For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ಕಳೆದುಕೊಂಡರೆ ಪಡೆಯುವುದು ಹೇಗೆ?

ಒಬ್ಬ ವ್ಯಕ್ತಿಯು ಆಧಾರ್ ಕಾರ್ಡ್ ದಾಖಲಾತಿ ಸಮಯದಲ್ಲಿ ನೀಡಲಾದ ಅಂಗೀಕಾರ ಸ್ಲಿಪ್ ನಲ್ಲಿ ನಮೂದಿಸಲಾದ ನೋಂದಣಿ ಸಂಖ್ಯೆಯನ್ನು ಒದಗಿಸುವ ಮೂಲಕ ಯುಐಡಿಎಐನ ಅಧಿಕೃತ ವೆಬ್ಸೈಟ್ ಮೂಲಕ ನಕಲಿ ಆಧಾರ್ ಕಾರ್ಡ್ ಪಡೆಯಲು ಅವಕಾಶವಿದೆ.

|

ಆಧಾರ್ ಕಾರ್ಡ್ ಕಳೆದುಕೊಂಡರೆ ಅಥವಾ ಹಾನಿಗೊಳಗಾದರೆ ಹೊಸ ಆಧಾರ್ ಕಾರ್ಡ್ ಪಡೆಯಲು ಸಾಧ್ಯವೆ ಎಂಬುದು ಹಲವರ ಪ್ರಶ್ನೆ. ಒಬ್ಬ ವ್ಯಕ್ತಿಯು ಆಧಾರ್ ಕಾರ್ಡ್ ದಾಖಲಾತಿ ಸಮಯದಲ್ಲಿ ನೀಡಲಾದ ಅಂಗೀಕಾರ ಸ್ಲಿಪ್ ನಲ್ಲಿ ನಮೂದಿಸಲಾದ ನೋಂದಣಿ ಸಂಖ್ಯೆಯನ್ನು ಒದಗಿಸುವ ಮೂಲಕ ಯುಐಡಿಎಐನ ಅಧಿಕೃತ ವೆಬ್ಸೈಟ್ ಮೂಲಕ ನಕಲಿ ಆಧಾರ್ ಕಾರ್ಡ್ ಪಡೆಯಲು ಅವಕಾಶವಿದೆ. ನಕಲಿ ಆಧಾರ್ ಕಾರ್ಡ್ ಹಳೆಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೂಲ ಕಾರ್ಡಿನಲ್ಲಿರುವ ಇತರ ವಿವರಗಳನ್ನು ಒಳಗೊಂಡಿರುತ್ತದೆ.
ಒಂದುವೇಳೆ ಆಧಾರ್ ಕಾರ್ಡ್ ಕಳೆದುಕೊಂಡರೂ ಆಧಾರ್ ಸಂಖ್ಯೆ ಅಥವಾ ಸ್ವೀಕೃತಿ ನಂಬರ್ ಮರೆಯಬೇಡಿ. ಅಂದರೆ ಆಧಾರ್ ಕಾರ್ಡ್ ನಂಬರ್ ಹಾಗು ನೋಂದಣಿ ನಂತರ ಸಿಗುವ ಸ್ವೀಕೃತಿ ಸಂಖ್ಯೆ ನೆನಪಿನಲ್ಲಿಟ್ಟುಕೊಳ್ಳಿ. ಇವೆರಡು ಇದ್ದರೆ ನಕಲಿ ಆಧಾರ್ ಕಾರ್ಡ್ ನ್ನು ಆನ್ಲೈನ್ ಮೂಲಕ ಪಡೆಯವುಉದು ಸುಲಭ. ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ?

ಆಧಾರ್ ಕಾರ್ಡ್ ಕಳೆದುಕೊಂಡಾಗ ಏನು ಬೇಕು?

ಆಧಾರ್ ಕಾರ್ಡ್ ಕಳೆದುಕೊಂಡಾಗ ಏನು ಬೇಕು?

ನೀವು ಆಧಾರ್ ಕಳೆದುಕೊಂಡರೆ ಆನ್ಲೈನ್ ಮೂಲಕ ಮನವಿ ನಕಲಿ ಕಾರ್ಡ್ ಪ್ರಿಂಟ್ ಮಾಡಬಹುದು. ಇದಕ್ಕಾಗಿ ನಾಮಿನಲ್ ಮೊತ್ತ ರೂ. 50 ಪಾವತಿಸಬೇಕಾಗುತ್ತದೆ. ಜೊತೆಗೆ ನಿಮ್ಮ Virtual Identification number ಗೊತ್ತಿರಬೇಕು. ಮೊಬೈಲ್ ನಂಬರ್ ಆಧಾರ್ ನೊಂದಿಗೆ ಲಿಂಕ್ ಆಗಿದ್ದರೆ ನಿಮ್ಮ ಮೊಬೈಲ್ ಒಟಿಪಿ ಬರುತ್ತದೆ.

ಇ-ಆಧಾರ್ ಕಾರ್ಡ್ ಪಡೆಯುವುದು ಹೇಗೆ?

ಇ-ಆಧಾರ್ ಕಾರ್ಡ್ ಪಡೆಯುವುದು ಹೇಗೆ?

