ಸಿಹಿ-ಕಹಿ! ಸೆಪ್ಟಂಬರ್ 1ರಿಂದ ಜಾರಿಯಾಗಿರುವ ಹೊಸ ನಿಯಮಗಳ ಪಟ್ಟಿ ಇಲ್ಲಿದೆ

ಈಗಾಗಲೇ ಸೆಪ್ಟಂಬರ್ ತಿಂಗಳು ಆರಂಭಗೊಂಡಿದೆ. ಸೆಪ್ಟಂಬರ್ 1ರಿಂದ ಬ್ಯಾಂಕಿಂಗ್, ಸಂಚಾರ ನಿಯಮ, ತೆರಿಗೆ ನಿಯಮಗಳು ಒಳಗೊಂಡಂತೆ ಅನೇಕ ನಿಯಮಗಳು ಬದಲಾಗಲಿವೆ, ಹೊಸ ನಿಯಮಗಳು ಜಾರಿಯಾಗಲಿವೆ.

ಈಗಾಗಲೇ ಸೆಪ್ಟಂಬರ್ ತಿಂಗಳು ಆರಂಭಗೊಂಡಿದ್ದು, ಸೆಪ್ಟಂಬರ್ 1ರಿಂದ ಬ್ಯಾಂಕಿಂಗ್, ಸಂಚಾರ ನಿಯಮ, ತೆರಿಗೆ ನಿಯಮಗಳು ಒಳಗೊಂಡಂತೆ ಅನೇಕ ನಿಯಮಗಳು ಬದಲಾಗಲಿವೆ, ಹೊಸ ನಿಯಮಗಳು ಜಾರಿಯಾಗಲಿವೆ. ಇದು ಜನಸಾಮಾನ್ಯರ ದೈನಂದಿನ ಜೀವನದ ಮೇಲೂ ಪರಿಣಾಮ ಬೀರಲಿದೆ! ಸೆಪ್ಟಂಬರ್ ಒಂದರಿಂದ ಯಾವೆಲ್ಲಾ ಅಂಶಗಳು ಬದಲಾಗುತ್ತಿವೆ ಹಾಗು ಜಾರಿಯಾಗಲಿರುವ ಹೊಸ ನಿಯಮಗಳೇನು ನೋಡೋಣ ಬನ್ನಿ..

ಸಂಚಾರಿ ನಿಯಮ

ಸಂಚಾರಿ ನಿಯಮ

ಹೊಸ ವಾಹನ ಸಂಚಾರಿ ನಿಯಮಗಳ ಬಗ್ಗೆ ಜನ ಚಿಂತಿತರಾಗಿದ್ದಾರೆ. ಮೋಟಾರು ವಾಹನ ತಿದ್ದುಪಡಿ ಕಾಯಿದೆ ಸೆಪ್ಟಂಬರ್ 1ರಿಂದ ಜಾರಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸಿದರೆ ಭಾರೀ ಮೊತ್ತದ ದಂಡ ಭರಿಸಬೇಕಾಗುತ್ತದೆ. ಲೈಸೆನ್ಸ್ ಇಲ್ಲದೆ ವಾಹನ ಚಾಲನೆ, ಮಧ್ಯಪಾನ ಮಾಡಿ ವಾಹನ ಚಾಲನೆ, ವೇಗದ ಚಾಲನೆ ಹೀಗೆ ಹಲವಾರು ಪ್ರಕರಣಗಳಿಗೆ ದಂಡ ಏರಿಕೆ ಮಾಡಲಾಗಿದೆ.
ವಾಹನ ಸಂಚಾರಿ ನಿಯಮ ಕಾಯಿದೆಯ ಕೆಲ ನಿಯಮಗಳನ್ನು ಮಾತ್ರ ಜಾರಿ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 63 ಅಂಶಗಳು ಜಾರಿಯಾಗುತ್ತಿದ್ದು, ಸಂಚಾರ ನಿಯಮ ಉಲಂಘನೆ, ವೇಗದ ಚಾಲನೆ, ಹೆಲ್ಮೆಟ್ ರಹಿತ ಚಾಲನೆ, ಕುಡಿದು ವಾಹನ ಚಲಾಯಿಸುವಂತಹ ಉಲ್ಲಂಘನೆಗಳಿಗೆ ದಂಡ ಹೆಚ್ಚಿಸಲಾಗಿದೆ.
ಸೆಪ್ಟಂಬರ್ ಒಂದರಿಂದ ಜಾರಿಯಾಗಿರುವ ಹಾಗು ಸಂಚಾರಿ ನಿಯಮ ಉಲ್ಲಂಘನೆ ಮೇಲೆ ವಿಧಿಸಲಾಗುವ ದಂಡದ ಮೊತ್ತದ ವಿವರ ಇಲ್ಲಿದೆ:
- ವೇಗದ ಚಾಲನೆ : ರೂ. 1,000 ದಿಂದ ರೂ. 4,000.
- ಇನ್ಸೂರೆನ್ಸ್ ರಹಿತ ವಾಹನ ಚಾಲನೆ : ರೂ. 2,000 ದಿಂದ ರೂ. 4,000
- ಹೆಲ್ಮೆಟ್ ರಹಿತ ಚಾಲನೆ: ರೂ. 1,000, ಮೂರು ತಿಂಗಳು ಲೈಸೆನ್ಸ್ ರದ್ದು.
- ವೇಗದ ಚಾಲನೆ: ರೂ. 1000 ದಿಂದ ರೂ. 4000 ದಂಡ
- ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ: ರೂ. 25,000ವರೆಗೆ ದಂಡ ಮತ್ತು ಜೈಲು ವಾಸ.
- ಅಪಾಯಕಾರಿ ವಾಹನ ಚಾಲನೆ: ರೂ. 5000 ದಂಡ.
- ಮದ್ಯಪಾನ ಮಾಡಿ ವಾಹನ ಚಾಲನೆ: ರೂ. 10,000 ದಂಡ.
- ಸೀಟ್‌ ಬೆಲ್ಟ್‌ ಇಲ್ಲದೆ ವಾಹನ ಚಾಲನೆ: ರೂ. 1000 ದಂಡ.
- ಓವರ್‌ ಲೋಡ್: ರೂ. 20,000‌ ದಂಡ.

