ದೇಶದ ಪ್ರಮುಖ ಹೂಡಿಕೆಗಳಲ್ಲಿ ಸ್ಥಿರ ಠೇವಣಿಗಳು ಹೆಚ್ಚು ಪ್ರಸಿದ್ದಿಯನ್ನು ಪಡೆದಿದ್ದು, ಹೆಚ್ಚು ರಿಸ್ಕ್ ಇಲ್ಲದೇ ಸ್ಥಿರವಾದ ರಿಟರ್ನ್ ಪಡೆಯಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಹೂಡಿಕೆ ವಿಧಾನವಾಗಿದೆ.
ದೇಶದ ಪ್ರಮುಖ ಹೂಡಿಕೆಗಳಲ್ಲಿ ಸ್ಥಿರ ಠೇವಣಿಗಳು ಹೆಚ್ಚು ಪ್ರಸಿದ್ದಿಯನ್ನು ಪಡೆದಿದ್ದು, ಹೆಚ್ಚು ರಿಸ್ಕ್ ಇಲ್ಲದೇ ಸ್ಥಿರವಾದ ರಿಟರ್ನ್ ಪಡೆಯಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಹೂಡಿಕೆ ವಿಧಾನವಾಗಿದೆ. ಆದರೆ ಕೆಲವರಿಗೆ ಇದರ ನಿಯಮಾವಳಿಗಳ ಬಗ್ಗೆ ಅದರಲ್ಲೂ ಆದಾಯ ತೆರಿಗೆ, ಬಡ್ಡಿ ಆದಾಯ ಅಂಶಗಳ ಬಗ್ಗೆ ಸರಿಯಾದ ಅರಿವು ಇರುವುದಿಲ್ಲ.
ಬ್ಯಾಂಕು ಹಾಗು ಕಂಪನಿಗಳ ಎಫ್ಡಿಗಳಲ್ಲಿ ಹೂಡಿಕೆ ಮಾಡುವಾಗ ಹಲವು ಗೊಂದಲಗಳಿರುತ್ತವೆ. ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಹೀಗೆ ಯಾವ ಆಧಾರದ ಮೇಲೆ ಹೆಚ್ಚು ಆಕರ್ಷಕ ಬಡ್ಡಿದರ ಸಿಗುತ್ತದೆ ಎಂಬ ಲೆಕ್ಕಾಚಾರ ಮಾಡುತ್ತೇವೆ. ಅನೇಕ ಸಂದರ್ಭಗಳಲ್ಲಿ ಕಂಪನಿಗಳು ಹೂಡಿಕೆದಾರರಲ್ಲಿ ಆಮಿಷ ಹುಟ್ಟಿಸುವ ಸಂದರ್ಭಗಳಿರುವುದರಿಂದ ಎಚ್ಚರಿಕೆಯ ನಡೆ ಬೇಕಾಗಿರುತ್ತದೆ.
ಹಿರಿಯ ನಾಗರಿಕರಿಗೆ, ಗೃಹಿಣಿಯರಿಗೆ, ಶೂನ್ಯ ಅಥವಾ ಕಡಿಮೆ ತೆರಿಗೆ ಹೊಂದಿರುವ ವ್ಯಕ್ತಿಗಳಿಗೆ, ಚಾರಿಟೆಬಲ್/ಧಾರ್ಮಿಕ ದತ್ತಿ ಇತರ ಸ್ಥಿರ ಠೇವಣಿಗಳಿಗೆ ಸಂಬಂಧಿಸಿದಂತೆ ವಿಭಿನ್ನವಾದ ಯೋಜನೆಗಳು ಇವೆ.
ನೀವು ಬ್ಯಾಂಕು ಅಥವಾ ಕಂಪನಿಗಳಲ್ಲಿ ಎಫ್ಡಿ ಠೇವಣಿಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಬೇಕಾಗಿರುತ್ತದೆ.
ಭದ್ರತೆ/ಸುರಕ್ಷತೆಗೆ ಪ್ರಥಮ ಆದ್ಯತೆ
ಕಷ್ಟ ಪಟ್ಟು ದುಡಿದ ಹಣ ಹೂಡಿಕೆ ಮಾಡುವಾಗ ಅದರ ಭದ್ರತೆ, ಸುರಕ್ಷತೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದ್ದು, ಇದು ತುಂಬಾ ಮುಖ್ಯವಾದ ಅಂಶವಾಗಿದೆ. ಎಫ್ಡಿಗಳ ಮೇಲೆ ಹೂಡಿಕೆ ಮಾಡುವುದು ನಮ್ಮ ದೇಶದಲ್ಲಿ ತುಂಬಾ ಸುರಕ್ಷಿತ ಎಂದೇ ಭಾವಿಸಲಾಗಿದೆ. ಆರ್ಬಿಐ ನಿಂದ ಬ್ಯಾಂಕುಗಳನ್ನು ನಿಯಂತ್ರಿಸಲ್ಪಡುವುದರಿಂದ ಇದು ಯಾವಾಗಲೂ ಸುರಕ್ಷಿತ ಆಯ್ಕೆಯಾಗಿರುತ್ತದೆ.
