For Quick Alerts
ALLOW NOTIFICATIONS  
For Daily Alerts

190 ರುಪಾಯಿಯಿಂದ 750 ತಲುಪಿದ್ದ ಟಾಟಾ ಸ್ಟೀಲ್ ಷೇರು ಖರೀದಿಸಬಹುದಾ?

By ಕೆ.ಜಿ.ಕೃಪಾಲ್
|

ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠದ ದಾಖಲೆಯನ್ನು ಮಂಗಳವಾರದಂದು 41,312.07 ಪಾಯಿಂಟುಗಳ ತಲುಪುವ ಮೂಲಕ ನಿರ್ಮಿಸಿದೆ. ಹೀಗೆ ಗರಿಷ್ಠದಲ್ಲಿದ್ದಾಗ ಎಂತಹ ಷೇರುಗಳನ್ನು ಖರೀದಿಸುವುದು ಎಂಬ ಪ್ರಶ್ನೆ ಏಳುವುದು ಸಹಜ. ಸೂಚ್ಯಂಕಗಳು ಗರಿಷ್ಠದಲ್ಲಿ ವಹಿವಾಟಾಗುತ್ತಿದ್ದಾಗ ರಭಸದ ಏರಿಳಿತಗಳು ಹೆಚ್ಚಾಗುವುದರಿಂದ ಹೂಡಿಕೆಯನ್ನು ದೀರ್ಘಾವಧಿಗೆ ಮುಂದುವರೆಸುವುದು ಸರಿಯಲ್ಲ.

ಏಕೆಂದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವ್ಯಾವಹಾರಿಕ ಗೊಂದಲಗಳು, ಆಂತರಿಕವಾಗಿ ನಡೆಯುತ್ತಿರುವ ಎನ್ ಬಿಎಫ್ ಸಿ ವಲಯದ ಸಮಸ್ಯೆಗಳು ಪೇಟೆಗಳನ್ನು ಹೆಚ್ಚು ಸೂಕ್ಷ್ಮತೆಯಿಂದ ಕೂಡಿಸಿವೆ. ಇಂತಹ ಸಂದರ್ಭದಲ್ಲಿ ಹೂಡಿಕೆ ಮಾಡುವಾಗ ಹೆಚ್ಚಿನ ಆದ್ಯತೆಯನ್ನು ಸುಭದ್ರ ಕಂಪೆನಿಗಳಿಗೆ ನೀಡಿದಲ್ಲಿ ಅಲ್ಪ ಮಟ್ಟಿನ ಸುರಕ್ಷತೆಯನ್ನು ಕಾಣಬಹುದು.

ಷೇರುಪೇಟೆ ಜಾದೂ: 35 ರುಪಾಯಿಗೆ ವಿತರಿಸಿದ್ದ ಕೆನರಾ ಬ್ಯಾಂಕ್ ನ ಷೇರು 810 ತಲುಪಿತ್ತು

 

ಇತ್ತೀಚೆಗೆ ಚೀನಾ- ಅಮೆರಿಕಾ ದೇಶಗಳ ನಡುವಿನ ಟ್ರೇಡ್ ವಾರ್ ಕಾರಣ ಲೋಹ ವಲಯದ ಕಂಪೆನಿಗಳು ಹೆಚ್ಚು ಒತ್ತಡದಲ್ಲಿದ್ದು, ಭಾರಿ ಕುಸಿತವನ್ನು ಪ್ರದರ್ಶಿಸಿವೆ. ಸೆನ್ಸೆಕ್ಸ್ ನಲ್ಲಿರುವ 30 ಕಂಪೆನಿಗಳಲ್ಲಿ ಎಲ್ಲವೂ ಏರಿಕೆಯಾಗಲಿ ಅಥವಾ ಇಳಿಕೆಯಾಗಲಿ ಕಾಣುವುದು ಅಪರೂಪದ ಬೆಳವಣಿಗೆಯಾಗಿದೆ.

