ದೀಪಾವಳಿಗೆ ಈ ವಸ್ತುಗಳನ್ನು ಮನೆಗೆ ತನ್ನಿ..

ಕೆಲವೆ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದ್ದು, ಹಬ್ಬದ ಆಚರಣೆಯ ತಯಾರಿ ಜೋರಾಗಿ ನಡೆದಿರುತ್ತದೆ. ದೀಪಾವಳಿ, ಧನ್ ತೆರೆಸ್ ಸಂದರ್ಭದಲ್ಲಿ ಹೊಸ ವಸ್ತುಗಳ ಖರೀದಿ, ಹೊಸ ಕೆಲಸಗಳ ಪ್ರಾರಂಭ, ಅಂಗಡಿ ಅಥವಾ ಬಿಸಿನೆಸ್ ಆರಂಭಿಸಬೇಕು .

ಕೆಲವೆ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದ್ದು, ಹಬ್ಬದ ಆಚರಣೆಯ ತಯಾರಿ ಜೋರಾಗಿ ನಡೆದಿರುತ್ತದೆ. ದೀಪಾವಳಿ, ಧನ್ ತೆರೆಸ್ ಸಂದರ್ಭದಲ್ಲಿ ಹೊಸ ವಸ್ತುಗಳ ಖರೀದಿ, ಹೊಸ ಕೆಲಸಗಳ ಪ್ರಾರಂಭ, ಅಂಗಡಿ ಅಥವಾ ಬಿಸಿನೆಸ್ ಆರಂಭಿಸಬೇಕು ಹೀಗೆ ಹತ್ತು ಹಲವು ಯೋಜನೆ ಮಾಡುವುದು ಸಾಮಾನ್ಯ. ಧನ್ ತೇರಸ್ ಅಕ್ಟೋಬರ್ 25 ರಂದು ಆಚರಿಸಲಾಗುತ್ತಿದೆ.

ಚಿನ್ನ ಬೆಳ್ಳಿ ಖರೀದಿ

ಚಿನ್ನ ಬೆಳ್ಳಿ ಖರೀದಿ

ದೀಪಾವಳಿಯ ಪರ್ವದಲ್ಲಿ, ಧನ್ ತೇರಸ್ ಪ್ರಯುಕ್ತ ಜನರು ಚಿನ್ನ, ಬೆಳ್ಳಿ ಆಭರಣಗಳು ಮತ್ತು ಪಾತ್ರೆಗಳನ್ನು ಖರೀದಿಸುವುದು ಶುಭಕರ ಹಾಗು ಶ್ರೇಯಸ್ಕರ ಎಂಬುದು ನಂಬಿಕೆ. ಚಿನ್ನ, ಬೆಳ್ಳಿ ಖರೀದಿಸಲು ಆಗದಿದ್ದರೂ ಪಂಚಲೋಹದ ವಸ್ತುಗಳನ್ನು ಖರೀದಿಸಿ.

ಪೊರಕೆ ಖರೀದಿ

ಪೊರಕೆ ಖರೀದಿ

ದೀಪಾವಳಿ ದಿನ ಪೊರಕೆಗಳನ್ನು ಖರೀದಿಸುವ ಸಂಪ್ರದಾಯವೂ ಹಿಂದಿನ ಕಾಲದಿಂದ ನಡೆದು ಬಂದಿದೆ. ದೀಪಾವಳಿಗೆ ಪೊರಕೆ ಖರೀದಿಸುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಿರುತ್ತದೆ. ಪೊರಕೆ ಖರೀದಿಸುವುದರಿಂದ ಮನೆಯ ಬಡತನ ಮತ್ತು ಸಾಲದಿಂದ ಮುಕ್ತಿ ಸಿಗುತ್ತದೆ.
ಹೊಸ ಪೊರಕೆಯನ್ನು ತರುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಲಕ್ಷ್ಮಿ ಮನೆಯಲ್ಲಿ ವಾಸಿಸುತ್ತಾಳೆ. ಧನ್ ತೇರಸ್ ದಿನದಂದು ಪೊರಕೆ ಖರೀದಿಸಿ. ಮಂಗಳವಾರ, ಶನಿವಾರ ಮತ್ತು ಭಾನುವಾರ ಪೊರಕೆಗಳನ್ನು ಖರೀದಿಸಬೇಡಿ.

ವಾಹನ ಖರೀದಿ

ವಾಹನ ಖರೀದಿ

ಹೆಚ್ಚಿನ ಜನರು ದೀಪಾವಳಿಗೆ ಹೊಸ ಬೈಕ್, ಕಾರು ಖರೀದಿ ಮಾಡುತ್ತಾರೆ. ವಾಹನ ಮನೆಗೆ ತರುವುದರಿಂದ ಲಕ್ಷ್ಮೀ ಮನೆಯಲ್ಲಿ ನೆಲೆಸುತ್ತಾಳೆ. ವಾಹನ ಲಕ್ಷ್ಮೀಯ ರೂಪ ಎನ್ನಲಾಗುತ್ತದೆ. ಅಲ್ಲದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಿ.

ಉಪ್ಪು

ಉಪ್ಪು

ದೀಪಾವಳಿ ದಿನ ಉಪ್ಪು ಖರೀದಿಸುವುದರಿಂದ ವರ್ಷದುದ್ದಕ್ಕೂ ಹಣದ ಕೊರತೆ ಉಂಟಾಗುವುದಿಲ್ಲ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.

ಬೆಳ್ಳಿ ಪಾತ್ರೆ

ಬೆಳ್ಳಿ ಪಾತ್ರೆ

ದೀಪಾವಳಿ ಸಂದರ್ಭದಲ್ಲಿ ಜನರು ಪಾತ್ರೆ ಖರೀದಿ ಮಾಡುವುದನ್ನು ನಾವು ನೋಡುತ್ತೇವೆ. ಈ ವರ್ಷ ದೀಪಾವಳಿಗೆ ಬೆಳ್ಳಿ ಅಥವಾ ಹಿತ್ತಾಳೆ ಪಾತ್ರೆ ಖರೀದಿ ಮಾಡಿದರೆ ಅದು ಅದೃಷ್ಟ ತರುವುದು. ಧನಾತ್ಮಕ ಶಕ್ತಿ ಬರಲು ಮನೆಯ ಪೂರ್ವ ಭಾಗದಲ್ಲಿ ಇದನ್ನು ಇಡಬೇಕು.

ಶಂಖ

ಶಂಖ

ಮನೆಯಲ್ಲಿ ಶಂಖ ಇಡುವುದರಿಂದ ಅದೃಷ್ಟ ಹೆಚ್ಚಾಗುವುದು. ಒಳ್ಳೆಯ ರೀತಿಯಿಂದ ಇದಕ್ಕೆ ಪೂಜೆ ಮಾಡಿದರೆ ಅದರಿಂದ ಮನೆ ಮತ್ತು ಕೆಲಸದ ಸ್ಥಳದಲ್ಲಿ ಧನಾತ್ಮಕ ಶಕ್ತಿ ಬರುವುದು. ಶಂಖ ಇಟ್ಟು ಪೂಜಿಸಿದರೆ ಹಣದ ಸಮಸ್ಯೆ ಬರುವುದಿಲ್ಲ ಮತ್ತು ಈ ದೀಪಾವಳಿಗೆ ಇದನ್ನು ಖರೀದಿಸುವುದು ತುಂಬಾ ಶ್ರೇಯಸ್ಕರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+