ಕಾರ್ಪೋರೇಟ್ ಎಫ್ಡಿಗಳು ಬ್ಯಾಂಕ್ ಎಫ್ಡಿಗಳಷ್ಟು ಸುರಕ್ಷಿತವಲ್ಲ ಎಂಬುದನ್ನು ಮರೆಯಬಾರದು. ಒಂದು ಲಕ್ಷದವರೆಗಿನ ಹೂಡಿಕೆ ಮೇಲೆ ಬ್ಯಾಂಕುಗಳು ಭದ್ರತೆ ಒದಗಿಸಿದರೆ ಕಂಪನಿಗಳ ಹೂಡಿಕೆ ಮೇಲೆ ಈ ಮಾತು ನಿಜವಲ್ಲ. ಒಂದು ವೇಳೆ ಕಂಪನಿಗಳು ದಿವಾಳಿಯಾದರೆ ಹೂಡಿಕೆದಾರರ ಹಣಕ್ಕೆ ಆಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಗಮನಿಸಬೇಕು.
ಹಣದುಬ್ದರದ ಪರಿಣಾಮಗಳೇನು?
ಹಣದುಬ್ದರ ಎದುರಾದರೆ ಎಫ್ಡಿಗಳನ್ನು ರಕ್ಷಿಸುವುದು ಕಷ್ಟ. ಏಕೆಂದರೆ ಸ್ಥಿರ ಠೇವಣಿಗಳ ಮೆಚುರಿಟಿ ಸಂದರ್ಭದಲ್ಲಿ ತೀವ್ರವಾಗಿ ಹಣದುಬ್ಬರದಲ್ಲಿ ಹೆಚ್ಚಳವಾದಲ್ಲಿ ಬರಬೇಕಾದ ಇಳುವರಿಯಲ್ಲಿ ಇಳಿಕೆಯಾಗುತ್ತದೆ. ಷೇರು, ಇಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಇನ್ನು ಅನಿಶ್ಚಿತತೆಯಿಂದ ಕೂಡಿರುತ್ತದೆ. ಬೇರೆ ಹೂಡಿಕೆಗಳಿಗೆ ಹೋಲಿಸಿದರೆ ಬ್ಯಾಂಕು ಎಫ್ಡಿಗಳೇ ಉತ್ತಮ ಆಯ್ಕೆ ಎನ್ನಬಹುದು.
ಆಕರ್ಷಕವಲ್ಲದ ತೆರಿಗೆ ಆದಾಯ
ಗ್ರಾಹಕರನ್ನು ಸೆಳೆಯಲು ಹಲವು ಕಂಪನಿಗಳು ಖಾಸಗಿ ಅಥವಾ ಸಾರ್ವಜನಿಕ ವಲಯದ ಬ್ಯಾಂಕುಗಳು ನೀಡುವ ಎಫ್ಡಿ ಬಡ್ಡಿದರಕ್ಕಿಂತ ಹೆಚ್ಚಿನ ಆಕರ್ಷಕ ಬಡ್ಡಿದರಗಳನ್ನು ಘೋಷಿಸುತ್ತವೆ.
ಆದರೆ ಶೇ. 30ರಷ್ಟು ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ನೀವು ಬಂದರೆ ಕಂಪನಿಗಳ ಎಫ್ಡಿಗಳ ತೆರಿಗೆ ಆದಾಯದ ಮೇಲೆ ಯಾವುದೇ ಆಕರ್ಷಕ ಸೌಲಭ್ಯಗಳು ಸಿಗುವುದಿಲ್ಲ.
