ಲೋಕಸಭೆ ಚುನಾವಣೆ ಎರಡು ಗೆಲುವಿನ ವೇಳೆ ಷೇರು ಸೂಚ್ಯಂಕಗಳ ಹೋಲಿಕೆ

ಸೋಮವಾರದಂದು (ಮೇ 23) ಒಂದೇ ದಿನ ಸೆನ್ಸೆಕ್ಸ್ 1,473 ಪಾಯಿಂಟುಗಳ ಅಂತರದಲ್ಲಿ ಏರಿಳಿತಗಳನ್ನು ಪ್ರದರ್ಶಿಸಿದೆ. ಆದರೂ ಅದರ ಏರಿಳಿತದ ಬದಲಾವಣೆಯು ಹಿಂದಿನ ದಿನದ 39,110ರ ಸಮೀಪದಿಂದ ಸೋಮವಾರ 11 ಗಂಟೆಯಲ್ಲಿ 40,124 ಪಾಯಿಂಟುಗಳನ್ನು ತಲುಪಿ, ನಂತರ ಏಕಮುಖವಾಗಿ ಇಳಿಕೆಯತ್ತ ಸಾಗಿ, 38,651ರ ವರೆಗೂ ಇಳಿಕೆ ಕಂಡು, 38,811 ರಲ್ಲಿ ಕೊನೆಗೊಂಡಿತು.

ಅಂದರೆ ಸುಮಾರು 2,400 ಪಾಯಿಂಟುಗಳ ಏರಿಳಿತವನ್ನು ಪ್ರದರ್ಶಿಸಿ, ಎಲ್ಲರ ಗಮನ ಸೆಳೆದಿದೆ. 2014 ರ ಫಲಿತಾಂಶದ ದಿನದಂದು 25 ಸಾವಿರ ಪಾಯಿಂಟುಗಳ ಸಮೀಪವಿದ್ದ ಸೆನ್ಸೆಕ್ಸ್ 742 ಪಾಯಿಂಟುಗಳ ಅಂತರದಲ್ಲಿ ಏರಿಳಿತ ಪ್ರದರ್ಶಿಸಿದರೆ, 2019 ರ ಫಲಿತಾಂಶದ ದಿನ 39 ಸಾವಿರದ ಸಮೀಪವಿದ್ದ ಸೆನ್ಸೆಕ್ಸ್ 1,473 ಅಂತರದ ಪಾಯಿಂಟುಗಳ ಏರಿಳಿತದ ಅನುಪಾತಕ್ಕೆ ಅನುಗುಣವಾಗಿವೆ. ಆದರೆ ಇತರೆ ಉಪ ಸೂಚ್ಯಂಕಗಳು ಅದೇ ರೀತಿ ಸ್ಪಂದಿಸಿಲ್ಲ. ಅದರ ವಿವರ ಇಂತಿದೆ.

ಮಿಡ್ ಕ್ಯಾಪ್ ಇಂಡೆಕ್ಸ್:
2014ರ ಮೇ 26ರಂದು ಲೋಕಸಭಾ ಫಲಿತಾಂಶದ ದಿನ 8,800ರ ಸಮೀಪ ಇದ್ದ ಮಿಡ್ ಕ್ಯಾಪ್ ಇಂಡೆಕ್ಸ್ 8,334ರಿಂದ 8,826ರ ವರೆಗೂ ಏರಿಳಿತ ಪ್ರದರ್ಶಿಸಿದ ಅಂತರ 492 ಪಾಯಿಂಟುಗಳಷ್ಟಿತ್ತು. ಆದರೆ 2019ರ ಮೇ 26ರಂದು 14,610ರಿಂದ 14,999ರ ವರೆಗಿನ 389 ಪಾಯಿಂಟುಗಳ ಅಂತರದಲ್ಲಿ ಏರಿಳಿತ ಪ್ರದರ್ಶಿಸಿದೆ. ಮಿಡ್ ಕ್ಯಾಪ್ ಇಂಡೆಕ್ಸ್ ಸುಮಾರು 80% ರಷ್ಟು ಹೆಚ್ಚಿದ್ದರೂ ಏರಿಳಿತದ ಅಂತರ ಮಾತ್ರ ಇಳಿಕೆಯಾಗಿದೆ. ಅಂದರೆ ಚಟುವಟಿಕೆಯ ಆಸಕ್ತಿ ಕ್ಷೀಣಿಸಿದೆ.

