For Quick Alerts
ALLOW NOTIFICATIONS  
For Daily Alerts

ಐಟಿ ರಿಟರ್ನ್ ವೆರಿಫಿಕೇಶನ್ ಮಾಡೋದು ಹೇಗೆ? ಪಟಾಪಟ್ 6 ಸ್ಟೆಪ್ಸ್

ಆದಾಯ, ವೆಚ್ಚಗಳು ಮತ್ತು ತೆರಿಗೆಗೆ ಸಂಬಂಧಪಟ್ಟ ಇತರೆ ಎಲ್ಲ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುವುದನ್ನು ಐಟಿ ರಿಟರ್ನ್ ಎಂದು ಕರೆಯಲಾಗುತ್ತದೆ.

|

ಆದಾಯ, ವೆಚ್ಚಗಳು ಮತ್ತು ತೆರಿಗೆಗೆ ಸಂಬಂಧಪಟ್ಟ ಇತರೆ ಎಲ್ಲ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುವುದನ್ನು ಐಟಿ ರಿಟರ್ನ್ ಎಂದು ಕರೆಯಲಾಗುತ್ತದೆ. ತೆರಿಗೆದಾತರ ತೆರಿಗೆ ಪಾವತಿ ಹೊಣೆಗಾರಿಕೆ, ತೆರಿಗೆ ಪಾವತಿಯ ದಿನಾಂಕ ಸೂಚಿ ಅಥವಾ ಹೆಚ್ಚುವರಿಯಾಗಿ ಪಾವತಿಸಿದ ಟ್ಯಾಕ್ಸ್ ರಿಫಂಡ್ ಮುಂತಾದುವುಗಳ ಮಾಹಿತಿಯನ್ನು ಇನಕಮ್ ಟ್ಯಾಕ್ಸ್ ರಿಟರ್ನ್ ಒಳಗೊಂಡಿರುತ್ತದೆ. ಆದರೆ ಕೇವಲ ಇನಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಿದರೆ ತೆರಿಗೆದಾತರ ಕೆಲಸ ಪೂರ್ಣವಾಗುವುದಿಲ್ಲ. ಒಂದೊಮ್ಮೆ ನೀವು ಐಟಿ ರಿಟರ್ನ್ ಫೈಲ್ ಮಾಡಿ ಅದನ್ನು ದೃಢೀಕರಣ (Verify) ಮಾಡದಿದ್ದರೆ, ಆದಾಯ ತೆರಿಗೆ ಕಾಯ್ದೆಯ ಪ್ರಕಾರ ನಿಮ್ಮ ಐಟಿ ರಿಟರ್ನ್ ಸಿಂಧುವಾಗುವುದಿಲ್ಲ. ಹೀಗಾಗಿ ಐಟಿ ರಿಟರ್ನ್ ಫೈಲ್ ಮಾಡಿದ ಮೇಲೆ ಅದನ್ನು ಪರಿಶೀಲನೆಗೊಳಪಡಿಸುವುದು ಅಗತ್ಯವಾಗಿದೆ.

 

ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್‌ನಲ್ಲಿ ಐಟಿ ರಿಟರ್ನ್ ಸಲ್ಲಿಸಿದ ನಂತರ ಅದನ್ನು ಪರಿಶೀಲನೆಗೊಳಪಡಿಸಲು ೧೨೦ ದಿನಗಳ ಕಾಲಾವಕಾಶವಿರುತ್ತದೆ. ಇಲ್ಲಿ ಐಟಿ ರಿಟರ್ನ್ ಪರಿಶೀಲನೆಯೆ ಆರು ವಿಧಾನಗಳನ್ನು ನೀಡಲಾಗಿದೆ. ಈ ಆರರಲ್ಲಿ ೫ ವಿಧಾನಗಳು ಎಲೆಕ್ಟ್ರಾನಿಕ್ ಮೋಡ್ ಆಗಿದ್ದು ಮತ್ತೊಂದು ವಿಧಾನ ಖುದ್ದಾಗಿ ಪರಿಶೀಲನೆಯ ವಿಧಾನವಾಗಿದೆ. ಒಂದು ವೇಳೆ ನಿಮ್ಮ ರಿಟರ್ನ್ ಆಡಿಟ್‌ಗೆ ಒಳ ಪಡುತ್ತಿದ್ದರೆ ಅಂಥ ಸಂದರ್ಭದಲ್ಲಿ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (Digital Signature Certificate) ಬಳಸಿ ಪರಿಶೀಲನೆ ಮಾಡಬೇಕಾಗುತ್ತದೆ.

