For Quick Alerts
ALLOW NOTIFICATIONS  
For Daily Alerts

ಪಿಪಿಎಫ್ ಖಾತೆ ಮೇಲೆ ಸಾಲ ಪಡೆಯುವ ಮುನ್ನ ನಿಮಗಿದು ತಿಳಿದಿರಲಿ..

|

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಹೂಡಿಕೆ ಮೇಲೆ ಶೇ. 8ರಷ್ಟು ಬಡ್ಡಿದರ ಲಭ್ಯವಿದ್ದು, ಇದು ಪ್ರತಿ ತ್ರೈಮಾಸಿಕದ ಆಧಾರದಲ್ಲಿ ಪರಿಷ್ಕರಿಸಲಾಗುತ್ತದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಒಂದು ಆಕರ್ಷಕ ಹಾಗು ಹೆಚ್ಚಿನವರ ನೆಚ್ಚಿನ ಹೂಡಿಕೆಯಾಗಿದ್ದು, ಇದರ ಮೇಲೆ ಪಡೆಯುವ ಬಡ್ಡಿದರವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಇದು ಹೆಚ್ಚು ಆದಾಯ ಬಯಸುವ ಸಣ್ಣ ಹೂಡಿಕೆದಾರರಿಗೆ ಒಂದು ವರದಾನ ಎಂಬುದರಲ್ಲಿ ಸಂಶಯವಿಲ್ಲ.

 

ಪಿಪಿಎಫ್ ಖಾತೆ ಮೇಲೆ ಸಾಲ ಪಡೆಯುವ ಮುನ್ನ ನಿಮಗಿದು ತಿಳಿದಿರಲಿ..

ನಿಗದಿಪಡಿಸಿದ ಅವಧಿಯ ವರ್ಷಗಳನ್ನು ಪೂರ್ಣಗೊಳಿಸಿದರೆ ಪಿಪಿಎಪ್ ಖಾತೆ ಮೇಲೆ ಸಾಲವನ್ನು ಪಡೆಯಬಹುದಾಗಿದೆ. ಬೇರೆ ಕಡೆ ಲಭ್ಯವಿರುವ ಸಾಲಕ್ಕಿಂತಲೂ ಇಲ್ಲಿ ತುಂಬಾ ಆಕರ್ಷಕ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ. (Read More: ಪಿಪಿಎಫ್)
ನೀವು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (ಪಿಪಿಎಫ್) ಸಾಲ ಪಡೆಯಲು ಬಯಸಿದಲ್ಲಿ ಈ ಅಂಶಗಳನ್ನು ತಪ್ಪದೇ ತಿಳಿದುಕೊಳ್ಳೋಳಬೇಕು..

ಯಾವಾಗ ಲಭ್ಯ
6 ವರ್ಷಗಳ ಕಾಲಾವಧಿಗೆ ಖಾತೆಯನ್ನು ತೆರೆದವರು 3ನೇ ವರ್ಷದಿಂದ ಪಿಪಿಎಪ್ ಖಾತೆ ಮೇಲೆ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಗರಿಷ್ಠ ಮೊತ್ತ
ಮೂರನೇ ವರ್ಷಕ್ಕೆ ಗರಿಷ್ಠ ಮೊತ್ತ ಪಡೆಯುವ ಆಯ್ಕೆ ನಿಮ್ಮದಾಗಿದಲ್ಲಿ ಮೊದಲ ಹಣಕಾಸಿನ ವರ್ಷದ ಕೊನೆಯಲ್ಲಿ ನಿಮ್ಮ ಖಾತೆಯ ಗರಿಷ್ಠ ಶೇ. 25ರಷ್ಟು ಉಳಿತಾಯದ ಮೇಲೆ ಸಾಲದ ಮೊತ್ತವನ್ನು ನಿರ್ಬಂಧಿಸಲಾಗುತ್ತದೆ. ಅಂದರೆ ನಾಲ್ಕನೇ ವರ್ಷದಲ್ಲಿ ಎರಡನೇ ವರ್ಷದ ಉಳಿತಾಯವನ್ನು ಖಾತೆಗೆ ತೆಗೆದುಕೊಳ್ಳಲಾಗುತ್ತದೆ.

