For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ? ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ

ತೆರಿಗೆ ಪಾವತಿ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳಾದ ವೇಳೆ ತೆರಿಗೆ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದರಲ್ಲದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸುತ್ತಿದ್ದರು. ಇದರಿಂದಾಗಿ ತೆರಿಗೆ ಪಾವತಿದಾರರಿಗೆ ತೀವ್ರ ಕಿರಿಕಿರಿಯಾಗುತ್ತಿತ್ತು.

|

ತೆರಿಗೆ ಪಾವತಿ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳಾದ ವೇಳೆ ತೆರಿಗೆ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದರಲ್ಲದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸುತ್ತಿದ್ದರು. ಇದರಿಂದಾಗಿ ತೆರಿಗೆ ಪಾವತಿದಾರರಿಗೆ ತೀವ್ರ ಕಿರಿಕಿರಿಯಾಗುತ್ತಿತ್ತು. ಕೇಂದ್ರ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಅಕ್ಟೋಬರ್ 8ರ ವಿಜಯದಶಮಿ ದಿನದಿಂದ ಆಧುನಿಕ ತಂತ್ರಜ್ಞಾನ ಬಳಕೆಯ ಸರಳ ತೆರಿಗೆ ವ್ಯವಸ್ಥೆಯನ್ನು ದೇಶದಾದ್ಯಂತ ಜಾರಿಗೆ ತರಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೈಸೂರಿನಲ್ಲಿ ಮಾಹಿತಿ ನೀಡಿದ್ದು, ನೂತನ ವ್ಯವಸ್ಥೆ ಜಾರಿಗೊಂಡ ಬಳಿಕ ತೆರಿಗೆದಾರರು ಹಾಗೂ ಅಧಿಕಾರಿಗಳ ಮುಖಾಮುಖಿ ಬಹುತೇಕ ನಿಲ್ಲಲಿದೆ. ಎಸ್ಎಂಎಸ್, ವಾಟ್ಸಾಪ್ ಇಮೇಲ್ ಸೇರಿದಂತೆ ಹಲವು ಮಾಧ್ಯಮದ ಮೂಲಕ ತೆರಿಗೆದಾರರಿಗೆ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಆಗಸ್ಟ್ 31 ರವರೆಗೆ ಗಡುವು, ಐಟಿ ರಿಟರ್ನ್ ಕಡ್ಡಾಯ

ಆಗಸ್ಟ್ 31 ರವರೆಗೆ ಗಡುವು, ಐಟಿ ರಿಟರ್ನ್ ಕಡ್ಡಾಯ

2018-19 ನೇ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ದಿನಾಂಕವನ್ನು ಇದೇ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ರಿಟರ್ನ್ ಫೈಲ್ ಮಾಡಲು ಇನ್ನೂ ಒಂದಿಷ್ಟು ಕಾಲಾವಕಾಶವಿದ್ದರೂ ಆದಷ್ಟು ಬೇಗನೆ ರಿಟರ್ನ್ ಫೈಲಿಂಗ್ ಮಾಡುವುದರಿಂದ ಕೆಲ ಅನುಕೂಲತೆಗಳು ಸಹ ಇವೆ. ಬೇಗನೆ ರಿಟರ್ನ್ ಫೈಲ್ ಮಾಡಿ ನಷ್ಟಗಳನ್ನು ಕ್ಯಾರಿ ಫಾರ್ವರ್ಡ್ ತೋರಿಸಬಹುದು ಹಾಗೂ ವಿಳಂಬ ಶುಲ್ಕ ಪಾವತಿಸುವುದರಿಂದ ಪಾರಾಗಬಹುದು. ಒಂದು ವೇಳೆ ನಿಗದಿತ ದಿನಾಂಕದೊಳಗೆ ಐಟಿ ರಿಟರ್ನ್ ಫೈಲ್ ಮಾಡದಿದ್ದಲ್ಲಿ 10 ಸಾವಿರ ರೂ.ಗಳವರೆಗೆ ದಂಡ ಕಟ್ಟಬೇಕಾಗುತ್ತದೆ ಎಂಬುದು ಗೊತ್ತಿರಲಿ.
80 ವರ್ಷ ಅಥವಾ ಅದಕ್ಕೂ ಹೆಚ್ಚು ವಯಸ್ಸಾಗಿರುವ ಹಿರಿಯ ನಾಗರಿಕರನ್ನು ಹೊರತು ಪಡಿಸಿ ಇತರ ಎಲ್ಲರೂ ಡಿಜಿಟಲ್ ರೂಪದಲ್ಲಿಯೇ ಐಟಿ ರಿಟರ್ನ್ ಮಾಡುವುದು ಕಡ್ಡಾಯ.
ಎಲೆಕ್ಟ್ರಾನಿಕ್ ರೂಪದಲ್ಲಿ ಐಟಿ ರಿಟರ್ನ್ ಕಟ್ಟಲು ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್ನಲ್ಲಿ ರಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ನಂತರವಷ್ಟೇ ಇ-ಫೈಲಿಂಗ್ ಪ್ರಕ್ರಿಯೆ ಆರಂಭಿಸಬಹುದು. ಹೀಗೆ ಡಿಜಿಟಲ್ ರೂಪದಲ್ಲಿ ಐಟಿ ರಿಟರ್ನ್ ಫೈಲ್ ಮಾಡಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂಬ ಬಗ್ಗೆ ಇಲ್ಲಿ ವಿವರಣಾತ್ಮಕವಾಗಿ ತಿಳಿಸಲಾಗಿದೆ.
ಐಟಿ ರಿಟರ್ನ್ ಫೈಲಿಂಗ್ ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿ ನೀಡಲಾಗಿದೆ:

1. ಟಿಡಿಎಸ್ ಸರ್ಟಿಫಿಕೇಟ್ ಗಳು (ಫಾರಂ16/ 16 ಎ)

1. ಟಿಡಿಎಸ್ ಸರ್ಟಿಫಿಕೇಟ್ ಗಳು (ಫಾರಂ16/ 16 ಎ)

ಕ್ಯಾಪಿಟಲ್ ಗೇನ್ ಸರ್ಟಿಫಿಕೇಟ್ ಸೇರಿದಂತೆ ಇತರ ಎಲ್ಲ ದಾಖಲೆಗಳನ್ನು ಜೋಡಿಸಿಟ್ಟುಕೊಳ್ಳಿ. ಈ ದಾಖಲೆಗಳ ಮೂಲಕ 2018-19 ಆರ್ಥಿಕ ವರ್ಷದಲ್ಲಿ ನಿಮ್ಮ ಒಟ್ಟು ಆದಾಯ ಹಾಗೂ ಅದರಿಂದ ಕಡಿತಗೊಂಡಿರುವ ಟಿಡಿಎಸ್ ಎಷ್ಟು ಎಂಬುದನ್ನು ಲೆಕ್ಕ ಹಾಕಬಹುದಾಗಿದೆ.

ನಿಮ್ಮ ಸಂಬಳದಲ್ಲಿ ಮೂಲದಲ್ಲಿಯೇ ತೆರಿಗೆ ಕಡಿತ ಮಾಡುವುದನ್ನು ಟಿಡಿಎಸ್ ಎನ್ನಲಾಗುತ್ತದೆ. ನಿಮ್ಮ ಕಂಪನಿಯು ನಿಮ್ಮ ಸಂಬಳದಲ್ಲಿ ಟಿಡಿಎಸ್ ಕಡಿತ ಮಾಡಿದಲ್ಲಿ ನಿಮಗೆ ಫಾರಂ 16 ಟಿಡಿಎಸ್ ಸರ್ಟಿಫಿಕೇಟ್ ನೀಡಲಾಗುತ್ತದೆ. ಒಂದು ವೇಳೆ ಬ್ಯಾಂಕಿನಲ್ಲಿ ನಿಮ್ಮ ಫಿಕ್ಸೆಡ್ ಡಿಪಾಸಿಟ್ ಇದ್ದಲ್ಲಿ, ಅದರ ಮೇಲಿನ ಬಡ್ಡಿ ಆದಾಯದಲ್ಲಿ ಬ್ಯಾಂಕು ಟಿಡಿಎಸ್ ಕಡಿತಗೊಳಿಸಬಹುದು. ಆಗ ಬ್ಯಾಂಕು ಫಾರಂ 16ಎ ಟಿಡಿಎಸ್ ಸರ್ಟಿಫಿಕೇಟ್ ನೀಡುತ್ತದೆ. ನೀವು ಪಡೆದುಕೊಳ್ಳುವ ಎಲ್ಲ ಟಿಡಿಎಸ್ ಸರ್ಟಿಫಿಕೇಟುಗಳು TRACES ರೂಪದಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ.
ಹಾಗೆಯೇ ನೀವು ಪಡೆದುಕೊಳ್ಳುವ ಎಲ್ಲ ಟಿಡಿಎಸ್ ಸರ್ಟಿಫಿಕೇಟುಗಳು ಡಿಜಿಟಲ್ ಸಿಗ್ನೇಚರ್ ಹೊಂದಿರುವುದು ಕಡ್ಡಾಯ. ಸರ್ಟಿಫಿಕೇಟ್ ಮೇಲೆ ಡಿಜಿಟಲ್ ಸಿಗ್ನೇಚರ್ ವೆರಿಫೈ ಆಗಿದೆ ಎಂಬ ಗುರುತು ಇರುವುದನ್ನು ನೋಡಿ ಇದನ್ನು ಖಚಿತಪಡಿಸಿಕೊಳ್ಳಬಹುದು. ಒಂದು ವೇಳೆ ಡಿಜಿಟಲ್ ಸಿಗ್ನೇಚರ್ ವೆರಿಫೈ ಆಗಿರದಿದ್ದಲ್ಲಿ ಅದರ ಮೇಲೆ ಒಂದು ಪ್ರಶ್ನಾರ್ಥಕ ಚಿಹ್ನೆ ಇರುತ್ತದೆ. ಹೀಗಿದ್ದಾಗ ಈ ಸರ್ಟಿಫಿಕೇಟುಗಳನ್ನು ವೆರಿಫೈ ಮಾಡಬೇಕಾಗುತ್ತದೆ.
ಹಾಗೆಯೇ 2018-19 ನೇ ಆರ್ಥಿಕ ವರ್ಷದಲ್ಲಿ ನೀವು ಯಾವುದಾದರೂ ಮ್ಯೂಚುವಲ್ ಫಂಡ್ ಮಾರಿದ್ದಲ್ಲಿ ಅದರ ವ್ಯವಹಾರದ ಸ್ಟೇಟಮೆಂಟ್ ಹಾಗೂ ಕ್ಯಾಪಿಟಲ್ ಗೇನ್ ಸ್ಟೇಟಮೆಂಟ್ಗಳನ್ನು ಪಡೆದುಕೊಳ್ಳಬೇಕಾಗುತ್ತದೆ.