ಆಧಾರ್ ಹಾಗೂ ಓಟಿಪಿ ಮೂಲಕ

ಆಧಾರ್ ಹಾಗೂ ಓಟಿಪಿ ಮೂಲಕ

ಆಧಾರ್ ಸಂಖ್ಯೆ ಬಳಸಿ ಒನ್ ಟೈಮ್ ಪಾಸವರ್ಡ್ ಮೂಲಕ ಐಟಿಆರ್ ಪರಿಶೀಲನೆಗೊಳಪಡಿಸಲು ನಿಮ್ಮ ಮೊಬೈಲ್ ನಂಬರ್ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿರಬೇಕು ಹಾಗೂ ಯುಐಡಿಎಐ ನ ಡೇಟಾಬೇಸ್‌ನಲ್ಲಿ ದಾಖಲಾಗಿರಬೇಕು. ಈ ವಿಧಾನವನ್ನು ಆಯ್ಕೆ ಮಾಡಿದಾಗ ನಿಮ್ಮ ಮೊಬೈಲ್ ನಂಬರ್‌ಗೆ ಎಸ್ಎಂಎಸ್ ರೂಪದಲ್ಲಿ ಓಟಿಪಿ ಬರುತ್ತದೆ. ಈ ಓಟಿಪಿಯನ್ನು ನಿಗದಿತ ಬಾಕ್ಸ್‌ನಲ್ಲಿ ತುಂಬಿ ಸಬ್ಮಿಟ್ ಮಾಡಬೇಕು. ಪ್ರಕ್ರಿಯೆ ಯಶಸ್ವಿಯಾದ ನಂತರ ಐಟಿಆರ್ ಪರಿಶೀಲನೆ ಸಂಪೂರ್ಣವಾಗುತ್ತದೆ. ಆಧಾರ್ ಮೂಲಕ ಬರುವ ಓಟಿಪಿ ಕೇವಲ ಅರ್ಧ ಗಂಟೆ ಮಾತ್ರ ಜಾರಿಯಲ್ಲಿರುತ್ತದೆ ಎಂಬುದು ಗೊತ್ತಿರಲಿ.
ಒಂದು ವೇಳೆ ಆಧಾರ್ ಸಂಖ್ಯೆಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರದಿದ್ದಲ್ಲಿ ನೀವು ಇತರ ಪರಿಶೀಲನಾ ವಿಧಾನಗಳನ್ನು ಬಳಸಬಹುದು.

ನೆಟ್ ಬ್ಯಾಂಕಿಂಗ್ ಬಳಸಿ ಇವಿಸಿ ಪಡೆಯುವ ಮೂಲಕ (Electronic Verification Code - EVC)
 

ನೆಟ್ ಬ್ಯಾಂಕಿಂಗ್ ಬಳಸಿ ಇವಿಸಿ ಪಡೆಯುವ ಮೂಲಕ (Electronic Verification Code - EVC)

