For Quick Alerts
ALLOW NOTIFICATIONS  
For Daily Alerts

ಪ್ಯಾನ್ ಕಾರ್ಡ್ ನಲ್ಲಿರುವ ತಪ್ಪುಗಳನ್ನು ಸರಿಪಡಿಸುವುದು ಹೇಗೆ?

ದೇಶದ ಪ್ರತಿಯೊಬ್ಬ ನಾಗರಿಕನೂ ಐಟಿಆರ್ ಸಲ್ಲಿಕೆ ಸಂದರ್ಭದಲ್ಲಿ, ಹಣಕಾಸು ವ್ಯವಹಾರ ನಿರ್ವಹಿಸುವಾಗ, ಅಷ್ಟೇ ಅಲ್ಲದೇ ಅನೇಕ ಸಂದರ್ಭಗಳಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿತ್ತು.

|

ದೇಶದ ಪ್ರತಿಯೊಬ್ಬ ನಾಗರಿಕನೂ ಐಟಿಆರ್ ಸಲ್ಲಿಕೆ ಸಂದರ್ಭದಲ್ಲಿ, ಹಣಕಾಸು ವ್ಯವಹಾರ ನಿರ್ವಹಿಸುವಾಗ, ಅಷ್ಟೇ ಅಲ್ಲದೇ ಅನೇಕ ಸಂದರ್ಭಗಳಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿತ್ತು. ಆದರೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ, ಪ್ಯಾನ್ ಕಾರ್ಡ್ ಬದಲಿಗೆ ಪರ್ಯಾಯವಾಗಿ ಆಧಾರ್ ಬಳಸುವ ಅವಕಾಶ ಕಲ್ಪಿಸಲಾಗಿದೆ.
ಆದಾಯ ತೆರಿಗೆ ಇಲಾಖೆ ಎನ್‌ಎಸ್‌ಡಿಎಲ್ ಅಥವಾ ಯುಟಿಐಐಎಸ್ಎಲ್ ಮೂಲಕ ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದ ದೂರನ್ನು ನೋಂದಾಯಿಸಲು ಮೌಲ್ಯಮಾಪಕರಿಗೆ ಸಹಾಯ ಮಾಡಲು ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ. ಅಲ್ಲದೇ ತಮ್ಮ ಕುಂದುಕೊರತೆಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
ಪ್ಯಾನ್ ಕಾರ್ಡ್ (ಶಾಶ್ವತ ಖಾತೆ ಸಂಖ್ಯೆ) ಹಲವಾರು ವ್ಯವಹಾರಗಳಿಗೆ ಕಡ್ಡಾಯವಾಗಿ ಬಳಕೆ ಮಾಡಲಾಗುತ್ತಿದ್ದು, ಒಂದಕ್ಕಿಂತ ಹೆಚ್ಚಿನ ಪಾನ್ ಕಾರ್ಡ್ ಹೊಂದುವುದು ಅಪರಾಧ. ಪ್ಯಾನ್ ಕಾರ್ಡ್ ಹಲವು ಸಂದರ್ಭಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ನಿಮ್ಮ ಪ್ಯಾನ್ ನಲ್ಲಿ ತಪ್ಪುಗಳಿದ್ದರೆ ಅಥವಾ ಸರಿ ಇಲ್ಲದಿದ್ದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ನಿಮ್ಮದಾಗಿದ್ದರೆ ಬನ್ನಿ ನೋಡೋಣ..

 

ತಪ್ಪುಗಳಾಗುವ ಸಾಧ್ಯತೆ

ತಪ್ಪುಗಳಾಗುವ ಸಾಧ್ಯತೆ

ನೀವು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಿ ಕೆಲ ದಿಗಳಾದರೂ ನಿಮ್ಮ ಕೈಸೇರುವುದು ವಿಳಂಬವಾಗಬಹುದು. ಅಲ್ಲದೇ ನಿಮ್ಮ ತಪ್ಪಿಲ್ಲದೆಯೂ ಪಾನ್ ಕಾರ್ಡ್ ನಲ್ಲಿ ತಪ್ಪುಗಳಾಗುವ ಇಲ್ಲವೇ ಗೊಂದಲ ಏರ್ಪಡುವ ಸಾಧ್ಯತೆ ಇರುತ್ತದೆ.