ಟಿಡಿಎಸ್ ಕಡಿತ
ಒಂದು ಹಣಕಾಸು ವರ್ಷದಲ್ಲಿ ಸ್ಥಿರ ಠೇವಣಿಗಳ ಮೇಲೆ ರೂ. 10 ಸಾವಿರಕ್ಕಿಂತ ಹೆಚ್ಚಿನ ಬಡ್ಡಿಯನ್ನು ಗಳಿಸಿದರೆ ಶೇ. 10 ರಷ್ಟು ಟಿಡಿಎಸ್ (tax deducted at source) ಕಡಿತಗೊಳಿಸಲಾಗುತ್ತದೆ. ಒಂದು ವೇಳೆ ನೀವು ಪ್ಯಾನ್ ಕಾರ್ಡ್ ನೀಡದಿದ್ದರೆ ಶೇ. 20ರಷ್ಟು ತೆರಿಗೆ ಕಡಿತಗೊಳಿಸಲಾಗುತ್ತದೆ. ಮರುಕಳಿಸುವ ಠೇವಣಿಗಳು (ಆರ್ಡಿ) ಕೂಡ ಈ ವ್ಯಾಪ್ತಿಗೆ ಒಳಪಡುತ್ತದೆ.
ಜೊತೆಗೆ ಒಂದು ಹಣಕಾಸು ಸಾಲಿನಲ್ಲಿ ಒಂದು ಬ್ಯಾಂಕಿನ ಬೇರೆ ಬೇರೆ ಶಾಖೆಗಳಲ್ಲಿ ಒಂದಕ್ಕಿಂತ ಹೆಚ್ಚಿನ FD ಅಥವಾ RD (ಹೆಚ್ಚುವರಿ ಖಾತೆಗಳ ಮೇಲೆ ಟಿಡಿಎಸ್ ಕಡಿತ) ಠೇವಣಿಗಳಿದ್ದಲ್ಲಿ ರೂ. 10 ಸಾವಿರಕ್ಕಿಂತ ಹೆಚ್ಚಿನ ಬಡ್ಡಿ ಮೇಲೆ ಶೇ. ೧೦ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು.
ಟಿಡಿಎಸ್ ಘೋಷಣೆ
ಬ್ಯಾಂಕುಗಳು ನಿಮ್ಮ ಟಿಡಿಎಸ್ ಕಡಿತಗೊಳಿಸಿದ್ದರೂ ಕೂಡ ಆದಾಯ ತೆರಿಗೆ ಫೈಲಿಂಗ್ ಸಂದರ್ಭದಲ್ಲಿ ಘೋಷಿಸಬೇಕಾಗುತ್ತದೆ. ತೆರಿಗೆ ನಿಯಮದ ಪ್ರಕಾರ ಬಡ್ಡಿ ಆದಾಯ ಕೂಡ ಟ್ಯಾಕ್ಸೆಬಲ್ ಆಗಿರುತ್ತದೆ.
ಬ್ಯಾಂಕಿನವರು ಶೇ. ೧೦ರಷ್ಟು ಟಿಡಿಎಸ್ ಕಡಿತ ಮಾಡಿದ್ದರೂ ನೀವೂ ತೆರಿಗೆ ಪಾವತಿದಾರರ ಪಟ್ಟಿಗೆ ಒಳಪಟ್ಟಿದ್ದರೆ ತೆರಿಗೆ ಫೈಲಿಂಗ್ ಸಂದರ್ಭದಲ್ಲಿ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ.
ನಾಮಿನಿ ಹೆಸರು, ಹಿರಿಯ ನಾಗರಿಕರು
ಕಂಪನಿ ಸ್ಥಿರ ಠೇವಣಿಗಳಲ್ಲಿ ಹಣ ಹೂಡಿಕೆ ಮಾಡುವಾಗ ಹೂಡಿಕೆದಾರರು ನಾಮಿನಿಯ ಹೆಸರನ್ನು ಒದಗಿಸಬೇಕಾಗುತ್ತದೆ. ಒಂದು ವೇಳೆ ಸ್ಥಿರ ಠೇವಣಿ ಮೆಚುರಿಟಿಯಾಗುವ ಮೊದಲೇ ಹೂಡಿಕೆದಾರ ಮರಣ ಹೊಂದಿದ್ದಲ್ಲಿ ಆ ಮೊತ್ತ ನಾಮಿನಿಗೆ ಪಾವತಿಸಲ್ಪಡುತ್ತದೆ.
ಅಲ್ಲದೇ ಬ್ಯಾಂಕುಗಳ ಸ್ಥಿರ ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ ಹೆಚ್ಚು ಬಡ್ಡಿದರ ಪಾವತಿಸುವುದರಿಂದ ಹೆಚ್ಚು ಬಡ್ಡಿ ಆದಾಯ ಗಳಿಸಬಹುದಾಗಿದೆ.
