For Quick Alerts
ALLOW NOTIFICATIONS  
For Daily Alerts

ಬಾಡಿಗೆ ಮನೆ ಮಾಡುವ ಮುನ್ನ ಇಲ್ಲೊಮ್ಮೆ ನೋಡಿ...

ಇರುವ ಊರನ್ನು ಬಿಟ್ಟು ಬೇರೆ ಊರಿಗೆ ವರ್ಗಾವಣೆಯಾಗುವುದು ಅನೇಕ ರೀತಿಯಿಂದ ಯಾತನಾದಾಯಕವಾಗಿರುತ್ತದೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು, ಬಾಡಿಗೆ ಮನೆ ಹುಡುಕುವುದು, ಮಕ್ಕಳನ್ನು ಶಾಲೆಗೆ ಸೇರಿಸುವುದು ಹೀಗೆ ಹಲವಾರು ಕೆಲಸಗಳನ್ನು ಮಾಡಬೇಕು.

|

ಇರುವ ಊರನ್ನು ಬಿಟ್ಟು ಬೇರೆ ಊರಿಗೆ ವರ್ಗಾವಣೆಯಾಗುವುದು ಅನೇಕ ರೀತಿಯಿಂದ ಯಾತನಾದಾಯಕವಾಗಿರುತ್ತದೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು, ಬಾಡಿಗೆ ಮನೆ ಹುಡುಕುವುದು, ಮಕ್ಕಳನ್ನು ಶಾಲೆಗೆ ಸೇರಿಸುವುದು ಹೀಗೆ ಹಲವಾರು ಕೆಲಸಗಳನ್ನು ಮಾಡಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ವೃತ್ತಿಪರರು ಹಾಗೂ ವಿದ್ಯಾರ್ಥಿಗಳು ಒಂದಿಲ್ಲೊಂದು ಕಾರಣಕ್ಕೆ ಬೇರೆ ನಗರಕ್ಕೆ ಸ್ಥಳಾಂತರಗೊಳ್ಳುವುದು ಅನಿವಾರ್ಯವಾಗುತ್ತಿದೆ. ಒಂದು ನಗರಕ್ಕೆ ಹೋದ ತಕ್ಷಣ ಮೊದಲಿಗೆ ಮಾಡಬೇಕಿರುವ ಕೆಲಸ ಎಂದರೆ ವಾಸಿಸಲು ಜಾಗ ಹುಡುಕುವುದು. ಅಂದರೆ ಬಾಡಿಗೆ ಮನೆ ಮಾಡುವುದು ಮೊದಲ ಕೆಲಸವಾಗುತ್ತದೆ. 2017-18ನೇ ಸಾಲಿನ ಎಕನಾಮಿಕ್ ಸರ್ವೆಯೊಂದರ ಪ್ರಕಾರ ಭಾರತದಲ್ಲಿ ನಗರ ಪ್ರದೇಶಗಳಲ್ಲಿನ ಶೇ.28 ರಷ್ಟು ಜನ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾರೆ ಎಂಬುದು ಗೊತ್ತಾಗಿದೆ.
ಬಾಡಿಗೆಗೆ ಮನೆ ನೋಡಲು ಹೋದಾಗ ಕೆಲ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ತಮ್ಮದೇ ಚಿತ್ರ ವಿಚಿತ್ರ ನಿಯಮಗಳನ್ನು ವಿಧಿಸುವ ಮನೆ ಮಾಲೀಕರು ಅಥವಾ ಆಗಾಗ ಬಾಡಿಗೆ ಹೆಚ್ಚು ಮಾಡುವೆ ಎನ್ನುವ ಮಾಲೀಕರುಗಳನ್ನು ನೀವು ನೋಡಬೇಕಾಗುತ್ತದೆ. ಇಂಥ ಪರಿಸ್ಥಿತಿಗಳಲ್ಲಿ ಮೋಸ ಹೋಗದಂತಿರಲು ಬಾಡಿಗೆದಾರನಾಗಿ ನಿಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ. ಬಾಡಿಗೆ ಮನೆ ಹಿಡಿಯುವ ಮುನ್ನ ಇಲ್ಲಿ ತಿಳಿಸಲಾದ 8 ಅಂಶಗಳ ಬಗ್ಗೆ ತಿಳಿದುಕೊಳ್ಳಿ.