ತ್ವರಿತವಾದ ಏರಿಳಿತ ಪ್ರದರ್ಶಿಸಿವೆ

ತ್ವರಿತವಾದ ಏರಿಳಿತ ಪ್ರದರ್ಶಿಸಿವೆ

ಕೆಲವು ತಮ್ಮದೇ ಅದ ಕಾರಣಗಳಿಗೆ ಏರಿಳಿತ ಪ್ರದರ್ಶಿಸಿದರೆ, ಮತ್ತೆ ಕೆಲವು ಬಾಹ್ಯ ಕಾರಣಗಳಿಗೆ ಸ್ಪಂದಿಸಿ, ಏರಿಳಿತ ಪ್ರದರ್ಶಿಸುತ್ತವೆ. ಸೆನ್ಸೆಕ್ಸ್ ನಲ್ಲಿ ವಿತ್ತೀಯ ವಲಯದ ಕಂಪೆನಿಗಳು ಹೆಚ್ಚಾಗಿರುವುದರಿಂದ ಆ ಸಮೂಹದ ಷೇರುಗಳು ಹೆಚ್ಚು ಪ್ರಭಾವಿಯಾಗಿದ್ದರೂ ಇತರೆ ಕಂಪೆನಿಗಳಾದ ಟಾಟಾ ಸ್ಟೀಲ್, ಟಾಟಾ ಮೋಟಾರ್, ಲಾರ್ಸನ್ ಅಂಡ್ ಟೊಬ್ರೋ, ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ ಸುಜುಕಿ, ಏಷಿಯನ್ ಪೇಂಟ್ಸ್, ಭಾರ್ತಿ ಏರ್ ಟೆಲ್, ಬಜಾಜ್ ಆಟೋ, ಮಹಿಂದ್ರಾ ಅಂಡ್ ಮಹಿಂದ್ರಾ, ಇನ್ಫೋಸಿಸ್, ಟಿಸಿಎಸ್, ಎಚ್ ಸಿ ಎಲ್ ಟೆಕ್, ಕೋಲ್ ಇಂಡಿಯಾ ಮುಂತಾದವುಗಳು ಆಗಿಂದಾಗ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಐಟಿಸಿ, ಟಾಟಾ ಸ್ಟೀಲ್, ಟಾಟಾ ಮೋಟಾರ್ ಗಳು ತ್ವರಿತವಾದ ಏರಿಳಿತಗಳನ್ನು ಪ್ರದರ್ಶಿಸುತ್ತಿವೆ.

490ರ ಸಮೀಪ ವಹಿವಾಟು ಆಗುತ್ತಿರುವ ಟಾಟಾ ಸ್ಟೀಲ್
 

490ರ ಸಮೀಪ ವಹಿವಾಟು ಆಗುತ್ತಿರುವ ಟಾಟಾ ಸ್ಟೀಲ್

ಟಾಟಾ ಸ್ಟೀಲ್ ಕಂಪೆನಿಯು ಸದ್ಯ ರೂ. 490ರ ಸಮೀಪ ವಹಿವಾಟಾಗುತ್ತಿದ್ದು, ಹಿಂದಿನ ವರ್ಷದ ಆರಂಭದಲ್ಲಿ ಈ ಷೇರಿನ ಬೆಲೆ ರೂ.700 ದಾಟಿತ್ತು. 2019ರ ಜನವರಿಯಲ್ಲಿ ರೂ.442ರ ಸಮೀಪಕ್ಕೆ ಕುಸಿದು, ನಂತರ ಚೇತರಿಕೆ ಕಾಣುತ್ತಿರುವ ಈ ಕಂಪೆನಿ ಅಂತರ್ಗತವಾಗಿ ಬಲಿಷ್ಠವಾಗಿದ್ದರೂ ವೈವಿಧ್ಯಮಯ ಕಾರಣಗಳಿಂದ ಹೆಚ್ಚಿನ ಒತ್ತಡಕ್ಕೊಳಗಾತ್ತದೆ. ಇದರಿಂದ ಅಲ್ಪಕಾಲೀನ ಲಾಭಕ್ಕೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಟಾಟಾ ಸ್ಟೀಲ್ ಕಂಪೆನಿ 2010ರಲ್ಲಿ ಪ್ರತಿ ಷೇರಿಗೆ ರೂ.610ರಂತೆ ಎಫ್ ಪಿಒ ಮೂಲಕ ವಿತರಿಸಿತ್ತು. ನಂತರದ ವರ್ಷಗಳಲ್ಲಿ ಅಂದರೆ 2013ರಲ್ಲಿ ರೂ.190ರೊಳಗೆ ಕುಸಿದು, ಎಫ್ ಪಿಒ ಮೂಲಕ ಷೇರು ಪಡೆದವರಿಗೇ ಅಪಾರವಾದ ಹಾನಿಗೊಳಪಡಿಸಿತು. ಆದರೆ ಜನವರಿ 2018ರಲ್ಲಿ ರೂ.750ರ ವರೆಗೂ ಏರಿಕೆ ಕಂಡಿತ್ತು.

