ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ ಸಾಲ ಪಡೆಯುವುದು ಹೇಗೆ?

ದೇಶದ ಪ್ರತಿಯೊಂದು ಕುಟುಂಬಕ್ಕೂ ವಸತಿ ಸೌಲಭ್ಯ ಕಲ್ಪಿಸುವ ಕೇಂದ್ರದ ಪ್ರಮುಖ ಯೋಜನೆಯೇ ಪ್ರಧಾನ ಮಂತ್ರಿ ಆವಾಸ್ ಯೋಜನೆಯಾಗಿದೆ. ಪ್ರಧಾನಿ ನರೇಂಧ್ರ ಮೋದಿಯವರ ಮಹಾತ್ವಾಕಾಂಕ್ಷೆಯ ಯೋಜನೆಯಾಗಿರುವ ಪಿಎಂಎವೈ ಯೋಜನೆ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ.

ದೇಶದ ಪ್ರತಿಯೊಂದು ಕುಟುಂಬಕ್ಕೂ ವಸತಿ ಸೌಲಭ್ಯ ಕಲ್ಪಿಸುವ ಕೇಂದ್ರದ ಪ್ರಮುಖ ಯೋಜನೆಯೇ ಪ್ರಧಾನ ಮಂತ್ರಿ ಆವಾಸ ಯೋಜನೆಯಾಗಿದೆ. ಪ್ರಧಾನಿ ನರೇಂಧ್ರ ಮೋದಿಯವರ ಮಹಾತ್ವಾಕಾಂಕ್ಷೆಯ ಯೋಜನೆಯಾಗಿರುವ ಪಿಎಂಎವೈ (PMAY) ಯೋಜನೆ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿಯನ್ನು ನೀಡುತ್ತದೆ. ಬಡವರು, ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿದವರು ಈ ಯೋಜನೆಯ ಲಾಭ ಪಡೆಯಬಹುದು. ಈ ಯೋಜನೆಯಡಿಯಲ್ಲಿ ಅರ್ಜಿದಾರರನ್ನು ನಾಲ್ಕು ಗುಂಪುಗಳಾಗಿ ವರ್ಗಿಕರಿಸಲಾಗುತ್ತದೆ. (Website: https://pmaymis.gov.in/)

ನಾಲ್ಕು ಕೆಟಗರಿ

ನಾಲ್ಕು ಕೆಟಗರಿ

- ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್)
- ಲಘು ಆದಾಯ ಗುಂಪು (ಎಲ್ಐಜಿ)
- ಮಧ್ಯಮ ಆದಾಯ ಗುಂಪು (ಎಂಐಜಿ I)
- ಮಧ್ಯಮ ಆದಾಯ ಗುಂಪು (ಎಂಐಜಿ II) ಅರ್ಜಿದಾರರು ತಮಗೆ ಅನ್ವಯಿಸುವ ಈ ಮೇಲಿನ ಗುಂಪಿನ ಅರ್ಹತಾ ಮಾನದಂಡಗಳನ್ನು ಒದಗಿಸಬೇಕಾಗುತ್ತದೆ.

ಆದಾಯದ ಮಿತಿ

ಆದಾಯದ ಮಿತಿ

ಪ್ರಧಾನ ಮಂತ್ರಿ ಅವಾಸ ಯೋಜನೆ (ಪಿಎಂಎವೈ) ಅಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲು, ಮಧ್ಯಮ ಆದಾಯ ಗುಂಪು (ಎಂಐಜಿ I) Medium Income Group ವಾರ್ಷಿಕ ಆದಾಯವು ರೂ. 12 ಲಕ್ಷಗಳಿಗಿಂತ ಕಡಿಮೆಯಿರಬೇಕು. ಮಧ್ಯಮ ಆದಾಯ ಗುಂಪು (ಎಂಐಜಿ II) ವರ್ಗದವರ ಆದಾಯ ರೂ. 12 ಲಕ್ಷದಿಂದ 18 ಲಕ್ಷದ ನಡುವಿರಬೇಕಾಗಿರುತ್ತದೆ. ವಸತಿ ಘಟಕದ ಕಾರ್ಪೆಟ್ ಪ್ರದೇಶವು ಅನ್ವಯವಾಗುವ ಕೆಟಗರಿಯವರಿಗೆ ಅನುಮತಿ ಇರುವ ಮಿತಿಯಲ್ಲಿರಬೇಕು.