ಇಕ್ವಿಟಿ ಶೇರುಗಳು ಹಾಗೂ ಇಕ್ವಿಟಿ ಮ್ಯೂಚುವಲ್ ಫಂಡ್ಗಳ ಮೇಲಿನ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ 1 ಲಕ್ಷ ರೂ. ಮೀರುವಂತಿದ್ದರೆ ಮಾತ್ರ ನೀವು ಇ ವರ್ಷ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಪಾವತಿಸಬೇಕಾಗುತ್ತದೆ. ಇದಕ್ಕಾಗಿ ಯಾವುದೇ ಇಂಡೆಕ್ಸೇಶನ್ ಬೆನಿಫಿಟ್ ಇರುವುದಿಲ್ಲ ಹಾಗೂ ಶೇ.10 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಾಗಿ ಒಂದು ವೇಳೆ ನೀವು ಕ್ಯಾಪಿಟಲ್ ಗೇನ್ ಆದಾಯ ಹೊಂದಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಕ್ಯಾಪಿಟಲ್ ಗೇನ್ ಸರ್ಟಿಫಿಕೇಟುಗಳನ್ನು ಪಡೆದುಕೊಳ್ಳಬೇಕಾಗುತ್ತದೆ.

2. ಫಾರಂ 26ಎಎಸ್ ಡೌನ್ಲೋಡ್ ಮಾಡಿ

2. ಫಾರಂ 26ಎಎಸ್ ಡೌನ್ಲೋಡ್ ಮಾಡಿ

ಫಾರಂ 26ಎಎಸ್ ಎಂಬುದು ನಿಮ್ಮ ತೆರಿಗೆ ಪಾವತಿಯ ಎಲ್ಲ ದಾಖಲೆಗಳ ಪಾಸ್ ಬುಕ್ ಆಗಿದೆ. 2018-19ನೇ ಆರ್ಥಿಕ ವರ್ಷದಲ್ಲಿ ಕಡಿತಗೊಂಡ ತೆರಿಗೆ ಹಾಗೂ ಅದನ್ನು ನಿಮ್ಮ ಪ್ಯಾನ್ ಖಾತೆಗೆ ಜೋಡಿಸಲಾದ ಎಲ್ಲ ವಿವರಗಳು ಇದರಲ್ಲಿ ಇರುತ್ತವೆ. ನಿಮ್ಮ ಸಂಬಳದಿಂದ ಕಡಿತವಾದ ತೆರಿಗೆ, ಬಡ್ಡಿ ಆದಾಯದಲ್ಲಿ ಕಡಿತವಾದ ತೆರಿಗೆ ಹೀಗೆ ಎಲ್ಲ ಬಗೆಯ ಟಿಡಿಎಸ್ ಕಡಿತಗಳು ನಿಮ್ಮ ಪ್ಯಾನ್ ಸಂಖ್ಯೆಯ ಮೂಲಕ ಸರಕಾರಕ್ಕೆ ಪಾವತಿಸಲ್ಪಟ್ಟಿವೆ ಎಂಬುದನ್ನು ಈ ಫಾರಂ 26ಎಎಸ್ ಹಾಗೂ ನಿಮ್ಮ ಟಿಡಿಎಸ್ ಸರ್ಟಿಫಿಕೇಟುಗಳನ್ನು ಕ್ರಾಸ್ ಚೆಕ್ ಮಾಡುವ ಮೂಲಕ ಖಚಿತಪಡಿಸಿಕೊಳ್ಳಬಹುದು.
TRACES ವೆಬ್ಸೈಟನಿಂದ 26ಎಎಸ್ ಫಾರಂ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇದನ್ನು ಡೌನ್ಲೋಡ್ ಮಾಡಲು ಇ-ಫೈಲಿಂಗ್ ವೆಬ್ಸೈಟ್ ನಲ್ಲಿ ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ. ಇದರಲ್ಲಿ 'My Account' ಟ್ಯಾಬ್ ಕ್ಲಿಕ್ ಮಾಡಿ ಅದರಲ್ಲಿ ‘View Form 26AS' ಬಟನ್ ಒತ್ತಿ. ಈಗ ಇಲ್ಲಿಂದ TRACES ವೆಬ್ಸೈಟ್ ಗೆ ರಿಡೈರೆಕ್ಟ್ ಆಗಿ 26 ಎಎಸ್ ಫಾರಂ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ. ಕ್ಲಿಕ್ ಮಾಡಿ.

