ಆಧಾರ್ ನಂಬರ್ ಲಾಕ್, ಅನ್‌ಲಾಕ್‌ ಮಾಡುವುದು ಹೇಗೆ?

ಆಧಾರ್‌ ಸಂಖ್ಯೆಯ ಮಾಹಿತಿ ಗೌಪ್ಯತೆ ಮತ್ತು ಮಾಹಿತಿ ಭದ್ರತೆಯ ಮೂಲಕ ದುರ್ಬಳಕೆ ತಪ್ಪಿಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ಹೊಸ ಸೌಲಭ್ಯವನ್ನು ಪರಿಚಯಿಸಿದೆ.

ಆಧಾರ್‌ ಸಂಖ್ಯೆಯ ಗೌಪ್ಯತೆ ಮತ್ತು ಮಾಹಿತಿ ಭದ್ರತೆಯ ದುರ್ಬಳಕೆ ತಪ್ಪಿಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ಹೊಸ ಸೌಲಭ್ಯವನ್ನು ಪರಿಚಯಿಸಿದೆ.
ಆಧಾರ್ ಗ್ರಾಹಕರ ಖಾಸಗಿತನ ಮತ್ತು ಭದ್ರತಾ ಸುರಕ್ಷತೆ ಹೆಚ್ಚಿಸುವ ಸಲುವಾಗಿ ಆಧಾರ್ ಸಂಖ್ಯೆಯನ್ನು ಲಾಕ್‌ ಅಥವಾ ಅನ್‌ಲಾಕ್‌ ವೈಶಿಷ್ಟ್ಯತೆಗೆ ಮುಂದಾಗಿದೆ. ಆಧಾರ್‌ ಮಾಹಿತಿಯ ಸೋರಿಕೆ, ಆಧಾರ್‌ ದುರ್ಬಳಕೆಯ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಆಧಾರ್ ಲಾಕ್‌ ಮಾಡಿದರೆ?

ಆಧಾರ್ ಲಾಕ್‌ ಮಾಡಿದರೆ?

ಒಂದು ಸಲ ಆಧಾರ್ ನಂಬರ್ ಲಾಕ್‌ ಮಾಡಿದರೆ, ಬಯೋಮೆಟ್ರಿಕ್‌ ಅಥವಾ ಒಟಿಪಿ ಯಾವುದೇ ರೀತಿಯಲ್ಲೂ ನಿಮ್ಮ ಆಧಾರ್‌ ಮಾಹಿತಿ ಪಡೆಯಲು ಸಾಧ್ಯವಾಗುವುದಿಲ್ಲ. ಅನ್‌ಲಾಕ್‌ ಮಾಡಿದರೆ ಮಾತ್ರ ಆಧಾರ್ ಮೂಲಕ ಕೆವೈಸಿ ಪಡೆಯಲು ಸಾಧ್ಯವಾಗುತ್ತದೆ.
ಆಧಾರ್ ನಂಬರ್ ಲಾಕ್‌ ಮತ್ತು ಅನ್ ಲಾಕ್ ಮಾಡಲು ವ್ಯಕ್ತಿಗಳು ಮೊದಲು ವರ್ಚುವಲ್ ಪಿನ್ ಅನ್ನು ಜನರೇಟ್  ಮಾಡಬೇಕಾಗುತ್ತದೆ.