ವಿತ್ ಡ್ರಾವಲ್ ಮೇಲೆ ಟಿಡಿಎಸ್

ವಿತ್ ಡ್ರಾವಲ್ ಮೇಲೆ ಟಿಡಿಎಸ್

ಸರ್ಕಾರವು ಆದಾಯ ತೆರಿಗೆ ಕಾನೂನುಗಳಲ್ಲಿ 194 ಎನ್ ಎಂಬ ಹೊಸ ವಿಭಾಗವನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಬ್ಯಾಂಕು, ಅಂಚೆ ಕಚೇರಿ ಅಥವಾ ಬ್ಯಾಂಕಿಂಗ್ ವ್ಯವಹಾರವನ್ನು ಕೈಗೊಳ್ಳುವಾಗ ಒಂದು ವರ್ಷದಲ್ಲಿ ಒಬ್ಬ ವ್ಯಕ್ತಿ ರೂ. 1 ಕೋಟಿಗಿಂತ ಹೆಚ್ಚಿನ ಹಣ ವಿತ್ ಡ್ರಾ ಮಾಡಿದರೆ ಶೇಕಡಾ 2ರಷ್ಟು ಪಾವತಿಸಬೇಕು.

ಇನ್ಸೂರೆನ್ಸ್‌ ಮೇಲೆ ಟಿಡಿಎಸ್

ಇನ್ಸೂರೆನ್ಸ್‌ ಮೇಲೆ ಟಿಡಿಎಸ್

ಸಿಂಗಲ್ ಪ್ರೀಮಿಯಂ ಜೀವ ವಿಮಾ ಪಾಲಿಸಿಯನ್ನು ಖರೀದಿಸಲು ಬಯಸಿದರೆ, ಸೆಪ್ಟೆಂಬರ್ 1, 2019 ರಿಂದ ಜಾರಿಗೆ ಬರುವ ಹೊಸ ಟಿಡಿಎಸ್ ನಿಯಮದ ಬಗ್ಗೆ ನೀವು ತಿಳಿದಿರಬೇಕು. ಸೆಪ್ಟೆಂಬರ್ 1 ರಿಂದ, ವಿಮೆಯ ನಿವ್ವಳ ಮೆಚ್ಯೂರಿಟಿ ಮೊತ್ತದ ಮೇಲೆ ಶೇಕಡಾ 5 ರಷ್ಟು ಟಿಡಿಎಸ್ ಕಡಿತವಾಗುತ್ತದೆ. ಗ್ರಾಹಕರು ಪಾವತಿಸಿದ ಒಟ್ಟು ವಿಮೆ ಕಂತುಗಳನ್ನು ಕೈಸೇರಿದ ಮೊತ್ತದಿಂದ ಕಳೆದಾಗ ಬರುವ ಮೊತ್ತವನ್ನು ನಿವ್ವಳ ಆದಾಯ ಎಂದು ಪರಿಗಣಿಸಲಾಗುವುದು. ಈ ಆದಾಯದ ಮೇಲೆ ಶೇ. 5 ರಷ್ಟು ಟಿಡಿಎಸ್ ಕಡಿತಗೊಳಿಸಲಾಗುವುದು.