3. ಫಾರಂ 26ಎಎಸ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸಿ

3. ಫಾರಂ 26ಎಎಸ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸಿ

ಟಿಡಿಎಸ್ ಸರ್ಟಿಫಿಕೇಟುಗಳಲ್ಲಿನ (ಫಾರಂ-16, ಫಾರಂ-16ಎ ಇತ್ಯಾದಿ) ಹಾಗೂ ಫಾರಂ 26ಎಎಸ್ ಗಳಲ್ಲಿನ ಮೊತ್ತವು ತಾಳೆಯಾಗದಿದ್ದಲ್ಲಿ ಟಿಡಿಎಸ್ ಕಡಿತಗೊಳಿಸಿದ ಕಂಪನಿಯ ಕಡೆಯಿಂದ ಈ ತಪ್ಪನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ನಿಮಗೆ ಉದ್ಯೋಗ ನೀಡಿದ ಕಂಪನಿ, ನಿಮ್ಮ ಬ್ಯಾಂಕ್ ಅಥವಾ ಇನ್ನಾರೇ ನಿಮ್ಮ ಟಿಡಿಎಸ್ ಕಡಿತ ಮಾಡಿದ್ದಲ್ಲಿ ಅಲ್ಲಿಂದಲೇ ಈ ತಪ್ಪು ಸರಿಪಡಿಸಲು ಮನವಿ ಮಾಡಿಕೊಳ್ಳಬೇಕಾಗುತ್ತದೆ.
ಒಂದು ವೇಳೆ ಇಂಥ ತಪ್ಪು ಸರಿಪಡಿಸಿಕೊಳ್ಳದಿದ್ದರೆ ನಿಮಗೆ ಮರಳಿ ಬರಬೇಕಾದ ಅಂಥ ತೆರಿಗೆ ಮೊತ್ತವನ್ನು ಕ್ಲೇಮ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಆರ್ಥಿಕ ವರ್ಷದ ಉದ್ದಕ್ಕೂ ಫಾರಂ 26ಎಎಸ್ ಮೇಲೆ ಕಣ್ಣಿಟ್ಟು ಯಾವುದೇ ತಪ್ಪುಗಳು ನುಸುಳದಂತೆ ಎಚ್ಚರಿಕೆ ವಹಿಸಬೇಕೆಂದು ಚಾರ್ಟರ್ಡ್ ಅಕೌಂಟಂಟ್ಸ್ ಸಲಹೆ ನೀಡುತ್ತಾರೆ.
ಒಂದೊಮ್ಮೆ ನಿಮ್ಮ ಟಿಡಿಎಸ್ ಕಡಿತವಾಗಿದ್ದರೂ ಅದನ್ನು ಕಡಿತ ಮಾಡಿದ ಸಂಸ್ಥೆಯು ಆ ಮೊತ್ತವನ್ನು ಸರಕಾರಕ್ಕೆ ಪಾವತಿಸಿರದಿದ್ದಲ್ಲಿ ಹಾಗೂ ನಿಮ್ಮ ಮನವಿಗಳಿಗೆ ಯಾವುದೇ ಬೆಲೆ ಕೊಡದಿದ್ದಲ್ಲಿ ಈ ಕುರಿತು ಕೇಂದ್ರದ ನೇರ ತೆರಿಗೆ ಮಂಡಳಿಯು ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಯ ಪ್ರಕಾರ ಟಿಡಿಎಸ್ ಕಡಿತವಾಗಿರುವ ವ್ಯಕ್ತಿಗೆ ಆದಾಯ ತೆರಿಗೆ ಅಧಿಕಾರಿಗಳು ಕಿರುಕುಳ ನೀಡುವಂತಿಲ್ಲ.