ಬಾಡಿಗೆ ಮತ್ತು ಹೆಚ್ಚಳ

ಬಾಡಿಗೆ ಮತ್ತು ಹೆಚ್ಚಳ

ಮನೆ ಇರುವ ಪ್ರದೇಶ, ಮನೆ ಕಟ್ಟಿ ಎಷ್ಟು ವರ್ಷವಾಗಿದೆ, ಮನೆಯಲ್ಲಿ ಹಾಗೂ ಸುತ್ತಮುತ್ತಲೂ ಯಾವೆಲ್ಲ ಸೌಲಭ್ಯಗಳಿವೆ. ಹೀಗೆ ಹಲವಾರು ಅಂಶದ ಮೇಲೆ ಮನೆ ಬಾಡಿಗೆ ನಿರ್ಧಾರವಾಗುತ್ತದೆ. ಯಾವುದೇ ನಿರ್ದಿಷ್ಟ ಆಸ್ತಿಯ ಬಾಡಿಗೆ ಮೌಲ್ಯ ಆ ಆಸ್ತಿಯ ಮಾರುಕಟ್ಟೆ ಬೆಲೆಯ ಶೇ. 2 ರಿಂದ 4 ರಷ್ಟಾಗಿರುತ್ತದೆ. ಅತ್ಯಂತ ಸಿರಿವಂತ ಬಡಾವಣೆಯಾಗಿದ್ದರೆ ಅಥವಾ ವಿಶೇಷ ಪ್ರದೇಶವಾಗಿದ್ದಲ್ಲಿ ಇದರ ಮೇಲೆ ಒಂದಿಷ್ಟು ಪ್ರೀಮಿಯಂ ನೀಡಬೇಕಾಗಬಹುದು ಎನ್ನುತ್ತಾರೆ ಜೆಎಲ್‌ಎಲ್ ಇಂಡಿಯಾ ರಿಯಲ್ ಎಸ್ಟೇಟ್ ಕಂಪನಿಯ ಸಿಇಓ ಹಾಗೂ ಕಂಟ್ರಿ ಹೆಡ್ ರಮೇಶ ನಾಯರ್.
ಬಾಡಿಗೆ ಹೆಚ್ಚಳದ ದರವನ್ನು ಬಾಡಿಗೆದಾರ ಮತ್ತು ಮಾಲೀಕ ಇಬ್ಬರೂ ಸೇರಿ ಒಮ್ಮತದಿಂದ ನಿರ್ಧರಿಸಬೇಕಾಗುತ್ತದೆ. ಮನೆ ಮಾಲೀಕ ಬೇಕಾಬಿಟ್ಟಿಯಾಗಿ ಬಾಡಿಗೆ ಹೆಚ್ಚು ಮಾಡುವಂತಿಲ್ಲ.
ಸ್ಥಳೀಯವಾಗಿ ಬಾಡಿಗೆ ಹೆಚ್ಚು ಮಾಡಲು ಬಹುತೇಕ ರಾಜ್ಯಗಳು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಂಡಿವೆ. ಆದರೂ ಭಾರತದ ಬಹುತೇಕ ಭಾಗಗಳಲ್ಲಿ ಮಾಲೀಕರು ವರ್ಷಕ್ಕೆ ಶೇ. 10 ರಿಂದ 11 ರಷ್ಟು ಬಾಡಿಗೆ ಹೆಚ್ಚಳ ಮಾಡಬಹುದಾಗಿದೆ. ಇಂಥ ವಿಷಯದಲ್ಲಿ ಮಾಲೀಕ ಹಾಗೂ ಬಾಡಿಗೆದಾರರ ಮಧ್ಯೆ ತಕರಾರು ಬಂದಲ್ಲಿ ಸರಕಾರದ ರೆಂಟ್ ಕಂಟ್ರೋಲ್ ಆಕ್ಟ್ ಪ್ರಕಾರ ವಿವಾದ ಬಗೆಹರಿಸಿಕೊಳ್ಳಬೇಕಾಗುತ್ತದೆ. ಎನ್ನುತ್ತಾರೆ ರಿಯಲ್ ಎಸ್ಟೇಟ್ ಆನ್ಲೈನ್ ಪೋರ್ಟಲ್ ಚೀಫ್ ಬ್ಯುಸಿನೆಸ್ ಆಫೀಸರ್ ಸೌರಭ ಗರ್ಗ.

