For Quick Alerts
ALLOW NOTIFICATIONS  
For Daily Alerts

ಆಧಾರ್ ಕೆವೈಸಿ ಬಗ್ಗೆ ನಿಮಗೆಷ್ಟು ಗೊತ್ತು? ಆಧಾರ್ ಇ-ಕೆವೈಸಿ ಕಡ್ಡಾಯವೆ?

ಬ್ಯಾಂಕ್ ಅಥವಾ ಇನ್ನಾವುದೇ ಸೇವೆ ನೀಡುವ ಸಂಸ್ಥೆಗಳು ತಮ್ಮ ಗ್ರಾಹಕರ ಗುರುತು ಹಾಗೂ ಪುರಾವೆಗಳನ್ನು ಖಾತರಿಪಡಿಸಿಕೊಳ್ಳುವಿಕೆಯನ್ನು ನೊ ಯುವರ್ ಕಸ್ಟಮರ್ ಅಥವಾ ನಿಮ್ಮ ಗ್ರಾಹಕರನ್ನು ತಿಳಿಯಿರಿ ಎಂದು ಕರೆಯಲಾಗುತ್ತದೆ.

|

ಕೆವೈಸಿ ಎಂಬುದು ನಿಮ್ಮ ಗ್ರಾಹಕರನ್ನು ತಿಳಿಯಿರಿ (Know Your Customer-KYC) ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಬ್ಯಾಂಕ್ ಅಥವಾ ಇನ್ನಾವುದೇ ಸೇವೆ ನೀಡುವ ಸಂಸ್ಥೆಗಳು ತಮ್ಮ ಗ್ರಾಹಕರ ಗುರುತು ಹಾಗೂ ಪುರಾವೆಗಳನ್ನು ಖಾತರಿಪಡಿಸಿಕೊಳ್ಳುವಿಕೆಯನ್ನು ನೊ ಯುವರ್ ಕಸ್ಟಮರ್ ಅಥವಾ ನಿಮ್ಮ ಗ್ರಾಹಕರನ್ನು ತಿಳಿಯಿರಿ ಎಂದು ಕರೆಯಲಾಗುತ್ತದೆ.
ನೀವೂ ಇತ್ತೀಚಿನ ದಿನಗಳಲ್ಲಿ ಕೆವೈಸಿ ಎಂಬ ಪದ ಕೇಳಿರಬಹುದು. ಅಲ್ಲದೆ ನಿಮಗೂ ಕೆವೈಸಿ ಮಾಡಿಸುವ ಸಂದರ್ಭಗಳೂ ಬಂದಿರಬಹುದು. ಮೊದಲಿಗೆ ಕೆವೈಸಿ ಬಗ್ಗೆ ಇನ್ನೊಂದಿಷ್ಟು ವಿವರವಾಗಿ ತಿಳಿಯೋಣ.
ಉದಾಹರಣೆಗೆ: ಬ್ಯಾಂಕ್ ಖಾತೆ ತೆರೆಯಲು, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಸೇರಿದಂತೆ ಇನ್ನೂ ಹಲವಾರು ಸೇವೆಗಳಿಗಾಗಿ ಕೆವೈಸಿ ಮಾಡಬೇಕಾಗುತ್ತದೆ. ಇದಕ್ಕಾಗಿ ಆಧಾರ ಕಾರ್ಡ್ ಇ-ಕೆವೈಸಿ ಮಾಡಿಸುವುದು ಅತ್ಯಂತ ಸುಲಭವಾಗಿದೆ. ಕೇವಲ ನಿಮ್ಮ ಆಧಾರ ನಂಬರ್ ನೀಡಿದರೆ ಸಾಕು ವಿಳಾಸ, ಗುರುತು ಹೀಗೆ ಎಲ್ಲ ವಿವರಗಳು ಎಲೆಕ್ಟ್ರಾನಿಕ್ ರೂಪದಲ್ಲಿ ದೃಢೀಕರಿಸಲ್ಪಡುತ್ತವೆ. ಇದನ್ನೇ ಇ-ಕೆವೈಸಿ ಎನ್ನಲಾಗುತ್ತದೆ. ಎಲ್ಲ ದಾಖಲೆಗಳ ಜೆರಾಕ್ಸ್ ನೀಡುವುದು, ಅವನ್ನು ದೃಢೀಕರಿಸುವುದು ಮುಂತಾದ ಕೆಲಸಗಳನ್ನು ಈಗ ಮಾಡಬೇಕಿಲ್ಲ. ಇ-ಕೆವೈಸಿ ಮೂಲಕ ಅತ್ಯಂತ ಶೀಘ್ರ ಹಾಗೂ ಸುಲಭವಾಗಿ ಗುರುತು ದೃಢೀಕರಿಸಬಹುದು.

