For Quick Alerts
ALLOW NOTIFICATIONS  
For Daily Alerts

ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವ ಸುಲಭ ವಿಧಾನಗಳು ಇಲ್ಲಿವೆ

ಸಂಬಳ ಪಡೆಯುವ ಉದ್ಯೋಗಿಗಳಿಗೆ ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಅತಿ ನೆಚ್ಚಿನ ಹಣ ಹೂಡಿಕೆ ಮಾಡುವ ಯೋಜನೆಯಾಗಿದೆ. ಇದು ಕೇಂದ್ರದ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯು ಕಾರ್ಮಿಕ ಭವಿಷ್ಯ ನಿಧಿ ಇಲಾಖೆಯ (ಇಪಿಎಫ್ಓ) ಉಸ್ತುವಾರಿ ನೋಡಿಕೊಳ್ಳುತ

|

ಸಂಬಳ ಪಡೆಯುವ ಉದ್ಯೋಗಿಗಳಿಗೆ ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಅತಿ ನೆಚ್ಚಿನ ಹಣ ಹೂಡಿಕೆ ಮಾಡುವ ಯೋಜನೆಯಾಗಿದೆ. ಇದು ಕೇಂದ್ರದ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯು ಕಾರ್ಮಿಕ ಭವಿಷ್ಯ ನಿಧಿ ಇಲಾಖೆಯ (ಇಪಿಎಫ್ಓ) ಉಸ್ತುವಾರಿ ನೋಡಿಕೊಳ್ಳುತ್ತದೆ.
ಇಪಿಎಫ್ ಯೋಜನೆಯಲ್ಲಿ ಪ್ರತಿ ತಿಂಗಳು ಹಣ ಹೂಡಿಕೆ ಮಾಡಲಾಗುತ್ತದೆ. ನಿಯಮಾವಳಿಗಳ ಸಂಬಳ ಪಾವತಿಸುವ ಮೊದಲು ಹಣ ಕಡಿತವಾಗಿ ಇಪಿಎಫ್ ಖಾತೆಗೆ ಜಮೆ ಆಗುತ್ತದೆ. ಈ ರೀತಿ ಜಮೆ ಆಗುವ ಹಣ ಈಗ ಎಷ್ಟಾಗಿದೆ? ಪ್ರತಿ ತಿಂಗಳು ಕಡಿತವಾದ ಹಣ ಇಪಿಎಫ್ ಖಾತೆಯಲ್ಲಿ ಇದೆಯಾ ಅಥವಾ ಇಲ್ಲವೆ ಎಂಬುದನ್ನು ತಿಳಿದುಕೊಳ್ಳಲು ಇರುವ ಹಲವಾರು ಆಯ್ಕೆಗಳಿವೆ.

 

ಇಪಿಎಫ್ ಬ್ಯಾಲೆನ್ಸ್

ಇಪಿಎಫ್ ಬ್ಯಾಲೆನ್ಸ್

ಪ್ರಸ್ತುತ ನಿಮ್ಮ ಇಪಿಎಫ್ ಅಕೌಂಟ್‌ನಲ್ಲಿರುವ ಒಟ್ಟು ಮೊತ್ತವೇ ಇಪಿಎಫ್ ಬ್ಯಾಲೆನ್ಸ್. ಪ್ರತಿ ತಿಂಗಳು ನಿಮ್ಮ ಸಂಬಳದಲ್ಲಿ ಕಡಿತವಾಗಿ ಇಪಿಎಫ್ ಖಾತೆಗೆ ಜಮೆಯಾಗುವ ನಿರ್ದಿಷ್ಟ ಮೊತ್ತ ಹಾಗೂ ಅದಕ್ಕೆ ನಿಮ್ಮ ಉದ್ಯೋಗದಾತರು ಸೇರಿಸುವ ಪಾಲಿನಿಂದ ಜಮೆಯಾಗಿರುವ ಒಟ್ಟು ಮೊತ್ತವೇ ಇಪಿಎಫ್ ಬ್ಯಾಲೆನ್ಸ್.

ಇಪಿಎಫ್ ಬ್ಯಾಲೆನ್ಸ್ ನೋಡುವುದು ಹೇಗೆ?

ಇಪಿಎಫ್ ಬ್ಯಾಲೆನ್ಸ್ ನೋಡುವುದು ಹೇಗೆ?