ಮೂಲಭೂತ ಸೌಕರ್ಯಗಳು

ಮೂಲಭೂತ ಸೌಕರ್ಯಗಳು

ನಿಯಮಿತ ನೀರು ಪೂರೈಕೆ ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಮಾಲೀಕರ ಕರ್ತವ್ಯ. ಒಂದು ವೇಳೆ ನೀರಿನ ಸಂಪರ್ಕ ಅಥವಾ ಕರೆಂಟಿನ ಸಂಪರ್ಕಗಳನ್ನು ಮಾಲೀಕರು ಕಟ್ ಮಾಡಿದಲ್ಲಿ ಅಂಥ ಮಾಲೀಕರ ವಿರುದ್ಧ ಬಾಡಿಗೆದಾರರು ಪೊಲೀಸ್ ಕಂಪ್ಲೇಂಟ್ ಕೊಡಬಹುದು ಅಥವಾ ಬಾಡಿಗೆ ನಿಯಂತ್ರಣ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು. ಒಂದು ವೇಳೆ ಹೌಸಿಂಗ್ ಸೊಸೈಟಿಯ ಅಪಾರ್ಟಮೆಂಟ್ ಆಗಿದ್ದರೆ ವಿವಾದ ಪರಿಹಾರಕ್ಕೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಮೊರೆ ಹೋಗಬಹುದು ಎನ್ನುತ್ತಾರೆ ನಾಯರ್.

ಮನೆಯ ನಿರ್ವಹಣೆ

ಮನೆಯ ನಿರ್ವಹಣೆ

ಚಿಕ್ಕ ಪುಟ್ಟ ರಿಪೇರಿಗಳನ್ನು ಹೊರತುಪಡಿಸಿ ಉಳಿದೆಲ್ಲ ನಿರ್ವಹಣೆ ಖರ್ಚು ಹಾಗೂ ವೆಚ್ಚಗಳನ್ನು ಮಾಲೀಕರೇ ಭರಿಸಬೇಕು. ಅನೇಕ ಅಪಾರ್ಟಮೆಂಟ್‌ಗಳಲ್ಲಿ ಮಾಸಿಕ ನಿರ್ವಹಣಾ ಶುಲ್ಕವನ್ನು ಬಾಡಿಗೆದಾರರು ನೀಡಬೇಕಾಗಿರುತ್ತದೆ. ಆದ್ದರಿಂದ ಅಪಾರ್ಟಮೆಂಟ್ ಮನೆ ಹಿಡಿಯುವ ಮುನ್ನ ಇಂಥ ಶುಲ್ಕಗಳ ಪಾವತಿ ಬಗ್ಗೆ ಮಾಲೀಕರಿಂದ ಎಲ್ಲ ಮಾಹಿತಿ ಪಡೆದುಕೊಳ್ಳುವುದು ಸೂಕ್ತ. ನಿರ್ವಹಣಾ ವೆಚ್ಚಗಳ ಮೌಲ್ಯವು ಬಾಡಿಗೆದಾರ ಹಾಗೂ ಮಾಲೀಕರ ಮಧ್ಯೆ ಮಾತುಕತೆಯ ಮೂಲಕ ನಿರ್ಧರಿಸಲ್ಪಡುತ್ತದೆ.