ನಿಮ್ಮ ಬ್ಯಾಂಕ್ ಖಾತೆ ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿದ್ದರೆ ಇವಿಸಿ ಮೂಲಕ ಐಟಿಆರ್ ಪರಿಶೀಲನೆಗೊಳಪಡಿಸಬಹುದು. ಕೆಲ ಆಯ್ದ ಬ್ಯಾಂಕ್‌ಗಳು ಮಾತ್ರ ಐಟಿಆರ್ E-Verify ಸೌಲಭ್ಯ ನೀಡುತ್ತವೆ ಎಂಬುದು ಗಮನದಲ್ಲಿರಲಿ. ಇ-ವೆರಿಫೈ ಮಾಡುವಾಗ ಬ್ಯಾಂಕ್ ಖಾತಗೆ ಲಾಗಿನ್ ಆಗುವ ಸಂದರ್ಭದಲ್ಲಿ ಇ ಫೈಲಿಂಗ್ ವೆಬ್ಸೈಟ್‌ಗೆ ಲಾಗಿನ್ ಆಗಿರದಂತೆ ಜಾಗೃತಿ ವಹಿಸಿ.
ನೆಟ್ ಬ್ಯಾಂಕಿಂಗ್ ಮೂಲಕ ಐಟಿಆರ್ ದೃಢೀಕರಣ ಮಾಡಲು ಮೊದಲು ನಿಮ್ಮ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಅಕೌಂಟಿಗೆ ಲಾಗಿನ್ ಮಾಡಿ. ‘Tax' ಟ್ಯಾಬ್ ಅಡಿಯಲ್ಲಿ ಕಾಣುವ E-Verify ಆಯ್ಕೆ ಮಾಡಿ. ಇದು ಆದಾಯ ತೆರಿಗೆ ಇಲಾಖೆಯ ‘E-Filing' ವೆಬ್‌ಸೈಟ್‌ಗೆ ರಿ ಡೈರೆಕ್ಟ್ ಆಗುತ್ತದೆ.
ಇಲ್ಲಿ ‘My Account' ಟ್ಯಾಬ್ ಕ್ಲಿಕ್ ಮಾಡಿದ ನಂತರ ‘Generate EVC' ಆಪ್ಷನ್ ಆಯ್ಕೆ ಮಾಡಿ. ೧೦ ಅಂಕಿಗಳ ಅಲ್ಫಾನ್ಯೂಮರಿಕ್ ಕೋಡ್ ನಿಮ್ಮ ಮೊಬೈಲ್ ಹಾಗೂ ಇ-ಮೇಲ್ ಗೆ ಬರುತ್ತದೆ. ಈ ಕೋಡ್ ೭೨ ಗಂಟೆಗಳವರೆಗೆ ಸಕ್ರಿಯವಾಗಿರುತ್ತದೆ. ಈಗ ‘My Account' ಟ್ಯಾಬ್ ಅಡಿ ‘E-Verify' ಕ್ಲಿಕ್ ಮಾಡಿ ‘I Have EVC Already' ಆಪ್ಷನ್ ಆಯ್ಕೆ ಮಾಡಿ.
ನಿಮ್ಮ ಮೊಬೈಲ್‌ಗೆ ಬಂದಿರುವ ಓಟಿಪಿಯನ್ನು ಇದರಲ್ಲಿ ತುಂಬಿ ಸಬ್ಮಿಟ್ ಮಾಡಿದರೆ ನಿಮ್ಮ ಐಟಿಆರ್ ಪರಿಶೀಲನೆ ಪೂರ್ಣವಾಗುತ್ತದೆ.

 

 

