For Quick Alerts
ALLOW NOTIFICATIONS  
For Daily Alerts

ಜನ ವೈಯಕ್ತಿಕ ಸಾಲ ಯಾಕೆ ಇಷ್ಟ ಪಡ್ತಾರೆ ಗೊತ್ತಾ?

ದೇಶದ ಅರ್ಥವ್ಯವಸ್ಥೆ ಕಳೆದ ಹಲವಾರು ವರ್ಷಗಳಿಂದ ಅಗಾಧ ಪ್ರಮಾಣದಲ್ಲಿ ಬೆಳವಣಿಯಾಗುತ್ತಾ ಸಾಗಿದೆ. ಆರ್ಥಿಕ ಬೆಳವಣಿಗೆಯಿಂದ ವೈಯಕ್ತಿಕ ಹಣಕಾಸು ಕ್ಷೇತ್ರ ಕೂಡ ಸಾಕಷ್ಟು ಬೆಳೆದಿದೆ.

|

ದೇಶದ ಅರ್ಥವ್ಯವಸ್ಥೆ ಕಳೆದ ಹಲವಾರು ವರ್ಷಗಳಿಂದ ಅಗಾಧ ಪ್ರಮಾಣದಲ್ಲಿ ಬೆಳವಣಿಯಾಗುತ್ತಾ ಸಾಗಿದೆ. ಆರ್ಥಿಕ ಬೆಳವಣಿಗೆಯಿಂದ ವೈಯಕ್ತಿಕ ಹಣಕಾಸು ಕ್ಷೇತ್ರ ಕೂಡ ಸಾಕಷ್ಟು ಬೆಳೆದಿದೆ. ಹೀಗಾಗಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಪಡೆಯುವುದು ಹಿಂದಿಗಿಂತಲೂ ಸುಲಭವಾಗಿದೆ. ವೈಯಕ್ತಿಕ ಸಾಲ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಜನಪ್ರಿಯವಾಗುತ್ತಿದ್ದು, ಹೆಚ್ಚೆಚ್ಚು ಗ್ರಾಹಕರು ಪರ್ಸನಲ್ ಲೋನ್ ಪಡೆಯಲು ಮುಗಿ ಬೀಳುತ್ತಿದ್ದಾರೆ.
ಈ ಕೆಳಗಿನ ಪ್ರಮುಖ ಅಂಶಗಳಿಂದ ವೈಯಕ್ತಿಕ ಸಾಲ ಜನಪ್ರಿಯವಾಗುತ್ತಿದೆ. ಪರ್ಸನಲ್ ಲೋನ್ ಜನಪ್ರಿಯತೆಗೆ ಪ್ರಮುಖ ಕಾರಣಗಳು ಇಲ್ಲಿ ನೀಡಲಾಗಿದೆ, ನೋಡೋಣ ಬನ್ನಿ..

ಕಡಿಮೆ/ಆಕರ್ಷಕ ಬಡ್ಡಿ ದರ

ಕಡಿಮೆ/ಆಕರ್ಷಕ ಬಡ್ಡಿ ದರ

ಬಡ್ಡಿದರದ ಆಧಾರದ ಮೇಲೆ ಗ್ರಾಹಕರು ಸಾಲ ಪಡೆಯಲು ಮುಂದಾಗುತ್ತಾರೆ. ಪ್ರಸ್ತುತ ಬ್ಯಾಂಕಿಂಗ್ ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುತ್ತಿವೆ. ಅಲ್ಲದೆ ಪಿ2ಪಿ ಸಾಲದಾತರು ಸರಕಾರಿ ಹಾಗೂ ಖಾಸಗಿ ಬ್ಯಾಂಕುಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್ ನೀಡುತ್ತಿರುವುದು ಗ್ರಾಹಕರಿಗೆ ವರದಾನವಾಗಿ ಪರಿಣಮಿಸಿದೆ.
ಡಿಜಿಟಲ್ ಯುಗದಲ್ಲಿ ಆನ್ಲೈನ್ ಮೂಲಕವೇ ವಿವಿಧ ಹಣಕಾಸು ಸಂಸ್ಥೆಗಳ ಪರ್ಸನಲ್ ಲೋನ್ ಬಡ್ಡಿದರಗಳನ್ನು ಪರಿಶೀಲಿಸಿ ಉತ್ತಮವಾದ ಲೋನ್ ಆಯ್ಕೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಪರ್ಸನಲ್ ಲೋನ್ ಬಡ್ಡಿದರಗಳು ವಾರ್ಷಿಕ ಶೇ. 10 ರಿಂದ ಆರಂಭವಾಗುತ್ತವೆ.

