For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಗೆ ಹೋಗುವ ಜಂಜಾಟವಿಲ್ಲ! ಎಟಿಎಂಗಳಲ್ಲಿ ಈ 8 ಕೆಲಸ ಮಾಡಬಹುದು

ಎಟಿಎಂ ಕೇಂದ್ರಗಳಲ್ಲಿ ಏನೇಲ್ಲಾ ಸೇವೆಗಳನ್ನು ಪಡೆಯಬಹುದು ಎಂಬುದು ನಮ್ಮಲ್ಲಿ ತುಂಬಾ ಜನರಿಗೆ ತಿಳಿದಿಲ್ಲ. ಆದರೆ ಹಣ ವಿತ್ ಡ್ರಾ ಮಾಡುವುದು ಮತ್ತು ಖಾತೆಯ ಬ್ಯಾಲೆನ್ಸ್ ಚೆಕ್ ಮಾಡುವುದು ಮಾತ್ರ ತಪ್ಪದೇ ಗೊತ್ತಿರುತ್ತದೆ.

|

ಎಟಿಎಂ ಕೇಂದ್ರಗಳಲ್ಲಿ ಏನೇಲ್ಲಾ ಸೇವೆಗಳನ್ನು ಪಡೆಯಬಹುದು ಎಂಬುದು ನಮ್ಮಲ್ಲಿ ತುಂಬಾ ಜನರಿಗೆ ತಿಳಿದಿಲ್ಲ. ಆದರೆ ಹಣ ವಿತ್ ಡ್ರಾ ಮಾಡುವುದು ಮತ್ತು ಖಾತೆಯ ಬ್ಯಾಲೆನ್ಸ್ ಚೆಕ್ ಮಾಡುವುದು ಮಾತ್ರ ತಪ್ಪದೇ ಗೊತ್ತಿರುತ್ತದೆ. ಆದರೆ ಎಟಿಎಂ ಕೇಂದ್ರಗಳಲ್ಲಿ ಇದಕ್ಕಿಂತ ಹೆಚ್ಚು ಸೇವೆಗಳು ಲಭ್ಯವಾಗಲಿವೆ. ಬ್ಯಾಂಕ್ ನ ಶಾಖೆಗೆ ಹೋಗಿ ಮಾಡುವ ಅನೇಕ ಕೆಲಸಗಳನ್ನು ಎಟಿಎಂ ಮೂಲಕ ಮಾಡಬಹುದು.

ಎಫ್ಡಿ ಸೌಲಭ್ಯ

ಎಫ್ಡಿ ಸೌಲಭ್ಯ

ಸ್ಥಿರ ಠೇವಣಿ (ಎಫ್ಡಿ) ವ್ಯವಹಾರಕ್ಕಾಗಿ ಬ್ಯಾಂಕ್ ಶಾಖೆಗೆ ಹೋಗಬೇಕಾಗಿಲ್ಲ. ಎಟಿಎಂನಲ್ಲಿಯೇ ಸ್ಥಿರ ಠೇವಣಿ ಇಡಬಹುದು. ಎಟಿಎಂ ಯಂತ್ರದ ಮೆನುವಿನಲ್ಲಿರುವ ವಿಧಾನಗಳನ್ನು ನೀವು ಅನುಸರಿಸಬೇಕು. ಠೇವಣಿ ಅವಧಿ, ಮೊತ್ತ ಸೇರಿದಂತೆ ಎಲ್ಲ ಮಾಹಿತಿಯನ್ನು ಪಡೆಯಬಹುದು.

ತೆರಿಗೆ ಪಾವತಿ

ತೆರಿಗೆ ಪಾವತಿ

ದೇಶದ ಹಲವಾರು ಬ್ಯಾಂಕುಗಳು ಎಟಿಎಂ ಕೇಂದ್ರಗಳ ಮೂಲಕವೇ ತೆರಿಗೆ ಪಾವತಿಗೆ ಅವಕಾಶ ಮಾಡಿಕೊಟ್ಟಿವೆ. ಮುಂಗಡ ತೆರಿಗೆ, ಸ್ವಯಂ ಮೌಲ್ಯಮಾಪನ ತೆರಿಗೆ ಮತ್ತು ನಿಯಮಿತ ಮೌಲ್ಯಮಾಪನ ತೆರಿಗೆಯನ್ನು ಪಾವತಿಸಬಹುದು.

