ಸೆಪ್ಟಂಬರ್ 1ರಿಂದ ಹೊಸ ನಿಯಮಗಳು ಜಾರಿ, ಇಲ್ಲಿದೆ ಸಂಪೂರ್ಣ ಪಟ್ಟಿ..

ಇನ್ನೇನೂ ಸೆಪ್ಟಂಬರ್ ತಿಂಗಳ ಹೊಸ್ತಿಲಲ್ಲಿ ಇದ್ದೇವೆ. ಒಂದೆರಡು ದಿನ ಕಳೆದರೆ ಸೆಪ್ಟಂಬರ್ ಆರಂಭ.. ಸೆಪ್ಟಂಬರ್ 1ರಿಂದ ಬ್ಯಾಂಕ್, ಸಂಚಾರ, ತೆರಿಗೆ ಒಳಗೊಂಡಂತೆ ಹಲವಾರು ನಿಯಮಗಳು ಬದಲಾಗಲಿವೆ.

ಇನ್ನೇನೂ ಸೆಪ್ಟಂಬರ್ ತಿಂಗಳ ಹೊಸ್ತಿಲಲ್ಲಿ ಇದ್ದೇವೆ. ಒಂದೆರಡು ದಿನ ಕಳೆದರೆ ಸೆಪ್ಟಂಬರ್ ಆರಂಭ.. ಸೆಪ್ಟಂಬರ್ 1ರಿಂದ ಬ್ಯಾಂಕ್, ಸಂಚಾರ, ತೆರಿಗೆ ಒಳಗೊಂಡಂತೆ ಹಲವಾರು ನಿಯಮಗಳು ಬದಲಾಗಲಿವೆ. ಇದು ಜನಸಾಮಾನ್ಯರ ದೈನಂದಿನ ಜೀವನದ ಮೇಲೂ ಪರಿಣಾಮ ಬೀರಲಿದೆ! ಬದಲಾಗುತ್ತಿರುವ ಹೊಸ ನಿಯಮಗಳ ಬಗ್ಗೆ ಜನಸಾಮಾನ್ಯರಿಗೆ ಗೊತ್ತಿರಬೇಕಾಗಿದ್ದು, ಅದರ ವಿವರ ಇಲ್ಲಿ ನೀಡಿದ್ದೇವೆ.

ಎಸ್ಬಿಐ ನಿಯಮ

ಎಸ್ಬಿಐ ನಿಯಮ

ಸೆಪ್ಟಂಬರ್ 1ರಿಂದ ದೇಶದ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಪ್ರಮುಖ ಬದಲಾವಣೆಗೆ ನಾಂದಿ ಹಾಡಲಿದೆ. ಇದು ಬೇರೆ ಬ್ಯಾಮಕುಗಳ ಮೇಲೂ ಪರಿಣಾಮ ಬೀರುವ ಸಧ್ಯತೆ ಇದೆ. ಆರ್ಬಿಐ ರೆಪೊ ದರವನ್ನು ತನ್ನ ಹಳೆಯ ಗ್ರಾಹಕರ ಗೃಹ ಸಾಲ ಮತ್ತು ವಾಹನ ಸಾಲದ ಜೊತೆ ಲಿಂಕ್ ಮಾಡಲಿದೆ. ಎಸ್ಬಿಐ ಬಡ್ಡಿದರದಲ್ಲಿ ಕೂಡ ಬದಲಾವಣೆ ಆಗಲಿದೆ.

ಸಂಚಾರಿ ನಿಯಮ ಬದಲಾವಣೆ

ಸಂಚಾರಿ ನಿಯಮ ಬದಲಾವಣೆ

ಈಗಾಗಲೇ ವಾಹನ ಸವಾರರು ಹೊಸ ಸಂಚಾರಿ ನಿಯಮಗಳ ಬಗ್ಗೆ ಚಿಂತಿತರಾಗಿದ್ದಾರೆ. ಮೋಟಾರು ವಾಹನ ತಿದ್ದುಪಡಿ ಕಾಯಿದೆ ಸೆಪ್ಟಂಬರ್ ಒಂದರಿಂದ ಜಾರಿಯಾಗಲಿದೆ ಎಮದು ಕೇಮದ್ರ ಸರ್ಕಾರ ಹೇಳಿದೆ. ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸಿದರೆ ಭಾರೀ ಮೊತ್ತದ ದಂಡ ಭರಿಸಬೇಕಾಗುತ್ತದೆ. ಲೈಸೆನ್ಸ್ ಇಲ್ಲದೆ ವಾಹನ ಚಾಲನೆ, ಮಧ್ಯಪಾನ ಮಾಡಿ ವಾಹನ ಚಾಲನೆ, ವೇಗದ ಚಾಲನೆ ಹೀಗೆ ಹಲವಾರು ಪ್ರಕರಣಗಳಿಗೆ ದಂಡ ಏರಿಕೆ ಮಾಡಲಾಗಿದೆ.

ಬ್ಯಾಂಕ್ ಸಮಯ ಬದಲಾವಣೆ?

ಬ್ಯಾಂಕ್ ಸಮಯ ಬದಲಾವಣೆ?

ಬ್ಯಾಂಕ್ ಕಾರ್ಯಚರಣೆಯ ಸಮಯದ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿದ್ದು, ಸೆಪ್ಟಂಬರ್ ನಿಂದ ಬ್ಯಾಂಕ್ ತೆರೆಯುವ ಹಾಗು ಮುಚ್ಚುವ ಸಮಯದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಇನ್ನೂ ಪಕ್ಕಾ ಆಗಿಲ್ಲ.

59 ನಿಮಿಷದಲ್ಲಿ ಸಾಲ ವಿತರಣೆ

59 ನಿಮಿಷದಲ್ಲಿ ಸಾಲ ವಿತರಣೆ

ಸಾಲ ವಿತರಣೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಗೃಹ, ವಾಹನ, ವೈಯಕ್ತಿಕ ಸಾಲಗಳನ್ನು ಕೇವಲ ೫೯ ನಿಮಿಷಗಳಲ್ಲಿ ವಿತರಿಸಲು ಮುಂದಾಗಿದೆ.

ಕಿಸಾನ್ ಕಾರ್ಡ್

ಕಿಸಾನ್ ಕಾರ್ಡ್

ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ ಸೆಪ್ಟಂಬರ್ ಒಂದರಿಂದ ಕಿಸಾನ್ ಕಾರ್ಡ್ ಪಡೆಯುವ ಪ್ರಕ್ರಿಯೆ ಸುಲಭವಾಗಲಿದೆ. ಕಿಸಾನ್ ಕಾರ್ಡ್ ೧೫ ದಿನಗಳೊಗೆ ವಿತರಿಸುವ ವ್ಯವಸ್ಥೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+