ಲೋಕಸಭೆ ಚುನಾವಣೆ ಎರಡು ಗೆಲುವಿನ ವೇಳೆ ಷೇರು ಸೂಚ್ಯಂಕಗಳ ಹೋಲಿಕೆ

ಭಾಗಶಃ ಪಾವತಿಸಿದ ಷೇರು ರೂ.615ರ ಬೆಲೆಯಲ್ಲಿ ವಿತರಣೆ

ಭಾಗಶಃ ಪಾವತಿಸಿದ ಷೇರು ರೂ.615ರ ಬೆಲೆಯಲ್ಲಿ ವಿತರಣೆ

ಈ ಸಂದರ್ಭದಲ್ಲಿ ಕಂಪೆನಿಯು ಮತ್ತೊಮ್ಮೆ ಹಕ್ಕಿನ ಷೇರನ್ನು ವಿತರಿಸಲು ನಿಗದಿತ ದಿನ ಗೊತ್ತು ಪಡಿಸಿತು. ಪ್ರತಿ ಷೇರಿಗೆ ರೂ.510ರಂತೆ ಪೂರ್ಣವಾಗಿ ಪಾವತಿಸಿದ ಷೇರುಗಳನ್ನು ವಿತರಿಸಿತು. ಅಂದರೆ ಈ ಒಂದು ವರ್ಷದಲ್ಲಿ ಷೇರಿನ ಬೆಲೆಯೂ ಕುಸಿದು, ಹಕ್ಕಿನ ಷೇರಿನ ವಿತರಣಾ ಬೆಲೆಗಿಂತ ಕಡಿಮೆ ದರದಲ್ಲಿ ವಹಿವಾಟಾಗುತ್ತಿದೆ. ಇದೇ ಸಂದರ್ಭದಲ್ಲಿ ಕಂಪೆನಿಯು ಭಾಗಶಃ ಪಾವತಿಸಿದ ಷೇರುಗಳನ್ನು ಪ್ರತಿ ಷೇರಿಗೆ ರೂ.615ರ ಬೆಲೆಯಲ್ಲಿ ವಿತರಿಸಿ, ಮೊದಲನೇ ಕಂತು ರೂ.154 ಪಾವತಿಸಲಾಗಿದೆ. ಈ ಭಾಗಶಃ ಪಾವತಿಸಿದ ಷೇರುಗಳು ರೂ.55 ರಿಂದ 60ರಲ್ಲಿ ವಹಿವಾಟಾಗುತ್ತಿದ್ದು, ಉಳಿದ ಹಣ ರೂ.461 ಕಂಪೆನಿಯ ಕರೆ ಬಂದಾಗ ಪಾವತಿಸಬೇಕಾಗಿದೆ.