ಲಾಕ್‌/ಅನ್‌ಲಾಕ್‌ ಮಾಡುವ ವಿಧಾನ

ಲಾಕ್‌/ಅನ್‌ಲಾಕ್‌ ಮಾಡುವ ವಿಧಾನ

ಆಧಾರ್ ನಂಬರ್ ನ್ನು ಲಾಕ್‌ ಮಾಡಬೇಕೆಂದರೆ ಮೊದಲು ವರ್ಚುವಲ್‌ ಐಡಿಯನ್ನು ಜನರೇಟ್ ಮಾಡಬೇಕು. ಅದು ಸಾಧ್ಯವಾಗದ್ದರೆ ಆಧಾರ್‌ ಸಂಖ್ಯೆ ಲಾಕ್‌ ಮಾಡಲು ಆಗುವುದಿಲ್ಲ.
ವರ್ಚುವಲ್‌ ಐಡಿಯನ್ನು ಯುಐಡಿಎಐ ವೆಬ್‌ಸೈಟ್‌ ಅಥವಾ ಎಸ್‌ಎಂಎಸ್‌ (ದೂರವಾಣಿ ಸಂಖ್ಯೆ 1947) ಕಳಿಸುವ ಮೂಲಕ ಮಾಡಿಕೊಳ್ಳಬಹುದು. ಆದರೆ, ಯುಐಡಿಎಐ ಯಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆ ನೋಂದಣಿಯಾಗಿರಬೇಕು. https://resident.uidai.gov.in/biometric-lock

ಆನ್ಲೈನ್ ಮೂಲಕ ಆಧಾರ್‌ ಲಾಕ್‌ ಹೇಗೆ?

ಆನ್ಲೈನ್ ಮೂಲಕ ಆಧಾರ್‌ ಲಾಕ್‌ ಹೇಗೆ?

ಆಧಾರ್ ಲಾಕ್, ಅನ್ ಲಾಕ್ ಗಾಗಿ www.uidai.gov.in ಜಾಲತಾಣಕ್ಕೆ ಪ್ರವೇಶಿಸಿ.
- My Aadhaar ಮೇಲೆ ಕ್ಲಿಕ್ ಮಾಡಿ 'Aadhaar services' ಟ್ಯಾಬ್‌, ನಲ್ಲಿರುವ 'Aadhaar lock/unlock' ಆಪ್ಸನ್ ಮೇಲೆ ಕ್ಲಿಕ್ ಮಾಡಿ.

- 'Lock UID' ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಧಾರ್ ಸಂಖ್ಯೆ, ಹೆಸರು (ದಾಖಲೆಯಲ್ಲಿರುವಂತೆ), ಪಿನ್‌ ಕೋಡ್‌, ಸೆಕ್ಯೂರಿಟಿ ಕೋಡ್‌ಗಳನ್ನು ತುಂಬಿರಿ.
- ವಿವರಗಳನ್ನು ತುಂಬಿದ ಬಳಿಕ 'Enter OTP' ಮೇಲೆ ಕ್ಲಿಕ್‌ ಮಾಡಿ. ಒಟಿಪಿ ನಿಮ್ಮ ಮೊಬೈಲ್ ಗೆ ಎಸ್‌ಎಂಎಸ್‌ ಮೂಲಕ ಬರುತ್ತದೆ.
- ನಂತರ ಒಟಿಪಿಯನ್ನು ಸಬ್‌ಮಿಟ್‌ ಮಾಡಿದರೆ ನಿಮ್ಮ ಆಧಾರ್‌ ಸಂಖ್ಯೆ ಲಾಕ್‌ ಆಗುತ್ತದೆ.

ಆಧಾರ್ ಅನ್‌ಲಾಕ್‌ ಮಾಡುವುದು ಹೇಗೆ?

ಆಧಾರ್ ಅನ್‌ಲಾಕ್‌ ಮಾಡುವುದು ಹೇಗೆ?

ಆಧಾರ್ ಅನ್‌ಲಾಕ್‌ ಮಾಡಲು ಯುಐಡಿಎಐ ವೆಬ್‌ಸೈಟ್‌ಗೆ ಪ್ರವೇಶಿಸಿ, ಆಧಾರ್‌ ಲಾಕ್‌/ಅನ್‌ಲಾಕ್‌ ಆಯ್ಕೆಯಲ್ಲಿ ಅನ್‌ಲಾಕ್‌ ಮೇಲೆ ಕ್ಲಿಕ್ ಮಾಡಿ. ಮುಂದಿನ ಹಂತಗಳನ್ನು ಅನುಸರಿಸುತ್ತಾ ಹೋದರೆ ನಿಮ್ಮ ಆಧಾರ್‌ ಸಂಖ್ಯೆಯು ಅನ್‌ಲಾಕ್‌ ಆಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+