ಪ್ಯಾನ್ ಕಾರ್ಡ್ ನಲ್ಲಾಗುವ ತಪ್ಪುಗಳು

ಪ್ಯಾನ್ ಕಾರ್ಡ್ ನಲ್ಲಾಗುವ ತಪ್ಪುಗಳು

- ಪ್ಯಾನ್ ಕಾರ್ಡ್ ನಿಮ್ಮ ಕೈಗೆ ಸಿಗದೇ ಇದ್ದರೆ
- ಹೆಸರು, ಜನ್ಮ ದಿನಾಂಕ ತಪ್ಪು
- ವಿಳಾಸ ತಪ್ಪಾಗಿ ನಮೂದಾಗಿರುವುದು
- ಫೋಟೋ ತಪ್ಪು
- ತಂದೆ ಹೆಸರು ತಪ್ಪು
- ಪ್ಯಾನ್ ಕಾರ್ಡ್ ಸಿಗದೇ ಇದ್ದರೆ
- ವಿಳಾಸಕ್ಕೆ ಡಿಲೆವರಿ ಆಗದಿದ್ದರೆ

ದೂರು ದಾಖಲು ಮಾಡುವುದು ಹೇಗೆ?
 

ದೂರು ದಾಖಲು ಮಾಡುವುದು ಹೇಗೆ?

ಮೊದಲಿಗೆ ಆದಾಯ ತೆರಿಗೆ ಇಲಾಖೆ ವೆಬ್ಸೈಟ್ ತಾಣಕ್ಕೆ ಭೇಟಿ ನೀಡಿ.
- ಯಾವ ಬಗೆಯ ದೂರು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ
- ಕೂಪನ್ ಅಥವಾ ಮರುಪಾವತಿ ಅಂಕೆಯನ್ನು ಪಡೆದುಕೊಳ್ಳಿ
- ನಿಮ್ಮ ಏಜೆನ್ಸಿ ಅದು ಎನ್ ಎಸ್ ಡಿಎಲ್ ಅಥವಾ ಯುಟಿಐಐಎಸ್ ಎಲ್ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ
- ಉಳಿದ ಮೂಲ ಮಾಹಿತಿಗಳನ್ನು ಭರ್ತಿ ಮಾಡಿ
- ಇದೆಲ್ಲ ಮುಗಿದ ಮೇಲೆ ಸಬ್ ಮಿಟ್ ಮಾಡಿ

ದೂರು ಪತ್ತೆ

ದೂರು ಪತ್ತೆ

ಒಮ್ಮೆ ನೀವು ದೂರನ್ನು ದಾಖಲಿಸಿದ (submit) ನಂತರ ಕೂಪನ್ ಸಂಖ್ಯೆಯೊಂದು ಸಿಗುತ್ತದೆ. ಅದನ್ನು ಬಳಕೆ ಮಾಡಿಕೊಂಡು ನಿಮ್ಮ ದೂರು ಯಾವ ಹಂತದಲ್ಲಿದೆ ಎಂಬುದನ್ನು ಪತ್ತೆ ಮಾಡಬಹುದು. ಇಲ್ಲವೇ ಸಂಬಂಧಪಟ್ಟ ಇಲಾಖೆಗೆ ಹೋಗಿ ಪರಿಶೀಲನೆ ಮಾಡಬಹುದು. 

ಪ್ರಸ್ತುತ ಪ್ಯಾನ್ ಕಡ್ಡಾಯ

ಪ್ರಸ್ತುತ ಪ್ಯಾನ್ ಕಡ್ಡಾಯ

ಪ್ರಸ್ತುತ, ಹೋಟೆಲ್ ಅಥವಾ ವಿದೇಶಿ ಪ್ರಯಾಣದ ರೂ. 50,000ಕ್ಕಿಂತ ಹೆಚ್ಚಿನ ಬಿಲ್‌ಗಳ ನಗದು ವಹಿವಾಟಿಗೆ ಪ್ಯಾನ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದೆ.
10 ಲಕ್ಷಕ್ಕಿಂತ ಹೆಚ್ಚು ಮೊತ್ತದ ಸ್ಥಿರ ಆಸ್ತಿಯನ್ನು ಖರೀದಿಸಲು ಪ್ಯಾನ್ ಕಡ್ಡಾಯವಾಗಿದೆ.
ಶಾಶ್ವತ ಖಾತೆ ಸಂಖ್ಯೆ 10 ಅಂಕೆಗಳನ್ನು ಹೊಂದಿದ್ದು, ಆದಾಯ ತೆರಿಗೆ ಇಲಾಖೆ ಕೊಡುತ್ತದೆ. ನಿಮ್ಮ ವಿಳಾಸ ಬದಲಾವಣೆ ಯಾವ ಪರಿಣಾಮ ಉಂಟು ಮಾಡುವುದಿಲ್ಲ.

Read more about: pan card money income tax
English summary

How to check PAN Card Related Complain online?

Income Tax Department has started a website namely Sparsh India to help Assessee to Register their complain related to PAN Card applied through NSDL or UTIISL.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X