4. ಹಣಕಾಸು ವರ್ಷದ ಒಟ್ಟು ಆದಾಯ ಲೆಕ್ಕ ಹಾಕಿ

4. ಹಣಕಾಸು ವರ್ಷದ ಒಟ್ಟು ಆದಾಯ ಲೆಕ್ಕ ಹಾಕಿ

ಅವಶ್ಯಕ ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ ನಂತರ ಹಾಗೂ ತೆರಿಗೆ ಕಡಿತಗಳನ್ನು ಲೆಕ್ಕ ಮಾಡಿದ ನಂತರ ಈಗ ತೆರಿಗೆ ಪಾವತಿಸಬೇಕಾಗಿರುವ ಒಟ್ಟು ಆದಾಯ ಎಷ್ಟು ಎಂಬುದನ್ನು ಲೆಕ್ಕ ಹಾಕಬೇಕಾಗುತ್ತದೆ.
5 ವಿವಿಧ ಮೂಲಗಳಿಂದ ಬಂದ ಆದಾಯವನ್ನು ಒಟ್ಟು ಮಾಡಲಾಗುತ್ತದೆ ಹಾಗೂ ಆದಾಯ ತೆರಿಗೆ ಇಲಾಖೆ ನಿಯಮಾವಳಿಗಳ ಪ್ರಕಾರ ತೆರಿಗೆ ಕಡಿತಗಳು ಮತ್ತು ನಷ್ಟದ (ಯಾವುದಾದರೂ ಇದ್ದಲ್ಲಿ) ಕಡಿತಗಳನ್ನು ಮಾಡಲಾಗುತ್ತದೆ.
ಐಟಿಆರ್ನಲ್ಲಿ ಸ್ಯಾಲರಿ ವಿವರಗಳನ್ನು ತುಂಬುವ ಪ್ರಕ್ರಿಯೆಯನ್ನು ಈ ಬಾರಿ ಬಹಳಷ್ಟು ಸರಳಗೊಳಿಸಲಾಗಿದೆ. ಇದರ ಎಲ್ಲ ವಿವಗಳನ್ನು ಫಾರಂ 16 ನಲ್ಲಿ ಸುಲಭವಾಗಿ ತಿಳಿಯಬಹುದಾಗಿದೆ. 'ಇತರ ಮೂಲಗಳಿಂದ ಆದಾಯ' ಅಡಿಯಲ್ಲಿ ಆದಾಯ ತೆರಿಗೆಗೆ ಒಳಪಡುವ ಎಲ್ಲ ರೀತಿಯ ಆದಾಯಗಳನ್ನು ನೀವು ವರ್ಗೀಕರಿಸಿ ಸಲ್ಲಿಸಬಹುದಾಗಿದೆ.

5. ಪಾವತಿಸಬೇಕಾಗಿರುವ ತೆರಿಗೆ ಲೆಕ್ಕ ಮಾಡಿ

5. ಪಾವತಿಸಬೇಕಾಗಿರುವ ತೆರಿಗೆ ಲೆಕ್ಕ ಮಾಡಿ

ನಿಮ್ಮ ಒಟ್ಟು ಆದಾಯವನ್ನು ಲೆಕ್ಕ ಹಾಕಿದ ನಂತರ 2018-19 ನೇ ಸಾಲಿನ ತೆರಿಗೆ ದರಗಳ ಪ್ರಕಾರ ನೀವು ಪಾವತಿಸಬೇಕಾಗಿರುವ ಒಟ್ಟು ತೆರಿಗೆ ಎಷ್ಟು ಎಂಬುದನ್ನು ಲೆಕ್ಕ ಹಾಕಬೇಕಾಗುತ್ತದೆ. ನಿಮ್ಮ ಆದಾಯ ಯಾವ ಸ್ಲ್ಯಾಬ್ ಅಡಿ ಬರುತ್ತದೆ ಎಂಬುದರ ಮೇಲೆ ತೆರಿಗೆ ಅವಲಂಬಿತವಾಗಿರುತ್ತದೆ. 2018-19 ನೇ ಸಾಲಿನ ತೆರಿಗೆ ದರಗಳು ಅದರ ಹಿಂದಿನ ವರ್ಷದಲ್ಲಿ ಇದ್ದಷ್ಟೇ ಮುಂದುವರಿದಿವೆ.

