ನೀವು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಲ್ಲಿಸಿದ ನಂತರ ಐಟಿ ಇಲಾಖೆಯು ಪರಿಶೀಲಿಸಲು ಪ್ರಾರಂಭಿಸುತ್ತದೆ. ರಿಫಂಡ್ ನ್ನು ಐಟಿಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ನೀಡಲಾಗುತ್ತದೆ.
ನೀವು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಲ್ಲಿಸಿದ ನಂತರ ಐಟಿ ಇಲಾಖೆಯು ಪರಿಶೀಲಿಸಲು ಪ್ರಾರಂಭಿಸುತ್ತದೆ. ರಿಫಂಡ್ ನ್ನು ಐಟಿಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ನೀಡಲಾಗುತ್ತದೆ. ಸಾಮಾನ್ಯವಾಗಿ ಐಟಿಆರ್ ಪರಿಶೀಲನೆಯ ನಂತರ ನಿಮ್ಮ ತೆರಿಗೆ ರಿಟರ್ನ್‌ನ ಸ್ಟೇಟಸ್ ಯಶಸ್ವಿಯಾಗಿ ಪರಿಶೀಲಿಸಲ್ಪಟ್ಟಿದೆ ಅಥವಾ ಯಶಸ್ವಿಯಾಗಿ ಇ-ಪರಿಶೀಲನೆ (Successfully Verified' or 'Successfully e-Verified)ಎಂದು ತೋರಿಸುತ್ತದೆ. ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಸ್ಟೇಟಸ್ 'ITR Processed' ಆಗಿರುತ್ತದೆ.
ಐಟಿಆರ್ ಪ್ರಕ್ರಿಯಾ ಅವಧಿಯಲ್ಲಿ, ಘೋಷಿಸಿದ ಆದಾಯ ಮತ್ತು ನೀವು ಪಾವತಿಸಿದ ತೆರಿಗೆ ಮತ್ತು ಅದರೊಂದಿಗೆ ಲಭ್ಯವಿರುವ ದತ್ತಾಂಶಗಳ ನಡುವೆ ಏನಾದರೂ ವ್ಯತ್ಯಾಸವಿದೆಯೇ ಎಂದು ತೆರಿಗೆ ಇಲಾಖೆ ಪರಿಶೀಲಿಸಲಾಗುತ್ತದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ, ಇಲಾಖೆಯು ಸಾಮಾನ್ಯವಾಗಿ ಸೆಕ್ಷನ್ 143 (1) ರ ಅಡಿಯಲ್ಲಿ ನೋಟಿಸ್ ಕಳುಹಿಸುತ್ತದೆ. ನೀವು ಸಲ್ಲಿಸಿದ ಐಟಿಆರ್ ಸ್ವೀಕರಿಸಲಾಗಿದೆಯೇ ಅಥವಾ ಏನಾದರೂ ವ್ಯತ್ಯಾಸವಿದೆಯೇ ಎಂದು ತಿಳಿಸುತ್ತದೆ. ಇಲಾಖೆಯ ತೆರಿಗೆ ಲೆಕ್ಕಾಚಾರದಲ್ಲಿ ಮತ್ತು ನಿಮ್ಮದರಲ್ಲಿ ವ್ಯತ್ಯಾಸ ಕಂಡುಬಂದರೆ, ಸೆಕ್ಷನ್ 143 (1) ರ ಅಡಿಯಲ್ಲಿನ ನೋಟೀಸ್ ಹೆಚ್ಚುವರಿ ತೆರಿಗೆ ಪಾವತಿಸಬೇಕೆಂದು ತೋರಿಸುತ್ತದೆ.
ನಿಮ್ಮ ತೆರಿಗೆ ರಿಟರ್ನ್ ಅನ್ನು ನೀವು ಸಲ್ಲಿಸಿದ ನಂತರ, ಅದು ಯಾವ ಹಂತದಲ್ಲಿದೆ ಎಂದು ಪರಿಶೀಲಿಸಲು ಬಯಸಿದರೆ, ಅದರ ಸುಲಭ ಮಾರ್ಗಗಳು ಇಲ್ಲಿವೆ:
ಸ್ವೀಕೃತಿ ಸಂಖ್ಯೆಯನ್ನು ಬಳಸುವುದು
ಇ-ಫೈಲಿಂಗ್ ವೆಬ್‌ಸೈಟ್‌ನ ಮುಖಪುಟದಲ್ಲಿ, ಸೇವೆಗಳ ಟ್ಯಾಬ್‌ನ ಕೆಳಗೆ ಎಡಭಾಗದಲ್ಲಿ, ಐಟಿಆರ್ ಸ್ಥಿತಿಯನ್ನು ಪರಿಶೀಲಿಸುವ ಆಯ್ಕೆಯನ್ನು ಕಾಣುತ್ತೀರಿ.
ವಿವರ ತುಂಬಿ
ಒಮ್ಮೆ ನೀವು ಐಟಿಆರ್ ಸ್ಟೇಟಸ್ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ನಿಮ್ಮ ಪ್ಯಾನ್ ಸಂಖ್ಯೆ, ಐಟಿಆರ್ ಸ್ವೀಕೃತಿ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕಾದ ಹೊಸ ಪುಟವನ್ನು ಪ್ರವೇಶಿಸುತ್ತಿರಿ.
ಸ್ಟೇಟಸ್ ಪ್ರದರ್ಶನ
ನಿಮ್ಮ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ, ಸ್ಟೇಟಸ್ ಅನ್ನು ನಿಮ್ಮ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ.
ಲಾಗಿನ್ ರುಜುವಾತು ಬಳಸುವುದು
ಇ-ಫೈಲಿಂಗ್ ವೆಬ್‌ಸೈಟ್‌ಗೆ ಲಾಗಿನ್ ಮಾಡಿ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿ ನೀವು ' ವ್ಯೂ ರಿಟರ್ನ್ಸ್ / ಫಾರ್ಮ್' ('View Returns / Forms') ಆಯ್ಕೆಯನ್ನು ನೋಡುತ್ತೀರಿ.
ಸಬ್ಮಿಟ್ ಮಾಡಿ
'ವ್ಯೂ ರಿಟರ್ನ್ಸ್/ಫಾರ್ಮ್ಸ್' ಆಯ್ಕೆಗೆ ಹೋಗಿ, ಡ್ರಾಪ್‌ಡೌನ್ ಮೆನುವಿನಿಂದ ಆದಾಯ ತೆರಿಗೆ ರಿಟರ್ನ್ಸ್ ಮತ್ತು ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿ ಮತ್ತು ಸಲ್ಲಿಸಿ.
ಐಟಿಆರ್ ವೆರಿಫೀಕೇಶನ್
ಸಲ್ಲಿಸುವಾಗ, ಐಟಿಆರ್ ಅನ್ನು ಮಾತ್ರ ಪರಿಶೀಲಿಸಲಾಗಿದೆಯೇ ಅಥವಾ ಪ್ರಕ್ರಿಯೆಗೊಳಿಸಲಾಗಿದೆಯೆ ಎಂದು ತೋರಿಸುವ ಸ್ಟೇಟಸ್ ಅನ್ನು ಪರದೆಯ ಮೇಲೆ ಕಾಣಬಹುದು. ITR Status check here (Images: economictimes.indiatimes.com)


Click it and Unblock the Notifications