ಇ-ಕೆವೈಸಿಗೆ ಯಾರೂ ಒತ್ತಾಯಪಡಿಸುವಂತಿಲ್ಲ

ಇ-ಕೆವೈಸಿಗೆ ಯಾರೂ ಒತ್ತಾಯಪಡಿಸುವಂತಿಲ್ಲ

ಯಾವುದಾದರೂ ಸೇವೆ ಪಡೆಯುವಾಗ ಅಂದರೆ ಬ್ಯಾಂಕ್ ಖಾತೆ ತೆರೆಯಲು, ಹೊಸ ಸಿಮ್ ಕೊಳ್ಳಲು ಹೀಗೆ ಅನೇಕ ಸಂದರ್ಭಗಳಲ್ಲಿ ನೀವು ನಿಮ್ಮ ಆಧಾರ ಸಂಖ್ಯೆ ಸಲ್ಲಿಸಿ ಇ-ಕೆವೈಸಿ ಮಾಡಿಸಬಹುದು. ಆದರೆ ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಲ್ಲ. ನಿಮ್ಮ ಖಾಸಗಿ ವಿವರಗಳನ್ನು ಯಾವುದೇ ನಿರ್ದಿಷ್ಟ ಕಂಪನಿಯೊಂದಿಗೆ ಹಂಚಿಕೊಳ್ಳುವುದು ನಿಮಗಿಷ್ಟವಿರದಿದ್ದರೆ ನೀವು ನೇರವಾಗಿ ಇ-ಕೆವೈಸಿಗೆ ನಿರಾಕರಿಸಬಹುದು. ಇ-ಕೆವೈಸಿ ಇದು ಗ್ರಾಹಕರ ವಿವೇಚನೆಗೆ ಬಿಟ್ಟ ವಿಷಯವಾಗಿದೆ.

ಆಧಾರ ಮೂಲಕ ಇ-ಕೆವೈಸಿ

ಆಧಾರ ಮೂಲಕ ಇ-ಕೆವೈಸಿ

ಆಧಾರ ನಂಬರ್ ಬಳಸಿ ಇ-ಕೆವೈಸಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಆಧಾರ ನಂಬರಿಗೆ ಮೊದಲೇ ಜೋಡಣೆಯಾಗಿರುವ ಬೆರಳಚ್ಚು ಬಯೋಮೆಟ್ರಿಕ್ ಮಾಹಿತಿಯ ಆಧಾರದಲ್ಲಿ ಇ-ಕೆವೈಸಿ ಮಾಡಲಾಗುತ್ತದೆ. ಬೆರಳಚ್ಚು ಸ್ಕ್ಯಾನ್ ಮಾಡಿ ಅದರ ಮೂಲಕ ಆಧಾರ ಕಾರ್ಡಿಗೆ ಜೋಡಣೆಯಾಗಿರುವ ನಿಮ್ಮ ಮಾಹಿತಿಗಳನ್ನು ದೃಢೀಕರಿಸಲಾಗುತ್ತದೆ.