ಲೋಕಸಭೆ ಚುನಾವಣೆ ಎರಡು ಗೆಲುವಿನ ವೇಳೆ ಷೇರು ಸೂಚ್ಯಂಕಗಳ ಹೋಲಿಕೆ

ಮಿಡ್ ಕ್ಯಾಪ್ ಇಂಡೆಕ್ಸ್ ನಲ್ಲಿ ಟೊರೆಂಟ್ ಫಾರ್ಮಾ, ಭಾರತ್ ಫೋರ್ಜ್, ಹನಿವೆಲ್, ಎಂಫಸಿಸ್, ಬರ್ಜರ್ ಪೇಂಟ್ಸ್, ಬಾಯರ್ ಕ್ರಾಪ್ ನಂತಹ ಷೇರುಗಳು ಇವೆ. ಜೊತೆಗೆ ರಿಲಯನ್ಸ್ ಪವರ್, ರಿಲಯನ್ಸ್ ಇನ್ಫ್ರಾ, ದಿವಾನ್ ಹೌಸಿಂಗ್, ಹುಡ್ಕೋ ಕಂಪೆನಿಗಳು ಇವೆ. ಹಾಗಾಗಿ ಏರಿಕೆ ಮತ್ತು ಇಳಿಕೆಗಳನ್ನು ಕೃತಕವಾಗಿ ಪ್ರದರ್ಶಿಸಲು ಅವಕಾಶಗಳು ಸೃಷ್ಟಿಯಾಗುತ್ತವೆ.

ಸ್ಮಾಲ್ ಕ್ಯಾಪ್ ಇಂಡೆಕ್ಸ್:
2014ರ ಮೇ 26ರಂದು ಫಲಿತಾಂಶದ ದಿನ 8,700ರ ಸಮೀಪವಿದ್ದ ಸ್ಮಾಲ್ ಕ್ಯಾಪ್ ಇಂಡೆಕ್ಸ್ 8,826ರಿಂದ 9,299ರವರೆಗೂ ಏರಿಳಿತ ಪ್ರದರ್ಶಿಸಿದ ಅಂತರ 520 ಪಾಯಿಂಟುಗಳಷ್ಟಿತ್ತು. ಆದರೆ 2019ರ ಮೇ 26ರಂದು 14,326 ರಿಂದ 14,610 ರವರೆಗಿನ 284 ಪಾಯಿಂಟುಗಳ ಅಂತರದಲ್ಲಿ ಏರಿಳಿತ ಪ್ರದರ್ಶಿಸಿದೆ. ಸ್ಮಾಲ್ ಕ್ಯಾಪ್ ಇಂಡೆಕ್ಸ್ ಸುಮಾರು 80% ರಷ್ಟು ಹೆಚ್ಚಿದ್ದರೂ ಏರಿಳಿತದ ಅಂತರ ಮಾತ್ರ ಇಳಿಕೆಯಾಗಿದೆ.

ಈ ಇಂಡೆಕ್ಸ್ ನಲ್ಲಿ ಕಂಪನಿಗಳಾದ ಜೆ ಪಿ ಪವರ್, ಬಿಪಿಎಲ್, ಆಶಾಪುರ ಇಂಟಿಮೇಟ್ ಫ್ಯಾಶನ್, ಮನ್ ಪಸಂದ್, ಮಿರ್ಕ್ ಎಲೆಕ್ಟ್ರಾನಿಕ್ಸ್ ಗಳಲ್ಲದೆ ಹೆಚ್ ಐ ಎಲ್, ಟ್ರಾನ್ಸ್ಪೆಕ್, ಅಪ್ಟೆಕ್, ಟಿವಿಎಸ್ ಎಲೆಕ್ಟ್ರಾನಿಕ್ಸ್ ನಂತಹ ಕಂಪನಿಗಳು ಇವೆ.

