For Quick Alerts
ALLOW NOTIFICATIONS  
For Daily Alerts

ಮಿನಿಮಮ್ ಬ್ಯಾಲೆನ್ಸ್ ನಿಯಮ: ನಿಮ್ಮ ಖಾತೆಯಲ್ಲಿ ಕನಿಷ್ಟ ಬಾಕಿ ಮೊತ್ತ ಎಷ್ಟಿರಬೇಕು?

ಸರ್ಕಾರಿ ಹಾಗು ಖಾಸಗಿ ವಲಯದ ಬ್ಯಾಂಕುಗಳ ಉಳಿತಾಯ ಖಾತೆಯ ಗ್ರಾಹಕರು ಸರಾಸರಿ ಮಾಸಿಕ ಬಾಕಿ (AMB) ಹೊಂದಿರಬೇಕಾಗುತ್ತದೆ.

|

ಬ್ಯಾಂಕ್ ಗ್ರಾಹಕರಲ್ಲಿ ಮಿನಿಮಮ್ ಬ್ಯಾಲೆನ್ಸ್ ನಿಯಮಗಳ ಬಗ್ಗೆ ಗೊಂದಲ ಹಾಗು ಸರಿಯಾದ ಮಾಹಿತಿಯ ಕೊರತೆ ಇರುವುದು ಸಹಜ. ಸರ್ಕಾರಿ ಹಾಗು ಖಾಸಗಿ ವಲಯದ ಬ್ಯಾಂಕುಗಳ ಉಳಿತಾಯ ಖಾತೆಯ ಗ್ರಾಹಕರು ಸರಾಸರಿ ಮಾಸಿಕ ಬಾಕಿ (AMB) ಹೊಂದಿರಬೇಕಾಗುತ್ತದೆ.
ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಯಿಂದ ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ವರೆಗೆ ಹೆಚ್ಚಿನ ಬ್ಯಾಂಕುಗಳು ತಮ್ಮದೇ ಆದ ಸರಾಸರಿ ಮಾಸಿಕ ಬಾಕಿ ಅವಶ್ಯಕತೆಗಳನ್ನು ನಿಗದಿಪಡಿಸಿವೆ. ನಗರ, ಮೆಟ್ರೋ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಆಧಾರದ ಮೇಲೆ ಮಿನಿಮಮ್ ಬ್ಯಾಲೆನ್ಸ್ ನಿರ್ಧಾರವಾಗುತ್ತದೆ. ಗ್ರಾಹಕರು ಸರಾಸರಿ ಮಾಸಿಕ ಬಾಕಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರೆ ಬ್ಯಾಂಕುಗಳು ದಂಡವನ್ನು ವಿಧಿಸುತ್ತವೆ.
ಗ್ರಾಹಕರು ಯಾವ ಯಾವ ಬ್ಯಾಂಕುಗಳಲ್ಲಿ ಸರಾಸರಿ ಮಾಸಿಕ ಬಾಕಿ ಉಳಿಸಿಕೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ.

ಎಸ್‌ಬಿಐ

ಎಸ್‌ಬಿಐ

ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿರುವ ಎಸ್‌ಬಿಐ ಶಾಖೆಗಳಲ್ಲಿ ಉಳಿತಾಯ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ಮಾಸಿಕ ಸರಾಸರಿ ಬಾಕಿ ರೂ. 3,000 ಹೊಂದಿರಬೇಕಾಗುತ್ತದೆ. ಅರೆ ನಗರ ಮತ್ತು ಗ್ರಾಮೀಣ ಶಾಖೆಗಳಲ್ಲಿ ಎಸ್‌ಬಿಐ ಖಾತೆ ಹೊಂದಿರುವ ಗ್ರಾಹಕರು ಕನಿಷ್ಠ ಬಾಕಿ ರೂ. 2,000 ಮತ್ತು ರೂ. 1,000, ಕ್ರಮವಾಗಿ ಹೊಂದಿರಬೇಕು.

ಪಂಜಾಬ್ ನ್ಯಾಷನಲ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್

ಬ್ಯಾಂಕಿನ ವೆಬ್‌ಸೈಟ್ pnbindia.in ಪ್ರಕಾರ, ಮೆಟ್ರೋ, ನಗರ, ಅರೆ ನಗರ ಪ್ರದೇಶಗಳಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಶಾಖೆಗಳಲ್ಲಿ ಉಳಿತಾಯ ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ಕನಿಷ್ಠ ತ್ರೈಮಾಸಿಕ ಸರಾಸರಿ ರೂ. 2,000 ಹೊಂದಿರಬೇಕು. ಗ್ರಾಮೀಣ ಶಾಖೆಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಕನಿಷ್ಠ ಬಾಕಿ ರೂ. 1,000 ಮೊತ್ತ ಹೊಂದಿರಬೇಕಾಗುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್

ಬ್ಯಾಂಕಿನ ವೆಬ್‌ಸೈಟ್ - hdfcbank.com ಪ್ರಕಾರ, ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಗಳಲ್ಲಿ ನಿಯಮಿತ ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರು ಸರಾಸರಿ ಮಾಸಿಕ ಬಾಕಿ ರೂ. 10,000 ಉಳಿಸಿರಬೇಕು. ಅರೆ ನಗರ ಶಾಖೆಗಳಲ್ಲಿ ನಿಯಮಿತ ಉಳಿತಾಯ ಖಾತೆದಾರರು ಪ್ರತಿ ತಿಂಗಳು ಸರಾಸರಿ ರೂ. 5,000, ಗ್ರಾಮೀಣ ಶಾಖೆಗಳಲ್ಲಿ ಸರಾಸರಿ ತ್ರೈಮಾಸಿಕ ಬಾಕಿ ರೂ. 2,500 ಹೊಂದಿರಬೇಕು.