ಆನ್ಲೈನ್ ಮೂಲಕ ಆಧಾರ ಇ-ಕೆವೈಸಿ ಹೇಗೆ?

ಆನ್ಲೈನ್ ಮೂಲಕ ಆಧಾರ ಇ-ಕೆವೈಸಿ ಹೇಗೆ?

-ಸೇವೆ ನೀಡುವ ಸಂಸ್ಥೆಯ ವ್ಯಕ್ತಿಗೆ ಆಧಾರ ಸಂಖ್ಯೆ ನೀಡಿ.
-ನಿಮ್ಮ ಬೆರಳಚ್ಚು ಅಥವಾ ರೆಟಿನಾ ಇಮೇಜ್ (ಬಯೋಮೆಟ್ರಿಕ್) ಅನ್ನು ಸ್ಕ್ಯಾನರ್ ಮೂಲಕ ಸೆರೆಹಿಡಿಯಲಾಗುತ್ತದೆ.
-ಮೊಬೈಲ್ ನಂಬರ್‌ಗೆ ಓಟಿಪಿ ಕಳುಹಿಸಿ ದೃಢೀಕರಿಸುವ ರೀತಿಗೆ ನೀವು ಒತ್ತಾಯ ಮಾಡಬಹುದು.
-ನಿಮ್ಮ ಬಯೋಮೆಟ್ರಿಕ್ ಮಾಹಿತಿಯು ಈಗ ಆಧಾರ ಕಾರ್ಡ್ ದತ್ತಾಂಶ ಸಂಗ್ರಹವಾಗಿರುವ ಯುಐಡಿಎಐ ಸರ್ವರ್‌ನೊಂದಿಗೆ ಸಂಪರ್ಕಿಸಲ್ಪಡುತ್ತದೆ.
-ನೀವು ನೀಡಿದ ಆಧಾರ ನಂಬರಿನ ಬಯೊಮೆಟ್ರಿಕ್ ಮಾಹಿತಿ ಹಾಗೂ ಸರ್ವರ್‌ನಲ್ಲಿ ಈಗಾಗಲೇ ಇರುವ ಬಯೋಮೆಟ್ರಿಕ್ ಮಾಹಿತಿಗಳನ್ನು ತಾಳೆ ಹಾಕಲಾಗುತ್ತದೆ.
-ಮಾಹಿತಿಗಳು ತಾಳೆಯಾದಲ್ಲಿ ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಂತೆ.
-ದೃಢೀಕರಣ ಪ್ರಕ್ರಿಯೆ ಯಶಸ್ವಿಯಾದ ನಂತರ ಯುಐಡಿಎಐ ತನ್ನಲ್ಲಿ ಶೇಖರಿಸಿ ಇಟ್ಟುಕೊಂಡಿರುವ ನಿಮ್ಮ ಮಾಹಿತಿಗಳಾದ ಹೆಸರು, ವಿಳಾಸ, ಫೋಟೊ, ಜನ್ಮ ದಿನಾಂಕ ಇತ್ಯಾದಿ ಎಲ್ಲ ವಿವರಗಳನ್ನು ಸೇವೆ ನೀಡುವ ಸಂಸ್ಥೆಯೊಂದಿಗೆ ಹಂಚಿಕೊಳ್ಳುತ್ತದೆ. ಎಲ್ಲದಕ್ಕೂ ಪ್ರತ್ಯೇಕ ದಾಖಲೆಗಳನ್ನು ನೀಡುವ ಕಿರಿಕಿರಿಯನ್ನು ಇದರಿಂದ ತಪ್ಪಿಸಬಹುದಾಗಿದೆ.
-ಸೇವೆ ನೀಡುವ ಸಂಸ್ಥೆ ಅಥವಾ ವ್ಯಕ್ತಿಯು ನಿಮ್ಮ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡು ಬೇಕಾದಾಗ ಅವನ್ನು ಉಪಯೋಗಿಸಬಹುದು.