ಲೋಕಸಭೆ ಚುನಾವಣೆ ಎರಡು ಗೆಲುವಿನ ವೇಳೆ ಷೇರು ಸೂಚ್ಯಂಕಗಳ ಹೋಲಿಕೆ

ಬ್ಯಾಂಕೆಕ್ಸ್ ಇಂಡೆಕ್ಸ್:
2014ರ ಮೇ 26ರಂದು ಫಲಿತಾಂಶದ ದಿನ 17,000ರ ಸಮೀಪವಿದ್ದ ಬ್ಯಾಂಕೆಕ್ಸ್ 17,138 ರಿಂದ 17,845ರ ವರೆಗೂ ಏರಿಳಿತ ಪ್ರದರ್ಶಿಸಿದ ಅಂತರ 707 ಪಾಯಿಂಟುಗಳಷ್ಟಿತ್ತು. ಆದರೆ 2019ರ ಮೇ 26ರಂದು 34,105 ರಿಂದ 35,670ರ ವರೆಗಿನ 1,565 ಪಾಯಿಂಟುಗಳ ಅಂತರದಲ್ಲಿ ಏರಿಳಿತ ಪ್ರದರ್ಶಿಸಿದೆ.

ಬ್ಯಾಂಕ್ಸ್ ಇಂಡೆಕ್ಸ್ ಸುಮಾರು ಎರಡು ಪಟ್ಟು ಹೆಚ್ಚಿದ್ದು ಅದಕ್ಕನುಗುಣವಾಗಿ 2014ರ ಮಟ್ಟದಿಂದ 2019ರ ಪರಿಸ್ಥಿತಿಗೆ ವಹಿವಾಟಿನ ಗಾತ್ರವು ಸಹ ದ್ವಿಗುಣಗೊಂಡಿದೆ. ಬ್ಯಾಂಕ್ ಎನ್ ಪಿಎ ಮಟ್ಟ ಹೆಚ್ಚಿದ್ದು, ಹಲವು ಉದ್ಯಮಿಗಳಿಂದ ಉಂಟಾದ ಸಾವಿರಾರು ಕೋಟಿ ಸಾಲದ ಹಗರಣ ಮುಂತಾದ ತೊಂದರೆಗಳಿದ್ದಾಗ್ಯೂ ಸಹ ಬ್ಯಾಂಕೆಕ್ಸ್ ದ್ವಿಗುಣವಾಗಿರುವುದು ಅಚ್ಚರಿಯ ವಿಷಯವಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಖಾಸಗಿ ಬ್ಯಾಂಕ್ ಗಳಾದ ಆಕ್ಸಿಸ್ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಗಳ ಕೊಡುಗೆ ಅಪಾರವಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಕೊಡುಗೆ ನಿರಾಸಮಯವಾಗಿದೆ.

ಬ್ಯಾಂಕೆಕ್ಸ್ ನಲ್ಲಿ ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್ ಗಳಲ್ಲದೆ ಯಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಗಳು ಇವೆ. ಖಾಸಗಿ ಬ್ಯಾಂಕ್ ಗಳು ಹೆಚ್ಚು ಏರಿಳಿತ ಪ್ರದರ್ಶಿಸುವುದರಿಂದ ಈ ಇಂಡೆಕ್ಸ್ನಲ್ಲಿ ಭಾರಿ ಏರಿಳಿತಗಳನ್ನು ಕಾಣಬಹುದು. ಅಲ್ಲದೆ ಅಗ್ರಮಾನ್ಯ ಖಾಸಗಿ ಬ್ಯಾಂಕ್ ಗಳು ಸೆನ್ಸೆಕ್ಸ್ ನ ಅಂಗವಾಗಿರುವುದು ಸಹ ಈ ಏರಿಳಿತಕ್ಕೆ ಕಾರಣವಾಗಿದೆ.