6. ಅಂತಿಮ ತೆರಿಗೆ ಲೆಕ್ಕ ಹಾಕಿ (ಅವಶ್ಯಕತೆ ಇದ್ದಲ್ಲಿ)

6. ಅಂತಿಮ ತೆರಿಗೆ ಲೆಕ್ಕ ಹಾಕಿ (ಅವಶ್ಯಕತೆ ಇದ್ದಲ್ಲಿ)

ನೀವು ಪಾವತಿಸಬೇಕಾಗಿರುವ ಒಟ್ಟು ತೆರಿಗೆಯನ್ನು ಲೆಕ್ಕ ಮಾಡಿದ ನಂತರ ಅನ್ವಯವಾಗುವ ಆರ್ಥಿಕ ವರ್ಷದಲ್ಲಿ ನೀವು ಈಗಾಗಲೇ ಟಿಡಿಎಸ್, ಟಿಸಿಎಸ್ ಅಥವಾ ಅಡ್ವಾನ್ಸ್ ರೂಪದಲ್ಲಿ ತೆರಿಗೆಗಳನ್ನು ಪಾವತಿಸಿದ್ದಲ್ಲಿ ಇವನ್ನು ಒಟ್ಟು ತೆರಿಗೆಗಳಲ್ಲಿ ಕಳೆಯಿರಿ. ಹಾಗೆಯೇ ಸೆಕ್ಷನ್ 234ಎ, 234ಬಿ ಮತ್ತು 234ಸಿ ಪ್ರಕಾರ ಯಾವುದಾದರೂ ಪಾವತಿಸಬೇಕಾದ ಬಡ್ಡಿ ಆದಾಯ ಇದ್ದರೆ ಅದನ್ನು ಸೇರಿಸಿ.
ಇನ್ನು ಯಾವುದಾದರೂ ಹೆಚ್ಚುವರಿ ತೆರಿಗೆಗಳು ಬಾಕಿ ಇದ್ದಲ್ಲಿ ಅಂಥವನ್ನು ಯಾವುದೇ ವ್ಯಕ್ತಿಯು ನೇರವಾಗಿ ಆನ್ಲೈನ್ ಅಥವಾ ಚೆಕ್ ಮೂಲಕ ಐಟಿಎನ್ಎಸ್ ಚಲನ್ ಮೂಲಕ ಪಾವತಿಸಬಹುದು. ಆರ್ಥಿಕ ವರ್ಷದ ಮಾರ್ಚ್ 15 ರ ನಂತರ ಮಾಡಲಾದ ಆದಾಯ ತೆರಿಗೆಗೆ ಮಾಡುವ ರಿಟರ್ನ್ ಫೈಲಿಂಗ್ ಅನ್ನು ಸೆಲ್ಫ್-ಅಸೆಸಮೆಂಟ್ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ. ಇಂಥ ಎಲ್ಲ ಪಾವತಿಗಳು ಪಾವತಿ ಮಾಡಿದ 2 ರಿಂದ 3 ದಿನಗಳೊಳಗೆ ನಿಮ್ಮ 26ಎಎಸ್ ಫಾರಂ ನಲ್ಲಿ ಕಾಣಿಸಿಕೊಳ್ಳುತ್ತವೆ. ಆದಾಗ್ಯೂ ಕೊನೆಯ ದಿನಾಂಕ ಹತ್ತಿವಾದಂತೆ ಈ ಪ್ರಕ್ರಿಯೆಗೆ ತುಸು ಹೆಚ್ಚಿನ ಅವಧಿ ಬೇಕಾಗಬಹುದು.