ಆಧಾರ ಇ-ಕೆವೈಸಿ ಅನುಕೂಲತೆಗಳು

ಆಧಾರ ಇ-ಕೆವೈಸಿ ಅನುಕೂಲತೆಗಳು

ಆಧಾರ ಇ-ಕೆವೈಸಿ ಮಾಡಿಸುವುದರಿಂದ ಹಲವಾರು ಅನುಕೂಲತೆಗಳಿವೆ. ಅವುಗಳ ಪಟ್ಟಿ ಹೀಗಿದೆ.
ಕಾಗದರಹಿತ: ಆಧಾರ ಇ-ಕೆವೈಸಿ ಸಂಪೂರ್ಣ ಕಾಗದ ರಹಿತ ಪ್ರಕ್ರಿಯೆಯಾಗಿದ್ದು, ನಿಮ್ಮ ಮಾಹಿತಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಸೂಕ್ತವಾಗಿದೆ.
ಸುರಕ್ಷಿತ: ಯುಐಡಿಎಐ ತನ್ನ ಸುರಕ್ಷಿತ ಆನ್ಲೈನ್ ಚಾನೆಲ್ ಮೂಲಕ ನಕಲು ಮಾಡಲಾಗದ ಡಿಜಿಟಲ್ ದಾಖಲೆಗಳನ್ನು ಮಾತ್ರ ಹಂಚಿಕೊಳ್ಳುತ್ತದೆ. ಇದರಿಂದ ಗ್ರಾಹಕರ ಮಾಹಿತಿ ಸುರಕ್ಷಿತವಾಗಿರುತ್ತದೆ. ಗ್ರಾಹಕ ಅಥವಾ ಸೇವಾದಾತ ಕಂಪನಿಯ ಒಪ್ಪಿಗೆ ಇಲ್ಲದೆ ಈ ಮಾಹಿತಿಯನ್ನು ಬೇರೆಲ್ಲೂ ಬಳಸುವಂತಿಲ್ಲ.
ಒಪ್ಪಿಗೆ ಆಧರಿತ: ನೀವು ನಿಮ್ಮ ಬಯೋಮೆಟ್ರಿಕ್ ಮೂಲಕ ಅಥವಾ ಓಟಿಪಿ ಮೂಲಕ ಒಪ್ಪಿಗೆ ನೀಡಿದಲ್ಲಿ ಮಾತ್ರ ಆಧಾರ ಪ್ರಾಧಿಕಾರ ನಿಮ್ಮ ಮಾಹಿತಿಗಳನ್ನು ಹಂಚಿಕೊಳ್ಳುತ್ತದೆ.
ಸಂಪೂರ್ಣ ಕಾಯ್ದೆಬದ್ಧ: ಯುಐಡಿಎಐ ಹಂಚಿಕೊಳ್ಳುವ ಮಾಹಿತಿಯು ದೃಢೀಕರಿಸಲ್ಪಟ್ಟಿದ್ದು, ಗ್ರಾಹಕ ಹಾಗೂ ಸೇವಾದಾತ ಕಂಪನಿ ಇಬ್ಬರಿಗೂ ಸಂಪೂರ್ಣ ಕಾಯ್ದೆಬದ್ಧವಾಗಿರುತ್ತದೆ.
ಕಡಿಮೆ ಖರ್ಚು: ಇ-ಕೆವೈಸಿ ಪ್ರಕ್ರಿಯೆ ಕಾಗದ ರಹಿತವಾಗಿರುವುದರಿಂದ ಇದರಲ್ಲಿ ಖರ್ಚು ನಗಣ್ಯವಾಗಿರುತ್ತದೆ.