ಮೆಟಲ್ ಇಂಡೆಕ್ಸ್ :
ಈ ಇಂಡೆಕ್ಸ್ ನ ವಿಸ್ಮಯಕಾರಿ ಅಂಶವೆಂದರೆ ಮೇ 2014ರ 26ರಂದು 12 ಸಾವಿರದ ಸಮೀಪವಿದ್ದದ್ದು 2019ರ ಮೇ 23ರಂದು 10,400ರ ಸಮೀಪಕ್ಕೆ ಇಳಿಕೆ ಕಂಡಿದೆ. ಅಂದರೆ ಈ ವಲಯದ ಷೇರುಗಳು ಹೆಚ್ಚು ಮಾರಾಟದ ಒತ್ತಡದಿಂದ ಕುಸಿದಿರಬಹುದು ಅಥವಾ ಖರೀದಿಯ ಆಸಕ್ತಿ ಕ್ಷೀಣಿಸಿರಬಹುದು.

ಹಿಂದಿನ ವರ್ಷ ಪ್ರತಿ ಷೇರಿಗೆ ರೂ.155ರ ಬೆಲೆಯಲ್ಲಿ ಆಫರ್ ಫಾರ್ ಸೇಲ್ ಮೂಲಕ ಷೇರುಗಳನ್ನು ಮಾರಾಟ ಮಾಡಿದ ಎನ್ ಎಂಡಿಸಿ ಕಂಪೆನಿಯ ಷೇರಿನ ಬೆಲೆ ಸದ್ಯ ರೂ.102ರ ಸಮೀಪ ವಹಿವಾಟಾಗುತ್ತಿದೆ. ಪ್ರತಿ ಷೇರಿಗೆ ರೂ.510ರಂತೆ ಮತ್ತು ಪಾರ್ಟ್ಲಿ ಪೇಡ್ ಷೇರಿಗೆ ರೂ.615ರಂತೆ ವಿತರಿಸಿದ ಟಾಟಾ ಸ್ಟೀಲ್ ಹೆಚ್ಚಿನ ಇಳಿಕೆ ಕಂಡ ಕಾರಣ ಈ ಇಂಡೆಕ್ಸ್ ಇಳಿಕೆ ಕಂಡಿದೆ. ಹಿಂಡಾಲ್ಕೋ, ಹಿಂದ್ ಜಿಮ್ ಕ್, ಜೆಎಸ್ ಡಬ್ಲ್ಯೂ ಸ್ಟೀಲ್, ಜಿಂದಾಲ್ ಸ್ಟೀಲ್ ಅಂಡ್ ಪವರ್ ಗಳು ಸಹ ಈ ಇಂಡೆಕ್ಸ್ ನ ಭಾಗವಾಗಿದೆ.

ಆಟೋ ಇಂಡೆಕ್ಸ್:
2014ರ ಮೇ ಚುನಾವಣಾ ಫಲಿತಾಂಶ ಹೊರಬಂದ ದಿನ ಈ ಇಂಡೆಕ್ಸ್ 15 ಸಾವಿರದ ಸಮೀಪವಿದ್ದು, ಅಂದು 409 ಪಾಯಿಂಟುಗಳ ಅಂತರದಲ್ಲಿ ವಹಿವಾಟನ್ನು ಪ್ರದರ್ಶಿಸಿದೆ. 2019ರ ಮೇ 23ರಂದು ಫಲಿತಾಂಶದ ದಿನ 18,437 ರಿಂದ 18,942 ಪಾಯಿಂಟುಗಳ ವರೆಗೂ ಏರಿಳಿತ ಪ್ರದರ್ಶನದಿಂದ 505 ಪಾಯಿಂಟುಗಳ ಅಂತರದ ಏರುಪೇರು ಪ್ರದರ್ಶಿಸಿದೆ.

ಭಾರತ್ ಫೋರ್ಜ್, ಕಮ್ಮಿನ್ಸ್, ಬಾಷ್, ಮಾರುತಿ, ಬಜಾಜ್ ಆಟೋ, ಐಷರ್ ಮೋಟಾರ್, ಎಂಆರ್ ಎಫ್, ಮದರ್ ಸನ್ ಸುಮಿ, ಅಶೋಕ್ ಲೇಲ್ಯಾಂಡ್ ನೊಂದಿಗೆ ಈ ಇಂಡೆಕ್ಸ್ ನಲ್ಲಿವೆ.