ಬ್ಯಾಂಕ್ ಖಾತೆ ಮೂಲಕ EVC ಪಡೆಯುವುದು

ಬ್ಯಾಂಕ್ ಖಾತೆ ಮೂಲಕ EVC ಪಡೆಯುವುದು

ನಿಮ್ಮ ಬ್ಯಾಂಕ್ ಖಾತೆ ಬಳಸಿ ಐಟಿಆರ್ ‘E-Verify' ಮಾಡುವ ಅವಕಾಶವನ್ನು ಆದಾಯ ತೆರಿಗೆ ಇಲಾಖೆ ನೀಡಿದೆ. ಈ ಸೌಲಭ್ಯ ಕೆಲ ಆಯ್ದ ಬ್ಯಾಂಕ್‌ಗಳಲ್ಲಿ ಮಾತ್ರ ಲಭ್ಯವಿದೆ.
ಬ್ಯಾಂಕ್ ಅಕೌಂಟ್ ಮೂಲಕ ಐಟಿಆರ್ ಪರಿಶೀಲನೆಗೊಳಪಡಿಸಲು ನಿಮ್ಮ ಅಕೌಂಟ್ ವಿವರಗಳನ್ನು ಮೊದಲೇ ಖಾತರಿಪಡಿಸಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ‘E-Filing' ಅಕೌಂಟಿನ ಪ್ರೊಫೈಲ್ ಸೆಟಿಂಗ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆ ವಿವರಗಳಾದ ಬ್ಯಾಂಕ್ ಹೆಸರು, ಅಕೌಂಟ್ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್ ಮತ್ತು ಮೊಬೈಲ್ ನಂಬರ್‌ಗಳನ್ನು ಭರ್ತಿ ಮಾಡಿ. ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನೀಡಬೇಕು.
ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿನ ಹೆಸರು ಹಾಗೂ ಪ್ಯಾನ್ ಕಾರ್ಡಿನ ಹೆಸರು ಹೊಂದಾಣಿಕೆ ಆದಲ್ಲಿ ಮಾತ್ರ ಈ ಖಾತರಿ ಪ್ರಕ್ರಿಯೆ ಯಶಸ್ವಿಯಾಗುತ್ತದೆ ಎಂಬುದು ತಿಳಿದಿರಲಿ. ಒಂದು ಬಾರಿ ಈ ಖಾತರಿ ಪ್ರಕ್ರಿಯೆ ಮುಗಿದ ನಂತರ, ‘My Account' ಟ್ಯಾಬ್ ಅಡಿ ‘Generate EVC' ಆಪ್ಷನ್ ಆಯ್ಕೆ ಮಾಡಿ. ಈಗ ನಿಮ್ಮ ಮೊಬೈಲ್‌ಗೆ ಬರುವ ಓಟಿಪಿಯನ್ನು ‘E-Verify' ನಲ್ಲಿ ಭರ್ತಿ ಮಾಡಿದರೆ ಐಟಿಆರ್ ಪರಿಶೀಲನೆ ಮುಗಿಯುತ್ತದೆ.

ಡಿಮ್ಯಾಟ್ ಖಾತೆ ಬಳಸಿ ಐಟಿಆರ್ ಪರಿಶೀಲನೆ

ಡಿಮ್ಯಾಟ್ ಖಾತೆ ಬಳಸಿ ಐಟಿಆರ್ ಪರಿಶೀಲನೆ

ಒಂದು ವೇಳೆ ನೀವು ಡಿಮ್ಯಾಟ್ ಅಕೌಂಟ್ ಹೊಂದಿದ್ದರೆ ಅದರ ಮೂಲಕವೂ ಐಟಿಆರ್ ದೃಢೀಕರಿಸಬಹುದಾಗಿದೆ. ಇದು ಬ್ಯಾಂಕ್ ಅಕೌಂಟ್ ಮೂಲಕ ಐಟಿಆರ್ ಪರಿಶೀಲನೆ ವಿಧಾನದ ರೀತಿಯಲ್ಲಿಯೇ ಇರುತ್ತದೆ. ಇದರಲ್ಲಿ ಸಹ ಬ್ಯಾಂಕ್ ಅಕೌಂಟ್ ವಿವರಗಳನ್ನು ಪೂರ್ವಾನ್ವಯವಾಗಿ ಖಾತರಿ ಪಡಿಸಬೇಕಾಗುತ್ತದೆ. ಪ್ರೊಫೈಲ್ ಸೆಟಿಂಗ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಡೆಪಾಸಿಟರಿ ಹೆಸರು (ಎನ್‌ಎಸ್‌ಡಿಎಲ್ ಅಥವಾ ಸಿಡಿಎಸ್‌ಎಲ್) ಭರ್ತಿ ಮಾಡಿ. ಡಿಮ್ಯಾಟ್ ಅಕೌಂಟಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಗಳನ್ನೇ ಇದಕ್ಕಾಗಿ ನೀಡಬೇಕಾಗುತ್ತದೆ.
ಈ ಖಾತರಿ ಪ್ರಕ್ರಿಯೆ ಸ್ವಯಂ ಚಾಲಿತವಾಗಿ ಸುಮಾರು ೧ ರಿಂದ ೨ ಗಂಟೆಗಳ ಅವಧಿಯಲ್ಲಿ ಮುಗಿಯುತ್ತದೆ. ಒಂದು ವೇಳೆ ಏನಾದರೂ ತಪ್ಪುಗಳಿದ್ದಲ್ಲಿ ನಿಮ್ಮ ಇಮೇಲ್ ಐಡಿಗೆ ಅದರ ಸೂಚನೆ ಲಭಿಸುತ್ತದೆ. ನಿಮ್ಮ ಡೆಪಾಸಿಟರಿ ಸಂಸ್ಥೆಯು ವಿವರಗಳನ್ನು ಖಾತ್ರಿ ಪಡಿಸಿದ ನಂತರ ಇವಿಸಿ ಪಡೆಯಬಹುದು. ವಿವರಗಳು ಖಾತ್ರಿಯಾದ ನಂತರ ‘Generate EVC through Demat Account Number' ಆಯ್ಕೆ ಮಾಡಿ. ಈಗ ಮೊಬೈಲ್‌ಗೆ ಬರುವ ಓಟಿಪಿಯನ್ನು ಭರ್ತಿ ಮಾಡಿ ಐಟಿಆರ್ ದೃಢೀಕರಣ ಪ್ರಕ್ರಿಯೆ ಮುಗಿಸಬಹುದು.

