುಪೇಟೆ ಸವಾರಿ, ನಿಮ್ಮ ಹೂಡಿಕೆ ಹೇಗಿದೆ ನೋಡ್ರೀ? ಸುದ್ದಿ ಕುದುರೆ ಮೇಲೆ ಷೇರುಪೇಟೆ ಸವಾರಿ, ನಿಮ್ಮ ಹೂಡಿಕೆ ಹೇಗಿದೆ ನೋಡ್ರೀ?

ಬಯೋಕಾನ್ ನಿಂದ 1:1 ರ ಅನುಪಾತದ ಬೋನಸ್

ಬಯೋಕಾನ್ ನಿಂದ 1:1 ರ ಅನುಪಾತದ ಬೋನಸ್

ಬಯೋಕಾನ್ ಲಿಮಿಟೆಡ್ ಕಂಪೆನಿಯು ಉತ್ತಮ ಫಲಿತಾಂಶ ಮತ್ತು ಆಕರ್ಷಣೀಯ 1:1 ರ ಅನುಪಾತದ ಬೋನಸ್ ಪ್ರಕಟಿಸಿದ ನಂತರವೂ ಷೇರಿನ ಬೆಲೆ ಹೆಚ್ಚು ಬೆಂಬಲ ಪಡೆಯದೇ ತಟಸ್ಥವಾಗಿತ್ತು. ಪ್ರತಿ ಷೇರಿಗೆ ರು.440 ರಂತೆ ಲಾಭಾಂಶ ನೀಡಲಿರುವ ಮರ್ಕ್ ಲಿಮಿಟೆಡ್ ಕಂಪೆನಿಯ ಷೇರು ರು.3,700ರ ಸಮೀಪಕ್ಕೆ ಕುಸಿದಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಪೇಟೆಯ ವಹಿವಾಟುದಾರರು ಕಂಪೆನಿಗಳ ಸಾಧನೆಯ ಬಗ್ಗೆ ಹೆಚ್ಚು ಒತ್ತು ನೀಡದೆ ತಾತ್ಕಾಲಿಕ, ಅಲ್ಪಕಾಲೀನ ರೀತಿಯ ಚಟುವಟಿಕೆಗೆ ಹೆಚ್ಚು ಒಲವು ತೋರುತ್ತಿದ್ದಾರೆ ಎನ್ನಬಹುದು.

ಷೇರು ಬೆಲೆಯ ಏರಿಕೆಯನ್ನು ಪರ್ಸೆಂಟೇಜ್ ಗೆ ಬದಲಾಯಿಸಿ

ಷೇರು ಬೆಲೆಯ ಏರಿಕೆಯನ್ನು ಪರ್ಸೆಂಟೇಜ್ ಗೆ ಬದಲಾಯಿಸಿ

ದುಡ್ಡು ಹಾಕಿದ ನಂತರ ಸುಮ್ಮನೆ ಬಡ್ಡಿ ತೆಗೆದುಕೊಳ್ಳಬಹುದು ಅಥವಾ ತಾನಾಗಿಯೇ ಎಲ್ಲ ಷೇರುಗಳು ಏರಿಕೆ ಕಾಣುತ್ತವೆ. ಬೇಕಾದ ವೇಳೆ ಷೇರು ಮಾರಾಟ ಮಾಡಿ, ತಮಗೆ ಬೇಕಾದ ಉದ್ದೇಶಕ್ಕೆ ಹಣ ಬಳಸಿಕೊಳ್ಳಬಹುದು ಎಂಬ ಧೋರಣೆ ಖಂಡಿತಾ ಒಳ್ಳೆಯದಲ್ಲ. ಅದೇ ರೀತಿ ಷೇರು ಬೆಲೆಯ ಏರಿಕೆಯನ್ನು ಪರ್ಸೆಂಟೇಜ್ ಗೆ ಬದಲಾಯಿಸಿ, ನೋಡಿ. ಆಗ ಲಾಭ ಬಂದಾಗ ತೆಗೆದುಕೊಳ್ಳಬೇಕೇ ವಿನಾ ಕಾಯುತ್ತಾ ಕೂರಬಾರದು ಎಂದು ತಿಳಿಯುತ್ತದೆ ಇನ್ನು ಈಗಿನ ಪರಿಸ್ಥಿತಿಯಲ್ಲಿ ಎದ್ದು ಕಾಣುತ್ತಿರುವುದು ಹೂಡಿಕೆದಾರರಲ್ಲಿನ ನಂಬಿಕೆ ಕೊರತೆ ಅಥವಾ ಚುನಾವಣಾ ಸಮಯವಾದ್ದರಿಂದ ತಮ್ಮ ಚಟುವಟಿಕೆಯನ್ನು ಸೀಮಿತವಾಗಿ ನಡೆಸುತ್ತಿರಬಹದು. ಒಟ್ಟಾರೆ ಕಣ್ಣಿಗೆ ಕಂಡಿದ್ದು ಸತ್ಯವಲ್ಲ, ಕೈಗೆ ಎಟುಕಿಸಿಕೊಂಡಿದ್ದೇ ಸತ್ಯ ಎಂಬಂತಾಗಿದೆ ಈಗಿನ ಪೇಟೆಯ ಪರಿಸ್ಥಿತಿ.

ಷೇರು ಪೇಟೆ ರಿಂಗ್ ಮಾಸ್ಟರ್, ಕಂಪೆನಿ ರೇಟಿಂಗ್ ಎಂಬ ನೀರಿನ ಮೇಲಣ ಗುಳ್ಳೆಷೇರು ಪೇಟೆ ರಿಂಗ್ ಮಾಸ್ಟರ್, ಕಂಪೆನಿ ರೇಟಿಂಗ್ ಎಂಬ ನೀರಿನ ಮೇಲಣ ಗುಳ್ಳೆ

English summary

There is no long term investment in share market, why?

There is no long term investment in share market, why? Here is an analysis by financial columnist and share broker K.G.Krupal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X