ಜಿರೋ ಬ್ಯಾಲೆನ್ಸ್ ಖಾತೆ ತೆರೆಯುವುದು ಹೇಗೆ? ಯಾವ ಬ್ಯಾಂಕ್ ನಲ್ಲಿ ಏನಿದೆ ಆಫರ್?

ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ (ಬಿಎಸ್ಬಿಡಿ) ಅಥವಾ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಯು ಒಂದು ರೀತಿಯ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯಾಗಿದೆ.

ಮಿನಿಮಮ್ ಬ್ಯಾಲೆನ್ಸ್ ನಿಯಮಗಳಿಂದ ಬೇಸತ್ತಿರುವ ಗ್ರಾಹಕರು ಜಿರೋ ಬ್ಯಾಲೆನ್ಸ್ ಖಾತೆಗಳತ್ತ ಮುಖಮಾಡುತ್ತಿದ್ದಾರೆ! ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ (ಬಿಎಸ್ಬಿಡಿ) ಅಥವಾ ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಯು ಒಂದು ರೀತಿಯ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯಾಗಿದೆ. ಈ ಖಾತೆಗಳಲ್ಲಿ ಗ್ರಾಹಕರು ಯಾವುದೇ ನಿರ್ದಿಷ್ಟ ಕನಿಷ್ಠ ಬಾಕಿ ಮೊತ್ತ ಕಾಯ್ದುಕೊಳ್ಳುವ ಅಗತ್ಯವಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಗ್ರಾಹಕರು ತಮ್ಮ ಖಾತೆಯನ್ನು ಶೂನ್ಯ ಮೊತ್ತದಲ್ಲಿ ನಿರ್ವಹಿಸಬಹುದು. ಪ್ರಮುಖ ಬ್ಯಾಂಕುಗಳಾದ ಸಾರ್ವಜನಿಕ ವಲಯದ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಅದರ ಖಾಸಗಿ ವಲಯದ ಎಚ್‌ಡಿಎಫ್ಸಿ ಬ್ಯಾಂಕ್ ಬಿಎಸ್‌ಬಿಡಿ ಖಾತೆಗಳಂತಹ ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನು ಒದಗಿಸುತ್ತವೆ. ಗ್ರಾಹಕರು ಡೆಬಿಟ್ ಮತ್ತು ಎಟಿಎಂ ಕಾರ್ಡ್‌ಗಳು ಮತ್ತು ಬಿಎಸ್ಬಿಡಿ ಖಾತೆಯೊಂದಿಗೆ ಇಂಟರ್ನೆಟ್ ಬ್ಯಾಂಕಿಂಗ್‌ನಂತಹ ಹಲವಾರು ಸೌಲಭ್ಯಗಳನ್ನು ಪಡೆಯುತ್ತಾರೆ.

ಜಿರೋ ಬ್ಯಾಲೆನ್ಸ್ ಮತ್ತು ಇತರೆ ಖಾತೆಗಳಿಗೆ ವ್ಯತ್ಯಾಸ

ಜಿರೋ ಬ್ಯಾಲೆನ್ಸ್ ಮತ್ತು ಇತರೆ ಖಾತೆಗಳಿಗೆ ವ್ಯತ್ಯಾಸ

ಎಚ್ಡಿಎಫ್ಸಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹಲವಾರು ಶೂನ್ಯ ಮೊತ್ತದ ಉಳಿತಾಯ ಖಾತೆ (zero-balance savings accounts) ಸೌಲಭ್ಯ ಒದಗಿಸುತ್ತವೆ. ಇವುಗಳಲ್ಲಿ ಮಾಸಿಕ ಸರಾಸರಿ ಬಾಕಿ (ಎಂಎಬಿ) ನಿಯಮ ಅಂದರೆ ಮಿನಿಮಮ್ ಬ್ಯಾಲೆನ್ಸ್ ನಿಯಮ ಅನ್ವಯಿಸುವುದಿಲ್ಲ. ಸಾಮಾನ್ಯವಾಗಿ ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ ಕನಿಷ್ಟ ಸರಾಸರಿ ಬಾಕಿ (ಎಮ್ಎಬಿ) ಇರಿಸಬೇಕಾಗುತ್ತದೆ. ಜಿರೋ ಬ್ಯಾಲೆನ್ಸ್ ಉಳಿತಾಯ ಖಾತೆಗಳನ್ನು ಹೊರತುಪಡಿಸಿ ಉಳಿದ ಉಳಿತಾಯ ಖಾತೆಗಳಲ್ಲಿ ಎಮ್ಎಬಿ ಶುಲ್ಕಗಳು ವಿಧಿಸಲ್ಪಡುತ್ತವೆ. ಕೆವೈಸಿ ದಾಖಲೆಗಳೊಂದಿಗೆ ಯಾವುದೇ ವ್ಯಕ್ತಿ ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆಯನ್ನು ತೆರೆಯಬಹುದಾಗಿದೆ. ಸಾಮಾನ್ಯ ಉಳಿತಾಯ ಬ್ಯಾಂಕ್ ಖಾತೆಗಳ ಬಡ್ಡಿದರದಂತೆಯೇ ಶೂನ್ಯ ಖಾತೆಗಳ ಬಡ್ಡಿದರ ಇರುತ್ತದೆ.

ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ (ಬಿಎಸ್ಬಿಡಿ) ಖಾತೆ ಸೌಲಭ್ಯ ಒದಗಿಸುವ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಗಳ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಎಸ್‌ಬಿಐನಲ್ಲಿ ಗ್ರಾಹಕರು ಸಿಂಗಲ್, ಜಂಟಿ ಅಥವಾ ಮಕ್ಕಳ ಹೆಸರಲ್ಲಿ ಬಿಎಸ್‌ಬಿಡಿ ಖಾತೆಯನ್ನು ತೆರೆಯಬಹುದು ಎಂದು ಬ್ಯಾಂಕಿನ ವೆಬ್‌ಸೈಟ್ sbi.co.in. ನಲ್ಲಿ ಮಾಹಿತಿ ನೀಡಿದೆ. ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ದಾಖಲೆಗಳನ್ನು ಹೊಂದಿರುವ ಯಾವುದೇ ವ್ಯಕ್ತಿ ಎಸ್‌ಬಿಐ ಮೂಲ ಉಳಿತಾಯ ಠೇವಣಿ ಖಾತೆಯನ್ನು ತೆರೆಯಬಹುದು.
ಎಸ್‌ಬಿಐನ ಬಿಎಸ್‌ಬಿಡಿ ಖಾತೆಯ ಲಾಭಗಳು:
1. ರುಪೇ ಎಟಿಎಂ-ಕಮ್-ಡೆಬಿಟ್ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಮತ್ತು ವಾರ್ಷಿಕ ನಿರ್ವಹಣಾ ಶುಲ್ಕವನ್ನು ಅನ್ವಯಿಸಲಾಗುವುದಿಲ್ಲ.
2. ಎಲೆಕ್ಟ್ರಾನಿಕ್ ಪಾವತಿ ಸೇವೆಗಳಾದ ನೆಫ್ಟ್ ಅಥವಾ ಆರ್‌ಟಿಜಿಎಸ್ ಮೂಲಕ ಹಣದ ರಶೀದಿ ಅಥವಾ ಕ್ರೆಡಿಟ್ ಉಚಿತ.
3. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಡೆದ ಚೆಕ್‌ಗಳ ಠೇವಣಿ ಅಥವಾ ಸಂಗ್ರಹ ಉಚಿತ.
4. ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸಲು ಮತ್ತು ಖಾತೆಗಳನ್ನು ಮುಚ್ಚಲು ಯಾವುದೇ ಶುಲ್ಕವಿಲ್ಲ.
5. ಒಂದು ತಿಂಗಳಲ್ಲಿ ಗರಿಷ್ಠ ನಾಲ್ಕು ವಿತ್ ಡ್ರಾವಲ್ ಅಥವಾ ವಹಿವಾಟುಗಳನ್ನು ಅನುಮತಿಸಲಾಗಿದೆ. ಇದರಲ್ಲಿ ಎಸ್‌ಬಿಐ ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಎಟಿಎಂ ವಿತ್ ಡ್ರಾವಲ್ ಮತ್ತು ನೆಫ್ಟ್, ಆರ್‌ಟಿಜಿಎಸ್ ಮತ್ತು ಶಾಖೆಗಳ ನಗದು ವಹಿವಾಟು ಸೇರಿವೆ.

ಎಸ್ಬಿಐ ಬಡ್ಡಿ ದರಗಳು

ಎಸ್ಬಿಐ ಬಡ್ಡಿ ದರಗಳು

ಬಿಎಸ್‌ಬಿಡಿ ಖಾತೆಗಳಲ್ಲಿ ಎಸ್‌ಬಿಐ ನೀಡುವ ಬಡ್ಡಿದರಗಳು ಸಾಮಾನ್ಯ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿರುವಂತೆಯೇ ಇರುತ್ತವೆ. ಉಳಿತಾಯ ಠೇವಣಿ ರೂ. 1 ಲಕ್ಷ ಮೇಲೆ ಎಸ್‌ಬಿಐ ವಾರ್ಷಿಕ ಶೇ. 3.5 ರಷ್ಟು ಬಡ್ಡಿದರವನ್ನು ನೀಡುತ್ತದೆ. ರೂ. 1 ಲಕ್ಷಕ್ಕಿಂತ ಹೆಚ್ಚಿನ ಠೇವಣಿಗೆ ವಾರ್ಷಿಕ ಶೇ. 2.65 ರಷ್ಟು ಬಡ್ಡಿದರವನ್ನು ನೀಡುತ್ತದೆ.

ಎಚ್‌ಡಿಎಫ್‌ಸಿ ಬ್ಯಾಂಕ್

ಎಚ್‌ಡಿಎಫ್‌ಸಿ ಬ್ಯಾಂಕ್

ರಹವಾಸಿ ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು ಎಚ್‌ಡಿಎಫ್‌ಸಿ ಬ್ಯಾಂಕಿನ ಬಿಎಸ್‌ಬಿಡಿ ಖಾತೆ ತೆರೆಯಲು ಅರ್ಹರಾಗಿರುತ್ತಾರೆ. ಆದಾಗ್ಯೂ, ಗ್ರಾಹಕರು ಬ್ಯಾಂಕಿನಲ್ಲಿ ಬೇರೆ ಯಾವುದೇ ಉಳಿತಾಯ ಖಾತೆಯನ್ನು ಹೊಂದಿರಬಾರದು.
ಎಚ್‌ಡಿಎಫ್‌ಸಿ ಬ್ಯಾಂಕಿನ ಬಿಎಸ್‌ಬಿಡಿ ಖಾತೆಯ ಲಾಭಗಳು
1. ಎಚ್‌ಡಿಎಫ್‌ಸಿ ಬ್ಯಾಂಕಿನ ಪೋರ್ಟಲ್ hdfcbank.com ಪ್ರಕಾರ, ಗ್ರಾಹಕರು ಸುರಕ್ಷಿತ ಠೇವಣಿ ಲಾಕರ್ ಮತ್ತು ಸೂಪರ್ ಸೇವರ್ ಸೌಲಭ್ಯಗಳನ್ನು ಪಡೆಯುತ್ತಾರೆ.
2. ಬ್ಯಾಂಕ್ ಖಾತೆದಾರರಿಗೆ ಉಚಿತ ಪಾಸ್‌ಬುಕ್ ಸೌಲಭ್ಯವನ್ನು ನೀಡುತ್ತದೆ. ಗ್ರಾಹಕರು ಶಾಖೆಗಳು ಮತ್ತು ಎಟಿಎಂಗಳಲ್ಲಿ ಉಚಿತ ನಗದು ಮತ್ತು ಚೆಕ್ ಠೇವಣಿ ಸೌಲಭ್ಯವನ್ನು ಸಹ ಪಡೆಯಬಹುದು.
3. ಗ್ರಾಹಕರು ಎಟಿಎಂ, ಆರ್‌ಟಿಜಿಎಸ್, ನೆಫ್ಟ್, ಕ್ಲಿಯರಿಂಗ್, ನಗದು ವಿತ್ ಡ್ರಾವಲ್ ಸೇರಿದಂತೆ ತಿಂಗಳಿಗೆ ನಾಲ್ಕು ಉಚಿತ ವಹಿವಾಟುಗಳನ್ನು ಪಡೆಯುತ್ತಾರೆ. ಒಂದು ತಿಂಗಳಲ್ಲಿ ನಾಲ್ಕು ಕ್ಕಿಂತ ಹೆಚ್ಚು ವಿತ್ ಡ್ರಾವಲ್ ಸಂದರ್ಭದಲ್ಲಿ, ಎಚ್‌ಡಿಎಫ್‌ಸಿ ಬ್ಯಾಂಕ್ ಬಿಎಸ್‌ಬಿಡಿ ಖಾತೆಯನ್ನು ಸಾಮಾನ್ಯ ಉಳಿತಾಯ ಖಾತೆಯಾಗಿ ಪರಿವರ್ತಿಸುತ್ತದೆ.
4. ಗ್ರಾಹಕರು ಉಚಿತ ಜೀವಿತಾವಧಿಯ ಬಿಲ್ ಪೇ, ಇನ್ಸ್ಟಾ ಕ್ವೆರಿ ಮತ್ತು ಇ-ಮೇಲ್ ಸ್ಟೇಟ್ಮೆಂಟ್ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ.
5. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಬಿಎಸ್‌ಬಿಡಿ ಖಾತೆಯೊಂದಿಗೆ ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಸಹ ನೀಡುತ್ತದೆ.

ಬಡ್ಡಿ ದರಗಳು

ಬಡ್ಡಿ ದರಗಳು

ರೂ. 50 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಠೇವಣಿಗಳ ಮಲೆ ಎಚ್‌ಡಿಎಫ್‌ಸಿ ಬ್ಯಾಂಕ್ ಶೇ. 4 ರಷ್ಟು ಬಡ್ಡಿದರವನ್ನು ನೀಡುತ್ತದೆ. ರೂ. 50 ಲಕ್ಷಕ್ಕಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲೆ ಬ್ಯಾಂಕ್ ಶೇ. 3.5 ರಷ್ಟು ಬಡ್ಡಿದರವನ್ನು ಪಾವತಿಸುತ್ತದೆ.

ಪಿಎಂ ಜನ ಧನ ಖಾತೆ

ಪಿಎಂ ಜನ ಧನ ಖಾತೆ

ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಬ್ಯಾಮಕಿಂಗ್ ಸೌಲಭ್ಯ ಒದಗಿಸುವ ಸಲುವಾಗಿ ಪ್ರಧಾನ ಮಂತ್ರಿ ಜನ ಧನ ಖಾತೆ (ಪಿಎಂಜೆಡಿವೈ) ಅಡಿಯಲ್ಲಿ ಶೂನ್ಯ ಮೊತ್ತದ ಖಾತೆಯನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ, ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸುವ ಗುರಿ ಹೊಂದಿದೆ. ಉಳಿತಾಯ ಖಾತೆ ತೆರೆಯುವಾಗ ಇಂತಿಷ್ಟು ಮೊತ್ತದ ಹಣ ಠೇವಣಿ ಇಡಬೇಕು ಎಂಬ ನಿಯಮ ಇರುತ್ತದೆ. ಆದರೆ ಜನಧನ ಯೋಜನೆಯಲ್ಲಿ ಇಂತಿಷ್ಟು ಪ್ರಮಾಣದ ಹಣ ಇಡಲೇಬೇಕೆಂಬ ನಿಯಮವಾಗಲಿ ಒತ್ತಾಯವಾಗಲಿ ಇಲ್ಲ. ಇದು ಶೂನ್ಯ ಬ್ಯಾಲೆನ್ಸ್ ಆಗಿದ್ದು, ಕನಿಷ್ಟ ಮೊತ್ತ ಇಡಬೇಕಾಗಿಲ್ಲ. ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ರವಾನಿಸುವುದು ಅಥವಾ ವರ್ಗಾಯಿಸುವುದು ಜನಧನ ಯೋಜನೆಯಲ್ಲಿ ಅತ್ಯಂತ ಸುಲಭ. ಗ್ರಾಮೀಣ ಮತ್ತು ಮಧ್ಯಮ ವರ್ಗದ ಜನರಿಗೆ ಇದು ತುಂಬಾ ಸಹಕಾರಿ ಆಗಲಿದೆ.

ಸಂಬಳ ಖಾತೆ

ಸಂಬಳ ಖಾತೆ

ಎಚ್ಡಿಎಫ್ಸಿ ಮತ್ತು ಎಸ್ಬಿಐನಲ್ಲಿ ಸಂಬಳ ಖಾತೆ ಹೊಂದಿರುವ ಗ್ರಾಹಕರು ಮಾಸಿಕ ಸರಾಸರಿ ಬಾಕಿ (MAB) ಉಳಿಸುವ ಅಗತ್ಯ ಇರುವುದಿಲ್ಲ. ಸಂಬಳದ ಖಾತೆದಾರರಿಗೆ ಆನ್ಲೈನ್ ​​NEFT/RTGS ವಹಿವಾಟುಗಳು, ಡಿಮಾಂಡ್ ಡ್ರಾಪ್ಟ್ ಮತ್ತು ಎಸ್ಎಂಎಸ್ ನಂತಹ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಸಂಬಳ ಖಾತೆದಾರರಿಗೆ ನೀಡಲಾಗುವ ವಿಶೇಷ ಸವಲತ್ತು ಮತ್ತು ಕೊಡುಗೆಗಳು ಕಂಪೆನಿ/ಸಂಸ್ಥೆಯ ಕೆಟಗರಿಯನ್ನು ಆಧರಿಸಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+