ಸಣ್ಣಪುಟ್ಟ ವಹಿವಾಟಿನ ಮೇಲೆ ನಿಗಾ

ಸಣ್ಣಪುಟ್ಟ ವಹಿವಾಟಿನ ಮೇಲೆ ನಿಗಾ

ಗ್ರಾಹಕರು ಒಂದು ವರ್ಷದಲ್ಲಿ ನಡೆಸುವ ಸಣ್ಣಪುಟ್ಟ ಹಣ ವರ್ಗಾವಣೆಗಳ ಮೇಲೆ ನಿಗಾ ವಹಿಸಲಾಗುವುದು. ಖಾತೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಮೊತ್ತದ ವಹಿವಾಟು ನಡೆಸಿದರೆ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗುವುದು. ರೂ. 50 ಸಾವಿರ ಮತ್ತು ಅದಕ್ಕಿಂತ ದೊಡ್ಡ ಮೊತ್ತಕ್ಕೆ ವಹಿವಾಟು ಮಾಡಿದರೆ ಹಣಕಾಸು ವಹಿವಾಟುಗಳ ಹೇಳಿಕೆ (ಎಸ್ಎಫ್ಟಿ) ನೀಡಬೇಕಾಗುತ್ತದೆ.
ನಿಗದಿ ಮಾಡಲಾಗಿದೆ. ಇದರ ಬಗ್ಗೆ ಐಟಿ ಇಲಾಖೆ ಕೇಳಿದಾಗ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ವಿವರ ನೀಡಬೇಕಿದೆ. ಪೂರ್ವ-ಭರ್ತಿ ಮಾಡಿದ ಆದಾಯ ತೆರಿಗೆ ರೂಪಗಳ ಹೊಸ ಉಪಕ್ರಮದೊಂದಿಗೆ, ಈ ಕ್ರಮವು ಸಣ್ಣ ವಹಿವಾಟುಗಳಿಗೆ ಸಹ ಎಲ್ಲಾ ಆದಾಯ ಮತ್ತು ತೆರಿಗೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.

 

 

ಎಸ್ಬಿಐ ನಿಯಮ

ಎಸ್ಬಿಐ ನಿಯಮ

ಸೆಪ್ಟಂಬರ್ 1ರಿಂದ ದೇಶದ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಪ್ರಮುಖ ಬದಲಾವಣೆಗೆ ನಾಂದಿ ಹಾಡಲಿದೆ. ಇದು ಬೇರೆ ಬ್ಯಾಮಕುಗಳ ಮೇಲೂ ಪರಿಣಾಮ ಬೀರುವ ಸಧ್ಯತೆ ಇದೆ. ಆರ್ಬಿಐ ರೆಪೊ ದರವನ್ನು ತನ್ನ ಹಳೆಯ ಗ್ರಾಹಕರ ಗೃಹ ಸಾಲ ಮತ್ತು ವಾಹನ ಸಾಲದ ಜೊತೆ ಲಿಂಕ್ ಮಾಡಲಿದೆ. ಎಸ್ಬಿಐ ಬಡ್ಡಿದರದಲ್ಲಿ ಕೂಡ ಬದಲಾವಣೆ ಆಗಲಿದೆ.

ಕಿಸಾನ್ ಕಾರ್ಡ್

ಕಿಸಾನ್ ಕಾರ್ಡ್

ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ ಸೆಪ್ಟಂಬರ್ 1ರಿಂದ ಕಿಸಾನ್ ಕಾರ್ಡ್ ಪಡೆಯುವ ಪ್ರಕ್ರಿಯೆ ಇನ್ನೂ ಸುಲಭವಾಗಲಿದೆ. ಕಿಸಾನ್ ಕಾರ್ಡ್ ೧೫ ದಿನಗಳೊಗೆ ವಿತರಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+