ಮಾಲೀಕರ ಮನೆ ಪ್ರವೇಶ

ಮಾಲೀಕರ ಮನೆ ಪ್ರವೇಶ

ಒಂದು ಬಾರಿ ಬಾಡಿಗೆ ಕರಾರು ಪತ್ರಕ್ಕೆ ಸಹಿ ಮಾಡಿದ ನಂತರ ನಿರ್ದಿಷ್ಟ ಅವಧಿಗೆ ಮನೆಯು ಬಾಡಿಗೆದಾರನ ಸಂಪೂರ್ಣ ಸ್ವಾಧೀನಕ್ಕೆ ಬರುತ್ತದೆ. ಇಂಥ ಅವಧಿಯಲ್ಲಿ ಬಾಡಿಗೆದಾರನ ಒಪ್ಪಿಗೆಯಿಲ್ಲದೆ ಮಾಲೀಕ ಮನೆಯೊಳಗಡೆ ಹೋಗುವಂತಿಲ್ಲ. ಯಾವುದೋ ರಿಪೇರಿ ಕೆಲಸದ ನೆಪ ಮಾಡಿಕೊಂಡು ಸಹ ಈ ರೀತಿ ಪ್ರವೇಶಿಸುವಂತಿಲ್ಲ. ಮನೆಯಲ್ಲಿ ಯಾವುದೇ ರಿಪೇರಿ ಕೆಲಸ ಮಾಡುವುದಿದ್ದರೆ ಬಾಡಿಗೆದಾರನ ಒಪ್ಪಿಗೆ ಪಡೆದೇ ಮುಂದುವರಿಯಬೇಕಾಗುತ್ತದೆ. ಕಟ್ಟಡ ಕಾಮಗಾರಿ ಹಾಗೂ ಇತರ ದುರಸ್ತಿಗಳಿಗೆ ಮಾಲೀಕರೇ ಖರ್ಚು ಮಾಡಬೇಕಾಗುತ್ತದೆ.

ಡಿಪಾಸಿಟ್

ಡಿಪಾಸಿಟ್

ಬಹುತೇಕ ಮಾಲೀಕರು ಬಾಡಿಗೆದಾರರಿಂದ ಸೆಕ್ಯುರಿಟಿ ಡಿಪಾಸಿಟ್ ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಮೊತ್ತವು 6 ತಿಂಗಳಿನಿಂದ ಹಿಡಿದು 1 ವರ್ಷದ ಬಾಡಿಗೆಯಷ್ಟು ಮೊತ್ತವಾಗಿರುತ್ತದೆ. ಆದರೂ ಸ್ಥಳೀಯ ಮಾರುಕಟ್ಟೆಗಳನ್ನು ಆಧರಿಸಿ ನಗರದಿಂದ ನಗರಕ್ಕೆ ಈ ಮೊತ್ತ ಭಿನ್ನವಾಗಿರುತ್ತದೆ. ಇದರ ಜೊತೆಗೆ ಯಾವ ರೀತಿಯ ಆಸ್ತಿಯನ್ನು ಬಾಡಿಗೆ ಪಡೆಯುತ್ತಿರುವಿರಿ ಎಂಬುದರ ಮೇಲೆ ಸಹ ಡಿಪಾಸಿಟ್ ಮೊತ್ತ ಅವಲಂಬಿಸಿರುತ್ತದೆ. ಫರ್ನಿಷಿಂಗ್ ಮಾಡಿಸದ ಅಪಾರ್ಟಮೆಂಟ್ ಆಗಿದ್ದರೆ ಒಂದು ತಿಂಗಳ ಬಾಡಿಗೆ ಡಿಪಾಸಿಟ್ ಸಾಕು. ಆದರೆ ಒಂದು ವೇಳೆ ಫರ್ನಿಷಿಂಗ್ ಮಾಡಿಸಿದ್ದು, ಇನ್ನೂ ಹಲವಾರು ಸಲಕರಣೆಗಳನ್ನು ಅಳವಡಿಸಿದ್ದಲ್ಲಿ ಅವುಗಳ ಸುರಕ್ಷತಾ ಮೊತ್ತವಾಗಿ ಮನೆ ಮಾಲೀಕ ಹೆಚ್ಚುವರಿ ಡಿಪಾಸಿಟ್ ಕೇಳಬಹುದು.
ಡಿಪಾಸಿಟ್ ಮೊತ್ತವನ್ನು ಆದಷ್ಟೂ ಕಡಿಮೆ ಮಾಡುವಂತೆ ಬಾಡಿಗೆದಾರರು ಒತ್ತಾಯಿಸಬೇಕು. ಜೊತೆಗೆ ಡಿಪಾಸಿಟ್ ಮೊತ್ತವು ಬಾಡಿಗೆ ಕರಾರು ಪತ್ರದಲ್ಲಿ ನಮೂದಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಸ್ಥಳೀಯ ಕಾಯ್ದೆಗಳ ಆಧಾರದಲ್ಲಿ ಕೂಡ ಈ ಡಿಪಾಸಿಟ್ ಮೊತ್ತ ಹೆಚ್ಚು ಕಡಿಮೆಯಾಗುತ್ತವೆ. ಮಹಾರಾಷ್ಟ್ರ ರಾಜ್ಯದ ಬಾಡಿಗೆ ನಿಯಂತ್ರಣ ಕಾಯ್ದೆಯಲ್ಲಿ ಡಿಪಾಸಿಟ್ ಮೊತ್ತದ ಬಗ್ಗೆ ಪ್ರಸ್ತಾಪವೇ ಇಲ್ಲ. ಹಾಗೆಯೇ ದೆಹಲಿ ಸರಕಾರದ ಮನೆ ಬಾಡಿಗೆ ಕಾಯ್ದೆಯ ಪ್ರಕಾರ ಒಂದು ತಿಂಗಳ ಬಾಡಿಗೆ ಮೊತ್ತವನ್ನು ಡಿಪಾಸಿಟ್ ಆಗಿ ಪಡೆಯಬಹುದು.