ಆಯಿಲ್ ಅಂಡ್ ಗ್ಯಾಸ್ ಇಂಡೆಕ್ಸ್:
2014ರ ಮೇ ತಿಂಗಳಲ್ಲಿ 11 ಸಾವಿರ ಪಾಯಿಂಟುಗಳಲ್ಲಿದ್ದು, 615 ಪಾಯಿಂಟುಗಳ ಅಂತರದ ವಹಿವಾಟು ಪ್ರದರ್ಶಿಸಿದರೆ, 2019ರ ಮೇನಲ್ಲಿ 15,111 ರಿಂದ 15,650 ಪಾಯಿಂಟುಗಳ ಅಂತರಕ್ಕೆ ಏರಿಕೆ ಕಂಡರೂ ವಹಿವಾಟು 539 ಪಾಯಿಂಟುಗಳ ಅಂತರದಲ್ಲಿ ನಡೆದಿತ್ತು.

ರಿಲಯನ್ಸ್ ಇಂಡಸ್ಟ್ರೀಸ್, ಭಾರತ್ ಪೆಟ್ರೋಲಿಯಂ, ಎಚ್ ಪಿಸಿಎಲ್, ಐಒಸಿಗಳನ್ನು ಒಳಗೊಂಡಿರುವ ಈ ಇಂಡೆಕ್ಸ್ ನಲ್ಲಿ ಒಎನ್ ಜಿಸಿ, ಆಯಿಲ್ ಇಂಡಿಯಾ, ಕ್ಯಾಸ್ಟ್ರಾಲ್ ಗಳೂ ಇವೆ.

ಪಿಎಸ್ ಯು ಇಂಡೆಕ್ಸ್:
23ರ ಮೇ 2019ರಂದು 312 ಪಾಯಿಂಟುಗಳ ಏರಿಳಿತ ಪ್ರದರ್ಶಿಸಿದರೆ, 2014ರಲ್ಲಿ 642 ಪಾಯಿಂಟುಗಳ ಏರಿಳಿತ ಪ್ರದರ್ಶಿಸಿತು. ಅಂದರೆ ಈ ವಲಯ ನೀರಸ ಚಟುವಟಿಕೆಯಲ್ಲಿದೆ.

ಕ್ಯಾಪಿಟಲ್ ಗೂಡ್ಸ್ ಇಂಡೆಕ್ಸ್:
2014ರ ಚುನಾವಣಾ ಫಲಿತಾಂಶ ಹೊರಬಿದ್ದ ದಿನ ಹೆಚ್ಚು ಚಟುವಟಿಕೆ ಭರಿತವಾದ್ದುದು ಈ ಇಂಡೆಕ್ಸ್. ಅಂದು 14,481ರಿಂದ 15,653ರವರೆಗೂ ಏರಿಳಿತ ಪ್ರದರ್ಶಿಸಿದೆ. ಅಂದರೆ ಸುಮಾರು 1,172 ಪಾಯಿಂಟುಗಳ ಏರಿಳಿತ ತೋರಿದೆ. ಈ ವರ್ಷದ ಮೇ 23ರಂದು 18,837 ರಿಂದ 19,729ರವರೆಗೂ ಏರಿಳಿತ ಪ್ರದರ್ಶಿಸಿ, 892 ಪಾಯಿಂಟುಗಳಷ್ಟು ಮಾತ್ರ ಏರುಪೇರು ತೋರಿದೆ.

ಈ ವಲಯದ ಇಂಡೆಕ್ಸ್ ನಲ್ಲಿ ಗ್ರಾಫೈಟ್ ಇಂಡಿಯಾ, ಎಚ್ ಇಜಿ, ಲಕ್ಷ್ಮಿ ಮೆಷಿನ್ ವರ್ಕ್ಸ್, ಸೋಲಾರ್ ಇಂಡಸ್ಟ್ರೀಸ್, ಹ್ಯಾವೆಲ್ಸ್, ಎಐಎ ಇಂಜಿನೀರಿಂಗ್, ಥರ್ಮಾಕ್ಸ್, ಲಾರ್ಸನ್ ಅಂಡ್ ಟೊಬ್ರೋ ಗಳಂತಹ ಕಂಪೆನಿಗಳಲ್ಲದೆ ಸುಜುಲಾನ್, ಎನ್ ಬಿಸಿಸಿ, ಬಿಎಚ್ ಇ ಎಲ್ ನಂತಹ ಕಂಪೆನಿಗಳು ಸಮತೋಲನ ಮೂಡಿಸಲು ಸೇರಿಸಲಾಗಿದೆ.

