ಬೆಳೆ ಸಾಲ ಮನ್ನಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕ ರಾಜ್ಯ ಸರ್ಕಾರವು ರೈತರಿಗಾಗಿ ಬೆಳೆ ಸಾಲ ಮನ್ನಾ ಯೋಜನೆಯನ್ನು ಜಾರಿ ತಂದಿದೆ. ನಮ್ಮಲ್ಲಿ ಕೆಲ ರೈತರು ಅರ್ಜಿ ಸಲ್ಲಿಸಿರಬಹುದು. ಇನ್ನೂ ಹಲವರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತೊಡಕುಗಳು ಉಂಟಾಗಿರಬಹುದು.

ಕರ್ನಾಟಕ ರಾಜ್ಯ ಸರ್ಕಾರವು ರೈತರಿಗಾಗಿ ಬೆಳೆ ಸಾಲ ಮನ್ನಾ ಯೋಜನೆಯನ್ನು ಜಾರಿ ತಂದಿದೆ. ನಮ್ಮಲ್ಲಿ ಕೆಲ ರೈತರು ಅರ್ಜಿ ಸಲ್ಲಿಸಿರಬಹುದು. ಇನ್ನೂ ಹಲವರಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತೊಡಕುಗಳು ಉಂಟಾಗಿರಬಹುದು. ಸಾಮಾನ್ಯವಾಗಿ ಬೆಳೆ ಸಾಲ ಮನ್ನಾ ಯೋಜನೆಗೆ ಅರ್ಜಿ ಸಲ್ಲಿಸುವ ಬಗೆ, ಬೆಳೆ ಸಾಲ ಮನ್ನಾ ಆಗಿದೆಯೋ ಇಲ್ಲವೋ ಅಥವಾ ರೈತರ ಬೆಳೆ ಸಾಲ ಮನ್ನಾ ಪಟ್ಟಿಯಲ್ಲಿ ಹೆಸರಿದೆಯೋ ಇಲ್ಲವೋ ಇತ್ಯಾದಿ ಗೊಂದಲುಗಳು ರೈತರಲ್ಲಿ ಇರುತ್ತವೆ.

ಕಾಲಕಾಲಕ್ಕೆ ಬದಲಾಗುವ ಸರ್ಕಾರದ ನಿಯಮ ಮತ್ತು ಅರ್ಜಿ ಸಲ್ಲಿಕೆಯ ಅವಧಿಗನುಗುಣವಾಗಿ ರೈತರಿಗೆ ಬೆಳೆ ಸಾಲ ಮನ್ನಾ ಅರ್ಜಿ ಸಲ್ಲಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

2 ಲಕ್ಷದವರೆಗೆ ಸಾಲ ಮನ್ನಾ

2 ಲಕ್ಷದವರೆಗೆ ಸಾಲ ಮನ್ನಾ

ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ರೈತರಿಗೆ ಹಣಕಾಸು ಸಹಾಯ ಅಥವಾ ಪರಿಹಾರ ನೀಡಲಾಗುತ್ತದೆ. ರೈತರು ಅತಿವೃಷ್ಟಿ, ಅನಾವೃಷ್ಟಿಗಳಿಂದ ನಷ್ಟ ಅನುಭವಿಸಿದಾಗ ರೂ. 2 ಲಕ್ಷದವರೆಗೆ ಧನ ಸಹಾಯ ಮಾಡಲಾಗುತ್ತದೆ. ಬರಪೀಡಿತ ರೈತರಿಗೆ ಆರ್ಥಿಕ ನೆರವು ನೀಡುವುದು ಮತ್ತು ಅವರ ಮೇಲಿನ ಹೊರೆ ಕಡಿಮೆ ಮಾಡುವುದು ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ.
ಬೆಳೆ ಸಾಲ ಮನ್ನಾ ಯೋಜನೆ ಎನ್ನುವುದು ರಾಜ್ಯದಲ್ಲಿ ಸಾಲ ಪೀಡಿತ ರೈತರಿಗೆ ಸಾಲ ಮನ್ನಾ ನೀಡುವ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯಾಗಿದೆ.