ನಿಮ್ಮ ಡೆಪಾಸಿಟರಿ ಸಂಸ್ಥೆಗೆ ಪೂರ್ವಾನ್ವಯವಾಗಿ ತಿಳಿಸಿ ಒಪ್ಪಿಗೆ ಪಡೆಯದೆ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಬದಲಾಯಿಸುವಂತಿಲ್ಲ ಎಂಬುದು ನಿಮಗೆ ಗೊತ್ತಿರಲಿ.

 

ಎಟಿಎಂ ಮೂಲಕ ಇವಿಸಿ ಪಡೆಯುವುದು

ಎಟಿಎಂ ಮೂಲಕ ಇವಿಸಿ ಪಡೆಯುವುದು

ಹಲವಾರು ಬ್ಯಾಂಕ್ ಎಟಿಎಂಗಳ ಮೂಲಕ ಸಹ ಇವಿಸಿ ಪಡೆಯುವ ಸೌಲಭ್ಯವನ್ನು ಆದಾಯ ತೆರಿಗೆ ಇಲಾಖೆ ಒದಗಿಸಿದೆ. ಕೆಲ ಆಯ್ದ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಮಾತ್ರ ಈ ಸೌಲಭ್ಯವಿದೆ. ಪ್ರಸ್ತುತ ಆರು ಬ್ಯಾಂಕ್‌ಗಳ ಗ್ರಾಹಕರಿಗೆ ಈ ಆಯ್ಕೆ ಲಭ್ಯವಿದೆ.
ಈ ವಿಧಾನದಲ್ಲಿ ಇವಿಸಿ ಪಡೆಯಲು ನಿಮ್ಮ ಹತ್ತಿರದ ಬ್ಯಾಂಕ್‌ನ ಎಟಿಎಂಗೆ ಭೇಟಿ ನೀಡಿ, ಎಟಿಎಂ ಕಾರ್ಡ್ ಸ್ವೈಪ್ ಮಾಡಿ. ‘Pin for e-filing' ಕ್ಲಿಕ್ ಮಾಡಿ. ಈಗ ನಿಮ್ಮ ರಜಿಸ್ಟರ್ ಮೊಬೈಲ್ ನಂಬರ್‌ಗೆ ಇವಿಸಿ ಬರುತ್ತದೆ. ಇದು ೭೨ ಗಂಟೆಗಳ ಕಾಲ ಸಕ್ರಿಯವಾಗಿರುತ್ತದೆ. ಈಗ ಆದಾಯ ತೆರಿಗೆ ಇಲಾಖೆಯ ನಿಮ್ಮ ಇ-ಫೈಲಿಂಗ್ ವೆಬ್‌ಸೈಟ್‌ಗೆ ಲಾಗಿನ್ ಮಾಡಿ. ಅದರಲ್ಲಿ ‘e-verify return' ಗೆ ಹೋಗಿ ‘ITR' ಆಯ್ಕೆ ಮಾಡಿ ‘Already generated EVC through bank ATM' ಕ್ಲಿಕ್ ಮಾಡಿ. ಈಗ ಮೊಬೈಲ್‌ಗೆ ಬಂದಿರುವ ಓಟಿಪಿ ಭರ್ತಿ ಮಾಡಿದಲ್ಲಿ ಐಟಿಆರ್ ಪರಿಶೀಲನೆ ಆಗುತ್ತದೆ.
ಈ ಮೇಲಿನ ಯಾವುದೇ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನೀವು ಐಟಿಆರ್ ಪರಿಶೀಲನೆ ಮಾಡಿದಲ್ಲಿ, ಆದಾಯ ತೆರಿಗೆ ಇಲಾಖೆಗೆ ಮತ್ತೆ ‘ITR-V' ಕಳುಹಿಸುವ ಅಗತ್ಯವಿರುವುದಿಲ್ಲ.

