ಕೇಂದ್ರದ ರೈತರ ಬೆಳೆ ವಿಮೆ ಯೋಜನೆ, ಆಯ್ಕೆಯಾಗಬೇಕೆ? ಕಡ್ಡಾಯಗೊಳಿಸಬೇಕೆ?

ರೈತರಿಗಾಗಿ ಬೆಳೆ ವಿಮೆ ಯೋಜನೆಯನ್ನು ಮಾಡುವುದರ ಕುರಿತು ಕೇಂದ್ರ ಸರ್ಕಾರವು ಅಭಿಪ್ರಾಯಗಳನ್ನು ಕೋರಿ ರಾಜ್ಯಗಳಿಗೆ ಪತ್ರ ಬರೆದಿದೆ ಎಂದು ಮಂಗಳವಾರ ಲೋಕಸಭೆಗೆ ತಿಳಿಸಿದೆ.

ರೈತರಿಗಾಗಿ ಬೆಳೆ ವಿಮೆ ಯೋಜನೆಯನ್ನು ಮಾಡುವುದರ ಕುರಿತು ಕೇಂದ್ರ ಸರ್ಕಾರವು ಅಭಿಪ್ರಾಯಗಳನ್ನು ಕೋರಿ ರಾಜ್ಯಗಳಿಗೆ ಪತ್ರ ಬರೆದಿದೆ ಎಂದು ಮಂಗಳವಾರ ಲೋಕಸಭೆಗೆ ತಿಳಿಸಿದೆ.
ರೈತರಿಗೆ ಬೆಳೆ ವಿಮೆ ಆಯ್ಕೆಯಾಗಬೇಕೆ ಅಥವಾ ಕಡ್ಡಾಯಗೊಳಿಸಬೇಕೆ ಎಂಬ ಕುರಿತು ಸಲಹೆ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ. ರೈತರ ಜೀವನ ಮಳೆ ಜೊತೆಗಿನ ಕಾದಾಟವಿದ್ದಂತೆ. ಪ್ರಸ್ತುತ ಪ್ರಾಕೃತಿಕ ಪರಿಸ್ಥಿತಿಯಲ್ಲಿ ಬೆಳೆ ವಿಮೆ ಯೋಜನೆ ಕಡ್ಡಾಯವಾಗಿದೆ.

ರಾಜ್ಯಗಳಿಂದ ಸಲಹೆ

ರಾಜ್ಯಗಳಿಂದ ಸಲಹೆ

ಕೇಂದ್ರ ಸರ್ಕಾರವು ಬೆಳೆ ವಿಮೆ ಯೋಜನೆ ಜಾರಿ ಕುರಿತು ಸಲಹೆ ನೀಡುವಂತೆ ಕೋರಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಮವಾರ ಪತ್ರ ಬರೆಯಲಾಗಿದೆ. ಬೇಡಿಕೆಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿ ಸರ್ಕಾರ ತೊಡಗಿಸಿಕೊಂಡಿದೆ. ರೈತರಿಗೆ ಬೆಳೆ ವಿಮೆ ಆಯ್ಕೆಯಾಗಬೇಕೆ ಅಥವಾ ಕಡ್ಡಾಯಗೊಳಿಸಬೇಕೆ ಎಂಬ ಬಗ್ಗೆ
ಪಂಚಾಯತ್ ರಾಜ್ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವ ಪರ್ಷೋತ್ತಮ್ ಖೋಡಾಭಾಯ್ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾಹಿತಿ ನೀಡಿದ್ದು, ರಾಜ್ಯಗಳು ಸಲಹೆ ನೀಡಲಿವೆ ಎಂದಿದ್ದಾರೆ.

ರೈತರಿಗೆ ವಿಮೆ ಮೊತ್ತ ಪಾವತಿ

ರೈತರಿಗೆ ವಿಮೆ ಮೊತ್ತ ಪಾವತಿ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಥವಾ ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ರೈತರು ನೀಡುವ ಪ್ರೀಮಿಯಂ ಜೊತೆಗೆ ಕೇಂದ್ರ, ರಾಜ್ಯ ಸರ್ಕಾರಗಳ ಪ್ರೀಮಿಯಂ ಸಬ್ಸಿಡಿಯನ್ನು ಸಂಬಂಧಿಸಿದ ವಿಮ ಕಂಪನಿಗಳಿಗೆ ಪಾವತಿಸಲಾಗುವುದು. ಬೆಳೆ ವಿಮೆಯು ದೊಡ್ಡ ಮಟ್ಟದ ಅಪಾಯವನ್ನು ತಗ್ಗಿಸುವ ಮೂಲಕ ರೈತರಿಗೆ ಲಾಭ ಒದಗಿಸಲಿದೆ. ಪ್ರಾಕೃತಿಕ ಅಪಾಯ, ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ವಿಮೆ ಮೊತ್ತ ಪಾವತಿಸಲಾಗುವುದು.

ಬೆಳೆ ವಿಮೆ ತೀರ್ಮಾನ

ಬೆಳೆ ವಿಮೆ ತೀರ್ಮಾನ

ಸಾಲ ಪಡೆಯುವ ರೈತರಿಗೆ ಬೆಳೆ ವಿಮೆ ಕಡ್ಡಾಯವಾಗಿದೆ. ಬೆಳೆ ವಿಮೆ ತೀರ್ಮಾನವ್ನು ರೈತರ ಆಯ್ಕೆಗೆ ಬಿಡಬೇಕೆ ಹೊರತು ಕಡ್ಡಯ ಮಾಡಬಾರದು ಎಂದು ರೈತ ಸಂಘಟನೆಗಳು ಮನವಿ ಮಾಡಿವೆ ಎಂದಿದ್ದಾರೆ. ಕೆಲವು ರಾಜ್ಯ ಸರ್ಕಾರಗಳು ಮತ್ತು ರೈತ ಸಂಘಗಳು ಈ ಯೋಜನೆಯನ್ನು ಕೃಷಿ ಸಚಿವಾಲಯವು ಸ್ವಯಂಪ್ರೇರಿತವಾಗಿ ಮಾಡಬೇಕೆಂದು ಒತ್ತಾಯಿಸಿದ ನಂತರ ಈ ಪತ್ರವನ್ನು ಬರೆಯಲಾಗಿದೆ ಎಂದು ಪರ್ಷೋತ್ತಮ್ ಖೋಡಾಭಾಯ್ ಲೋಕಸಭೆಯಲ್ಲಿ ಹೇಳಿದರು.

 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+