ಹಣ ಜಮಾ

ಹಣ ಜಮಾ

ಕೆಲ ಎಟಿಎಂಗಳು ಹಣ ಜಮಾ ಮಾಡುವ ಸೌಲಭ್ಯವನ್ನೂ ಕಲ್ಪಿಸಿವೆ. ಎಟಿಎಂ ಪಕ್ಕದಲ್ಲಿ ನಗದು ಠೇವಣಿ ಮಷಿನ್ ಇಟ್ಟಿವೆ. ಅಲ್ಲಿ ಒಂದು ಬಾರಿ ರೂ. 49,900 ವರೆಗೆ ಹಣ ಜಮಾ ಮಾಡಬಹುದು.

ವಿಮೆ ಮೊತ್ತ

ವಿಮೆ ಮೊತ್ತ

ಎಲ್ಐಸಿ, ಹೆಚ್ಡಿಎಫ್ಸಿ ಲೈಫ್, ಎಸ್ಬಿಐ ಲೈಫ್ ನಂತಹ ವಿಮೆ ಕಂಪನಿಗಳು ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಗ್ರಾಹಕರು ಎಟಿಎಂ ಕೇಂದ್ರಗಳ ಮೂಲಕವೇ ಪ್ರೀಮಿಯಂ ಪಾವತಿ ಮಾಡಲು ಅವಕಾಶ ನೀಡಿವೆ.

ಸಾಲಕ್ಕಾಗಿ ಅರ್ಜಿ

ಸಾಲಕ್ಕಾಗಿ ಅರ್ಜಿ

ಗ್ರಾಹಕರು ಎಟಿಎಂ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಫೋನ್ ಬ್ಯಾಂಕಿಂಗ್ ಅಥವಾ ಬ್ಯಾಂಕ್ ಶಾಖೆಗೆ ಹೋಗಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಎಟಿಎಂ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

ಹಣ ವರ್ಗಾವಣೆ

ಹಣ ವರ್ಗಾವಣೆ

ನೆಟ್ ಬ್ಯಾಂಕಿಂಗ್ ಬಳಸದೆ ಇರುವ ಗ್ರಾಹಕರು ಎಟಿಎಂ ಮೂಲಕ ಬೇರೆಯವರ ಖಾತೆಗೆ ಹಣವನ್ನು ವರ್ಗಾವಣೆ ಮಾಡಬಹುದು. ಒಂದು ಬಾರಿ ರೂ. 40 ಸಾವಿರವರೆಗೆ ಹಣ ವರ್ಗಾವಣೆ ಮಾಡಬಹುದು.

ಬಿಲ್ ಪಾವತಿ

ಬಿಲ್ ಪಾವತಿ

ಟೆಲಿಫೋನ್, ವಿದ್ಯುತ್ ಸೇರಿದಂತೆ ಅನೇಕ ಬಿಲ್ ಗಳನ್ನು ಎಟಿಎಂ ಮೂಲಕ ಪಾವತಿ ಮಾಡುವ ಅವಕಾಶವಿದೆ. ಇದಕ್ಕಿಂತ ಮೊದಲು ಬ್ಯಾಂಕ್ ವೆಬ್ಸೈಟ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ.

ರೆಲ್ವೆ ಟಿಕೇಟ್ ಬುಕಿಂಗ್

ರೆಲ್ವೆ ಟಿಕೇಟ್ ಬುಕಿಂಗ್

ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್ಬಿಐ ಕೆಲ ಕೇಂದ್ರಗಳಲ್ಲಿ ಎಟಿಎಂ ಮೂಲಕ ರೆಲ್ವೆ ಟಿಕೇಟ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ಸೌಲಭ್ಯ ಪಡೆಯಲು ಕೆಲ ನಿಯಮಗಳು ಅನ್ವಯವಾಗುತ್ತವೆ.

Read more about: atm banking money
English summary

ATM useful 8 services

you can do these 8 8 services in ATM.
Story first published: Monday, May 6, 2019, 15:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X