ಮನೆ ಖಾಲಿ ಮಾಡಿಸುವಿಕೆ

ಮನೆ ಖಾಲಿ ಮಾಡಿಸುವಿಕೆ

ಬಾಡಿಗೆ ಕರಾರು ಅಥವಾ ಇನ್ನಿತರ ಯಾವುದೇ ನಿಯಮಗಳ ಉಲ್ಲಂಘನೆಯಾದಲ್ಲಿ ಮಾಲೀಕರು ಮನೆ ಖಾಲಿ ಮಾಡುವಂತೆ ಬಾಡಿಗೆದಾರರಿಗೆ ಸೂಚಿಸಬಹುದು. ಹೀಗೆ ಮನೆ ಖಾಲಿ ಮಾಡಿಸಲು ಗಟ್ಟಿ ಕಾರಣಗಳನ್ನು ನೀಡಿ ಬಾಡಿಗೆದಾರರಿಗೆ ನೋಟಿಸ್ ಕಳುಹಿಸಬೇಕು. ಆಸ್ತಿಯ ಸ್ವರೂಪ ಬದಲಾಯಿಸುವುದು, ಉಪ ಬಾಡಿಗೆಗೆ ಆಸ್ತಿ ನೀಡುವುದು, ಸಕಾಲಕ್ಕೆ ಬಾಡಿಗೆ ನೀಡದಿರುವುದು ಅಥವಾ ವಿದ್ಯುಚ್ಛಕ್ತಿ ಬಿಲ್ ಪಾವತಿಸದಿರುವುದು ಮುಂತಾದ ಕಾರಣಗಳಿಗಾಗಿ ಬಾಡಿಗೆದಾರರನ್ನು ಬಿಡಿಸಬಹುದಾಗಿದೆ. ಇದಕ್ಕೆ 15 ದಿನಗಳ ಕಾಲಾವಕಾಶ ನೀಡಿ ನೋಟಿಸ್ ಕೊಡಬೇಕು.