ಉದ್ದೇಶ

ಉದ್ದೇಶ

- ರೈತರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವುದು.
- ಅಲ್ಪ ಮತ್ತು ಬಡ ರೈತರಿಗೆ ಆರ್ಥಿಕ ನೆರವು ನೀಡುವುದು.
- ಮುಂಬರುವ ಬಿತ್ತನೆ ಋತುವಿಗೆ ಹೊಸ ಸಾಲಗಳನ್ನು ಒದಗಿಸುವುದು.

ಅರ್ಹತೆ

ಅರ್ಹತೆ

- ರೈತರು ಕರ್ನಾಟಕದ ಪ್ರಜೆಗಳಾಗಿರಬೇಕು
- ರೈತರ ಕೃಷಿ ಸಾಲವನ್ನು ಮಾತ್ರ ಮನ್ನಾ ಮಾಡಲಾಗುತ್ತದೆ.
- ಅರ್ಜಿದಾರರ ರೈತನ ಕುಟುಂಬ ಸದಸ್ಯರು ಸರ್ಕಾರಿ ಅಥವಾ ಖಾಸಗಿ ಸೇವೆಯಲ್ಲಿ ಇರಬಾರದು.
- ಕೇವಲ ರೂ. 2 ಲಕ್ಷ ಮನ್ನಾ ಮಾಡಲಾಗುವುದು.
- ಸಹಕಾರಿ ಬ್ಯಾಂಕುಗಳಿಂದ ಪಡೆದ ಸಾಲಗಳು ಯೋಜನೆಯಡಿ ಮಾತ್ರ ಅರ್ಹವಾಗಿವೆ.

ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲಾತಿ

ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲಾತಿ

- ರಹವಾಸಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್
- ಪಾಸ್ಪೋರ್ಟ್ ಗಾತ್ರದ ಾಯಾಚಿತ್ರ
- ಲೋನ್ ಸ್ಟೇಟ್ಮೆಂಟ್
- ಭೂ ದಾಖಲೆಗಳು

ಬೆಳೆ ಸಾಲ ಮನ್ನಾ ಅರ್ಜಿ ಸಲ್ಲಿಸುವುದು ಹೇಗೆ?

ಬೆಳೆ ಸಾಲ ಮನ್ನಾ ಅರ್ಜಿ ಸಲ್ಲಿಸುವುದು ಹೇಗೆ?

- ಕರ್ನಾಟಕದ ರೈತರು ತಮ್ಮ ಜಿಲ್ಲೆಗಳಲ್ಲಿನ ವಾಣಿಜ್ಯ ಬ್ಯಾಂಕುಗಳೊಂದಿಗೆ ಹೆಸರನ್ನು ದಾಖಲು ಮಾಡಬೇಕು.
- ಹತ್ತಿರದ ಶಾಖೆಗೆ ಹೋಗಿ ಬೆಳೆ ಸಾಲ ಮನ್ನಾ ಯೋಜನೆಗಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಅಗತ್ಯವಿರುವ ದಾಖಲೆಗಳ ಸ್ವಯಂ ದೃಢೀಕರಿಸಿದ ಛಾಯಾಚಿತ್ರಗಳನ್ನು ಒದಗಿಸಿ.
- ನಿಮ್ಮ ಕೃಷಿ ಸಾಲ ಮನ್ನಾ ಅರ್ಜಿಯನ್ನು ಸಲ್ಲಿಸಿ
- ನಂತರ ಅರ್ಜಿಯನ್ನು ಬ್ಯಾಂಕ್ ಆಪರೇಟರ್‌ಗಳು ಸಿಸ್ಟಮ್‌ಗೆ ಅಪ್‌ಲೋಡ್ ಮಾಡುತ್ತಾರೆ.
- ನಿಮ್ಮ ಅರ್ಜಿಯನ್ನು ಸರ್ಕಾರಿ ಸಂಸ್ಥೆಗಳು ಪರಿಶೀಲಿಸುತ್ತವೆ.
- ಅನುಮೋದನೆಯ ಆಧಾರದ ಮೇಲೆ ಸಾಲ ಮನ್ನಾ ಮಾಡಲಾಗುತ್ತದೆ.
- ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ, ನಿಮ್ಮ ಹೆಸರನ್ನು ಪರಿಶೀಲಿಸಿ, ಏನಾದರೂ ನ್ಯೂನ್ಯತೆಗಳಿದ್ದಲ್ಲಿ ಅಧಿಕಾರಿಗಳೋಂದಿಗೆ ಚರ್ಚಿಸಿ ಸರಿಪಡಿಸಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+