ಸಹಿ ಮಾಡಿದ ‘ITR-V' ರಸೀದಿ ಕಳುಹಿಸುವ ವಿಧಾನ

ಸಹಿ ಮಾಡಿದ ‘ITR-V' ರಸೀದಿ ಕಳುಹಿಸುವ ವಿಧಾನ

ಮೇಲೆ ತಿಳಿಸಿದ ಯಾವುದೇ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಐಟಿಆರ್ ಪರಿಶೀಲನೆ ಮಾಡಲು ನಿಮಗೆ ಸಾಧ್ಯವಾಗದಿದ್ದಲ್ಲಿ ಆದಾಯ ತೆರಿಗೆ ಇಲಾಖೆಗೆ ಸಹಿ ಮಾಡಿದ ITR-V (ಸ್ವೀಕೃತಿ ರಸೀದಿ)ಯನ್ನು ಕಳುಹಿಸಿ ಐಟಿಆರ್ ಪರಿಶೀಲನೆ ಮಾಡಿಸಬಹುದು. ITR-V ಕಳುಹಿಸುವಿರಾದರೆ ಈ ಕೆಳಗಿನ ಅಂಶಗಳು ಗಮನದಲ್ಲಿರಲಿ;
- ITR-V ಇದು ಒಂದು ಪುಟದ ದಾಖಲೆಯಾಗಿದ್ದು, ಇದರಲ್ಲಿ ನೀಲಿ ಇಂಕ್ ಬಳಸಿ ಸಹಿ ಮಾಡಬೇಕು. ಇದನ್ನು ಸಾದಾ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬಹುದು. ಆದರೆ ಇದನ್ನು ಕೊರಿಯರ್ ಮೂಲಕ ರವಾನಿಸುವಂತಿಲ್ಲ.

- ಬೆಂಗಳೂರು ಸ್ಪೀಡ್ ಪೋಸ್ಟ್ ಸಿಪಿಸಿ ವಿಳಾಸ ಹೀಗಿದೆ : 'ಸಿಪಿಸಿ, ಪೋಸ್ಟ್ ಬಾಕ್ಸ್ ಸಂಖ್ಯೆ-೧, ಎಲೆಕ್ಟ್ರಾನಿಕ್ ಸಿಟಿ ಪೋಸ್ಟ್ ಆಫೀಸ್, ಬೆಂಗಳೂರು-೫೬೦ ೧೦೦, ಕರ್ನಾಟಕ, ಭಾರತ.'

- ITR-V ನೊಂದಿಗೆ ಯಾವುದೇ ದಾಖಲೆಗಳನ್ನು ಕಳುಹಿಸುವ ಅಗತ್ಯವಿರುವುದಿಲ್ಲ.

- ಆದಾಯ ತೆರಿಗೆ ಇಲಾಖೆಗೆ ನಿಮ್ಮ ITR-V ತಲುಪಿದ ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಗೆ ಸೂಚನೆ ಬರುತ್ತದೆ. ಇದು ITR-V ತಲುಪಿದ ಬಗೆಗಿನ ಸಂದೇಶ ಮಾತ್ರವಾಗಿದ್ದು, ಐಟಿಆರ್ ಪರಿಶೀಲನೆಯ ಸಂದೇಶ ಪ್ರತ್ಯೇಕವಾಗಿ ಬರುತ್ತದೆ.

 

Read more about: itr income tax tax taxes
English summary

ITR verification: Here are 6 ways to IT Return

The last step in filing your income tax return (ITR) is to verify it. If you do not verify your tax return, then it will not be considered valid according to income tax laws.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X