ಸಾಲಕ್ಕಾಗಿ ಅರ್ಜಿ

ಸಾಲಕ್ಕಾಗಿ ಅರ್ಜಿ

ಅರ್ಜಿದಾರನು ತನ್ನ ಆದ್ಯತೆಯ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯಲ್ಲಿ ಅರ್ಜಿದಾರರ ವಿವರಗಳು, ಆದಾಯ, ಹೂಡಿಕೆಗಳು, ಇತರ ಸಾಲಗಳು, ಆಸ್ತಿ ವಿವರಗಳು ಮತ್ತು ಸಹ-ಅರ್ಜಿದಾರರ ವಿವರಗಳನ್ನು ಒಳಗೊಂಡಿರುತ್ತದೆ.

ಸಬ್ಸಿಡಿ ಸ್ಕೀಮ್ ಅರ್ಜಿ

ಸಬ್ಸಿಡಿ ಸ್ಕೀಮ್ ಅರ್ಜಿ

ಪಿಎಂಎವೈ ಸಬ್ಸಿಡಿ ಸ್ಕೀಮ್ ಅರ್ಜಿ ನಮೂನೆಯನ್ನು https://pmaymis.gov.in/ ನಿಂದ ಡೌನ್‌ಲೋಡ್ ಮಾಡಬಹುದು. "ಸಿಟಿಜನ್ ಅಸೆಸ್ಮೆಂಟ್" ಟ್ಯಾಬ್ ಮೇಲೆ ಕ್ಲಿಕ್ ಮಾಡುವ ಮೂಲಕ ಲ್ಲಿ ಆನ್‌ಲೈನ್‌ನಲ್ಲಿ ಫಾರ್ಮ್ ಅನ್ನು ಪ್ರವೇಶಿಸಬಹುದು. ಇತರ ಮೂರು ಘಟಕಗಳ ಪ್ರಯೋಜನ ( rural, urban or semi-urban) ಪಡೆಯಬಹುದು. ನಿಮ್ಮ ಕೆಟರಿಗೆ ಅನುಗುಣವಾಗಿ ಆಯ್ಕೆ ವಿಧಾನ ಮಾಡಿಕೊಳ್ಳಿ. ಅರ್ಜಿದಾರರು ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಬೇಕು. ವಿವರಗಳನ್ನು ಪರಿಶೀಲಿಸಿದ ನಂತರ, ಫಾರ್ಮ್ ಅನ್ನು ಫೈಲ್ ಮಾಡಬಹುದು. ಅರ್ಜಿದಾರರ ಹೆಸರು, ಆದಾಯ, ಕುಟುಂಬ ಸದಸ್ಯರ ಸಂಖ್ಯೆ, ವಿಳಾಸ, ಸಂಪರ್ಕ ಸಂಖ್ಯೆ, ಕುಟುಂಬದ ಮುಖ್ಯಸ್ಥರ ವಯಸ್ಸು, ಧರ್ಮ, ಜಾತಿ ಇತ್ಯಾದಿಗಳನ್ನು ಭರ್ತಿ ಮಾಡಬೇಕು.

ಸಾಲದ ದಾಖಲೆಗಳ ಸಲ್ಲಿಕೆ

ಸಾಲದ ದಾಖಲೆಗಳ ಸಲ್ಲಿಕೆ

ಸಬ್ಸಿಡಿ ಅರ್ಜಿಯನ್ನು ಇತರ ದಾಖಲೆಗಳೊಂದಿಗೆ ಲಗತ್ತಿಸಬೇಕಾಗುತ್ತದೆ. ಇದು ಆದಾಯದ ಪುರಾವೆಗಳು, ಕೆವೈಸಿ ದಾಖಲೆಗಳು ಮತ್ತು ಆಸ್ತಿ ಸಂಬಂಧಿತ ದಾಖಲೆಗಳಂತಹ ಅಡಕಗಳನ್ನು ಸಾಲದ ಅರ್ಜಿ ಜೊತೆಗೆ ಲಗತ್ತಿಸಬೇಕು.

ಗಮನಿಸಬೇಕಾದ ಅಂಶಗಳು

ಗಮನಿಸಬೇಕಾದ ಅಂಶಗಳು

1. ಅರ್ಜಿದಾರ ಅಥವಾ ಅವನ/ಅವಳ ಕುಟುಂಬದ ಯಾರಾದರೂ ಭಾರತದಲ್ಲಿ ಪಕ್ಕಾ ಮನೆ ಹೊಂದಿದ್ದರೆ ಪಿಎಂಎವೈ ಅಪ್ಲಿಕೇಶನ್ ಅಮಾನ್ಯವಾಗಿದೆ.
2. ಅರ್ಜಿದಾರ ಮಹಿಳೆಯಾಗಿದ್ದರೆ ಆದ್ಯತೆ ನೀಡಲಾಗುತ್ತದೆ. ಮತ್ತು ಕುಟುಂಬದ ಏಕೈಕ ಪೋಷಕರಾಗಿದ್ದರೆ ಆದ್ಯತೆ ನೀಡಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+