For Quick Alerts
ALLOW NOTIFICATIONS  
For Daily Alerts

ನೀವು ಎಲ್ಪಿಜಿ ಡಿಸ್ಟ್ರಿಬ್ಯೂಟರ್ ಆಗಬೇಕೆ? ಅರ್ಜಿ ಸಲ್ಲಿಸುವುದು ಹೇಗೆ?

ಎಲ್‌ಪಿಜಿ ವಿತರಕರನ್ನು ಆಯ್ಕೆ ಮಾಡುವ ಮಾರ್ಗಸೂಚಿಗಳನ್ನು ಸರ್ಕಾರ ಬದಲಾಯಿಸಿದ್ದು, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಎಲ್ಲಾ ರೀತಿಯ ಎಲ್‌ಪಿಜಿ ವಿತರಕರಿಗಾಗಿ ಏಕೀಕೃತ ಮಾರ್ಗಸೂಚಿಗಳನ್ನು ರೂಪಿಸಿದೆ.

|

ಎಲ್ಪಿಜಿ ಡಿಸ್ಟ್ರಿಬ್ಯೂಟರ್ ಆಗಲು ಬಯಸುವವರು ಅದರ ನಿಯಮ ಮತ್ತು ಮಾನದಂಡಗಳನ್ನು ಅರಿಯಬೇಕಾಗುತ್ತದೆ. ಎಲ್‌ಪಿಜಿ ವಿತರಕರನ್ನು ಆಯ್ಕೆ ಮಾಡುವ ಮಾರ್ಗಸೂಚಿಗಳನ್ನು ಸರ್ಕಾರ ಬದಲಾಯಿಸಿದ್ದು, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಎಲ್ಲಾ ರೀತಿಯ ಎಲ್‌ಪಿಜಿ ವಿತರಕರಿಗಾಗಿ ಏಕೀಕೃತ ಮಾರ್ಗಸೂಚಿಗಳನ್ನು ರೂಪಿಸಿದೆ.

ವಿತರಕತ್ವದ ವಿಧಗಳು

ವಿತರಕತ್ವದ ವಿಧಗಳು

ಶೇಹೆರಿ ವಿತರಕ್
ಮಾರ್ಗಸೂಚಿಗಳಲ್ಲಿ, 'ಅರ್ಬನ್ ಏರಿಯಾ' ಎಂಬ ಪದವು 2011 ರ ಜನಗಣತಿಯ ಪ್ರಕಾರ 'ಅರ್ಬನ್' ಎಂಬ ವ್ಯಾಖ್ಯಾನವನ್ನು ಹೊಂದಿರುತ್ತದೆ. 'ಅರ್ಬನ್ ಏರಿಯಾ (ಯು)' ನಲ್ಲಿರುವ ಎಲ್ಪಿಜಿ ವಿತರಣೆಯು ಮೆಟ್ರೋದ ಮುನ್ಸಿಪಲ್ ಮಿತಿಯಲ್ಲಿರುವ ಎಲ್ಪಿಜಿ ಗ್ರಾಹಕರಿಗೆ ಸೇವೆ ಸಲ್ಲಿಸಲಿದೆ. ಮೆಟ್ರೊ ಸಿಟಿ/ನಗರ/ಪಟ್ಟಣ ಇದನ್ನು ಶೆಹೆರಿ ವಿತರಕ್ ಎಂದು ಕರೆಯಲಾಗುತ್ತದೆ.

ರೂರಲ್ಅರ್ಬನ್ ವಿತರಕ್ (Rurban Vitrak)

ರೂರಲ್ಅರ್ಬನ್ ವಿತರಕ್ (Rurban Vitrak)

ಮಾರ್ಗಸೂಚಿಗಳಲ್ಲಿನ ರೂರಲ್ ಅರ್ಬನ್ ಎಂಬ ಪದವು 'ಅರ್ಬನ್ ಏರಿಯಾ'ದಲ್ಲಿ ನೆಲೆಗೊಂಡಿರುವ ಎಲ್‌ಪಿಜಿ ವಿತರಕ ಮತ್ತು ನಿರ್ದಿಷ್ಟ ಗ್ರಾಮೀಣ ಪ್ರದೇಶದಲ್ಲಿ ನೆಲೆಗೊಂಡಿರುವ ಎಲ್‌ಪಿಜಿ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಎಲ್‌ಪಿಜಿ ಪುರಸಭೆಯ ಮಿತಿಯಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳನ್ನು ಒಳಗೊಂಡಿದೆ. ವಿತರಕರ ಸ್ಥಳ ಮತ್ತು ಅಥವಾ ಆಯಾ ಒಎಂಸಿಗಳು ನಿರ್ದಿಷ್ಟಪಡಿಸಿದ ಪ್ರದೇಶ ಆಗಿರುತ್ತದೆ. ಈ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಪಿಜಿ ವಿತರಕರನ್ನು ರರ್ಬನ್ ವಿತರಕ್ (Rurban Vitrak) ಎಂದು ಕರೆಯಲಾಗುತ್ತದೆ.

ಗ್ರಾಮೀಣ ವಿತರಕ್

ಗ್ರಾಮೀಣ ವಿತರಕ್

ಮಾರ್ಗಸೂಚಿಗಳಲ್ಲಿ, ಗ್ರಾಮೀಣ ಪ್ರದೇಶ ಎಂಬ ಪದವು 2011 ರ ಜನಗಣತಿಯ ಪ್ರಕಾರ 'ಗ್ರಾಮೀಣ' ಎಂಬ ವ್ಯಾಖ್ಯಾನವನ್ನು ಹೊಂದಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಇರುವ ಎಲ್‌ಪಿಜಿ ವಿತರಣೆಯನ್ನು ಗ್ರಾಮೀಣ ವಿತರಕ್ ಮೂಲಕ ನಿರ್ವಹಿಸಲಾಗುತ್ತದೆ. ನಿರ್ದಿಷ್ಟ ಗ್ರಾಮೀಣ ಪ್ರದೇಶದ ಎಲ್‌ಪಿಜಿ ಗ್ರಾಹಕರಿಗೆ ಸೇವೆ ಸಲ್ಲಿಸಲಿದೆ. ಸಾಮಾನ್ಯವಾಗಿ ಇದು ಎಲ್‌ಪಿಜಿ ವಿತರಕ ಸ್ಥಳದ ಗಡಿ ಮಿತಿಯಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳನ್ನು ಮತ್ತು ಅಥವಾ ಆಯಾ ಒಎಂಸಿಗಳು ನಿರ್ದಿಷ್ಟಪಡಿಸಿದ ಪ್ರದೇಶವನ್ನು ಒಳಗೊಂಡಿರುತ್ತದೆ.

ದುರ್ಗಮ್ ಕ್ಷೇತ್ರಿಯ ವಿತರಕ್ (ಡಿಕೆವಿ)

ದುರ್ಗಮ್ ಕ್ಷೇತ್ರಿಯ ವಿತರಕ್ (ಡಿಕೆವಿ)

ಕಷ್ಟ ಮತ್ತು ವಿಶೇಷ ಪ್ರದೇಶಗಳಲ್ಲಿ (ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳು, ಅರಣ್ಯ ಪ್ರದೇಶ, ಬುಡಕಟ್ಟು ಜನವಸತಿ ಪ್ರದೇಶ, ವಿರಳ ಜನಸಂಖ್ಯೆ, ತೊಂದರೆಗೊಳಗಾದ ಪ್ರದೇಶ, ದ್ವೀಪಗಳು, ಎಡಪಂಥೀಯ ಉಗ್ರಗಾಮಿತ್ವ (ಎಲ್‌ಡಬ್ಲ್ಯುಇ) ಪೀಡಿತ ಪ್ರದೇಶಗಳಲ್ಲಿ) ಎಲ್‌ಪಿಜಿ ವಿತರಣೆಗಾಗಿ ದುರ್ಗಮ್ ಕ್ಷೇತ್ರಿಯ ವಿತರಕ್ ಸ್ಥಾಪಿಸಲಾಗುವುದು. ಗ್ರಾಮೀಣ ಮತ್ತು ರರ್ಬನ್ ವಿತರಕ್ ಮೂಲಕ ಈ ಕಾರ್ಯ ಸಾಧ್ಯವಿಲ್ಲ. ಅಂತಹ ಎಲ್ಪಿಜಿ ವಿತರಕರನ್ನು ದುರ್ಗಮ್ ಕ್ಷೇತ್ರಿಯ ವಿತರಕ್ (ಡಿಕೆವಿ) ಎಂದು ಕರೆಯಲಾಗುತ್ತದೆ. ಆಯಾ ಒಎಂಸಿಗಳು ನಿರ್ದಿಷ್ಟಪಡಿಸಿದಂತೆ ಅಂತಹ ಡಿಕೆವಿ ಪ್ರದೇಶಗಳಲ್ಲಿರುವ ಎಲ್ಪಿಜಿ ಗ್ರಾಹಕರಿಗೆ ಅವರು ಸೇವೆ ಸಲ್ಲಿಸುತ್ತಾರೆ.

ಎಲ್ಪಿಜಿ ವಿತರಕತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳೇನು?

ಎಲ್ಪಿಜಿ ವಿತರಕತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳೇನು?

- ಭಾರತೀಯ ಪ್ರಜೆಯಾಗಿರಿ ಮತ್ತು ಭಾರತದ ನಿವಾಸಿಯಾಗಿರಿ.
- ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಫ್ರೀಡಂ ಫೈಟರ್ (ಎಫ್‌ಎಫ್) ವರ್ಗಕ್ಕೆ ಸೇರಿದ ಅರ್ಜಿದಾರರಿಗೆ ಶೈಕ್ಷಣಿಕ ಅರ್ಹತೆಯ ಮಾನದಂಡ ಅನ್ವಯಿಸುವುದಿಲ್ಲ.
- ಜಾಹೀರಾತಿನ ದಿನಾಂಕದಂತೆ 21 ವರ್ಷಕ್ಕಿಂತ ಕಡಿಮೆಯಿರಬಾರದು ಮತ್ತು 60 ವರ್ಷ ದಾಟಿರಬಾರದು.
- ಎಫ್ಎಫ್ ವರ್ಗದ ಅಡಿಯಲ್ಲಿ ಕಾಯ್ದಿರಿಸಿದ ಸ್ಥಳಗಳಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಯಾವುದೇ ವಯಸ್ಸಿನ ನಿರ್ಬಂಧವಿಲ್ಲ.
- ಅರ್ಜಿಯ ದಿನಾಂಕದಂದು ಒಎಂಸಿಯ ಉದ್ಯೋಗಿ ಸದಸ್ಯರಾಗಿರಬಾರದು.
- ಬಹು ಮಾರಾಟಗಾರರ / ವಿತರಣಾ ಮಾನದಂಡಗಳನ್ನು ಪೂರೈಸುವುದು.
- ದುರುಪಯೋಗ / ಕಲಬೆರಕೆ ಪ್ರಕರಣಗಳು ಸಾಬೀತಾದ ವಿತರಕತ್ವ /ಮಾರಾಟ ಪರವಾನಿಗೆ ಕಳೆದುಕೊಂಡಿದ್ದರೆ ಅಂಥವರಿಗೆ ಅವಕಾಸವಿಲ್ಲ.
- ಎಲ್ಪಿಜಿ ಗೊಡೌನ್ ನಿರ್ಮಾಣಕ್ಕಾಗಿ ಕನಿಷ್ಟ ಆಯಾಮಗಳ ಭೂಮಿಯನ್ನು ಹೊಂದಿರಬೇಕು ಅಥವಾ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕದಂದು ಸಿದ್ಧವಾದ ಎಲ್ಪಿಜಿ ಸಿಲಿಂಡರ್ ಶೇಖರಣಾ ಗೊಡೌನ್ ಅನ್ನು ಹೊಂದಿರಬೇಕು.

ಎಲ್ಪಿಜಿ ವಿತರಣಾ ಕಾರ್ಯಾಚರಣೆಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳು

ಎಲ್ಪಿಜಿ ವಿತರಣಾ ಕಾರ್ಯಾಚರಣೆಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳು

ಸಿಲಿಂಡರ್‌ ಎಲ್‌ಪಿಜಿ ಸಂಗ್ರಹಿಸಲು ಗೊಡೌನ್
- ಎಲ್ಪಿಜಿ ವಿತರಕರಿಗೆ ಶೇಖರಣಾ ಗೊಡೌನ್ ಅಗತ್ಯವಿರುತ್ತದೆ ಮತ್ತು ಶೇಖರಣೆಗಾಗಿ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ (ಪೆಸೊ) ನ ಮುಖ್ಯ ನಿಯಂತ್ರಕರಿಂದ ಅನುಮೋದನೆ ಮತ್ತು ಪರವಾನಗಿ ಪಡೆದಿರಬೇಕು.
- ಎಲ್ಪಿಜಿ ಸಿಲಿಂಡರ್‌ 8000 ಕೆಜಿ (ಶೆಹೆರಿ ಮತ್ತು ರರ್ಬನ್ ವಿತರಕ್)
- ಎಲ್ಪಿಜಿ ಸಿಲಿಂಡರ್‌ 5000 ಕೆಜಿ (ಗ್ರಾಮಿನ್ ವಿತರಕ್)
- ಎಲ್ಪಿಜಿ ಸಿಲಿಂಡರ್‌ 3000 ಕೆಜಿ (ದುರ್ಗಮ್ ಕ್ಷೇತ್ರಿಯ ವಿತರಕ್ (ಡಿಕೆವಿ).

ಅರ್ಜಿದಾರನು ಕನಿಷ್ಟ ಆಯಾಮಗಳ ಜಮೀನನ್ನು ಹೊಂದಿರಬೇಕು

ಅರ್ಜಿದಾರನು ಕನಿಷ್ಟ ಆಯಾಮಗಳ ಜಮೀನನ್ನು ಹೊಂದಿರಬೇಕು

- 25 ಮೀಟರ್ x 30 ಮೀಟರ್ (ಪುರಸಭೆ / ಪಟ್ಟಣ / ಗ್ರಾಮ ಮಿತಿಯಿಂದ 15 ಕಿ.ಮೀ ಒಳಗೆ) (ಶೆಹೆರಿ ಮತ್ತು ರರ್ಬನ್ ವಿಟ್ರಾಕ್)
- 21 ಮೀಟರ್ x 26 ಮೀಟರ್ (15 ಕಿ.ಮೀ ಒಳಗೆ) (ಗ್ರಾಮೀಣ ವಿತರಕ್)
- 15 ಮೀಟರ್ x 16 ಮೀಟರ್ (ಗ್ರಾಮ/ಗ್ರಾಮ ವ್ಯಾಪ್ತಿಯೊಳಗೆ) (ಗ್ರಾಮೀಣ ವಿತರಕ್)
- ಗೋಡೌನ್ ನಿರ್ಮಾಣಕ್ಕಾಗಿ ಭೂಮಿ ಸರಳವಾಗಿರಬೇಕು. ಓಡಾಟಕ್ಕೆ/ಗ್ರಾಹಕರ ವ್ಯವಹಾರಕ್ಕೆ ವ್ಯವರ್ಸತಿತ ಸ್ಥಳ ಇರಭೇಕು. ವಿದ್ಯುತ್ ಸಂಪರ್ಕ ಅಥವಾ ದೂರವಾಣಿ ಮಾರ್ಗಗಳಿಂದ ಮುಕ್ತವಾಗಿರಬೇಕು. ಕಾಲುವೆಗಳು/ಒಳಚರಂಡಿ ಮೂಲಕ ಹಾದುಹೋಗಬಾರದು.

ಶೋ ರೂಂ

ಶೋ ರೂಂ

ಪ್ರಮಾಣಿತ ವಿನ್ಯಾಸದ ಪ್ರಕಾರ 3 ಮೀಟರ್‌ನಿಂದ 4.5 ಮೀಟರ್‌ ಕನಿಷ್ಠ ಹೊರಗಿನ ಆಯಾಮಗಳನ್ನು ಹೊಂದಿರುವ ಶೋ ರೂಂ ಅನ್ನು ಮಾಡಬೇಕು. ಅಂದರೆ ಕಾಲಮ್ ಅಡಿಯಲ್ಲಿ ನಮೂದಿಸಲಾದಂತೆ ಪುರಸಭೆ/ಪಟ್ಟಣ/ಗ್ರಾಮ ಮಿತಿಗಳಲ್ಲಿ ಸ್ಥಳ ಹೊಂದಿರಬೇಕು. ಒಂದು ವೇಳೆ ಎಲ್‌ಪಿಜಿ ವಿತರಕರಿಗಾಗಿನ ಜಾಹೀರಾತಿನಲ್ಲಿ 'ಸ್ಥಳ' ಎಂಬ ಕಾಲಂ ಅಡಿಯಲ್ಲಿ ಸ್ಥಳವನ್ನು ನಿರ್ದಿಷ್ಟಪಡಿಸಿದರೆ, ಪ್ರಮಾಣಿತ ವಿನ್ಯಾಸದ ಪ್ರಕಾರ 3 ಮೀಟರ್‌ನಿಂದ 4.5 ಮೀಟರ್‌ನಿಂದ ಕನಿಷ್ಠ ಹೊರಗಿನ ಆಯಾಮಗಳ ಶೋ ರೂಂ ಅನ್ನು ಮಾಡಬೇಕಾಗಿದೆ. ಶೋ ರೂಂ ಸೂಕ್ತವಾದ ರಸ್ತೆಯ ಮೂಲಕ ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತಿರಬೇಕು.

ಎಲ್‌ಪಿಜಿ ಮನೆ ವಿತರಣೆಗೆ ಮೂಲಸೌಕರ್ಯ

ಎಲ್‌ಪಿಜಿ ಮನೆ ವಿತರಣೆಗೆ ಮೂಲಸೌಕರ್ಯ

ಎಲ್‌ಪಿಜಿ ಸಿಲಿಂಡರ್‌ ಸಂಗ್ರಹಕ್ಕಾಗಿ ಗೊಡೌನ್ ಜೊತೆಗೆ ಶೋ ರೂಂ ಬೇಕಾಗಿರುತ್ತದೆ. ಉತ್ತಮ ಸೇವೆಯ ಕಾರ್ಯಾಚರಣೆಗಾಗಿ ಅಧಿಕೃತ ಪ್ರದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮನೆ ವಿತರಣೆ ಮಾಡಲು ವಿತರಣಾ ವಾಹನಗಳು ಬೇಕಾಗುತ್ತವೆ.

ಅರ್ಜಿಯ ಪ್ರಕ್ರಿಯೆ

ಅರ್ಜಿಯ ಪ್ರಕ್ರಿಯೆ

- ಶೆಹೆರಿ ವಿತರಕ್ ಅರ್ಹತಾ ಮಾನದಂಡಗಳನ್ನು ಪೂರೈಸುವ ವ್ಯಕ್ತಿಯು ಆನ್ಲೈನ್ ಮೂಲಕ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.
- ಇತರ ಎಲ್ಲ ವಿಧಗಳ ವಿತರರಣಾ ಅನುಮತಿಗಾಗಿ ಅರ್ಹತಾ ಮಾನದಂಡಗಳನ್ನು ಪೂರೈಸುವ ವ್ಯಕ್ತಿಯು ಒಎಂಸಿಗಳ ವೆಬ್ಸೈಟ್‌ಗಳಿಂದ ಉಚಿತವಾಗಿ ಡೌನ್‌ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
- ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಸ್ಥಳಗಳಿಗೆ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ, ಅವನು/ಅವಳು ಪ್ರತಿ ಸ್ಥಳಕ್ಕೂ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಪ್ರತಿಯೊಂದು ಅರ್ಜಿಯು ಅಗತ್ಯವಾದ ಅರ್ಜಿ ಶುಲ್ಕದೊಂದಿಗೆ ಸಲ್ಲಿಸಬೇಕು.
- ಅರ್ಜಿದಾರರು ಒಂದು ಸ್ಥಳಕ್ಕೆ ಕೇವಲ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಒಬ್ಬ ವ್ಯಕ್ತಿಯಿಂದ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದಲ್ಲಿ, ಎಲ್ಲಾ ಅರ್ಜಿಗಳನ್ನು ಒಟ್ಟಿಗೆ ಜೋಡಿಸಿ ಒಂದು ಅಪ್ಲಿಕೇಶನ್‌ನಂತೆ ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಇತರ ಎಲ್ಲ ಅರ್ಜಿಗಳ ವಿರುದ್ಧ ಸ್ವೀಕರಿಸಿದ ಅರ್ಜಿ ಶುಲ್ಕವನ್ನು ಮುಟ್ಟುಗೋಲು ಮಾಡಲಾಗುತ್ತದೆ.

ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

http://petroleum.nic.in/marketing/policies-and-guidelines/lpg-policies-and-guidelines

ವಿತರಕತ್ವದ ಅವಧಿ

ವಿತರಕತ್ವದ ಅವಧಿ

ವಿತರಕತ್ವದ ಅವಧಿಯು 10 ವರ್ಷಗಳ ಆರಂಭಿಕ ಅವಧಿ ಹೊಂದಿದ್ದು, ಅದರ ನಂತರ ಪ್ರತಿ 5 ವರ್ಷಗಳಿಗೊಮ್ಮೆ ನವೀಕರಿಸಬಹುದಾಗಿದೆ. ಆಯಾ ಒಎಂಸಿಯು ವಿತರಕರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಿದೆ. ಜೊತೆಗೆ ಒಎಂಸಿಯ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.

Read more about: lpg money finance news business
English summary

Should You Become a LPG Distributor? How to apply

The Government has modified the selection guidelines for LPG distributorship and a Unified set of Guidelines have been framed for all types
Story first published: Friday, August 16, 2019, 16:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X