ಷೇರು ಪೇಟೆಯಲ್ಲಿ ಹೀಗಂತ ಇರುವುದು ಶಾರ್ಟ್ ಸೆಲ್ಲಿಂಗ್ ಅಲ್ಲ, ಹೂಡಿಕೆ ಹಣದ ಶಾರ್ಟ್ ಕಿಲ್ಲಿಂಗ್

ರೂ.13ರಂತೆ ಲಾಭಾಂಶ ಸಹ ಪ್ರಕಟಿಸಿದೆ

ರೂ.13ರಂತೆ ಲಾಭಾಂಶ ಸಹ ಪ್ರಕಟಿಸಿದೆ

ಅಂದರೆ ಕಂಪೆನಿಯ ಷೇರಿನ ಬೆಲೆಯು ರೂ.470ರ ಸಮೀಪಕ್ಕೆ ಬಂದರೆ ಅದು ಉತ್ತಮ ಹೂಡಿಕೆಯಾಗಬಹುದಾಗಿದೆ. ಕಾರಣ, ಬೆಲೆಯು ಷೇರಿನ ಎರಡನೇ ಕಂತಿನ ಹಣಕ್ಕಿಂತ ಕೆಳಗೆ ಬಂದರೆ, ಕಂತಿನ ಹಣ ಪಾವತಿಸುವ ಉತ್ಸಾಹವೇ ಉಡುಗಿ ಹೋಗುವುದರಿಂದ ಅಲ್ಲಿ ಸ್ಥಿರತೆ ಕಾಣದೆ ಪುಟಿದೇಳುವ ಸಾಧ್ಯತೆ ಇದೆ. ಈ ಮಧ್ಯೆ ಕಂಪೆನಿ ಮಾರ್ಚ್ ಅಂತ್ಯದಲ್ಲಿ ಉತ್ತಮ ಸಾಧನೆಯನ್ನು ಪ್ರದರ್ಶಿಸಿರುವುದರಿಂದ ಪ್ರತಿ ಷೇರಿಗೆ ರೂ.13ರಂತೆ ಲಾಭಾಂಶವನ್ನು ಸಹ ಪ್ರಕಟಿಸಿದೆ. ಇದು ಹಿಂದಿನ ವರ್ಷದ ರೂ.10ಕ್ಕಿಂತ ಹೆಚ್ಚಿರುವುದು. ಈ ಲಾಭಾಂಶವನ್ನು ಪಡೆಯಲು ಜುಲೈ 4 ವರೆಗೂ ಸಮಯಾವಕಾಶವಿದೆ. ಅಗ್ರಮಾನ್ಯ ವಲಯದ, ಶತಮಾನಕ್ಕೂ ಹೆಚ್ಚಿನ ಹಳೆಯದಾದ, ಉತ್ತಮ ಕಾರ್ಯ ನಿರ್ವಹಣೆಯೊಂದಿಗೆ, ಹೂಡಿಕೆದಾರರಿಗೆ ಆಕರ್ಷಕ ಲಾಭದ ಇಳುವರಿ ಒದಗಿಸುತ್ತಿರುವ ಈ ಕಂಪೆನಿ ಷೇರು ಕುಸಿತ ಕಂಡಾಗ ಹೂಡಿಕೆಗೆ ಆಕರ್ಷಕವಾಗಿದ್ದು, ಸದ್ಯ ಲಾಭಾಂಶ ಮತ್ತು ಎರಡನೇ ಕಂತಿನ ಹಣ ಪಾವತಿಸುವುದು ಬಾಕಿ ಇರುವುದರಿಂದ ಪ್ರತಿ ಕುಸಿತವು ಹೂಡಿಕೆಗೆ ಅವಕಾಶ ಎನ್ನಬಹುದು.

ಫಂಡ್ ರೈಸಿಂಗ್ ಎಂಬ ಹೊಸ ಟ್ರೆಂಡ್; ಬ್ಯಾಂಕ್ ಗಳು ಸಹ ಇದರಿಂದ ಹೊರತಲ್ಲ

English summary

Is it a right time and price to purchase Tata Steel share?

Is it a right time and price to purchase Tata Steel share? Here is an analysis with accurate numbers by Oneindia columnist and stock broker KG Krupal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more