ಅರ್ಹತೆ
7ನೇ ವರ್ಷದ ಪ್ರಾರಂಭದಿಂದ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆ ಮೇಲೆ ಸಾಲವನ್ನು ಪಡೆಯಲು ಅರ್ಹತೆ ಇರುವುದಿಲ್ಲ. ಆದರೆ 7ನೇ ವರ್ಷದ ಅವಧಿಯಲ್ಲಿ ಹಣವನ್ನು ಹಿಂದಕ್ಕೆ ಪಡೆಯಬಹುದು.

ಸಾಲ ಮರುಪಾವತಿ
36 ತಿಂಗಳುಗಳ ಒಳಗಾಗಿ ಸಾಲದ ಮೊತ್ತವನ್ನು ಮರುಪಾವತಿ ಮಾಡಬೇಕೆಂಬುದನ್ನು ಗಮನಿಸಬೇಕು. ತಿಂಗಳ ಕಂತುಗಳಲ್ಲಿ ಅಥವಾ ಭಾರಿ ಮೊತ್ತದ ವಿಧಾನದ ಮೂಲಕ ಸಾಲ ಮರುಪಾವತಿ ಮಾಡಬಹುದಾಗಿರುತ್ತದೆ.

ಸಾಲದ ಮೇಲಿನ ಬಡ್ಡಿದರ
ಚಾಲ್ತಿಯಲ್ಲಿರುವ ಪಿಪಿಎಪ್ ಬಡ್ಡಿದರಕ್ಕಿಂತಲು ಸಾಲದ ಮೇಲಿನ ಬಡ್ಡಿದರ ವಾರ್ಷಿಕವಾಗಿ ಶೇ. 2ರಷ್ಟು ಅನ್ವಯಿಸುತ್ತದೆ. ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿಸದಿದ್ದರೆ ಶೇ. 6ಕ್ಕಿಂತಲು ಹೆಚ್ಚು ಬೆಲೆ ಭರಿಸಬೇಕಾಗುತ್ತದೆ.

ಅಸಲು ಮತ್ತು ಬಡ್ಡಿ ಪಾವತಿ
36 ತಿಂಗಳುಗಳ ಒಳಗಾಗಿ ಕಂತುಗಳಲ್ಲಿ ಅಥವಾ ಭಾರಿ ಮೊತ್ತಗಳಲ್ಲಿ ಅಸಲು ಮೊತ್ತವನ್ನು ಕಟ್ಟಬೇಕಾಗುತ್ತದೆ. ಅಸಲು ಮೊತ್ತವನ್ನು ಕಟ್ಟಿದ ಮೇಲೆ ಬಡ್ಡಿಯ ಭಾಗವನ್ನು ಎರಡು ತಿಂಗಳ ಕಂತುಗಳಲ್ಲಿ ಮರುಪಾವತಿಸಬೇಕಾಗುತ್ತದೆ.

ಎರಡನೇ ಸಾಲ
ಪಿಪಿಎಪ್ ನಲ್ಲಿ ಮೊದಲ ಸಾಲವನ್ನು ಹಿಂತಿರುಗಿಸಿದ ನಂತರ ಎರಡನೇ ಬಾರಿಗೆ ಸಾಲವನ್ನು ಪಡೆಯಲು ಅವಕಾಶವಿದೆ.

ಖಾತೆ ನಿಷ್ಕ್ರಿಯ
ಖಾತೆಯನ್ನು ನಿಷ್ಕ್ರಿಯಗೊಳಿಸಿದ ನಂತರ ಖಾತೆದಾರರು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮೊತ್ತದ ಮೇಲೆ ಸಾಲವನ್ನು ಪಡೆಯಲು ಸಾಧ್ಯವಿಲ್ಲ. ಸಾಲವನ್ನು ಪಡೆಯಲು ಬಯಸಿದಲ್ಲಿ ಅಗತ್ಯವಿರುವ ಮೊತ್ತವನ್ನು ದಂಡದೊಂದಿಗೆ ಖಾತೆಗೆ ಹಾಕಿ ಸಕ್ರಿಯಗೊಳಿಸಿ ಸಾಲವನ್ನು ಪಡೆಯಬಹುದಾಗಿದೆ.

Read more about: ppf money loan interest rates
English summary

How to take PPF Loan? Must know these things

Public provident fund (PPF) is among the most popular investment options for long-term savings. Deposits made under PPF also qualify for tax benefits.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X