7. ಎಲ್ಲ ತೆರಿಗೆಗಳನ್ನು ಪಾವತಿಸಿದ ನಂತರ ಐಟಿಆರ್ ಫೈಲ್ ಮಾಡಿ

7. ಎಲ್ಲ ತೆರಿಗೆಗಳನ್ನು ಪಾವತಿಸಿದ ನಂತರ ಐಟಿಆರ್ ಫೈಲ್ ಮಾಡಿ

ಒಂದೊಮ್ಮೆ ನೀವು ಎಲ್ಲ ತೆರಿಗೆಗಳನ್ನು ಪಾವತಿಸಿದ ನಂತರ ಈಗ ಐಟಿಆರ್ ಪ್ರಕ್ರಿಯೆ ಆರಂಭಿಸಬಹುದು. ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಯಾವುದಾದರೂ ಬಾಕಿ ಬರಬೇಕಿದ್ದರೂ ಸಹ ನೀವು ಐಟಿಆರ್ ಮಾಡಿದ್ದರೆ ಮಾತ್ರ ಅದನ್ನು ಪಡೆಯಲು ಸಾಧ್ಯ. ಆದಾಯ ತೆರಿಗೆ ಕಾಯ್ದೆ ಪ್ರಕಾರ ನೀವು ಕಡ್ಡಾಯ ತೆರಿಗೆ ಪಾವತಿಸುವ ವ್ಯಾಪ್ತಿಗೆ ಒಳಪಡದಿದ್ದರೂ ಐಟಿಆರ್ ಫೈಲ್ ಮಾಡಬೇಕಾಗುತ್ತದೆ. ಐಟಿ ರಿಟರ್ನ್ ಫೈಲ್ ಮಾಡುವಾಗ ಅದಕ್ಕೆ ಸೂಕ್ತವಾದ ಫಾರಂ ಅನ್ನೇ ಉಪಯೋಗಿಸುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ತಪ್ಪು ಫಾರಂ ಬಳಸಿ ಐಟಿ ರಿಟರ್ನ್ ಫೈಲ್ ಮಾಡಿದ್ದಲ್ಲಿ ಅದು ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾದಾಗ ನೀವು ಮತ್ತೆ ರಿಟರ್ನ್ ಫೈಲ್ ಮಾಡಬೇಕಾಗುತ್ತದೆ.
ನಿರ್ದಿಷ್ಟ ಆರ್ಥಿಕ ವರ್ಷಕ್ಕೆ ಯಾವ ಫಾರಂ ಬಳಸಬೇಕೆಂಬುದನ್ನು ಆದಾಯ ತೆರಿಗೆ ಇಲಾಖೆ ನಿರ್ದೇಶನ ನೀಡುತ್ತದೆ. 2018-19ರ ಆರ್ಥಿಕ ವರ್ಷಕ್ಕಾಗಿ ತೆರಿಗೆ ಲೆಕ್ಕಾಚಾರದ ವರ್ಷ 2019-20 ಆಗಿರುತ್ತದೆ.

8. ಐಟಿಆರ್ ವೆರಿಫಿಕೇಶನ್

8. ಐಟಿಆರ್ ವೆರಿಫಿಕೇಶನ್

ವೆರಿಫಿಕೇಶನ್ ಇದು ಐಟಿ ರಿಟರ್ನ್ ಫೈಲ್ ಮಾಡುವ ಕೊನೆಯ ಹಂತವಾಗಿದೆ. ಒಟ್ಟು 6 ವಿಧಗಳಲ್ಲಿ ಐಟಿ ರಿಟರ್ನ್ ವೆರಿಫೈ ಮಾಡಿಸಬಹುದಾಗಿದ್ದು, ಇದರಲ್ಲಿ ೫ ಪ್ರಕಾರ ಡಿಜಿಟಲ್ ಹಾಗೂ ಒಂದು ಪ್ರಕಾರದಲ್ಲಿ ವೈಯಕ್ತಿಕ ನೇರವಾಗಿ ಮಾಡಬಹುದು.
ನೀವು ಎಲೆಕ್ಟ್ರಾನಿಕ್ ರೂಪದಲ್ಲಿ ಐಟಿ ರಿಟರ್ನ್ ಫೈಲ್ ಮಾಡುವುದಾದರೆ ಇಲಾಖೆಗೆ ಯಾವುದೇ ದಾಖಲೆಗಳನ್ನು ಕಳುಹಿಸುವ ಅಗತ್ಯವಿರುವುದಿಲ್ಲ. ಆದರೆ ಒಂದೊಮ್ಮೆ ನೀವು ನಿಮ್ಮ ಐಟಿಆರ್ ನೇರವಾಗಿ ವೆರಿಫೈ ಮಾಡಲು ಬಯಸಿದಲ್ಲಿ ಸಹಿ ಮಾಡಿದ ಐಟಿಆರ್-ವಿ ದಾಖಲೆಯನ್ನು - 'ಸಿಪಿಸಿ, ಪೋಸ್ಟ್ ಬಾಕ್ಸ್ ನಂ.1, ಎಲೆಕ್ಟ್ರಾನಿಕ್ ಸಿಟಿ ಪೋಸ್ಟ್ ಆಫೀಸ್, ಬೆಂಗಳೂರು-560100, ಕರ್ನಾಟಕ, ಇಂಡಿಯಾ' ಇಲ್ಲಿಗೆ ಅಂಚೆ ಮೂಲಕ ಕಳುಹಿಸಬೇಕು.
ನೀವು ಐಟಿ ರಿಟರ್ನ್ ಫೈಲ್ ಮಾಡಿದ ನಂತರ ಅದನ್ನು 120 ದಿನಗಳ ಒಳಗೆ ವೆರಿಫೈ ಮಾಡಿಸಬೇಕಾಗುತ್ತದೆ. ಒಂದು ವೇಳೆ ಈ ಅವಧಿಯಲ್ಲಿ ವೆರಿಫೈ ಆಗದಿದ್ದರೆ ನೀವು ಐಟಿ ರಿಟರ್ನ್ ಫೈಲ್ ಮಾಡಿಲ್ಲವೆಂದೇ ಪರಿಗಣಿಸಲಾಗುತ್ತದೆ.