- ಯುಐಡಿಎಐ ವೆಬ್ಸೈಟ್ https://uidai.gov.in/ ಗೆ ಬೇಟಿ ನೀಡಿ.
- ನಿಮ್ಮ ನೋಂದಣಿ ಸಂಖ್ಯೆ ವಿವರ ನಮೂದಿಸಿ (ನೋಂದಣಿ ಸಂಖ್ಯೆ, ದಿನಾಂಕ, ಸಮಯ, ಹೆಸರು, ಪಿನ್ ಕೋಡ್)ಆಧಾರ್ ಸ್ವೀಕೃತಿ ಪಾವತಿಯಲ್ಲಿ ಇರುವಂತೆ.
- ಅಥವಾ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ.
- ಮೇಲ್ಬಾಗದಲ್ಲಿರುವ I HAVE ಅಡಿಯಲ್ಲಿರುವ ಆಧಾರ್ ಆಯ್ಕೆ ಸೂಚಿಸಿ.
- ನೋಂದಾಯಿತ ಮೋಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ನಮೂದಿಸಿ ಮುಂದುವರೆಯಿರಿ.
- ನಿಮ್ಮ ಮೊಬೈಲ್ ನಂಬರ್ ಗೆ ಆಧಾರ್ ಅಥವಾ ದಾಖಲಾತಿ ಐಡಿ ಬಂದ ನಂತರ https://eaadhaar.uidai.gov.in/ ಬೇಟಿ ನೀಡಿ.
- ಅಲ್ಲಿ ನೀವು ಆಧಾರ್ ನಂಬರ್ ಅಥವಾ ದಾಖಲಾತಿ ಸಂಖ್ಯೆ ನಮೂದಿಸಬೇಕು.
- ಆಧಾರ್ ನಂಬರ್ ನಮೂದಿಸಿ, ವಿಳಾಸ, ಪಿನ್ ಕೋಡ್, ಸೆಕ್ಯುರಿಟಿ ಕೋಡ್ ಮತ್ತು ಮೊಬೈಲ್ ನಂಬರ್ ನಮೂದಿಸಿ.
- ನಿಮ್ಮ ಮೊಬೈಲ್ ನಂಬರ್ ಗೆ ಬರುವ OTP ನಮೂದಿಸಿ, Validate and Generat ಮೇಲೆ ಕ್ಲಿಕ್ ಮಾಡಿ.
- ಆನ್ಲೈನ್ ನಲ್ಲಿ ನಕಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು. ಆಧಾರ್ ಪಿಡಿಎಫ್ ಫೈಲ್ ಜನರೇಟ್ ಮಾಡಬಹುದು.

ಆಫ್ಲೈನ್ ಮೂಲಕ ನಕಲಿ ಇ-ಆಧಾರ್ ಕಾರ್ಡ್ ಪಡೆಯುವುದು ಹೇಗೆ?

ಆಫ್ಲೈನ್ ಮೂಲಕ ನಕಲಿ ಇ-ಆಧಾರ್ ಕಾರ್ಡ್ ಪಡೆಯುವುದು ಹೇಗೆ?

ಆಧಾರ್ ದಾಖಲಾತಿ ಕೇಂದ್ರ (Aadhaar Enrolment Centre ) ಭೇಟಿ ನೀಡುವ ಮೂಲಕ ಅಥವಾ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಆಧಾರ್ ​​ನಕಲು ಪ್ರತಿಯನ್ನುಪಡೆಯಬಹುದು.
ಬಳಕೆದಾರರು ಯುಐಡಿಎಐನ ಟೋಲ್-ಫ್ರೀ ಸಂಖ್ಯೆಗೆ 1947 ಕರೆ ಮಾಡಿ, ನಕಲಿ ಆಧಾರ್ ಗಾಗಿ ವಿನಂತಿಸಬಹುದು. ಈ ಮುಂದಿನ ಹಂತಗಳನ್ನು ಅನುಸರಿಸಬೇಕು:
ಹಂತ 1: ಯುಐಡಿಎಐನ ಟೋಲ್ ಫ್ರೀ ಸಂಖ್ಯೆ 1800-180-1947 ಅಥವಾ 1947 ಕ್ಕೆ ಕರೆ ಮಾಡಿ.
ಹಂತ 2: ಐವಿಆರ್ ಆಯ್ಕೆಗಳನ್ನು ಅನುಸರಿಸಿ ಮತ್ತು ಆಧಾರ್ ಕಾರ್ಯನಿರ್ವಾಹಕರೊಂದಿಗೆ ಮಾತನಾಡಿ.
ಹಂತ 3: ನಿಮ್ಮ ಆಧಾರ್ ಕಾರ್ಡ್ ನಕಲು ಪ್ರತಿಗಾಗಿ ಕಾರ್ಯನಿರ್ವಾಹಕರೊಂದಿಗೆ ಚರ್ಚೆ ಮಾಡಿ.
ಹೆಜ್ಜೆ 4: ಕಾರ್ಯನಿರ್ವಾಹಕರು ನಿಮ್ಮ ಗುರುತನ್ನು ಪರಿಶೀಲಿಸಲು ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ.
ಹಂತ 5: ಪರಿಶೀಲಿಸಿದ ನಂತರ, ಕಾರ್ಯನಿರ್ವಾಹಕನು ನಿಮ್ಮ ವಿನಂತಿಯನ್ನು ಒಪ್ಪಿಕೊಂಡು ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾನೆ.
ಹಂತ 6: ನಕಲಿ ಆಧಾರ್ ಕಾರ್ಡ್ ಅನ್ನು ನಿಮ್ಮ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಲಾಗುವುದು.

Read more about: aadhar pan card money uidai
English summary

How to get lost or Duplicate Aadhar Card?

In case of loss or misplacement of Aadhar card, you can get a duplicate Aadhaar card made with ease.
Story first published: Friday, May 10, 2019, 10:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X