ಐಸಿಐಸಿಐ

ಐಸಿಐಸಿಐ

ಬ್ಯಾಂಕಿನ ವೆಬ್‌ಸೈಟ್ icicibank.com ಪ್ರಕಾರ, ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ಐಸಿಐಸಿಐ ಬ್ಯಾಂಕ್ ಶಾಖೆಗಳಲ್ಲಿ ನಿಯಮಿತ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಸರಾಸರಿ ಮಾಸಿಕ ಬಾಕಿ ರೂ. 10,000, ಅರೆ ನಗರ, ಗ್ರಾಮೀಣ ಸರಾಸರಿ ಮಾಸಿಕ ಬಾಕಿ ರೂ. 5,000, ರೂ. 2,000 ಮತ್ತು ರೂ. 1,000 ಉಳಿಸಿಕೊಂಡಿರಬೇಕು.
ಯಾವುದೇ ನಿರ್ದಿಷ್ಟ ಕನಿಷ್ಠ ಬಾಕಿ ಕಾಯ್ದುಕೊಳ್ಳುವ ಅಗತ್ಯವಿಲ್ಲದ ಬ್ಯಾಂಕುಗಳು ಉಳಿತಾಯ ಖಾತೆಗಳನ್ನು ಸಹ ನೀಡುತ್ತವೆ.

ತಮ್ಮ ಉಳಿತಾಯ ಖಾತೆಯಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ ಉಳಿಸಿಕೊಳ್ಳಲು ವಿಫಲವಾದ ಗ್ರಾಹಕರಿಂದ ಬ್ಯಾಂಕುಗಳು ಶುಲ್ಕ ವಿಧಿಸುತ್ತದೆ. ದಂಡಗಳು ಶಾಖೆಗಳ ಸ್ಥಳಗಳ ಆಧಾರದ ಮೇಲೆ ಬದಲಾಗುತ್ತದೆ. ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕುಗಳ ಗ್ರಾಹಕರು ಹೊಮದಿರಬೇಕಾದ ಸರಾಸರಿ ಮಾಸಿಕ ಮೊತ್ತ ಮತ್ತು ಎಎಂಬಿ ಹೊಂದಿರದಿದ್ದರೆ ವಿಧಿಸಲ್ಪಡುವ ಪೆನಾಲ್ಟಿ ಶುಲ್ಕಗಳ ವಿವರ ನೀಡಲಾಗಿದೆ.

ಎಸ್ಬಿಐ ಶುಲ್ಕ

ಎಸ್ಬಿಐ ಶುಲ್ಕ

ಎಸ್ಬಿಐ ಶಾಖೆಗಳಲ್ಲಿ ಸಾಮಾನ್ಯ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಗ್ರಾಹಕರು  ಕನಿಷ್ಟ ಸರಾಸರಿ ಬ್ಯಾಲೆನ್ಸ್ ಹೊಂದುವಲ್ಲಿ ವಿಫಲರಾದ ಗ್ರಾಹಕರು ಈ ಮೇಲಿನ ಶುಲ್ಕಗಳು ವಿಧಿಸಲಾಗುತ್ತದೆ.

ಎಚ್ಡಿಎಫ್ಸಿ ಶುಲ್ಕ

ಎಚ್ಡಿಎಫ್ಸಿ ಶುಲ್ಕ

ಎಚ್ಡಿಎಫ್ಸಿ ಬ್ಯಾಂಕ್ ಬ್ಯಾಂಕ್ ವೆಬ್ಸೈಟ್ hdfcbank.com ಪ್ರಕಾರ, ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್ ಶಾಖೆಗಳಲ್ಲಿ ಸಾಮಾನ್ಯ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಸರಾಸರಿ ಮಾಸಿಕ ಬ್ಯಾಲೆನ್ಸ್  ಪೂರೈಸಲು ವಿಫಲರಾದ ಗ್ರಾಹಕರು ಈ ಮೇಲಿನ ಶುಲ್ಕ ಭರಿಸಬೇಕಾಗಿದೆ.

ಐಸಿಐಸಿಐ ಶುಲ್ಕ

ಐಸಿಐಸಿಐ ಶುಲ್ಕ

ಐಸಿಐಸಿಐ ಬ್ಯಾಂಕ್ ಬ್ಯಾಂಕ್ ವೆಬ್ಸೈಟ್ icicibank.com ಮಾಹಿತಿ ಪ್ರಕಾರ, ಒಂದು ವೇಳೆ ಮಿನಿಮಮ್ ಬ್ಯಾಲೆನ್ಸ್ ಪೂರೈಸಲು ವಿಫಲರಾದರೆ ಗ್ರಾಹಕರು ಈ ಮೇಲಿನಂತೆ ಶುಲ್ಕ ವಿಧಿಸಲ್ಪಡುತ್ತದೆ.

Read more about: banking money savings sbi
English summary

Minimum Balance Rules: Top Public, Private Banks Explained Here

Banks today require their savings account customers to maintain a certain average monthly balance (AMB).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X