For Quick Alerts
ALLOW NOTIFICATIONS  
For Daily Alerts

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಕಳೆದುಕೊಂಡರೆ ಬ್ಲಾಕ್ ಮಾಡುವುದು ಹೇಗೆ?

|

ಡಿಜಿಟಲ್ ಯುಗದಲ್ಲಿ ಡೆಬಿಟ್ ಕಾರ್ಡ್/ಎಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್ ಜನರ ಮೂಲಭೂತ ಅವಶ್ಯಕತೆಯಾಗಿದೆ. ಪ್ರತಿಯೊಬ್ಬರೂ ಒಂದಕ್ಕಿಂತ ಹೆಚ್ಚಿನ ಡೆಬಿಟ್/ಕ್ರೆಡಿಟ್ ಕಾರ್ಡ್ ಗಳನ್ನು ಹೊಂದಿರುತ್ತಾರೆ. ಪ್ರಸ್ತುತ ದಿನಗಳಲ್ಲಿ ನಗದು ರಹಿತ ವ್ಯವಹಾರಗಳಿಗಾಗಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಹೀಗಿರುವಾಗ ಆಕಸ್ಮಿಕವಾಗಿ ನೀವು ಡೆಬಿಟ್ ಕಾರ್ಡ್ಕ್ರೆಡಿಟ್ ಕಾರ್ಡ್ ಕಳೆದುಕೊಂಡರೆ ತಕ್ಷಣದಲ್ಲಿ ಏನು ಮಾಡಬೇಕು? ಕಾರ್ಡ್ ಬ್ಲಾಕ್ ಮಾಡುವುದು ಹೇಗೆ ಎಂಬ ಗೊಂದಲಗಳಿಗೆ ಉತ್ತರ ಇಲ್ಲಿದೆ.

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಕಳೆದುಕೊಂಡರೆ ಬ್ಲಾಕ್ ಮಾಡುವುದು ಹೇಗೆ

 

ನೆಟ್ ಬ್ಯಾಂಕಿಂಗ್

ಇದು ತುಂಬಾ ಸರಳ ವಿಧಾನವಾಗಿದ್ದು, ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ನ್ನು ಕೂಡಲೇ ಬ್ಲಾಕ್ ಮಾಡಬಹುದು. ಮೊದಲು ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಆಗಬೇಕು. ನಂತರ ಅಲ್ಲಿ ತಿಳಿಸಿರುವ ಮಾಹಿತಿಯನ್ನು ನಮೂದಿಸಿ. ಇದು ಕೆಲವೇ ಕ್ಷಣದಲ್ಲಿ ನಡೆದು ಹೋಗುವ ಪ್ರಕ್ರಿಯೆಯಾಗಿದ್ದು, ಆದರೆ ಇಲ್ಲಿ ನಿಮಗೆ ಇಂಟರ್ನೆಟ್ ಸೌಲಭ್ಯ ಇರಬೇಕಾಗುತ್ತದೆ. ಎಲ್ಲ ಆಯ್ಕೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡ ನಂತರವೇ ಕಾರ್ಡ್ ಬ್ಲಾಕ್ ಆಗುತ್ತದೆ.

ಫೋನ್ ಬ್ಯಾಂಕಿಂಗ್

ಇಂಟರ್ನೆಟ್ ಸಂಪರ್ಕ ಸಾಧ್ಯವಿಲ್ಲದೇ ಹೋದಾಗ ಫೋನ್ ಬ್ಯಾಂಕಿಂಗ್ ಬಳಸಿ ಕಾರ್ಡ್ ಬ್ಲಾಕ್ ಮಾಡಬಹುದು. ಕರೆ ಮಾಡಿದಾಗ ಬ್ಯಾಂಕಿನವರು ಕೇಳುವ ಮಾಹಿತಿ ನೀಡಬೇಕಾಗುತ್ತದೆ. ಗುರುತಿನ ಚೀಟಿ ವಿವರ, ಜನ್ಮ ದಿನಾಂಕ ಯಾವುದಾದರೂ ಆಗಬಹುದು. ಎಸ್ಬಿಐ ಕಾರ್ಡ್ ದಾರರು ಐವಿಆರ್ ಮೂಲಕವೂ ಬ್ಲಾಕ್ ಮಾಡಲು ಸಾಧ್ಯವಿದೆ.

ಎಸ್ಎಂಎಸ್

ಕಾರ್ಡ್ ಬ್ಲಾಕ್ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಸ್ಎಂಎಸ್ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಬ್ಯಾಂಕ್ ನಲ್ಲಿ ನೀವು ನೋಂದಣಿಗೆ ನೀಡಿರುವ ಮೊಬೈಲ್ ಸಂಖ್ಯೆಯ ಮೂಲಕವೇ ಸಂದೇಶ ರವಾನೆ ಮಾಡಬೇಕು. ಕಾರ್ಡ್ ಬ್ಲಾಕ್ ಮಾಡಲು BLOCKXXXX to 567676 ಎಂದು ಸಂದೇಶ ರವಾನೆ ಮಾಡಬೇಕು. ನಂತರ ನಿಮಗೆ ಒಂದು ದೃಢೀಕರಣ ಸಂದೇಶ ಸಹ ಬರುತ್ತದೆ.

ಬ್ಯಾಂಕಿಗೆ ಭೇಟಿ ನೀಡಿ

ಕೆಲ ಮೂಲಭೂತ ದಾಖಲಾತಿಗಳನ್ನು ತೆಗೆದುಕೊಂಡು ನೀವು ಖಾತೆ ಹೊಂದಿರುವ ಬ್ಯಾಂಕ್ ಶಾಖೆಗೆ ತೆರಳಿ ಕಾರ್ಡ್ ಬ್ಲಾಕ್ ಮಾಡಿಸಬಹುದು. ನಂತರ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಈ ಅಂಶಗಳು ಗಮನದಲ್ಲಿರಲಿ

1. ಬ್ಯಾಂಕುಗಳು ಹೊಸ ಕಾರ್ಡ್ ನೀಡುವಾಗ ನಿರ್ದಿಷ್ಟ ಶುಲ್ಕ ಪಡೆದುಕೊಳ್ಳಬಹುದು.

2. ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ನಂತರ ಕಾರ್ಡ್ ಸಿಗಲು ನಾಲ್ಕೈದು ಬೇಕಾಗಬಹುದು.

3. ಬ್ಯಾಂಕ್ ನ ಟೋಲ್ ಫ್ರೀ ನಂಬರ್ ಗೆ ಕಾಲ್ ಮಾಡಿ ಬ್ಲಾಕ್ ಮಾಡಲು ಸಾಧ್ಯವಿದೆ.

4. ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವವರು ಮಾತ್ರ ಆನ್ಲೈನ್ ಮೂಲಕ ಬ್ಲಾಕ್ ಮಾಡಲು ಸಾಧ್ಯವಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಡ ಕಳೆದು ಹೋದ ಕೂಡಲೇ ಬ್ಲಾಕ್ ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಹಣ ಬೇರೆಯವರು ದುರುಪಯೋಗ ಮಾಬಹುದು. ಹೀಗಾಗಿ ಬೇರೆಯವರ ಕೈಗೆ ಕಾರ್ಡ್ ನೀಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ.

Read more about: debit card banking money credit card
English summary

How To Block A Lost Debit or Credit Card?

It becomes increasingly difficult to imagine life without a debit or a credit card for a few days. It can be agonizing, if we have misplaced these cards.
Story first published: Thursday, May 30, 2019, 16:25 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more