ವಿಭಿನ್ನ ವಲಯದ ಗ್ರಾಹಕರಿಗೆ ಅನುಕೂಲ

ವಿಭಿನ್ನ ವಲಯದ ಗ್ರಾಹಕರಿಗೆ ಅನುಕೂಲ

ಗ್ರಾಹಕನ ವೃತ್ತಿ ಹಾಗೂ ಆದಾಯದ ಮಟ್ಟವನ್ನು ಆಧರಿಸಿ ಹಣಕಾಸು ಸಂಸ್ಥೆಗಳು ವಿಭಿನ್ನ ರೀತಿಯ ಪರ್ಸನಲ್ ಲೋನ್ ಆಯ್ಕೆಗಳನ್ನು ನೀಡುತ್ತಿವೆ. ಪಿಂಚಣಿದಾರರಿಗೆ ಸಹ ಬ್ಯಾಂಕುಗಳು ಪರ್ಸನಲ್ ಲೋನ್ ನೀಡಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಸಾಲ ಸುಲಭ ಅನುಮೋದನೆ

ಸಾಲ ಸುಲಭ ಅನುಮೋದನೆ

ವೈಯಕ್ತಿಕ ಸಾಲ ಹಾಗೂ ಗೃಹ ಬಳಕೆ ವಸ್ತುಗಳಿಗಾಗಿ ಪಡೆಯುವ ಸಾಲಕ್ಕೆ ನೀಡಬೇಕಾದ ದಾಖಲಾತಿಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಸಾಲ ನೀಡುವ ಸಂಪೂರ್ಣ ಪ್ರಕ್ರಿಯೆ ಡಿಜಿಟಲ್ ರೂಪಕ್ಕೆ ಮಾರ್ಪಾಟಾಗುತ್ತಿದ್ದು, ಪೇಪರ್ ರೂಪದ ಯಾವುದೇ ದಾಖಲಾತಿ ಇಲ್ಲದೆಯೇ ಇ-ಕೆವೈಸಿ ಮೂಲಕ ಶೀಘ್ರವಾಗಿ ಸಾಲಗಳನ್ನು ಮಂಜೂರು ಮಾಡಲಾಗುತ್ತಿದೆ. ಇನ್ನು ಕೆಲ ಬ್ಯಾಂಕುಗಳು ಆಯ್ದ ಗ್ರಾಹಕರಿಗೆ ಎಟಿಎಂಗಳ ಮೂಲಕ ಸಾಲ ನೀಡಲು ಮುಂದಾಗುತ್ತಿರುವುದು ವಿಶಿಷ್ಟವಾಗಿದೆ. ಡಿಜಿಟಲ್ ಸಾಲ ಮಂಜೂರಾತಿ ವಿಧಾನದಿಂದ ಸಂಪೂರ್ಣ ಪ್ರಕ್ರಿಯೆ ಅತ್ಯಂತ ಸರಳವಾಗುತ್ತಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳ

ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಸಾಲ ನೀಡುವ ಮುನ್ನ ಗ್ರಾಹಕರ ಎಲ್ಲ ದಾಖಲಾತಿಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತಿದ್ದವು. ಈ ಪ್ರಕ್ರಿಯೆಯಲ್ಲಿ ಹಲವಾರು ಅರ್ಜಿಗಳು ರಿಜೆಕ್ಟ್ ಆಗುತ್ತಿದ್ದವು ಅಥವಾ ಇನ್ನಷ್ಟು ಪೂರಕ ದಾಖಲೆಗಳು ಬೇಕೆಂದು ಗ್ರಾಹಕರಿಗೆ ಕೇಳಲಾಗುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಬ್ಯಾಂಕುಗಳು ಸಾಲ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತಿವೆ. ಗ್ರಾಹಕನೊಬ್ಬ ಸಾಲ ಪಡೆಯುವ ಅರ್ಹತೆಯನ್ನು ಹೊಂದುವಂತೆ ಬ್ಯಾಂಕುಗಳು ತಾವೇ ಖುದ್ದಾಗಿ ಪ್ರಯತ್ನಿಸಿ ಆದಷ್ಟೂ ಸುಲಭವಾಗಿ ಸಾಲವನ್ನು ಮಂಜೂರು ಮಾಡುತ್ತಿವೆ.