ಕಳೆದ ಕೆಲ ವರ್ಷಗಳ ಅವಧಿಯಲ್ಲಿ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಇಪಿಎಫ್‌ಓ ಹಲವಾರು ಸೇವೆಗಳನ್ನು ಆರಂಭಿಸಿದೆ. ಸದ್ಯ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಐದು ರೀತಿಯ ವಿಧಾನಗಳಿವೆ.
1. ಇಪಿಎಫ್ಓ ಪೋರ್ಟಲ್ ಮೂಲಕ
2. ಎಸ್‌ಎಂಎಸ್ ಮುಖಾಂತರ
3. ಮಿಸ್ಡ್ ಕಾಲ್ ಮಾಡುವ ಮೂಲಕ
4. ಇಪಿಎಫ್‌ಓ ಮೊಬೈಲ್ ಆಪ್ ಮುಖಾಂತರ
5. ಉಮಂಗ್ ಆಪ್ ಮೂಲಕ

ಇಪಿಎಫ್ಓ ಪೋರ್ಟಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಹೀಗೆ ಮಾಡಿ
 

ಇಪಿಎಫ್ಓ ಪೋರ್ಟಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಹೀಗೆ ಮಾಡಿ

ಇಪಿಎಫ್‌ಓ ಪೋರ್ಟಲ್ ಮೂಲಕ ಇಪಿಎಫ್ ಖಾತೆಯ ಬ್ಯಾಲೆನ್ಸ್ ತಿಳಿದುಕೊಳ್ಳಬೇಕಾದರೆ ಮೊದಲು ನಿಮ್ಮ ಯುಎಎನ್ ಸಕ್ರಿಯವಾಗಿರುವುದು ಅವಶ್ಯಕ. ಯುಎಎನ್ ಎಂಬುದು ಯುನಿವರ್ಸಲ್ ಅಕೌಂಟ್ ನಂಬರ್ ಆಗಿದ್ದು, ಪ್ರತಿ ಇಪಿಎಫ್ ವಂತಿಗೆದಾರ ಸದಸ್ಯರಿಗೆ ವಿಶಿಷ್ಟ ಯುಎಎನ್ ನೀಡಲಾಗಿರುತ್ತದೆ. ಪೋರ್ಟಲ್ ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಬೇಕಾದರೆ ಈ ನಂಬರ್ ಉಪಯೋಗಿಸಿ ಮೊದಲು ರಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.

ಹೀಗಾಗಿ ಮೊದಲು ಯುಎಎನ್ ಅನ್ನು ನಿಮ್ಮ ಉದ್ಯೋಗದಾತರಿಂದ ಪಡೆದುಕೊಳ್ಳಬೇಕು. ಒಂದು ಬಾರಿ ಯುಎಎನ್ ಸಿಕ್ಕ ಮೇಲೆ ನೀವು ಪೋರ್ಟಲ್ ನಲ್ಲಿ ರಜಿಸ್ಟರ್ ಮಾಡಿಕೊಂಡು ನಿಮ್ಮ ಪಾಸ್‌ವರ್ಡ್ ಪಡೆದುಕೊಳ್ಳಬಹುದು. ಪೋರ್ಟಲ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಬೇಕಾದಾಗ ಯುಎಎನ್ ಹಾಗೂ ಪಾಸ್‌ವರ್ಡ್ ಉಪಯೋಗಿಸಿ ಲಾಗ್ ಇನ್ ಆಗಬೇಕು. ಲಾಗ್ ಇನ್ ಆದಮೇಲೆ ಪೋರ್ಟಲ್ ನಲ್ಲಿ ಕಾಣಿಸುವ ನಿಮ್ಮ ಖಾತೆಯ ಪಾಸ್‌ಬುಕ್‌ನಲ್ಲಿ, ನಿಮ್ಮ ವಂತಿಗೆ ಹಾಗೂ ಈಗ ಖಾತೆಯಲ್ಲಿರುವ ಒಟ್ಟು ಮೊತ್ತವನ್ನು ನೋಡಬಹುದು. ಹಾಗೆಯೇ ಈ ಪಾಸ್‌ಬುಕ್ ಅನ್ನು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು.

ಯುಎಎನ್ ಆಕ್ಟಿವೇಟ್ ಆದ ನಂತರ ಬ್ಯಾಲೆನ್ಸ್ ತಿಳಿದುಕೊಳ್ಳಲು ಹಾಗೂ ಪಾಸ್‌ಬುಕ್ ಡೌನ್‌ಲೋಡ್ ಅಥವಾ ಪ್ರಿಂಟ್ ಮಾಡಲು ಈ ಕ್ರಮಗಳನ್ನು ಅನುಸರಿಸಿ:

1. ಮೊದಲಿಗೆ ಇಪಿಎಫ್‌ಓ ವೆಬ್‌ಸೈಟ್ ಪುಟ http://www.epfindia.com/site_en/ ಓಪನ್ ಮಾಡಿಕೊಳ್ಳಿ.
2. ಪುಟದ ಬಲ ಮೇಲ್ತುದಿಯಲ್ಲಿರುವ "e-Passbook" ಲಿಂಕ್ ಕ್ಲಿಕ್ ಮಾಡಿ.
3. ಈಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.
4. ಇಲ್ಲಿ ನೀಡಲಾಗಿರುವ ಆಯ್ಕೆಯಲ್ಲಿ ನಿಮ್ಮ ಯುಎಎನ್ ಹಾಗೂ ಪಾಸ್‌ವರ್ಡ್ ತುಂಬಿಸಿ.
5. ಕ್ಯಾಪ್ಚಾ ಕೋಡ್ ಸರಿಯಾಗಿ ತುಂಬಿ ಲಾಗ್ ಇನ್ ಬಟನ್ ಕ್ಲಿಕ್ ಮಾಡಿ.
6. ಈಗ ಮತ್ತೊಂದು ಪುಟ ತೆರೆದುಕೊಂಡು ಇದರಲ್ಲಿ ನಿಮ್ಮ ಮೆಂಬರ್ ಐಡಿ ಬಾಕ್ಸ್ ಕಾಣಿಸುತ್ತದೆ.
7. ಪಾಸ್‌ಬುಕ್ ನೋಡಲು ಮೆಂಬರ್ ಐಡಿ ಕ್ಲಿಕ್ ಮಾಡಿ.
8. ಈಗ ಪುಟದ ಬಲಗಡೆ ಇಪಿಎಫ್ ಪಾಸ್‌ಬುಕ್ ಓಪನ್ ಆಗುತ್ತದೆ.
9. ಇದರಲ್ಲಿ ಇಪಿಎಫ್ ಬ್ಯಾಲೆನ್ಸ್ ಹಾಗೂ ಇತರ ಜಮಾ ವಿವರಗಳನ್ನು ನೋಡಬಹುದು.
10. ಇಲ್ಲಿ ಬೇಕಾದರೆ ಇಪಿಎಫ್ ಪಾಸ್‌ಬುಕ್ ಡೌನ್‌ಲೋಡ್ ಮಾಡಬಹುದು ಅಥವಾ ಪ್ರಿಂಟ್ ತೆಗೆದು ಇಟ್ಟುಕೊಳ್ಳಬಹುದು.

ಎಸ್‌ಎಂಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ

ಎಸ್‌ಎಂಎಸ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ

ಕಳೆದ ಬಾರಿಯ ವಂತಿಗೆ ಹಾಗೂ ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಎಸ್‌ಎಂಎಸ್ ಕಳುಹಿಸುವ ಮೂಲಕವೂ ನೋಡಬಹುದು. ಈ ಸೇವೆ ತಮ್ಮ ಯುಎಎನ್ ಸಂಖ್ಯೆ ಆಕ್ಟಿವೇಟ್ ಮಾಡಿಕೊಂಡಿರುವ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ. ನೀವು ಇಪಿಎಫ್‌ಗೆ ರಜಿಸ್ಟರ್ ಮಾಡಿಕೊಂಡ ನಿಮ್ಮ ಮೊಬೈಲ್ ನಂಬರ್ ಮೂಲಕ ೭೭೩೮೨೯೯೮೯೯ ಗೆ ಎಸ್‌ಎಂಎಸ್ ಮಾಡಬೇಕು.

 ಫಾರ್ಮ್ಯಾಟ್‌ನಲ್ಲಿ ಎಸ್‌ಎಂಎಸ್ ಮಾಡಿ
EPFOHO UAN LAN
UAN ಎಂದಿರುವ ಜಾಗದಲ್ಲಿ ನಿಮ್ಮ ಯುಎಎನ್ ನಂಬರ್ ನಮೂದಿಸಿ. LAN ಎಂಬ ಸ್ಥಳದಲ್ಲಿ ನೀವು ಮಾಹಿತಿ ಪಡೆಯಬಯಸುವ ಭಾಷೆಯ ಸಂಕೇತ ತುಂಬಿ ಎಸ್‌ಎಂಎಸ್ ಕಳುಹಿಸಿ.
ವಿವಿಧ ಭಾಷೆಗಳಲ್ಲಿ ಮಾಹಿತಿ ಪಡೆಯಲು ಬಳಸಬಹುದಾದ ಸಂಕೇತಾಕ್ಷರಗಳು ಹೀಗಿವೆ :
ಹಿಂದಿ- HIN, ಇಂಗ್ಲಿಷ್- ENG, ತೆಲುಗು- TEL, ಪಂಜಾಬಿ- PUN, ಮಲಯಾಳಂ- MAL, ತಮಿಳು- TAM, ಬೆಂಗಾಲಿ- BEN, ಮರಾಠಿ- MAR, ಕನ್ನಡ- KAN, ಗುಜರಾತಿ- GUJ.