9. ಇ-ವೆರಿಫಿಕೇಶನ್ ಖಾತರಿಪಡಿಸಿಕೊಳ್ಳುವಿಕೆ

9. ಇ-ವೆರಿಫಿಕೇಶನ್ ಖಾತರಿಪಡಿಸಿಕೊಳ್ಳುವಿಕೆ

ಎಲೆಕ್ಟ್ರಾನಿಕ್ ರೂಪದಲ್ಲಿ ನೀವು ಐಟಿ ರಿಟರ್ನ್ ಫೈಲ್ ಮಾಡಿದಲ್ಲಿ ಆದಾಯ ತೆರಿಗೆ ಇಲಾಖೆಯು ನಿಮಗೆ ತಕ್ಷಣವೇ ವೆರಿಫಿಕೇಶನ್ ಆಗಿರುವುದನ್ನು ಖಚಿತ ಪಡಿಸುತ್ತದೆ. ಒಂದು ವೇಳೆ ನೀವು ಪೋಸ್ಟ್ ಮುಖಾಂತರ ಐಟಿಆರ್-ವಿ ಕಳುಹಿಸಿದ್ದಲ್ಲಿ ನಿಮಗೆ ಆದಾಯ ತೆರಿಗೆ ಇಲಾಖೆಯು ಇ-ಮೇಲ್ ಮೂಲಕ ಐಟಿಆರ್ ವೆರಿಫಿಕೇಶನ್ ಅನ್ನು ಖಚಿತಪಡಿಸುತ್ತದೆ. ಇ-ಫೈಲಿಂಗ್ ವೆಬ್ಸೈಟ್ನಲ್ಲಿ ನೀವು ನೀಡಿರುವ ಇ-ಮೇಲ್ ಖಾತೆಗೆ ಮೇಲ್ ಕಳುಹಿಸಲಾಗುತ್ತದೆ. ಕ್ಲಿಕ್ ಮಾಡಿ.

10. ಇ-ವೆರಿಫಿಕೇಶನ್ ಸ್ವೀಕೃತಿ

10. ಇ-ವೆರಿಫಿಕೇಶನ್ ಸ್ವೀಕೃತಿ

ನೀವು ಸಲ್ಲಿಸಿದ ರಿಟರ್ನ್ ಅನ್ನು ವೆರಿಫೈ ಮಾಡಿದ ನಂತರ (ಎಲೆಕ್ಟ್ರಾನಿಕ್ ರೂಪದಲ್ಲಿ ಅಥವಾ ನೇರವಾಗಿ) ತೆರಿಗೆ ಇಲಾಖೆಯು ನಿಮ್ಮ ಐಟಿ ರಿಟರ್ನ್ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ತೆರಿಗೆ ನಿಯಮಾವಳಿಗಳ ಪ್ರಕಾರ ನೀವು ಸಲ್ಲಿಸಿದ ಮಾಹಿತಿಗಳು ಸರಿಯಾಗಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಹಾಗೂ ಇಲಾಖೆಯ ಬಳಿ ಇರುವ ದಾಖಲೆಗಳೊಂದಿಗೆ ಮಾಹಿತಿಯನ್ನು ತಾಳೆ ಹಾಕಲಾಗುತ್ತದೆ.
ಐಟಿ ರಿಟರ್ನ್ ಫೈಲಿಂಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ ತೆರಿಗೆ ಇಲಾಖೆಯು ಇದರ ಬಗ್ಗೆ ನಿಮ್ಮ ನೋಂದಾಯಿತ ಇ-ಮೇಲ್ ಐಡಿಗೆ ಮೇಲ್ ಅನ್ನು ಕಳುಹಿಸುತ್ತದೆ. ಒಂದು ವೇಳೆ ತಪ್ಪುಗಳೇನಾದರೂ ಇದ್ದಲ್ಲಿ ಅದರ ಬಗ್ಗೆ ಮಾಹಿತಿ ಕೇಳಬಹುದು ಹಾಗೂ ತಿದ್ದುಪಡಿ ಮಾಡಲು ತೆರಿಗೆ ಇಲಾಖೆ ಸೂಚಿಸಬಹುದು.

ITR Filling: https://www.incometaxindiaefiling.gov.in/home

English summary

How to file Income tax return filing: Here's your step by step guide

The deadline to file income tax return (ITR) for the financial year 2018-19 has been extended to August 31.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X