ಹೆಚ್ಚಿದ ಹಣಕಾಸು ಹರಿವು

ಹೆಚ್ಚಿದ ಹಣಕಾಸು ಹರಿವು

ಇದೀಗ ಹೆಚ್ಚೆಚ್ಚು ಜನರು ಸ್ವಂತ ವ್ಯಾಪಾರ ಆರಂಭಿಸಲು ಒಲವು ತೋರುತ್ತಿದ್ದಾರೆ. ಹೀಗೆ ವ್ಯಾಪಾರ, ವಹಿವಾಟು ಆರಂಭಿಸಲು ಹೊರಗಿನಿಂದ ಹಣಕಾಸು ಬಂಡವಾಳ ತರಬೇಕಾಗುತ್ತದೆ. ಆದರೆ ವ್ಯಾಪಾರಕ್ಕಾಗಿ ಹಣಕಾಸು ಹೊಂದಿಸುವುದು ಸುಲಭದ ಮಾತಲ್ಲ. ಇಂಥ ಸಂದರ್ಭಗಳಲ್ಲಿ ಪರ್ಸನಲ್ ಲೋನ್ ಉತ್ತಮ ಆಯ್ಕೆಯಾಗಿದೆ. ವ್ಯಾಪಾರಕ್ಕಾಗಿ ಸಾಲ ಪಡೆದು ವ್ಯವಹಾರವನ್ನು ವಿಸ್ತರಿಸಿಕೊಳ್ಳುವ ಅವಕಾಶಗಳು ಈಗ ಹೆಚ್ಚಾಗಿವೆ. ಪರ್ಸನಲ್ ಲೋನ್‌ನ ಮಾರುಕಟ್ಟೆ ಸಹ ಅಗಾಧವಾಗಿ ವಿಸ್ತಾರಗೊಳ್ಳುತ್ತಿದೆ. ಅತ್ಯುತ್ತಮ ಹಣಕಾಸು ಅಡಿಪಾಯ ಹೊಂದಿದವರಿಗೆ ಮಾತ್ರ ಈ ಮುನ್ನ ಸುಲಭವಾಗಿ ಸಾಲ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪರ್ಸನಲ್ ಲೋನ್ ಮಾರುಕಟ್ಟೆಗೆ ಬಹಳಷ್ಟು ಹೊಸ ಹಣಕಾಸು ಸಂಸ್ಥೆಗಳು ಪ್ರವೇಶ ಪಡೆದಿದ್ದು, ಎಲ್ಲರಿಗೂ ಸುಲಭವಾಗಿ ಸಾಲ ಸಿಗುವಂತಾಗಿದೆ.

ಡಿಜಿಟಲ್ ಅರ್ಜಿ

ಡಿಜಿಟಲ್ ಅರ್ಜಿ

ಈಗ ಎಲ್ಲವೂ ಆನ್ಲೈನ್ ಮಯವಾಗುತ್ತಿದೆ. ಇದಕ್ಕೆ ಪರ್ಸನಲ್ ಲೋನ್ ಸಹ ಹೊರತಾಗಿಲ್ಲ. ಈಗ ಸಾಲ ಪಡೆಯಲು ಬ್ಯಾಂಕುಗಳಿಗೆ ಎಡತಾಕುತ್ತ ಸಮಯ ಹಾಳು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಸಂಪೂರ್ಣ ಅರ್ಜಿ ಸಲ್ಲಿಕೆ ಹಾಗೂ ಮಂಜೂರಾತಿ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕವೇ ಪೂರ್ಣಗೊಳಿಸಬಹುದು. ವೈಯಕ್ತಿಕ ಸಾಲ ಆಗಿರಲಿ ಅಥವಾ ಬಿಸಿನೆಸ್ ಲೋನ್ ಆಗಿರಲಿ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸುವ ಸೌಕರ್ಯ ಈಗ ಗ್ರಾಹಕರಿಗೆ ಸಿಕ್ಕಿದೆ.

ಸುಲಭ ಮರುಪಾವತಿ ಆಯ್ಕೆ

ಸುಲಭ ಮರುಪಾವತಿ ಆಯ್ಕೆ

ಸಾಲ ಪಡೆದವರು ಸಾಲದ ಕಂತು ಕಟ್ಟಲು ಬ್ಯಾಂಕಿಗೆ ಹೋಗಬೇಕು ಅಂತಿಲ್ಲ. ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಂ (ಇಸಿಎಸ್), ಸ್ಟ್ಯಾಂಡಿಂಗ್ ಇನ್ಸಟ್ರಕ್ಷನ್ (ಎಸ್ ಐ) ಮತ್ತು ನೆಟ್ ಬ್ಯಾಂಕಿಂಗ್ ಸೇರಿದಂತೆ ಇನ್ನೂ ಹಲವಾರು ಡಿಜಿಟಲ್ ಮಾರ್ಗಗಳ ಮೂಲಕ ಸಾಲ ಮರುಪಾವತಿಸುವ ಅವಕಾಶವಿದೆ.

Read more about: loan personal loan money savings
English summary

Do you know why people like personal loans?

There has been a tremendous growth in the Indian economy in the last couple of years. The benefits of this growth have extended to the personal finance sector as well.
Story first published: Saturday, October 5, 2019, 12:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X