ಕಂಪನಿ ಎಫ್ಡಿ ಗಳಿಂದ ಆದಷ್ಟು ದೂರವಿರಿ
ಹೌದು, ಬ್ಯಾಂಕು ಸ್ಥಿರ ಠೇವಣಿಗಳು ಹೆಚ್ಚು ಸುರಕ್ಷಿತ ಮತ್ತು ಸುಭದ್ರವಾಗಿರುತ್ತವೆ. ಹೂಡಿಕೆ ಮಾಡಿದ ಹಣ ಹಿಂಪಡೆಯುವಲ್ಲಿ ಯಾವುದೇ ತೊಂದರೆಗಳಿರುವುದಿಲ್ಲ. ಆದರೆ ಕಂಪನಿ ಎಫ್ಡಿಗಳ ವಿಷಯದಲ್ಲಿ ಜಾಗೂರಕರಾಗಿರರಬೇಕು. ಕಂಪನಿಗಳು ದಿವಾಳಿತನಕ್ಕೆ ಅಥವಾ ನಷ್ಟಕ್ಕೆ ಒಳಗಾದರೆ ಹೂಡಿಕೆ ಮಾಡಿದ ಹಣ ಸಿಗುವ ನಂಬಿಕೆ ಇರುವುದಿಲ್ಲ. ಕಂಪನಿಗಳು ಕೊಡುವ ಆಫರ್ ಗಳು ಆಕರ್ಷಕವಾಗಿದ್ದರೂ ಎಚ್ಚರಿಕೆಯಿಂದ ಇರುವುದು ಉತ್ತಮ.
ಆರ್ಬಿಐ ನಿಯಮ
1949ರ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯಿದೆ ಪ್ರಕಾರ ಬ್ಯಾಂಕು ಸ್ಥಿರ ಠೇವಣಿಗಳು ಆರ್ಬಿಐ ನಿಯಂತ್ರಣಕ್ಕೆ ಒಳಪಟ್ಟಿವೆ. 1956ರ ಕಂಪನಿ ಕಾಯಿದೆ ಪ್ರಕಾರ ಕಂಪನಿಗಳು ಸ್ಥಿರ ಠೇವಣಿಗಳಿಗಿಂತ ಇಕ್ವಿಟಿ, ಷೇರುದಾರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬಹುದಾಗಿದೆ. ಹೀಗಾಗಿ ಕಾರ್ಪೋರೇಟ್ ಸ್ಥಿರ ಠೇವಣಿಗಳು ಅಪಾಯಕಾರಿ ಎಂಬುದನ್ನು ಗಮನದಲ್ಲಿರಲಿ.
ಅಪಾಯ ಉದಾಸೀನತೆ
ಕಾಪೋರೇಟ್ ಎಫ್ಡಿಗಳು ಅಪಾಯವನ್ನು ತಂದೊಡ್ಡುತ್ತವೆ. ಕೆಲ ಸಂದರ್ಭಗಳಲ್ಲಿ ಮೆಚುರಿಟಿ ಪೂರ್ವದಲ್ಲಿ ಹೂಡಿಕೆದಾರರು ಠೇವಣಿಗಳನ್ನು ವಿತ್ ಡ್ರಾ ಮಾಡುವುದರಿಂದ ಈ ಅಪಾಯಗಳು ಸಂಭವಿಸುತ್ತವೆ. ಒಂದು ವೇಳೆ ಕಾರ್ಪೋರೇಟ್ ಕಂಪನಿ ನಷ್ಟದಲ್ಲಿದ್ದರೆ ಮೆಚುರಿಟಿ ಮೊತ್ತವನ್ನು ಕೊಡಲು ಸಾದ್ಯವಾಗದೇ ಇರಬಹುದು.
15G ಅಥವಾ 15H ಫಾರ್ಮ್
ವಾರ್ಷಿಕವಾಗಿ ನಿಮ್ಮ ಆದಾಯ ರೂ. 2.5 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ ನೀವು ತೆರಿಗೆ ಪಾವತಿದಾರರ ಯಾದಿಗೆ ಒಳಪಡುವುದಿಲ್ಲ. ಅಂತ ಸಂದರ್ಭದಲ್ಲಿ 15G ಅಥವಾ 15H ಫಾರ್ಮ್ ಸಲ್ಲಿಸುವುದರ ಮೂಲಕ ನಿಮ್ಮ ಬಡ್ಡಿ ಆದಾಯದ ಮೇಲೆ ಕಡಿತವಾಗುವ ಟಿಡಿಎಸ್ ನಿಂದ ತಪ್ಪಿಸಿಕೊಳ್ಳಬಹುದು. ಒಂದು ವೇಳೆ ಈ ಫಾರ್ಮ್ ಗಳನ್ನು ಸಲ್ಲಿಸಲು ಮರೆತಲ್ಲಿ ರಿಫಂಡ್ ಪಡೆಯುವಾಗ ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕಾಗುತ್ತದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications