For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಉದ್ಯಮ/ಕಂಪನಿ ಆರಂಭಿಸುವುದು ಹೇಗೆ?

ಭಾರತದಲ್ಲಿ ಹೊಸ ವ್ಯಾಪಾರ/ಉದ್ಯಮ ಆರಂಭಿಸುವುದು ಹಲವರ ಆಸೆಯಾಗಿರುತ್ತದೆ. ಆದರೆ ದೇಶದಲ್ಲಿ ಹೊಸ ವ್ಯಾಪಾರ ಆರಂಭಿಸುವುದು ಹೇಗೆ, ಯಾವೆಲ್ಲ ನೀತಿ, ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂಬ ತಿಳುವಳಿಕೆ ಪಡೆಯುವುದು ಅಗತ್ಯವಾಗಿದೆ.

|

ವಿಶ್ವದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ಇತ್ತೀಚಿನ ವ್ಯಾಪಾರ ಹಾಗೂ ಉತ್ಪಾದನೆ ವಲಯದಲ್ಲಿನ ಕುಸಿತದ ನಡುವೆಯೂ ಭಾರತದಲ್ಲಿ ಆರಂಭಗೊಳ್ಳುತ್ತಿರುವ ಸ್ಟಾರ್ಟ ಅಪ್‌ ಹಾಗೂ ಸಣ್ಣ ಮತ್ತು ಮಧ್ಯಮ ಕ್ಷೇತ್ರದಲ್ಲಿನ ಉದ್ಯಮಗಳ ಬೆಳವಣಿಗೆಯನ್ನು ನೋಡಿದರೆ ಅತಿ ಶೀಘ್ರದಲ್ಲೇ ಭಾರತ ದೇಶ ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲೊಂದಾಗುವ ಎಲ್ಲ ಸಾಧ್ಯತೆಗಳೂ ಇವೆ.
ಭಾರತದಲ್ಲಿ ಹೊಸ ವ್ಯಾಪಾರ/ಉದ್ಯಮ ಆರಂಭಿಸುವುದು ಹಲವರ ಆಸೆಯಾಗಿರುತ್ತದೆ. ಆದರೆ ದೇಶದಲ್ಲಿ ಹೊಸ ವ್ಯಾಪಾರ ಆರಂಭಿಸುವುದು ಹೇಗೆ, ಯಾವೆಲ್ಲ ನೀತಿ, ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂಬ ತಿಳುವಳಿಕೆ ಪಡೆಯುವುದು ಅಗತ್ಯವಾಗಿದೆ. ಅದಕ್ಕಾಗಿಯೇ ಹೊಸ ವ್ಯಾಪಾರ ಆರಂಭಿಸುವ ಬಗ್ಗೆ ಈ ಅಂಕಣದಲ್ಲಿ ಮಾಹಿತಿಯನ್ನು ನೀಡಿದ್ದೇವೆ.

ಉದ್ಯಮದ ವಿಧ

ಉದ್ಯಮದ ವಿಧ

ನಿಮ್ಮದೊಂದು ಸ್ವಂತ ವ್ಯಾಪಾರ, ವಹಿವಾಟು ಆರಂಭಿಸಲು ಬಯಸಿದರೆ ಅದು ಸಹಜವಾಗಿಯೇ ನಿಮ್ಮ ಸಂಪೂರ್ಣ ಒಡೆತನದ ವ್ಯಾಪಾರವಾಗಿರುತ್ತದೆ. ಇದು ಅತಿ ಸರಳ ರೀತಿಯ ವ್ಯಾಪಾರದ ವಿಧವಾಗಿದ್ದು, ಅತಿ ಕಡಿಮೆ ಕಾನೂನಾತ್ಮಕ ಕ್ರಮಗಳನ್ನು ಒಳಗೊಂಡಿದೆ.
ಒಂದು ವೇಳೆ ನಿಮ್ಮ ಗೆಳೆಯರು ಅಥವಾ ಪಾಲುದಾರೊಂದಿಗೆ ವ್ಯಾಪಾರ ಆರಂಭಿಸಲು ಬಯಸಿದಲ್ಲಿ ಅದು ಪಾರ್ಟನರಶಿಪ್ ಅಥವಾ ಎಲ್‌ಎಲ್‌ಸಿ ಮಾದರಿಯ ವ್ಯಾಪಾರವಾಗಿರುತ್ತದೆ. ಇಂಥ ಕಂಪನಿಯನ್ನು ಆರಂಭಿಸುವ ಮುನ್ನ ಕಾನೂನು ಪ್ರಕಾರ ನೋಂದಣಿ ಮಾಡಿಸಬೇಕಾಗುತ್ತದೆ ಹಾಗೂ ಇದು ಇನ್ನೂ ಕೆಲ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಈ ರೀತಿಯ ವ್ಯಾಪಾರದಲ್ಲಿ ಬರುವ ಲಾಭ ಅಥವಾ ನಷ್ಟಗಳನ್ನು ಎಲ್ಲ ಪಾಲುದಾರರು ಸಮನಾಗಿ ಅಥವಾ ವ್ಯಾಪಾರ ಆರಂಭಿಸುವ ಮುನ್ನ ಮಾಡಿಕೊಳ್ಳಲಾದ ಕಂಪನಿ ಒಪ್ಪಂದದಂತೆ ಹಂಚಿಕೊಳ್ಳಬಹುದು.

ಹೊಸದಾಗಿ ಉದ್ಯಮ ಆರಂಭಿಸುವವರು ಸಾಮಾನ್ಯವಾಗಿ ಮೇಲೆ ತಿಳಿಸಿದ ಎರಡು ಮಾದರಿಗಳಲ್ಲಿ ಒಂದನ್ನು ಆರಿಸಿಕೊಳ್ಳುತ್ತಾರೆ. ಆದರೆ ಕಂಪನಿಯಲ್ಲಿ ಹೆಚ್ಚು ಸಂಖ್ಯೆಯ ಪಾಲುದಾರರಿದ್ದಲ್ಲಿ ಅದನ್ನು ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ನೋಂದಣಿ ಮಾಡಬೇಕಾಗುತ್ತದೆ. ಇಂಥ ಕಂಪನಿಯಲ್ಲಿ ಪಾಲುದಾರರ ಸಂಖ್ಯೆ ೫೦ನ್ನು ಮೀರಕೂಡದು ಹಾಗೂ ಕಂಪನಿಯ ಶೇರುಗಳನ್ನು ಸಾರ್ವಜನಿಕವಾಗಿ ಮಾರುವಂತಿಲ್ಲ.
ಒಂದೊಮ್ಮೆ ಉದ್ಯಮವು ಬೃಹತ್ತಾಗಿ ಬೆಳೆದಲ್ಲಿ ಅದನ್ನು ಸ್ಟಾಕ್ ಎಕ್ಸಚೇಂಜ್‌ನಲ್ಲಿ ಲಿಸ್ಟಿಂಗ್ ಮಾಡಿಸಿ, ಪಬ್ಲಿಕ್ ಲಿಮಿಟೆಡ್ ಕಂಪನಿಯಾಗಿ ಮಾರ್ಪಡಿಸಬೇಕಾಗುತ್ತದೆ.

ಉದ್ಯಮದ ಯೋಜನೆ ರೂಪಿಸುವುದು

ಉದ್ಯಮದ ಯೋಜನೆ ರೂಪಿಸುವುದು

ಯಾವುದೇ ವ್ಯಾಪಾರ ಆರಂಭಿಸುವ ಮುನ್ನ ಅದಕ್ಕಾಗಿ ಸೂಕ್ತ ಯೋಜನೆ ಮಾಡಿಕೊಳ್ಳುವುದು ಅತಿ ಅವಶ್ಯ. ಯೋಜನೆ ಸರಿಯಾಗಿದ್ದಲ್ಲಿ ವ್ಯಾಪಾರವೂ ಸುಗಮವಾಗಿರುತ್ತದೆ. ಪರಿಣಾಮಕಾರಿಯಾದ ವ್ಯಾಪಾರದ ಯೋಜನೆ ಈ ಕೆಳಗಿನ ಅಂಶಗಳನ್ನು ಒಳಗೊಂಡಿರಬೇಕಾಗುತ್ತದೆ.

ವೆಚ್ಚಗಳ ಲೆಕ್ಕ, ಲಾಭದ ಲೆಕ್ಕಾಚಾರ
 

ವೆಚ್ಚಗಳ ಲೆಕ್ಕ, ಲಾಭದ ಲೆಕ್ಕಾಚಾರ

ವ್ಯಾಪಾರದ ಅಂದಾಜು ಲೆಕ್ಕಾಚಾರ
ಮುಂದಿನ ಮೂರು ವರ್ಷಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಯಲ್ಲಿ ನೀವು ಮಾಡಬಹುದಾದ ವ್ಯಾಪಾರದ ಲೆಕ್ಕಾಚಾರ ತಯಾರಿಸಿ. ನೀವು ಆರಂಭಿಸಬೇಕೆಂದಿರುವ ಉದ್ಯಮ ಕ್ಷೇತ್ರದಲ್ಲಿ ಈಗಾಗಲೇ ಇರುವ ಕಂಪನಿಗಳ ಬೆಳವಣಿಗೆಯನ್ನು ಗಮನಿಸಿ ಹಾಗೂ ಆರಂಭಿಕ ವರ್ಷಗಳಲ್ಲಿ ಎಷ್ಟು ಮೊತ್ತದ ವ್ಯಾಪಾರ ಮಾಡಬಹುದು ಎಂಬುದರ ಅಂದಾಜು ಲೆಕ್ಕಾಚಾರ ಮಾಡಿಟ್ಟುಕೊಳ್ಳಿ.

ಲಾಭದ ಲೆಕ್ಕಾಚಾರ
ವ್ಯಾಪಾರದ ಅಂದಾಜು ಲೆಕ್ಕ ಹಾಗೂ ವೆಚ್ಚಗಳನ್ನು ಸೇರಿಸಿ ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಎಷ್ಟು ಲಾಭ ಬರಬಹುದು ಎಂಬುದನ್ನು ಲೆಕ್ಕ ಮಾಡಿ.

 

ಕಚ್ಚಾ ವಸ್ತುಗಳ ಸಂಗ್ರಹ, ಪೂರೈಕೆ

ಕಚ್ಚಾ ವಸ್ತುಗಳ ಸಂಗ್ರಹ, ಪೂರೈಕೆ

ನಿಮ್ಮ ಉದ್ಯಮಕ್ಕೆ ಬೇಕಾಗುವ ಕಚ್ಚಾವಸ್ತುಗಳ ಬೆಲೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಜೊತೆಗೆ ಕಚ್ಚಾವಸ್ತುಗಳ ಬೇರೆ ಬೇರೆ ಪೂರೈಕೆದಾರರ ದರಪಟ್ಟಿಗಳನ್ನು ಅಧ್ಯಯನ ಮಾಡಿ. ಯಾವುದೇ ಉದ್ಯಮ ಸ್ಥಿರವಾಗಿ ನಡೆಯಬೇಕಾದರೆ ಅದಕ್ಕೆ ಅಗತ್ಯವಾದ ಕಚ್ಚಾ ವಸ್ತುಗಳ ಪೂರೈಕೆ ನಿಯಮಿತವಾಗಿ ಇರುವಂತೆ ನೋಡಿಕೊಳ್ಳುವುದು ಅಗತ್ಯ.

ಕಚೇರಿ ಅಥವಾ ಕಾರ್ಖಾನೆಗಳ ಸ್ಥಾಪನೆ

ಕಚೇರಿ ಅಥವಾ ಕಾರ್ಖಾನೆಗಳ ಸ್ಥಾಪನೆ

ಒಂದು ವೇಳೆ ನೀವು ವಸ್ತುಗಳನ್ನು ಉತ್ಪಾದಿಸುವ ಉದ್ಯಮ ಆರಂಭಿಸಬೇಕೆಂದಿದ್ದರೆ ಅದಕ್ಕಾಗಿ ಕಾರ್ಖಾನೆ ಸ್ಥಾಪಿಸಲು ಅಗತ್ಯ ಪ್ರಮಾಣದ ಜಾಗ ಬೇಕಾಗುತ್ತದೆ. ನಿಮ್ಮ ಕಾರ್ಖಾನೆಗೆ ಅಗತ್ಯವಿರುವ ಯಂತ್ರಗಳು ಹಾಗೂ ಇನ್ನಿತರ ಸಾಧನಗಳನ್ನು ಕೊಳ್ಳುವ ಮೊದಲು ಹಲವಾರು ಕಡೆ ವಿಚಾರಿಸಿ ದರಗಳನ್ನು ತಿಳಿದುಕೊಳ್ಳಿ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸಾಧನಗಳು ಸಿಗುವ ಕಡೆಯೇ ಖರೀದಿ ಮಾಡುವುದು ಉತ್ತಮ.

ಮಾರ್ಕೆಟಿಂಗ್ ತಂತ್ರಗಳು

ಮಾರ್ಕೆಟಿಂಗ್ ತಂತ್ರಗಳು

ವಸ್ತುಗಳನ್ನು ಮಾರುವುದು ಅಥವಾ ವಸ್ತುಗಳ ಸೇವೆ ನೀಡುವುದು ಯಾವುದೇ ವ್ಯಾಪಾರದ ಉದ್ದೇಶವಾಗಿರುತ್ತದೆ. ಆದರೆ ಇದಕ್ಕಾಗಿ ಗ್ರಾಹಕರನ್ನು ಸೆಳೆಯಲು ಸೂಕ್ತ ಮಾರುಕಟ್ಟೆ ತಂತ್ರಗಳನ್ನು ರೂಪಿಸುವುದು ಅತ್ಯಂತ ಅಗತ್ಯವಾಗಿದೆ. ಹಳೆಯ ಕಾಲದ ತಂತ್ರಗಳಿಗೆ ಜೋತು ಬೀಳದೆ ಆಧುನಿಕ ಗ್ರಾಹಕರನ್ನು ಹೇಗೆ ನಿಮ್ಮ ವ್ಯಾಪಾರದತ್ತ ಸೆಳೆಯಬಹುದು ಎಂಬುದರ ಬಗ್ಗೆ ಯೋಜನೆ ರೂಪಿಸಿ.

ಉದ್ಯಮದ ನೋಂದಣಿ ಪ್ರಕ್ರಿಯೆ

ಉದ್ಯಮದ ನೋಂದಣಿ ಪ್ರಕ್ರಿಯೆ

ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರದ ನೋಂದಣಿ ಪ್ರಕ್ರಿಯೆಯನ್ನು ಅತಿ ಸರಳಗೊಳಿಸಲಾಗಿದ್ದು, ವ್ಯಾಪಾರ ಆರಂಭಿಸುವವರಿಗೆ ವರದಾನವಾಗಿದೆ. ವ್ಯಾಪಾರ ನೋಂದಣಿ ಮಾಡಿಕೊಳ್ಳಲು ಈ ಕೆಳಗಿನ ಸೂಚನೆಗಳನ್ನು ಪಾಲಿಸಿ.
ಡಿಜಿಟಲ್ ಸಿಗ್ನೇಚರ್ ಸರ್ಟಿಫೀಕೇಟ್ ಪಡೆಯುವುದು: ಕಾರ್ಪೊರೇಟ್ ವ್ಯವಹಾರಗಳ ಇಲಾಖೆಗೆ ಅರ್ಜಿ ಸಲ್ಲಿಸಿದ ೨ ರಿಂದ ೫ ದಿನಗಳಲ್ಲಿ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ನಿಮಗೆ ಸಿಗುತ್ತದೆ.
ಡಿನ್ ಪಡೆಯುವುದು
ಡಿನ್ ಎಂಬುದು ಡೈರೆಕ್ಟರ್ ಐಡೆಂಟಿಫಿಕೇಷನ್ ನಂಬರ್ ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಯಾವುದೇ ಉದ್ಯಮ ಆರಂಭಿಸುವ ಮುನ್ನ ಡಿನ್ ಪಡೆಯುವುದು ಕಡ್ಡಾಯವಾಗಿದೆ. ಇದನ್ನು ಸಹ ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.

ಕಂಪನಿಯ ಹೆಸರು ನಿರ್ಧರಿಸಿ

ಕಂಪನಿಯ ಹೆಸರು ನಿರ್ಧರಿಸಿ

ಡಿಜಿಟಲ್ ಸರ್ಟಿಫಿಕೇಟ್ ಹಾಗೂ ಡಿನ್ ಪಡೆದುಕೊಂಡ ನಂತರ ನಿಮ್ಮ ಕಂಪನಿಗೆ ಸೂಕ್ತ ಹೆಸರನ್ನು ನಿರ್ಧರಿಸಬೇಕಾಗುತ್ತದೆ. ಈಗಾಗಲೇ ಹೆಸರನ್ನು ನಿರ್ಧರಿಸಿದ್ದರೆ, ಆ ಹೆಸರು ಲಭ್ಯವಿದೆಯಾ ಅಥವಾ ಈಗಾಗಲೇ ಅದನ್ನು ಬೇರೊಬ್ಬರು ನೋಂದಣಿ ಮಾಡಿಸಿದ್ದಾರಾ ಎಂಬುದನ್ನು ಪರಿಶೀಲಿಸಿ. ಕಂಪನಿಯ ಹೆಸರನ್ನು ರಜಿಸ್ಟ್ರಾರ್ ಕಚೇರಿಗೆ ತಿಳಿಸಬೇಕಾಗುತ್ತದೆ ಹಾಗೂ ಇದನ್ನು ಮಿನಿಸ್ಟ್ರಿ ಆಫ್ ಕಾರ್ಪೊರೇಟ್ ಅಫೇರ್ಸ್‌ನ ಎಜೆನ್ಸಿಗಳ ವೆಬ್‌ಸೈಟ್ ಮೂಲಕ ಪರಿಶೀಲಿಸಬೇಕಾಗುತ್ತದೆ.

ಕಚೇರಿ ವಿಳಾಸ

ಕಚೇರಿ ವಿಳಾಸ

ನಿಮ್ಮ ವ್ಯವಹಾರದ ಕೇಂದ್ರ ಕಚೇರಿಯ ವಿಳಾಸವನ್ನು ಸಹ ನೀವು ನೋಂದಣಿ ಮಾಡಿಸಬೇಕಾಗುತ್ತದೆ.
ಉದ್ಯಮದ ಉದ್ದೇಶಗಳು
ನಿಮ್ಮ ವ್ಯಾಪಾರದ ಉದ್ದೇಶಗಳನ್ನು ಪಟ್ಟಿ ಮಾಡಿ ಅದನ್ನು ರಜಿಸ್ಟ್ರಾರ್ ಕಚೇರಿಗೆ ನೀಡಬೇಕಾಗುತ್ತದೆ. ಈ ಪಟ್ಟಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಎಲ್ಲವೂ ಸರಿಯಾಗಿದೆ ಎಂದು ಖಾತ್ರಿಯಾದ ಬಳಿಕವೇ ರಜಿಸ್ಟ್ರಾರ್ ಕಚೇರಿಯಿಂದ ಒಪ್ಪಿಗೆ ಸಿಗುತ್ತದೆ.

ಎಂಓಎ ಹಾಗೂ ಎಓಎ ತಯಾರಿಸುವುದು

ಎಂಓಎ ಹಾಗೂ ಎಓಎ ತಯಾರಿಸುವುದು

ಎಂಓಎ ಎಂಬುದು ಮೆಮೊರಾಂಡಮ್ ಆಫ್ ಅಸೋಸಿಯೇಶನ್ ಹಾಗೂ ಎಓಎ ಎಂಬುದು ಅಸೋಸಿಯೇಶನ್ ಆಫ್ ಆರ್ಟಿಕಲ್ಸ್‌ಗಳ ಸಂಕ್ಷಿಪ್ತ ರೂಪವಾಗಿವೆ. ಎಂಓಎ ಇದು ನಿಮ್ಮ ವ್ಯಾಪಾರದ ವಿವರಗಳು, ಅದರ ಅಂಗಗಳು, ಅಂಗಸಂಸ್ಥೆಗಳು ಏನಾದರೂ ಇದ್ದಲ್ಲಿ, ಬಂಡವಾಳದ ಮೊತ್ತ ಮತ್ತು ಅದರ ವಿಭಾಗ, ವ್ಯಾಪಾರದ ರೀತಿ, ಎಲ್ಲ ನಿರ್ದೇಶಕರ ಹೆಸರುಗಳನ್ನು ಒಳಗೊಂಡಿರುತ್ತದೆ. ವ್ಯಾಪಾರದ ನಿಬಂಧನೆಗಳು, ವ್ಯವಹಾರ ನಡೆಸುವಲ್ಲಿ ಅವುಗಳ ಪಾಲನೆಯ ರೀತಿ ಹಾಗೂ ನಿಬಂಧನೆಗೊಳಪಟ್ಟು ವ್ಯಾಪಾರ ನಡೆಸುವ ವಿವರಗಳನ್ನು ಎಓಎ ಹೊಂದಿರುತ್ತದೆ. ಇವೆರಡನ್ನೂ ತಯಾರಿಸಿ ಕಂಪನಿ ರಜಿಸ್ಟ್ರಾರ್ ಅವರಿಗೆ ಕಳುಹಿಸಿ ಅಲ್ಲಿಂದ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ.

 

 

ಎಂಓಎ ಹಾಗೂ ಎಓಎ ತಯಾರಿಸುವುದು

ಎಂಓಎ ಹಾಗೂ ಎಓಎ ತಯಾರಿಸುವುದು

ಎಂಓಎ ಎಂಬುದು ಮೆಮೊರಾಂಡಮ್ ಆಫ್ ಅಸೋಸಿಯೇಶನ್ ಹಾಗೂ ಎಓಎ ಎಂಬುದು ಅಸೋಸಿಯೇಶನ್ ಆಫ್ ಆರ್ಟಿಕಲ್ಸ್‌ಗಳ ಸಂಕ್ಷಿಪ್ತ ರೂಪವಾಗಿವೆ. ಎಂಓಎ ಇದು ನಿಮ್ಮ ವ್ಯಾಪಾರದ ವಿವರಗಳು, ಅದರ ಅಂಗಗಳು, ಅಂಗಸಂಸ್ಥೆಗಳು ಏನಾದರೂ ಇದ್ದಲ್ಲಿ, ಬಂಡವಾಳದ ಮೊತ್ತ ಮತ್ತು ಅದರ ವಿಭಾಗ, ವ್ಯಾಪಾರದ ರೀತಿ, ಎಲ್ಲ ನಿರ್ದೇಶಕರ ಹೆಸರುಗಳನ್ನು ಒಳಗೊಂಡಿರುತ್ತದೆ. ವ್ಯಾಪಾರದ ನಿಬಂಧನೆಗಳು, ವ್ಯವಹಾರ ನಡೆಸುವಲ್ಲಿ ಅವುಗಳ ಪಾಲನೆಯ ರೀತಿ ಹಾಗೂ ನಿಬಂಧನೆಗೊಳಪಟ್ಟು ವ್ಯಾಪಾರ ನಡೆಸುವ ವಿವರಗಳನ್ನು ಎಓಎ ಹೊಂದಿರುತ್ತದೆ. ಇವೆರಡನ್ನೂ ತಯಾರಿಸಿ ಕಂಪನಿ ರಜಿಸ್ಟ್ರಾರ್ ಅವರಿಗೆ ಕಳುಹಿಸಿ ಅಲ್ಲಿಂದ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ.

ನೋಂದಣಿ ಶುಲ್ಕಗಳು
ರಜಿಸ್ಟ್ರಾರ್ ಕಚೇರಿಯಲ್ಲಿ ನಿಗದಿತ ಶುಲ್ಕ ಪಾವತಿಸಿ ವ್ಯಾಪಾರ ಪ್ರಮಾಣ ಪತ್ರ (ಸರ್ಟಿಫಿಕೇಟ್ ಆಫ್ ಇನಕಾರ್ಪೊರೇಷನ್)ವನ್ನು ಪಡೆದುಕೊಳ್ಳಬೇಕಾಗುತ್ತದೆ. ವ್ಯಾಪಾರದ ಶೇರು ಬಂಡವಾಳ ಆಧರಿಸಿ ನೋಂದಣಿ ಶುಲ್ಕಗಳನ್ನು ನಿರ್ಧರಿಸಲಾಗುತ್ತದೆ.
ವ್ಯಾಪಾರ ಪ್ರಮಾಣ ಪತ್ರ ಪಡೆಯಲು ನಿಗದಿತ ಶುಲ್ಕಗಳನ್ನು ಪಾವತಿಸಿದ ನಂತರ ಈ ಕೆಳಗಿನ ದಾಖಲಾತಿಗಳನ್ನು ಖುದ್ದಾಗಿ ಹಾಗೂ ಡಿಜಿಟಲ್ ರೂಪದಲ್ಲಿ ರಜಿಸ್ಟ್ರಾರ್ ಆಫ್ ಕಂಪನೀಸ್ ಅವರಿಗೆ ಸಲ್ಲಿಸಬೇಕಾಗುತ್ತದೆ.

ಇ-ಫಾರ್ಮ೧
ವ್ಯಾಪಾರ ಪ್ರಮಾಣ ಪತ್ರ ಪಡೆಯಲು ಅವಶ್ಯಕವಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ವಿವರಗಳನ್ನು ಇದು ಒಳಗೊಂಡಿರುತ್ತದೆ.
ಇ-ಫಾರ್ಮ೧೮
ಇದು ನಿಮ್ಮ ಕಂಪನಿಯ ನೋಂದಾಯಿತ ಕಚೇರಿಯ ವಿಳಾಸವನ್ನು ರಜಿಸ್ಟ್ರಾರ್ ಆಫ್ ಕಂಪನೀಸ್ ಅವರಿಗೆ ತಿಳಿಸುತ್ತದೆ.
ಇ-ಫಾರ್ಮ೩೨
ನಿರ್ದೇಶಕರಾಗಿ ಅನುಮೋದನೆಗೊಂಡ ವ್ಯಕ್ತಿಗಳ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ. ಇದನ್ನು ಡಿಜಿಟಲ್ ಮಾರ್ಗದ ಮೂಲಕವೇ ಸಲ್ಲಿಸಬೇಕು.

ಇತರ ಮುಖ್ಯ ಸಂಗತಿ

ಇತರ ಮುಖ್ಯ ಸಂಗತಿ

ಸಹಿ ಹಾಗೂ ಮೊಹರು ಹೊಂದಿದ ಎಂಓಎ ಮತ್ತು ಎಓಎಗಳನ್ನು ಸಲ್ಲಿಸಬೇಕು.
ಸಹಿ ಮಾಡಲ್ಪಟ್ಟ ಪವರ್ ಆಫ್ ಅಟಾರ್ನಿ ದಾಖಲೆ.
ಕಂಪನಿಯ ಹೆಸರಿಗೆ ಒಪ್ಪಿಗೆ ಪಡೆದ ರಜಿಸ್ಟ್ರಾರ್ ಆಫ್ ಕಂಪನೀಸ್ ಅವರಿಂದ ಪಡೆದ ಪತ್ರ.
ಆಡಳಿತ ಮಂಡಳಿ ಸದಸ್ಯರ ಒಪ್ಪಿಗೆ ಪತ್ರ.

 

 

ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ

ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ

ಆದಾಯ ತೆರಿಗೆ ಪಾವತಿಸಲು ಮೊದಲಿಗೆ ಪ್ಯಾನ್ ಕಾರ್ಡ್ ಪಡೆಯುವುದು ಅಗತ್ಯ. ಈಗಾಗಲೇ ಪ್ಯಾನ್ ಕಾರ್ಡ್ ಇದ್ದಲ್ಲಿ ಅದನ್ನು ಕಂಪನಿ ಹೆಸರಿಗೆ ನೋಂದಣಿ ಮಾಡಿಸಬೇಕಾಗುತ್ತದೆ. ಫಾರ್ಮ ೪೯ಎ ಉಪಯೋಗಿಸಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.

ಎರಡನೆಯದಾಗಿ, ತೆರಿಗೆ ಸಂಗ್ರಹಿಸಲು ಹಾಗೂ ಪಾವತಿಸಲು ಟ್ಯಾಕ್ಸ್ ಅಕೌಂಟ್ ನಂಬರ್ (ಟ್ಯಾನ್) ಪಡೆದುಕೊಳ್ಳಬೇಕು. ಫಾರ್ಮ ೪೯ಬಿ ಉಪಯೋಗಿಸಿ ಟ್ಯಾನ್‌ಗೆ ಅರ್ಜಿ ಸಲ್ಲಿಸಬಹುದು.

ಉದ್ಯೋಗಿಗಳ ನೇಮಕಾತಿ

ಉದ್ಯೋಗಿಗಳ ನೇಮಕಾತಿ

ನಿಷ್ಠಾವಂತ ಹಾಗೂ ಪ್ರಾಮಾಣಿಕ ಉದ್ಯೋಗಿಗಳ ಪರಿಶ್ರಮವಿದ್ದರೆ ಮಾತ್ರ ಯಾವುದೇ ಕಂಪನಿ ಯಶಸ್ಸು ಗಳಿಸಲು ಸಾಧ್ಯ. ಹೀಗಾಗಿ ನಿಮ್ಮ ವ್ಯಾಪಾರಕ್ಕೆ ತಕ್ಕಂತೆ ನುರಿತ ಹಾಗೂ ಉತ್ತಮ ನೌಕರರನ್ನು ಕಂಪನಿಗೆ ನೇಮಿಸಿಕೊಳ್ಳಬೇಕಾಗುತ್ತದೆ.

ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

Read more about: business money finance news
English summary

How To Start Business/Company in India

If you are going to start the business on your own and alone then obviously it will be a sole proprietorship business. This is the simplest form which requires a little bit of legal procedure.
Story first published: Thursday, September 12, 2019, 9:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X