ಹೊಸ ಮಾಲೀಕ

ಹೊಸ ಮಾಲೀಕ

ನೀವು ಬಾಡಿಗೆ ಮನೆಯೊಂದರಲ್ಲಿದ್ದು ಆ ಆಸ್ತಿಯನ್ನು ಮಾಲೀಕರು ಇನ್ನೊಬ್ಬರಿಗೆ ಮಾರಲು ಮುಂದಾಗಿದ್ದಾರೆ ಎಂದುಕೊಳ್ಳಿ. ಆಸ್ತಿ ಮಾರಾಟವಾದ ನಂತರವೂ ನೀವು ಬಾಡಿಗೆದಾರರಾಗಿ ಮುಂದುವರೆದಲ್ಲಿ ಹೊಸ ಮಾಲೀಕರೊಂದಿಗೆ ಹೊಸ ಅಗ್ರೀಮೆಂಟ್ ಮಾಡಿಕೊಳ್ಳಬೇಕಾಗುತ್ತದೆಯಾ?
ಇಂಥ ಸಂದರ್ಭದಲ್ಲಿ ಬಾಡಿಗೆ ಅವಧಿಯು ಮುಂದುವರೆಯುತ್ತಿದ್ದು, ಹಳೆಯ ಕರಾರುಪತ್ರಕ್ಕೆ ಹೊಸ ಮಾಲೀಕ ಒಪ್ಪಿಗೆ ಸೂಚಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಹೊಸ ಬಾಡಿಗೆ ಕರಾರು ಪತ್ರ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಹಳೆಯ ಮಾಲೀಕ ಹಾಗೂ ಬಾಡಿಗೆದಾರನ ಮಧ್ಯದ ಕರಾರುಗಳಿಗೆ ಹೊಸ ಮಾಲೀಕ ಒಪ್ಪಬೇಕಾಗುತ್ತದೆ. ಹೊಸ ಮಾಲೀಕ ಮನೆ ಖಾಲಿ ಮಾಡಿಸಬೇಕಾದರೆ ಬಾಡಿಗೆದಾರನಿಗೆ ನೋಟಿಸ್ ನೀಡಬೇಕು.

ಬಾಡಿಗೆ ಕರಾರು ಪತ್ರ

ಬಾಡಿಗೆ ಕರಾರು ಪತ್ರ

ಬಾಡಿಗೆ ಕರಾರು ಪತ್ರ ಅತಿ ಮುಖ್ಯ ದಾಖಲೆಯಾಗಿದ್ದು ಇದನ್ನು ಆದಷ್ಟು ಬಿಗಿಯಾಗಿ ಮಾಡಿಕೊಳ್ಳಿ. ಬಾಡಿಗೆ ಅವಧಿ, ಬಾಡಿಗೆ ಕರಾರು ಮುಕ್ತಾಯ, ಬಾಡಿಗೆ ಮೊತ್ತ, ಡಿಪಾಸಿಟ್ ಮೊತ್ತ ಹಾಗೂ ಮಾಲೀಕರಿಗೆ ನೀಡಲಾದ ಪರಿಶೀಲನಾ ಹಕ್ಕು ಮುಂತಾದುವುಗಳ ಬಗ್ಗೆ ವಿವರವಾಗಿ ಕರಾರು ಪತ್ರದಲ್ಲಿ ದಾಖಲಿಸಬೇಕು. ಬಾಡಿಗೆ ಕರಾರು ಪತ್ರವನ್ನು ಸ್ಟ್ಯಾಂಪ್ ಪೇಪರ್ ಮೇಲೆ ಮಾಡಿಸಿ ಸ್ಥಳೀಯ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ಯಾವುದೇ ತಂಟೆ ತಕರಾರುಗಳು ಬಂದಾಗ ಬಾಡಿಗೆದಾರರ ಹಿತ ಕಾಯಲು ಇದು ನೆರವಾಗುತ್ತದೆ.

ಬಾಡಿಗೆ ಕರಾರುಪತ್ರ(Rental Agreement) ಬಗ್ಗೆ ನಿಮಗೆಷ್ಟು ಗೊತ್ತು? ಬಾಡಿಗೆ ಕರಾರುಪತ್ರ(Rental Agreement) ಬಗ್ಗೆ ನಿಮಗೆಷ್ಟು ಗೊತ್ತು?

Read more about: business money finance news
English summary

Things you should know before you rent a house

Moving to a new city can be daunting. Yet, for many Indian students and professionals, especially millenials, it is an inevitability.
Story first published: Saturday, June 29, 2019, 8:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X