ಅಂದರೆ ಬ್ಯಾಂಕ್ ಇಂಡೆಕ್ಸ್ ಮತ್ತು ಆಟೋ ಇಂಡೆಕ್ಸ್ ಗಳನ್ನೂ ಹೊರತುಪಡಿಸಿದರೆ ಉಳಿದಂತೆ ಇತರ ವಲಯಾಧಾರಿತ ಇಂಡೆಕ್ಸ್ ಗಳು ಈ ಬಾರಿ ಐದು ವರ್ಷಗಳ ಹಿಂದಿನ ದಿನಕ್ಕೆ ಹೋಲಿಸಿದಾಗ ಹೆಚ್ಚು ನಿರಾಸಮಯವಾಗಿವೆ. ಅಂದರೆ ಈ ವಲಯಗಳಲ್ಲಿ ಹೂಡಿಕೆದಾರರ ಆಸಕ್ತಿ ಕ್ಷೀಣಿತವಾಗುತ್ತಿದೆ.

ಇದಕ್ಕೆ ಅನೇಕ ಕಾರಣಗಳಿರುತ್ತವೆ. ಅದರಲ್ಲಿ ಕಂಪೆನಿಗಳ ಸಾಧನೆಯಲ್ಲಾಗುವ ಬದಲಾವಣೆ, ಇಂಡೆಕ್ಸ್ ಕಮಿಟಿ ಆಗಿಂದಾಗ್ಗೆ ವಲಯದ ಇಂಡೆಕ್ಸ್ ನಲ್ಲಿರುವ ಕಂಪೆನಿಗಳನ್ನು ಬದಲಾಯಿಸುತ್ತಿರುತ್ತದೆ. ಅದು ಸಹ ಚಟುವಟಿಕೆಯಲ್ಲಿ ಬದಲಾವಣೆ ತರಬಹುದು.

ಒಟ್ಟಾರೆ ಅಗ್ರಮಾನ್ಯ ಕಂಪೆನಿಗಳನ್ನು ಹೊರತು ಪಡಿಸಿದರೆ ಇತರೆ ಕಂಪೆನಿಗಳ ಷೇರುಗಳು ಹೂಡಿಕೆದಾರರ ಆಸಕ್ತಿ ಕಳೆದುಕೊಂಡು ಟೊಳ್ಳಾಗಿವೆ. ಇಂತಹ ಕಂಪೆನಿಗಳ ವಹಿವಾಟಿನಲ್ಲಿ ಅಳವಿರುವುದಿಲ್ಲ. ಅಂದರೆ ಕೊಳ್ಳಬೇಕಾದರೆ ಅತಿ ಹೆಚ್ಚು ಬೆಲೆ ತೆರಬೇಕಾಗುವುದು, ಮಾರಾಟ ಮಾಡಬೇಕಾದರೆ ಅತಿ ಕಡಿಮೆ ಬೆಲೆಗೆ ವಿತರಿಸಬೇಕಾಗುವುದು. ಇದು ಷೇರುಪೇಟೆಯ 'ರೆಡಿ ಲಿಕ್ವಿಡಿಟಿ' ಸೌಕರ್ಯಕ್ಕೆ ಧಕ್ಕೆಯುಂಟು ಮಾಡುವುದಲ್ಲದೆ ನಗದೀಕರಿಸಿಕೊಳ್ಳುವ ಸಂದರ್ಭದಲ್ಲಿ ಅಪಾಯಕ್ಕೊಡ್ಡುವ ಸಾಧ್ಯತೆ ಇರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+