ಆಧಾರ ಇ-ಕೆವೈಸಿ ತಂದ ಮಹತ್ವದ ಬದಲಾವಣೆಗಳು

ಆಧಾರ ಇ-ಕೆವೈಸಿ ತಂದ ಮಹತ್ವದ ಬದಲಾವಣೆಗಳು

ಆಧಾರ ಇ-ಕೆವೈಸಿಯಿಂದ ದೇಶದಲ್ಲಿ ಹಲವಾರು ರೀತಿಯ ಮಹತ್ವದ ಬದಲಾವಣೆಗಳಾಗಿರುವುದನ್ನು ನಾವು ಗಮನಿಸಬಹುದು. ಕಾಗದ ರಹಿತ ಪ್ರಕ್ರಿಯೆಯಾಗಿರುವುದರಿಂದ ಇದು ಗ್ರಾಹಕರು ಹಾಗೂ ಸೇವಾದಾತ ಕಂಪನಿ ಇಬ್ಬರಿಗೂ ಅನುಕೂಲಕರವಾಗಿದೆ. ದೇಶದಲ್ಲಿ ಬಹುತೇಕ ಎಲ್ಲರೂ ಆಧಾರ ಕಾರ್ಡ್ ಪಡೆದುಕೊಳ್ಳುತ್ತಿದ್ದು, ಹಲವಾರು ದಾಖಲೆಗಳನ್ನು ಕೊಂಡೊಯ್ಯುವುದು ತಪ್ಪಿದೆ.
ಇನ್ನು ಗ್ರಾಹಕರಿಂದ ಪಡೆದ ಟನ್‌ಗಳಷ್ಟು ಕಾಗದದ ದಾಖಲೆಗಳನ್ನು ರಕ್ಷಿಸುವ ಕಿರಿಕಿರಿಯಿಂದ ಸೇವಾದಾತ ಕಂಪನಿಗಳು ಈಗ ಮುಕ್ತವಾಗಿವೆ. ಇದರಿಂದ ಇಡೀ ಕೆವೈಸಿ ಪ್ರಕ್ರಿಯೆಯ ಖರ್ಚು ತಗ್ಗಿದ್ದು, ಕೆಲಸ ವೇಗವಾಗಿ ಆಗುವಂತಾಗಿದೆ. ಸೇವಾದಾತ ಕಂಪನಿಗಳು ತಮ್ಮ ಸರ್ವರ್‌ನಲ್ಲಿ ಗ್ರಾಹಕರ ಮಾಹಿತಿಗಳನ್ನು ಸಂಗ್ರಹಿಸಿಟ್ಟು ಬೇಕಾದಾಗ ಬಳಸಬಹುದಾಗಿದೆ. ಇಡೀ ಪ್ರಕ್ರಿಯೆಯು ಸ್ವಯಂ ಚಾಲಿತವಾಗಿರುವುದರಿಂದ ಮೋಸ, ವಂಚನೆಗಳ ಸಾಧ್ಯತೆಗಳಿಲ್ಲ. ಒಟ್ಟಾರೆಯಾಗಿ ಕೆವೈಸಿ ಪ್ರಕ್ರಿಯೆ ಪರಿಣಾಮಕಾರಿಯಾಗಿದ್ದು ಸಾಕಷ್ಟು ಹಣ ಹಾಗೂ ಸಮಯ ಉಳಿತಾಯವಾಗುತ್ತಿದೆ.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

ಇ-ಕೆವೈಸಿ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳನ್ನು ನೀಡಲಾಗಿದೆ.
-ಆಧಾರ ಇ-ಕೆವೈಸಿ ಎಂದರೇನು?
ಗ್ರಾಹಕರ ಆಧಾರ ನಂಬರ ಬಳಸಿ ಎಲೆಕ್ಟ್ರಾನಿಕ್ ರೂಪದಲ್ಲಿ ಸೇವಾದಾತ ಕಂಪನಿಗಳು ಕೆವೈಸಿ ಮಾಡುವುದು ಇ-ಕೆವೈಸಿ ಆಗಿದೆ.