ಮಿಸ್ಡ್ ಕಾಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು

ಮಿಸ್ಡ್ ಕಾಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು

ಇದು ಇಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳುವ ಅತಿ ಸುಲಭ ಹಾಗೂ ಸರಳ ವಿಧಾನವಾಗಿದೆ. ನಿಮ್ಮ ಇಪಿಎಫ್ ರಜಿಸ್ಟರ್ಡ್ ಮೊಬೈಲ್ ನಂಬರ್ ಮೂಲಕ ೦೧೧೨೨೯೦೧೪೦೬ ಗೆ ಮಿಸ್ಡ್ ಕಾಲ್ ಮಾಡಿದರೆ ಸಾಕು. ಕೆಲ ನಿಮಿಷಗಳಲ್ಲಿ ಇಪಿಎಫ್ ಬ್ಯಾಲೆನ್ಸ್ ಮಾಹಿತಿ ಹಾಗೂ ಇತರ ವಿವರಗಳಿರುವ ಎಸ್‌ಎಂಎಸ್ ನಿಮ್ಮ ಮೊಬೈಲ್‌ಗೆ ಬರುತ್ತದೆ. ಯುಎಎನ್ ಆಕ್ಟಿವೇಟ್ ಆಗಿರುವ ಎಲ್ಲ ಸದಸ್ಯರೂ ಈ ಸೌಲಭ್ಯವನ್ನು ಉಚಿತವಾಗಿ ಬಳಸಬಹುದು. ದಿನದ ೨೪ ಗಂಟೆಯೂ ಈ ಸೇವೆ ಲಭ್ಯವಿರುತ್ತದೆ.

ಮೊಬೈಲ್ ಆಪ್ ಮೂಲಕ

ಮೊಬೈಲ್ ಆಪ್ ಮೂಲಕ

ತನ್ನ ಸದಸ್ಯರ ಅನುಕೂಲಕ್ಕಾಗಿ ಇಪಿಎಫ್‌ಓ M-Sewa ಹೆಸರಿನ ಸ್ಮಾರ್ಟ್‌ಫೋನ್ ಆಪ್ ಬಿಡುಗಡೆ ಮಾಡಿದೆ. ಇದರಲ್ಲಿ ಇಪಿಎಫ್ ಬ್ಯಾಲೆನ್ಸ್ ಹಾಗೂ ಖಾತೆಯ ಇತರ ವಿವರಗಳನ್ನು ಚೆಕ್ ಮಾಡಬಹುದಾಗಿದೆ. ಈ ಸೇವೆ ಯುಎಎನ್ ಪೋರ್ಟಲ್ ನಲ್ಲಿ ಯುಎಎನ್ ಆಕ್ಟಿವೇಟ್ ಮಾಡಿಕೊಂಡ ಸದಸ್ಯರಿಗೆ ಲಭ್ಯವಿದೆ. ಅಲ್ಲದೆ ಈ ಆಪ್ ಮೂಲಕ ಸಹ ಯುಎಎನ್ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
೧. ಮೊದಲಿಗೆ ಪ್ಲೇ ಸ್ಟೋರ್‌ನಿಂದ ಆಪ್ ಡೌನ್‌ಲೋಡ್ ಮಾಡಿಕೊಂಡು ಮೆಂಬರ್ ಬಟನ್ ಕ್ಲಿಕ್ ಮಾಡಿ. ನಂತರ ಬ್ಯಾಲೆನ್ಸ್/ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿ.
೨. ಈಗ ನಿಮ್ಮ ಯುಎಎನ್ ನಂಬರ್ ಹಾಗೂ ರಜಿಸ್ಟರ್ಡ್ ಮೊಬೈಲ್ ನಂಬರ್ ಎಂಟರ್ ಮಾಡಿದ ನಂತರ ಇಪಿಎಫ್ ಅಕೌಂಟ್ ವಿವರಗಳನ್ನು ನೋಡಬಹುದು.

ಉಮಂಗ್ ಆಪ್ ಮೂಲಕ

ಉಮಂಗ್ ಆಪ್ ಮೂಲಕ

ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಉಮಂಗ್ ಆಪ್ ಸಹ ಉಪಯೋಗಿಸಬಹುದು. ಇದರಲ್ಲಿ ಇಪಿಎಫ್ ಪಾಸ್‌ಬುಕ್ ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ಉಮಂಗ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ಇದರ ಹೋಂ ಪೇಜ್‌ನಲ್ಲಿ ಕಾಣುವ ಇಪಿಎಫ್‌ಓ ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು, ಹಾಗೆಯೇ ಪಾಸ್‌ಬುಕ್ ಅನ್ನು ಸಹ ಡೌನ್‌ಲೋಡ್ ಮಾಡಬಹುದು.

ಮಿಸ್ಡ್ ಕಾಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?ಮಿಸ್ಡ್ ಕಾಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ?

Read more about: epf epfo money finance news
English summary

How to check EPF balance?

EPF (Employee Provident Fund) is one of the most popular investment schemes for the salaried persons in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X