- ಆಧಾರ ಬಳಸಿ ಯಾರೆಲ್ಲ ಇ-ಕೆವೈಸಿ ಮಾಡಬಹುದು?
ಮೊದಲ ಬಾರಿಗೆ ಹೂಡಿಕೆ ಮಾಡುತ್ತಿರುವವರು, ಈವರೆಗೂ ಇ-ಕೆವೈಸಿ ಮಾಡಿಸದಿರುವವರು ಆಧಾರ ನಂಬರ್ ಬಳಸಿ ಇ-ಕೆವೈಸಿ ಮಾಡಬಹುದು.

- ನನ್ನ ಬಳಿ ಪ್ಯಾನ್ ಕಾರ್ಡ್ ಇಲ್ಲ. ಏನು ಮಾಡುವುದು?
ಈಗಿನ ಪರಿಸ್ಥಿತಿಯಲ್ಲಿ ಪ್ಯಾನ್ ನಂಬರ್ ಇದ್ದವರು ಮಾತ್ರ ಇ-ಕೆವೈಸಿ ಮಾಡಿಸಲು ಸಾಧ್ಯ.

- ನನ್ನ ಮೊಬೈಲ್‌ಗೆ ಯಾರು ಓಟಿಪಿ ಕಳುಹಿಸುತ್ತಾರೆ?
ನೀವು ಆಧಾರ ಕಾರ್ಡ್ ಮಾಡಿಸುವಾಗ ನೋಂದಣಿ ಮಾಡಿಸಿದ ಮೊಬೈಲ್ ಸಂಖ್ಯೆಗೆ ಯುಐಡಿಎಐ ಓಟಿಪಿ ಕಳುಹಿಸುತ್ತದೆ.

- ನನಗೆ ಓಟಿಪಿ ಬರುತ್ತಿಲ್ಲ, ಏನು ಮಾಡುವುದು?
ಕೆಲ ಬಾರಿ ನೆಟ್‌ವರ್ಕ್ ಸಮಸ್ಯೆಯಿಂದ ಓಟಿಪಿ ಬರುವುದು ತಡವಾಗಬಹುದು. ನೀವು ಮತ್ತೊಮ್ಮೆ ಓಟಿಪಿ ರಿಕ್ವೆಸ್ಟ್ ಕಳುಹಿಸಬಹುದು.
- ಆಧಾರ ಕಾರ್ಡ್ ಕಾಗದ ರೂಪದಲ್ಲಿ ನೀಡುವುದು ಕಡ್ಡಾಯವೆ?
ಇ-ಕೆವೈಸಿ ಪ್ರಕ್ರಿಯೆ ಕಾಗದ ರಹಿತ ಪ್ರಕ್ರಿಯೆಯಾಗಿದ್ದು ಇದರಲ್ಲಿ ಆಧಾರ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಇನ್ನಾವುದೇ ದಾಖಲೆಗಳನ್ನು ಅಥವಾ ಕೆವೈಸಿ ಅರ್ಜಿಗಳನ್ನು ಕಾಗದ ರೂಪದಲ್ಲಿ ನೀಡಬೇಕಿಲ್ಲ.

-ನನ್ನ ಕೆವೈಸಿ ಸ್ಟೇಟರ್ ಪರಿಶೀಲಿಸುವುದು ಹೇಗೆ?
ಕೆವೈಸಿ ರಜಿಸ್ಟ್ರೇಶನ್ ಏಜೆನ್ಸಿಯ ವೆಬ್ಸೈಟ್ ಬಳಸಿ ಆನ್ಲೈನ್ ಮೂಲಕ ಕೆವೈಸಿ ಸ್ಟೇಟಸ್ ಪರಿಶೀಲಿಸಬಹುದು.

Read more about: aadhar money banking ಆಧಾರ್
English summary

What is Aadhaar KYC? Know e-KYC for Aadhaar card

The process, called e-KYC, can be done quickly, using your Aadhaar number to verify your identity, address and so on.
Story first published: Saturday, June 22, 2019, 10:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X